Skip to main content

ನನ್ನ ಪ್ರಪಂಚ, ನನ್ನಿಷ್ಟ - ಆತನ ಕಥೆ - ಭಾಗ ೨

ಬರೆದಿದ್ದುMay 10, 2012
5ಅನಿಸಿಕೆಗಳು

ಕಥೆಯ ಮೊದಲ ಭಾಗದಲ್ಲಿ ನಮ್ಮ ಕಥಾ ನಾಯಕ ಪ್ರೀತಿಯ ಕಡೆ ವಾಲತೊಡಗಿದ ಅಂತ ಹೇಳಿದ್ದ್ನಲ್ವ? ಮೊದಮೊದಲಿಗೆಆತನಿಗೆ ಅದರ ಅರಿವಾಗಿರಲಿಲ್ಲ.  ಏನೋ ಭ್ರಮೆ ಅಂದುಕೊಳ್ಳುತ್ತಲೇ 'ಆಕೆ'ಯೊಂದಿಗೆ ಗಂಟೆಗಟ್ಟಲೆ ಹರಟುತ್ತಿದ್ದ..ಆಕೆಜೊತೆ ಮಾತಾಡುವಾಗ ಸಮಯ ಜಾರಿದ್ದೇ ಗೊತ್ತಾಗ್ತಾ ಇರಲಿಲ್ಲ. ಅಂಥಹ ಆಪ್ತ ಮಾತುಕಥೆಯ ನಡುವೆಯೂ ಅದೆಲ್ಲಿಂದಲೋನಾನಿದ್ದೇನೆ ಅಂತ ಅವನ ಈಗೋ ತಲೆಯೆತ್ತಿ ನಿಲ್ತಾ ಇತ್ತು.  ಅಂತಹ ಸಂದರ್ಭದಲ್ಲೆಲ್ಲಾ ಆಕೆಯ ಕಡೆಯಿಂದ ಕೇಳುತ್ತಿದ್ದುದು ಕೇವಲ ಮೌನ.  ಬಹುಷಃ ಇವನ ಸ್ವಭಾವದ ಅರಿವಾಗಲು ಆಕೆಗೆ ಕೊಂಚ ಹೆಚ್ಚೇ ಸಮಯ ಬೇಕಾಯ್ತೋ ಏನೋ...ನಂತರದ ದಿನಗಳಲ್ಲಿ ಬುದ್ಧಿವಾದ, ಗದರಿಸುವಿಕೆಯ ರೂಪದಲ್ಲಿ ಉತ್ತರಿಸಲಾರಂಭಿಸಿದ್ದಳು ಆ ಹುಡುಗಿ.  ಆಗೆಲ್ಲಾ ಇವನಿಗೆಪಿತ್ತ ನೆತ್ತಿಗೇರಿದ ಅನುಭವ..ಯಾರ ಮೇಲಿನದೋ ಕೋಪ ಇನ್ಯಾರ ಮೇಲೋ ತೀರಿಸಿಕೊಂಡು ಶಾಂತನಾಗುತ್ತಿದ್ದ. ಅದೇನೇ ಹೊಂದಾಣಿಕೆಯ ವಿಷಯ ಬಂದರೂ "ನನ್ನ ಕುರಿತು ನಿರ್ಧಾರಗಳನ್ನು ತೆಗೆದುಕೊಳ್ಳುವವನು ನಾನು ಮತ್ತುನಾನು ಮಾತ್ರವೇ" ಎಂಬ ಸಿದ್ಧ ಉತ್ತರ ಅವನಲ್ಲಿರುತ್ತಿತ್ತು.  ಹಾಗಂತ ಅವನಲ್ಲಿ ದ್ವಂದ್ವ ಇರಲಿಲ್ವೇ? ಇತ್ತು..ಆದರೆ, ಆಕ್ಷಣಕ್ಕೆ ಅವನ ಭಾವನೆಗಳು ದುರಹಂಕಾರದ ಲೇಪನದೊಂದಿಗೆ ವ್ಯಕ್ತವಾಗುತ್ತಿದ್ದುದೇ ಹಾಗೆ.. ಆಮೇಲೆ ಅವನ ಮನಕೊರಗ್ತಿತ್ತು.. ಛೇ, ಮನಸ್ಸಿಗೆ ಬೇಜಾರಾಯ್ತೋ ಏನೋ ಅನಿಸ್ತಾ ಇತ್ತು.  ಏನಕ್ಕೂ ಇರ್ಲಿ ಅಂತ ಒಂದು 'ಸ್ಸಾರಿ' ಹೇಳಿಕೈ ತೊಳೆದುಕೊಳ್ತಾ ಇದ್ದ.  ಆದ್ರೆ, ಅಂತಹ ಘಟನೆಗಳೆದಷ್ಟೋ ಅವರಿಬ್ಬರ ಪ್ರೀತಿಗೆ ಸಾಕ್ಷಿಯಾಗಿದ್ದವು.   ಇದು ಪ್ರೀತೀನಾ? ಒಮ್ಮೊಮ್ಮೆ ಅವನಿಗವನೇ ಕೇಳಿಕೊಳ್ತಾ ಇದ್ದ!! ಪ್ರೀತಿಸ್ತೀನಿ ಅಂತ ಆಕೆಗೆ ಹೇಳಿಯಾಗಿದೆಯಲ್ವಾ,ಆಕೆನೂ ಹೂಂ ಅಂತ ಒಪ್ಪಿದ್ದಾಳಲ್ವ.. ಹಾಗಿದ್ದ ಮೇಲೆ ಪ್ರೀತೀನೇ!!! ಅಂತ ತನಗೆ ತಾನೇ ಸಮಾಧಾನ ಪಟ್ಟುಕೊಳ್ತಾ ಇದ್ದ.ಕೆಲ ದಿನಗಳ ಬಳಿಕ, ಅದೇಕೋ ಅವನ ಹುಚ್ಚು ಮನಸ್ಸು ಪುನಃ ದ್ವಂದ್ವಕ್ಕೊಳಗಾಯಿತು.  ಪರಿಣಾಮ, ನಾನು ನಿನ್ನ ಪ್ರೀತಿಸ್ತಾಇಲ್ಲ, ನನ್ಗೆ ನೀನು ಬೇಡ ಅಂತ ಆಕೆಯ ಮುಖಕ್ಕೆ ಬಾರಿಸಿದಂತೆ ಹೇಳಿಯೇ ಬಿಟ್ಟ.  ಈತನ ಈ ಹುಚ್ಚಾಟದ ಪ್ರೀತಿಯನ್ನುನಿಜ ಅಂತಲೇ ಭಾವಿಸಿದ್ದ ಹುಡುಗಿಯ ಮನ ಘಾಸಿಗೊಳಗಾಯಿತು.  ಅದೆಷ್ಟೋ ಕಾಡಿದಳು, ಬೇಡಿದಳು, ಅವನದೇ ಪ್ರೀತಿಯ ಸಿಹಿ ಲೇಪನದ ಮಾತುಗಳನ್ನು ನೆನಪಿಸಿದಳು, ಕೊರಗಿದಳು..ಆದರೂ ನಮ್ಮೀ ಕಥಾನಾಯಕನ ಮನಸ್ಸು ಮಾತ್ರಕಲ್ಲೇ ಸರಿ!!!!!! ಅದೂ ಎಂಥಾ ಕಲ್ಲು, ಕಗ್ಗಲ್ಲು..!!! ಆದರೆ ತನ್ನ ಪ್ರಪಂಚದೊಳಗೆ ತನ್ನೆಲ್ಲಾ ಭಾವನೆಗಳನ್ನೂ ಸುಪ್ತವಾಗಿಇರಿಸಿಕೊಂಡಿದ್ದ ಆತ ಆಕೆಯೊಡನೆ ಕಲ್ಲಿನಂತೆಯೇ ವ್ಯವಹರಿಸಲಾರಂಭಿಸಿದ.  ಆಕೆಯ ಮಾತುಗಳಿಗೆ ಅವನ ಕಿವಿಕಿವುಡಾಯಿತು..ಆಕೆಯ ಕಣ್ಣೀರಿಗೆ ಆತನ ಕಣ್ಣು ಕುರುಡಾಯಿತು.. ಆದರೆ, ಆತನೊಳಗಿದ್ದ ಮನಸ್ಸು ಮರುಗಿತ್ತು.. ಪ್ರತೀ ಬಾರಿಯೂಅವಳ ಕಣ್ಣೀರೊರೆಸಲು ಸಿದ್ಧಗೊಳ್ಳುತ್ತಿದ್ದ ಕೈಯನ್ನು ಆತನ ಮನಸ್ಸು ಎಚ್ಚರಿಸುತ್ತಿತ್ತು - "ನೀನೀಗ ಅವಳ ದೃಷ್ಟಿಯಲ್ಲಿ ಕೆಟ್ಟವನಾಗಿದ್ದಿಹಾಗೇ ಉಳಿದು ಬಿಡು.. ಆಕೆಯಂತಹ ಮೃದು ಮನದ ಹುಡುಗಿಗೆ ನೀನು ಸರಿಯಾದ ಜೊತೆಯಾಗಲಾರೆ, ಅವಳ ಮನವನ್ನುಪ್ರತೀ ಬಾರಿಯೂ ನೋಯಿಸಿ, ನಿನ್ನ ಅಹಂಕಾರ, ಈಗೋ ವನ್ನು ತೃಪ್ತಿ ಪಡಿಸಿಕೊಳ್ಳೋದು ಸರೀನಾ..? ಗಳಿಗೊಗೊಮ್ಮೆನಿನ್ನ ಬದಲಾಗುವ ಭಾವನೆಗಳಿಂದ, ನಿರ್ಧಾರಗಳಿಂದ ಅವಳ ಬದುಕೂ ಹಾಳಾದರೆ??? ನಿನ್ನನ್ನ ನೀನೇ ಸರ್ಯಾಗಿಅರ್ಥ ಮಾಡಿಕೊಂಡಿಲ್ಲ, ಇನ್ನು ಆ ಹುಡುಗಿ ಅರ್ಥ ಮಾಡಿಕೊಳ್ಳೋಕೆ ಅದ್ಯಾಕೆ ಪ್ರಯತ್ನಿಸಬೇಕು? ನಿನ್ನ ಪ್ರಪಂಚದಲ್ಲಿ ಬೇರೆಯಾರೂ ಸುಖವಾಗಿರಲಾರರು.. ನೀನು ಒಂಟಿಯಾಗಿರಲಿಕ್ಕೇ ಲಾಯಕ್ಕು"  ಹೀಗೆಲ್ಲಾ ಆತನೊಳಗಿರುವಾತ ಮೂರೂ ಹೊತ್ತು ಗೊಣಗಾಡ್ತಾ ಇದ್ರೆ, ಪಾಪ ಇವ ತಾನೇ ಏನು ಮಾಡಿಯಾನು.. ಮೌನವಹಿಸಿಬಿಟ್ಟ.. ಆದರೆ ಕೊನೆಗೊಮ್ಮೆಆತ ತನ್ನ ಮೌನವನ್ನೊಡೆದು ಹೊರಬರಲೇಬೇಕಾಯ್ತು.... ಯಾಕೆ???? ಮುಂದಿನ ಭಾಗದಲ್ಲಿ ಓದಿ..                                                                                                             (ಮುಂದುವರೆಯುವುದು)

ಲೇಖಕರು

Jyothi Subrahmanya

ನೆನಪಿನ ನವಿಲುಗರಿ

ಭಾವನಾ ಜೀವಿ, ಚಿಕ್ಕ ಪುಟ್ಟ ಕನಸು ಕಾಣೋದು ಅಂದ್ರೆ ಇಷ್ಟ. ಮಳೆ, ಇಬ್ಬನಿ, ಹಸಿರು, ಆಕಾಶ, ನಕ್ಷತ್ರ, ರಾತ್ರಿ, ಇವೆಲ್ಲಾ ತುಂಬಾ ಇಷ್ಟ. ನನ್ನ ಬಗ್ಗೆ ಇನ್ನು ಜಾಸ್ತಿ ತಿಳ್ಕೊಳ್ಳೋಕೆ ನನ್ನ ಸ್ನೇಹಿತರಾಗಿ. ನಿಮಗೇ ತಿಳಿಯುತ್ತೆ. ;)

ಅನಿಸಿಕೆಗಳು

venkatb83 ಶುಕ್ರ, 05/18/2012 - 23:09

ಆಕೆಯ ಕಣ್ಣೀರಿಗೆ ಆತನ ಕಣ್ಣು ಕುರುಡಾಯಿತು.. ಆದರೆ, ಆತನೊಳಗಿದ್ದ ಮನಸ್ಸು ಮರುಗಿತ್ತು.. ---------------------------------------- ಜ್ಯೋತಿ ಅವ್ರೆ-ಸರಣಿ   ಕುತೂಹಲಕಾರಿಯಾಗಿದೆ...ಮುಂದಿನ ಕಂತು ನಿರೀಕ್ಷಿಸುತ್ತಿರುವೆ... 
ನಿಮ್ಮ ಪ್ರತಿಕ್ರಿಯೆಗಳನ್ನು ಓದುತ್ತಿರುತೇನೆ(ಬೇರೆಯವರ ಬರಹಗಳಿಗೆ ಕೊಟ್ಟದ್ದು) ತುಂಬಾ ಆಪ್ತವಾಗಿರುತ್ತವೆ...

ಶುಭವಾಗಲಿ..
ನನ್ನಿ
\|/

Jyothi Subrahmanya ಶನಿ, 05/19/2012 - 18:57

ಧನ್ಯವಾದಗಳು ವೆಂಕಟ್.  ನಿಮ್ಮ ಪ್ರತೀ ಪ್ರತಿಕ್ರಿಯೆಯ ಕೊನೆಯಲ್ಲಿ, ಶುಭವಾಗಲಿ ಅಂತ ಬರೀತೀರಆದರೆ, ಅದಾದ ಮೇಲೆ ನನ್ನಿ ಅಂತ ಬರೆದು ಅದರ ಕೆಳಗೆ ಏನು ಬರೆದಿರುತ್ತೀರಾ ಅಂತಾನೇ ನನ್ಗೆ ಇಲ್ಲಿ ತನಕ ಗೊತ್ತಾಗಿಲ್ಲ.  ತಪ್ಪಾಗಿ ತಿಳೀಬೇಡಿ.  ಬಾಣದ ಗುರುತು ಅರ್ಧ ಮೂಡಿದಂತಿರುತ್ತದೆಯೇ ಹೊರತುಪೂರ್ತಿಯಾಗಿ ಕಾಣುತ್ತಿಲ್ಲ.  ಇದು ನನ್ಗೆ ಮಾತ್ರ ಕಾಣಿಸ್ತಾ ಇಲ್ವೋ ಅಥವಾ ಎಲ್ಲರಿಗೂ ಕಾಣದಂತಿದೆಯೋಗೊತ್ತಿಲ್ಲ... ಬಹಳ ಚಿಕ್ಕ ಅನುಮಾನ ಇದು..ಆದ್ರೂ ತಲೇಲಿ ಕೊರಿಯುತ್ತೆ ಆದ್ರಿಂದ ಕೇಳಿಬಿಟ್ಟೆ.. ಃ)ಉತ್ತರದ ನಿರೀಕ್ಷೆಯಲ್ಲಿ,ಧನ್ಯವಾದಗಳೊಂದಿಗೆ, ಜ್ಯೋತಿ.

venkatb83 ಶನಿ, 05/19/2012 - 19:40

  ಜ್ಯೋತಿ ಅವ್ರೆ-
ಅನುಮಾನ-ಸಂದೇಹವನ್ನ ಕೂಡಲೇ ಪರಿಹರಿಸಿಕೊಳ್ಳಬೇಕು...
ಇಲ್ಲವಾದರೆ ಆ ಕುತೂಹಲದ ಹುಳು ....ತಲೆ ಹೊಕ್ಕು .....!!

\|/ ಅರ್ಧ  ಬಾಣದ ಗುರುತೂ ಅಲ್ಲ -ಎಂಥದ್ದು ಅಲ್ಲ..

ಅದು ಬೇರೇನೂ ಅಲ್ಲ...!!
ತಿರುಪತಿ ತಿಮ್ಮಪ್ಪನ ಹಣೆಯ ಮೇಲಿನ ಮೂರು  ನಾಮ
ಕೀ ಬೋರ್ಡ್ನಲ್ಲಿನ 

|
 / 
ಸೇರಿಸಿದರೆ  \|/ ಆಗುತ್ತೆ.....!!
ಅದನ್ನು ನನ್ ಹೆಸರಿಗೆ ಬದಲಾಗಿ ಉಪಯೋಗಿಸುತ್ತಿರುವೆ...:())

ಇನ್ನು ನನ್ನೀ ಅಂದ್ರೆ
ಧನ್ಯವಾದಗಳು/ ವಂದನೆಗಳು  ಅಂತ -ಅಚ್ಚಗನ್ನಡದ ಪದ......
ಥ್ಯಾಂಕ್ಸ್  ಬದಲಿಗೆ...!!
ಈಗ   ನೀವ್  ನಿಶ್ಚಿಂತೆಯಿಂದ  ಇರುವಿರಿ  ಎಂಬ  ನಂಬುಗೆ  ಎನದು...:()))

ಶುಭವಾಗಲಿ.. 
ತ್ವರಿತ   ಪ್ರತಿಕ್ರಿಯೆಗೆ
ನನ್ನಿ
\|/
 

Jyothi Subrahmanya ಶನಿ, 05/19/2012 - 20:20

ಧನ್ಯವಾದಗಳು ವೆಂಕಟ್ ಅನುಮಾನವನ್ನು ಬಗೆಹರಿಸಿದ್ದಕ್ಕೆ.  ನನ್ನಿ ಅಂದರೆ ಅರ್ಥ ಗೊತ್ತಿತ್ತು.. ಆದರೆ ಆ ನಂತರದ್ದು ಗೊತ್ತಾಗಿರಲಿಲ್ಲ ಅಷ್ಟೆ..ಃ) ಅದೇನೇ ಆದ್ರೂ ಬುದ್ಧಿವಂತರಪ್ಪ.. ಸಲೀಸಾಗಿ ಕೀಲಿ ಮಣೆಯನ್ನುಬಳಸಿಕೊಂಡೇ ಮೂರು ನಾಮ ಹಾಕಿದ್ದೀರಾ !!! (ತಮಾಷೆಗೆ ಹೇಳಿದ್ದು) ವಂದನೆಗಳೊಂದಿಗೆಜ್ಯೋತಿ.

venkatb83 ಶನಿ, 05/19/2012 - 20:46

 ಸಲೀಸಾಗಿ ಕೀಲಿ ಮಣೆಯನ್ನುಬಳಸಿಕೊಂಡೇ ಮೂರು ನಾಮ ಹಾಕಿದ್ದೀರಾ !!! (-----------------------------------------ಜ್ಯೊ- ||| ಅದೂ ಸೈ
\|/ ಇದೂ ಸೈ..

ಶುಭವಾಗಲಿ 
ತ್ವರಿತ ಮರು ಪ್ರತಿಕ್ರಿಯೆಗೆ 
ನನ್ನಿ 
\|/

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.