Skip to main content

ಹೊಸ ವರ್ಷದ ಶುಭಾಶಯಗಳು..

ಬರೆದಿದ್ದುJanuary 1, 2008
noಅನಿಸಿಕೆ

ದಿನ ಮೂಡುವದು ಜ್ಯೋತಿ,
ಚಿಲಿ,ಪಿಲಿಗಳ ಮಧುರ ರಾಗ,
ಇಬ್ಬನಿಗಳಲಿ ಸ್ನಾನವ ಮುಗಿಸಿ ನಿಸರ್ಗ....!

ಒಂದೊಂದು ಕ್ಷಣವು ಹೊಸತು,
ಸ್ವಚ್ಚ, ಬಿಳಿ ಹಾಳೆಯಂತೆ, ಹಾಲಿನಂತೆ,
ವರುಷ ಒಂದೆಯೇ..?? ಹರುಷ ತರಲು...??
ದಿನ, ಕ್ಷಣವೆಲ್ಲ ಯಾವ ಲೆಕ್ಕ? ಸುಮ್ಮನಿರಲು..!!

ಬದಲಾವಣೆಯ ಬಂಡಿ ತಿರುಗುವಾಗ,
ಸವೆದುಹೋದ ದಿನಗಳ ನೆನಪುಗಳ-
ಸುಳಿಯಲ್ಲಿ ಸಿಲುಕುವುದೇ...

ಮುಂದಾಗುವ ಬದಲಾವಣೆಯ,
ಕಲ್ಪಿಸಿಕೊಂಡು, ಬಣ್ನ ಬಳಿಯುವುದೇ...??

ಐದು ಬೆರಳು ಸಮವಿಲ್ಲ,
ಸಮವಾಗಿ ಕತ್ತರಿಸುವ ಮೂರ್ಖರು ನಾವಲ್ಲ,
ಒಳ್ಳೆಯ ಗುಣವಿದ್ದರಷ್ಠೆ ಸಾಕು-
ಅವರಿಗೆ ಸಮ-ಯಾರಿಲ್ಲ...!!

ಗುರಿ ಬೇಡ ನಮಗೆ, ದಾರಿಯಿರಲಿ ಮೊದಲು,
ಕಲ್ಲು, ಮುಳ್ಳಾದರೇನು?? ಮುನ್ನುಗ್ಗುವ ಛಲವಿರಲಿ ಮೊದಲು,
ನಾಳೆಯ ಕನಸು ಬೇಡ, ನೆನ್ನೆಯ ನೆನಪು ಬೇಡ,
ನಗುವೇ ಇಲ್ಲದ ಮೇಲೆ, ಏನಿದ್ದರು ಶೂನ್ಯ..

ನಗುವಿರಲಿ ಎಲ್ಲರ ಮೊಗದಲ್ಲಿ, ಮನದಲ್ಲಿ..
ಅದುವೇ ಬೆಳಕು, ಅವರವರ ಬಾಳಲ್ಲಿ..
ದಿನವೆಲ್ಲ.. ಹೊಸ-ಹರುಷ ತರಲಿ..

ಪ್ರಾರ್ಥಿಸುವೆ.. ಎಲ್ಲರಿಗು ಶುಭವಾಗಲೆಂದು ಭಗವಂತನಲ್ಲಿ...!!

ವಿಸ್ಮಯನಗರಿಗೆ, ವಿಸ್ಮಯ ಪ್ರಜೆಗಳಿಗೆ,
ಗೆಳೆಯ/ಗೆಳತಿ ಯರಿಗೆ, ಬಂದು ಮಿತ್ರರಿಗೆ,
ಕನ್ನಡಿಗರಿಗೆಲ್ಲರಿಗು, ಹೊಸ ವರ್ಷದ, ಶುಭಾಶಯಗಳು..

ಕೆ.ಎನ್.ಯೋಗೇಶ್ ರಾವ್....

ಲೇಖಕರು

ಯೋಗೇಶ್

ನಿನಗೇಳದ ಮಾತೊಂದು ಮನದ(ನ)ಲ್ಲೆ ಉಳಿದಿದೆ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.