Skip to main content

ಬೇರೆ ಬಾಷೆಯ ಚಿತ್ರಗಳನ್ನು ಕನ್ನಡಕ್ಕೆ ಡಬ್ ಮಾಡುವುದರಿ೦ದ ಆಗುವ ಲಾಭಗಳೇನು?೧.ಕನ್ನಡ ಬಾಷೆಯ ಬೆಳವಣಿಗೆಯಾಗುತ್ತೆ.೨. ಬೇರೆ ಬಾಷೆಯ ಚಿತ್ರಗಳನ್ನು ನಿಯ೦ತ್ರಣದಲ್ಲಿಡಬಹುದು.೩. ಕನ್ನಡ ಬಾಷೆಯ ಚಿತ್ರಗಳು ಗುಣಮಟ್ಟ ಹೇಚ್ಹಾಗುತ್ತೆ.೪. ವಿಷಯ ಸ೦ಗ್ರಹ ಆಗುತ್ತೆ.ಸಾವಿರಾರು ಕಲಾವಿದರ ದುಡಿಮೆಗೆ ಒ೦ದು ಬಾಷೆಯನ್ನು ಬಲಿ ಕೊಡಬಹುದೇ?

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

ಅನಿಸಿಕೆಗಳು

ರಾಜೇಶ ಹೆಗಡೆ ಭಾನು, 04/29/2012 - 23:33

ಕನ್ನಡ ಚಿತ್ರರಂಗ ಹಾಗೂ ಟಿವಿ ರಂಗ ಡಬ್ಬಿಂಗ್ ವಿರೋಧಿಸಿ ಕನ್ನಡ ಭಾಷೆಗೆ ಮಾರಕವಾಗಿದೆ. ಇದು ನನ್ನ ವೈಯಕ್ತಿಕ ಅಭಿಪ್ರಾಯ.
ಒಂದು ಕಡೆ ಕನ್ನಡ ಡಬ್ಬಿಂಗ್ ವಿರೋಧ ತೋರುವ ಇವರು ಹಲವು ದಶಕಗಳ ಹಿಂದೆ ಹೇಳಿದ ಹೇಳಿಕೆಗಳನ್ನು ಮುಂದಿಟ್ಟುಕೊಂಡು ಅದೇ ವೇದ ವಾಕ್ಯ ಎನ್ನುತ್ತಿರುವದು ಹಾಸ್ಯಾಸ್ಪದವಾಗಿದೆ.
ಇಂದು ಕನ್ನಡಿಗ ಬೇರೆ ಭಾಷೆಗಳಲ್ಲಿ  ಟಿವಿ ಚಾನೆಲ್, ಸಿನಿಮಾ ನೋಡಬೇಕಾಗಿದೆ. ಅದು ನ್ಯಾಶನಲ್ ಜಿಯಾಗ್ರಾಫಿಕ್, ಡಿಸ್ಕವರಿ ಇರಬಹುದು. ಅಥವಾ ಮಕ್ಕಳ ಚಾನೆಲ್ ಸಹ ಇರಬಹುದು. ಚಂದ್ರಗುಪ್ತ ಮೌರ್ಯ ಮೊದಲಾದ ಐತಿಹಾಸಿಕ, ಪೌರಾಣಿಕ ಧಾರಾವಾಹಿ ಇರಬಹುದು ನಾವು ಹಿಂದಿ, ತಮಿಳು, ತೆಲುಗು, ಆಂಗ್ಲ ಭಾಷೆಯಲ್ಲಿ ನೋಡಬೇಕು. (ನಾನು ಸಾಮಾನ್ಯವಾಗಿ ಹಿಂದಿ ಆಯ್ಕೆ ಮಾಡಿ ಕೊಳ್ಳುತ್ತೇನೆ) ಪೌರಾಣಿಕ, ಐತಿಹಾಸಿಕ ಧಾರಾವಾಹಿಗಳು ಹಿಂದಿಯ ಗುಣಮಟ್ಟಕ್ಕೆ ಕನ್ನಡ ಬಂದಿಲ್ಲ. ಬಹುಶಃ ಇಲ್ಲಿನ ಮಾರುಕಟ್ಟೆಯ ಮಿತಿಯಲ್ಲಿ ಅಷ್ಟು ಅದ್ಧೂರಿಯಾಗಿ ನಿರ್ಮಿಸಲು ಸಾಧ್ಯವಾಗದು.
ಅಷ್ಟೇ ಯಾಕೆ ಇಂದು ಕನ್ನಡಿಗ ಹಾಲಿವುಡ್ ಚಿತ್ರಗಳನ್ನು ಹಿಂದಿ,  ತಮಿಳು, ತೆಲುಗು ಭಾಷೆಯಲ್ಲಿ ನೋಡಬೇಕಿದೆ. ಬಾಲಿವುಡ್ ಚಿತ್ರಗಳನ್ನು ಹೆಚ್ಚಿನ ಕನ್ನಡಿಗರು ಹಿಂದಿಯಲ್ಲಿ ನೋಡುತ್ತಾರೆ.
ಹೀಗೆ ಕನ್ನಡಿಗ ಹಲವು ಭಾಷೆ ಕಲಿಯುವದರಿಂದ ಕನ್ನಡ ಭಾಷೆ ಸೊರಗುತ್ತದೆ. ಅದೇ ಈಗ ಆಗುತ್ತಿರುವದು. ಇತ್ತೀಚಿನ ಕನ್ನಡ ದಿನಪತ್ರಿಕೆ, ಸಿನಿಮಾ ಪತ್ರಿಕೆಗಳನ್ನು ಒಮ್ಮೆ ಗಮನಿಸಿ. ಕನ್ನಡದ ಜೊತೆಗೆ ಹಿಂದಿ, ತಮಿಳು, ತೆಲುಗು ಚಿತ್ರ ವಿಮರ್ಶೆ ಹೆಚ್ಚು ಪ್ರಕಟವಾಗುತ್ತಿದೆ. ಇದಕ್ಕೆ ಕಾರಣ ಕನ್ನಡಿಗರಲ್ಲಿ ಇತರ ಭಾಷೆಗಳ ಸಿನಿಮಾ ಆಸಕ್ತಿ  ಹೆಚ್ಚುತ್ತಿರುವದು. ಡಿಟಿಎಚ್ ಕೂಡಾ ಈಗ ಎಲ್ಲ ಭಾಷೆಗಳ ಕಾರ್ಯಕ್ರಮ, ಸಿನಿಮಾ ಮನೆ ಮನೆ ತಲುಪಿಸುತ್ತಿದೆ. ಇಂದಿನ ಕನ್ನಡ ಮಕ್ಕಳು ಯಾವ ಭಾಷೆಯಲ್ಲಿ ಚಾನೆಲ್ ನೋಡುತ್ತಾರೆ ಎಂಬುದನ್ನು ನೀವೆ ಒಮ್ಮೆ ಗಮನಿಸಿ ನೋಡಿ.
ಸರಿ ಡಬ್ಬಿಂಗ ಬೇಡವಾ ಒಕೆ. ಆ ರೀತಿಯ ಗುಣಮಟ್ಟದ ಕಾರ್ಯಕ್ರಮವನ್ನಾದರೂ ಇವರು ನೀಡುತ್ತಿದ್ದಾರಾ? ಇಲ್ಲ. ಬೇರೆ ಭಾಷೆಯ ಸಿನಿಮಾ ನೋಡುತ್ತಾ ಯಾವುದನ್ನು ರೀಮೇಕ್ ಮಾಡಲಿ, ಎಲ್ಲಿಂದ ನಕಲಿ ಮಾಡಲಿ ಎಂದು ಯೋಚಿಸುತ್ತಾ ಇರುತ್ತಾರಷ್ಟೆ. ಇದಕ್ಕೆ ಅಪವಾದ ಇಲ್ಲವೆಂದು ನಾನು ಹೇಳಲಾರೆ, ಆದರೆ ಬಹುಸಂಖ್ಯಾತ ಮಂದಿ ಇದಕ್ಕೆ ಸೇರಿದವರು.
ಡಬ್ಬಿಂಗ್ ಮಾಡುವದರಿಂದ ಕನ್ನಡದ ಕಳಪೆ ಚಿತ್ರಗಳನ್ನು ಯಾರೂ ನೋಡುವದಿಲ್ಲ ಎಂಬುದು ಸತ್ಯ. ಆದರೆ ಉತ್ತಮ ಕನ್ನಡ ಚಿತ್ರಗಳನ್ನು ಯಾರೂ ಮಿಸ್ ಮಾಡಲ್ಲ. ಹಾಗೇ ಆಗಲಿ ಬಿಡಿ.

ತ್ರಿನೇತ್ರ ಸೋಮ, 04/30/2012 - 16:52

ಈ ನಮ್ಮ ಕನ್ನಡ ಚಿತ್ರರಂಗ ಎತ್ತ ಸಾಗುತ್ತಿದೆ ಎಂದು ನಿರ್ದಿಷ್ಟವಾಗಿ ಹೇಳಲಾಗದಿದ್ದರೂ ಒಂದಂತೂ  ನಿಜ... ಅದೆಂದರೆ ದಿನದಿಂದ ದಿನಕ್ಕೆ ಪರಬಾಷಾ ಪ್ರೇಮ ಹೆಚ್ಚಾಗುತ್ತಿರುವುದು ಮತ್ತು ಕೀಳು ದರ್ಜೆಯ ಸಾಹಿತ್ಯ ಮತ್ತು ಹಾಸ್ಯಕ್ಕೆ ಬೇಡಿಕೆ ಹೆಚ್ಚುತ್ತಿರುವುದು. ಇದಕ್ಕೆ ಇತ್ತೀಚಿಗೆ ಬಿಡುಗಡೆಯಾದ ಒಂದು ಚಿತ್ರದ ಹಾಡು... \"ಪ್ಯಾರ್ ಗೇ...\" ಮುಂದೆ ಹೇಳಲೂ ಅಸಹ್ಯವಾಗುವಷ್ಟರ ಮಟ್ಟಿಗೆ ಬರೆದು ಹಾಸ್ಯದ ಹೆಸರಿನಲ್ಲಿ ಒಂದು ಜನಾಂಗದ ಆಡು ಭಾಷೆಯನ್ನು ಸಾಧ್ಯವಾದಷ್ಟೂ ತೆಗಳಿ ಹೀಯಾಳಿಸಿ ಅಪಮಾನ ಮಾಡುವ ರೀತಿಯಲ್ಲಿ ಹಾಡಿಸಲಾಗಿದೆ ಆ ಹಾಡನ್ನು. ಇಂತಹಾ ಗೀತೆಗಳನ್ನು ಮೆಚ್ಚಿ ಸಹಬ್ಬಾಸ್ ಎಂದು ಹೊಗಳಿ ಹಾಡಿದ್ದೇ ಹಾಡಿದ್ದು ನಮ್ಮ ಕನ್ನಡ ಜನ...!  ಇದು ನಮ್ಮ ಸಹೃದಯೀ ಮತ್ತು ಸಹಬಾಳ್ವೆಯನ್ನು ಆಧರಿಸುವ ಕನ್ನಡಿಗರ ಮನಸ್ಸಿಗೆ ನಿಜವಾಗಿ ಒಪ್ಪುವುದೇ ಒಮ್ಮೆ ಯೋಚಿಸಿನೋಡಿ...! ಕಂಡಿತಾ ಸಲ್ಲದು. ನಿಜವಾದ ಅಂತಹಾ ಬ್ರಾಥೃ ಪ್ರೇಮ ಇರುವವರು ಇಂತಹಾ ಹಾಡುಗಳನ್ನು ಕೇಳಿಯೂ ಕೇಳದವರಂತೆ ಅಥವಾ ಅರ್ಥವಾದರೂ ಅರ್ಥವಾಗದವರಂತೆ ಕಿವಿಮುಚ್ಚಿ ಸುಮ್ಮನೆ ಕೂರುವ ಬದಲು ಅವುಗಳನ್ನು ಧಿಕ್ಕರಿಸಬೇಕು. ಆಗಲೇ ಇಂತಹಾ ಸಾಹಿತ್ಯ ಸಂಗೀತಗಳನ್ನು ಹುಟ್ಟುಹಾಕುವವರಿಗೆ ಸ್ವಲ್ಪ ಬಿಸಿ ಮುಟ್ಟಿ ಪರಿಸ್ಥಿತಿ ಹದಗೆಡುವ ಮುನ್ನವೇ ಎಚ್ಚೆತ್ತುಕೊಳ್ಳುವಂತಾಗುವುದು. ಇಲ್ಲವಾದರೆ ಮೊದಲೇ ಹೇಳಿದಂತೆ ಈ ಚಿತ್ರರಂಗದಲ್ಲಿ ಕನ್ನಡವನ್ನು ಆ ದೇವರೇ ಕಾಪಾಡಬೇಕು.
ಕೆಲವು ಚಿತ್ರಗಳಲ್ಲಿ ಅದ್ಯಾವುದೋ ಕೋಕಿಲಾ... ಎಂಬುವರು ಮತ್ತು ರಂಗಾಯಣದಂತಹಾ ಪ್ರತಿಷ್ಠಿತ ಭೂಮಿಕೆಯಿಂದ ಬಂದಿರುವಂತಾ ಮತ್ತೊಬ್ಬ ಹಾಸ್ಯ ಕಲಾವಿಧರೂ ಅತೀ ಓವರ್ ಎನ್ನುವಂತಾ ನಟನೆ ಪ್ರಧರ್ಶಿಸುತ್ತಾ ಪ್ರೇಕ್ಷಕರಿಗೆ ಕಿರಿಕಿರಿ ಉಂಟುಮಾಡುತ್ತಾ ಅದನ್ನೇ ಹಾಸ್ಯವೇನೋ ಎಂದು ಸ್ವೀಕರಿಸಿ ಒಪ್ಪಿಕೊಳ್ಳುವಂತೆ ಮಾಡುತ್ತಿದ್ದಾರೆ. ಅಂತಹಾ ಕೀಳು ದರ್ಜೆಯ ಹಾಸ್ಯ ಕೇವಲ ಒಂದು ವರ್ಗದ ಜನರಿಗೆ ಮಾತ್ರಾ ಮೆಚ್ಚುಗೆಯಾಗುವುದೆಂದು ನಮ್ಮ ನಿರ್ಮಾಪಕ ಮಹೋದಯರಿಗೆ ಚೆನ್ನಾಗಿ ತಿಳಿದಿದ್ದು ಅತೀ ಹೆಚ್ಚು ಪ್ರೇಕ್ಷಕರಾಗಿರುವ ಅಂತಹಾ ವರ್ಗದವರನ್ನು ಕಳೆದುಕೊಳ್ಳಲು ಇಚ್ಛಿಸುವುದಿಲ್ಲವಾದ್ದರಿಂದ ಇಂತಹಾ ಸಾಹಿತ್ಯ ಹಾಡು ಮತ್ತು ಹಾಸ್ಯ ಸನ್ನಿವೇಶಗಳು ಚಿತ್ರದಿಂದ ಚಿತ್ರಗಳಿಗೆ ಪುನರಾವೃತ್ತಿ ಆಗುತ್ತಲೇ ಇರುತ್ತವೆ. ಆದರೆ ನಮ್ಮ ನಿಮ್ಮಂತಾ ಜನ ಸಾಮಾನ್ಯರಿಗೆ ಅವೆಲ್ಲಾ ಒಪ್ಪಿಗೆಯಾಗುವುದಿಲ್ಲ ಎಂದು ನನ್ನ ಅನಿಸಿಕೆ. ಈ ನನ್ನ ಅನಿಸಿಕೆಯನ್ನು ಯಾರನ್ನೂ ನಿಂದಿಸಲಾಗಲೀ ಅಥವಾ ಮತ್ತೊಬ್ಬರನ್ನು ಮೆಚ್ಚಿಸಲಾಗಲೀ ಬರೆದಿಲ್ಲ. ನನ್ನ ಮತ್ತು ನನ್ನಂತಾ ಸಹ ಮನಸ್ಕ ಮಿತ್ರರ ಅನಿಸಿಕೆಗಳನ್ನೇ ಇಲ್ಲಿ ಪ್ರತಿಬಿಂಬಿಸಿದ್ದೇನೆ ಆದ್ದರಿಂದ ಅನ್ಯತಾ ಭಾವಿಸಿ ಯಾರೂ ಯಾವುದೇ ರೀತಿಯಲ್ಲೂ ಮನಸ್ಸಿಗೆ ಘಾಸಿ ಮಾಡಿಕೊಳ್ಳಬಾರದಾಗಿ ವಿನಂತಿಸುತ್ತೇನೆ. -ತ್ರಿನೇತ್ರ.  

N PRAVEEN KUMAR ಭಾನು, 05/20/2012 - 12:43

ಕೆಲವೆ ಕೆಲವು ಪಟ್ಟ ಭದ್ರರ ಕೈಯಲ್ಲಿ ಬಂಧಿಯಾಗಿರುವ ಕನ್ನಡ ಚಿತ್ರರಂಗಾನ ದೇವ್ರೆ ಕಾಪಾಡಬೇಕು..! ಡಬ್ಬಿಂಗ್ ಮಾಡೊದ್ರಲ್ಲಿ ತಪ್ಪೆನಿದೆ..? ಬೇರೆ ಬೇರೆ ಭಾಷೆಯ ಚಲನ ಚಿತ್ರ...ಧಾರವಾಹಿ, ಡಿಸ್ಕವರಿ ಚಾನೆಲ್ ನ ಅದ್ಬುತ ಡಾಕ್ಯುಮೆಂಟರಿಗಳೂ ಹೀಗೆ ಅನೇಕ ವಿಷ್ಯಗಳನ್ನು ನಮ್ಮ ಮಾತ್ರು ಭಾಷೆಲಿ ನೊಡೊದೆ ಒಂದು ಚೆಂದ..! ನಮ್ಮಲ್ಲಿ ಬೇರೆ ಭಾಷೆಗಳೆ ಅರ್ಥವಾಗದ ಸಾಕಷ್ತು ಸಂಖ್ಯೆಯಲ್ಲಿ ಪರಮ ಕನ್ನಡಿಗರಿದ್ದಾರೆ..! ಅಂತವರಿಗೆಲ್ಲ ಡಬ್ಬಿಂಗ್ ಒಂದು ವರದಾನವೆ ಸರಿ..! ನಮ್ಮಲ್ಲಿ ಡಬ್ಬಿಂಗ್ ಗೆ ಅವಕಾಶವೆ ಇಲ್ಲದೆ ಬೇರೆ ಭಾಷೆಯ ಚಿತ್ರಗಳನ್ನು ನೊಡಿ..ಆ ಭಾಷೆಯೆ ಬರದಿದ್ದರು ಕುಡ ಅನಿವಾರ್ಯವಾಗಿ ಆ ಭಾಷೆ ಕಲಿತು ಅದನ್ನೆ ನಮ್ಮ ಜನ ಮುಂದುವರೆಸಿಕೊಂಡು ಹೊಗುತ್ತಿದ್ದಾರೆ..! ಇದರರ್ಥ ಕನ್ನಡ ಚಿತ್ರರಂಗದವರೆ ಬೇರೆ ಭಾಷೆಗಳನ್ನು ಜನರಿಗೆ ಕಲಿಯಲು ಪ್ರೊತ್ಸಾಹಿಸುತಿದ್ದಾರೆ..? ಹೀಗೆ ಮುಂದುವರೆದರೆ ಕನ್ನಡ ಎಲ್ಲಿ ಉಳಿದೀತು..!

ವಿನಾಯಕ ಬಿ.ಟಿ ಸೋಮ, 08/08/2016 - 20:41

ಕನ್ನಡಕ್ಕೆ ಡಬ್ಬಿಂಗ್ ಅವಶ್ಯಕತೆ ಇದೆ.ಈ ಮೂಲಕ ಹಾಲಿವುಡ್ ಬಾಲಿವುಡ್ ಸಿನಿಮಾಗಳನ್ನ

ಕನ್ನಡ ಬಾಷೆ ಯಲ್ಲಿ ಆಸ್ವಾದಿಸಬಹುದಾಗಿದೆ.

ಆಗ ಕನ್ನಡ ಬಾಷಾ ಸಿನಿಮಾ ಗಳಲ್ಲಿ ಕ್ರಿಯೇಟಿವಿಟಿ ಹೆಚ್ಚುತ್ತದೆ ಅದರ ಜೊತೆಗೆ ರಿಮೇಕ್ ಹಾವಳಿ ತಪ್ಪಬಹುದು.

ಸ್ವಮೇಕ್ ಸಿನಿಮಾಗಳ ಬೇಡಿಕೆ ಹೆಚ್ಚುತ್ತದೆ ಎಂಬುದು ನನ್ನ ಅನಿಸಿಕೆ.

  • 1414 views