Skip to main content

ಒಂದಷ್ಟು ಸಾಲುಗಳು..

ಬರೆದಿದ್ದುApril 20, 2012
2ಅನಿಸಿಕೆಗಳು

ಪ್ರೀತಿಗೆ ಮಾತಿನ ಹಂಗಿಲ್ಲಮೌನದಿ ಪ್ರೀತಿಯ ತೋರುವ ನಲ್ಲ..ಪ್ರೀತಿಯ ಮಾತನೇಕೆ ನೀ ಅರ್ಥ ಮಾಡಿಕೊಳ್ಳಲಿಲ್ಲ.....? ಪ್ರೀತಿಗೆ ಕೊನೆಗೊಳ್ಳುವ ಹಂಬಲವಿಲ್ಲ..ಹುಸಿಮುನಿಸಿನ ಬಿಸಿ ಮಾತುಗಳ ನಲ್ಲ,ನೀನದೇಕೆ ಕಡೆಗಣಿಸಲಿಲ್ಲ............?  ****************************** ಕನಸು ನನಸಾಗುವ ಗಳಿಗೆ ಕಣ್ಣ ಮುಂದಿದೆ...ಮೂಕವಾಯಿತೇ ಮನಸು ಇದನು ನಂಬಲಾರದೆ...ಕಿವುಡಾಯಿತೇ ಹೃದಯ ಪ್ರೀತಿಯಾ ಕರೆಗೆ...ನನಸಾಗದೇ ಉಳಿವುದೇ ಕನಸು...ಹಿಡಿದ ರಚ್ಚೆಯ ಬಿಡಲಾರದೇ ಈ ಮನಸು...ಮಾತಾಗದೇ ಮೌನ...ಹೇಳುವರಾರು ಗೊಂದಲದ ಮನಕೀಗ ಸಾಂತ್ವನ...? ********************************* ಬೇಗ ಮುಳುಗು ಸೂರ್ಯನೇಚಂದ್ರ ಬರಲಿ ಇನ್ನು...ಉಳಿದಿಲ್ಲ ನನಗಿನ್ನು ಹೆಚ್ಚು ಸಮಯಮುಚ್ಚಿ ಬರುತಿದೆ ಕಣ್ಣು...ಕಾಯುವುದರ ನೋವೇನೆಂದು ನಿನಗೆ ತಿಳಿಯದೇ?ಇರುಳಿಡೀ ಕಾದು ನೀ ಮಿಡಿದ ಕಂಬನಿ ಇಬ್ಬನಿಯಾಗಿದೆ..!!!!!   

ಲೇಖಕರು

Jyothi Subrahmanya

ನೆನಪಿನ ನವಿಲುಗರಿ

ಭಾವನಾ ಜೀವಿ, ಚಿಕ್ಕ ಪುಟ್ಟ ಕನಸು ಕಾಣೋದು ಅಂದ್ರೆ ಇಷ್ಟ. ಮಳೆ, ಇಬ್ಬನಿ, ಹಸಿರು, ಆಕಾಶ, ನಕ್ಷತ್ರ, ರಾತ್ರಿ, ಇವೆಲ್ಲಾ ತುಂಬಾ ಇಷ್ಟ. ನನ್ನ ಬಗ್ಗೆ ಇನ್ನು ಜಾಸ್ತಿ ತಿಳ್ಕೊಳ್ಳೋಕೆ ನನ್ನ ಸ್ನೇಹಿತರಾಗಿ. ನಿಮಗೇ ತಿಳಿಯುತ್ತೆ. ;)

ಅನಿಸಿಕೆಗಳು

venkatb83 ಗುರು, 05/10/2012 - 18:48

  ಜ್ಯೋತಿ ಅವ್ರೆಕವನ ಅರ್ಥಪೂರ್ಣವಾಗಿದೆಅದಕ್ಕಿಂತ ಹೆಚ್ಚಾಗಿ ಭಾವನಾತ್ಮಕವಾಗಿದೆ..ಬಹು ಮೆಚ್ಚುಗೆಯಾಯ್ತು..ಚಿಂತಿಸದಿರಿಭರವಸೆಯೇ ಬೆಳಕು- ಗೊತ್ತಲ್ಲನಿರೀಕ್ಷೆ ಸಾಕಾರಗೊಳ್ಳಲಿ..
ಶುಭವಾಗಲಿ..

Jyothi Subrahmanya ಶುಕ್ರ, 05/18/2012 - 19:45

ಧನ್ಯವಾದಗಳು ವೆಂಕಟ್ ನಿಮ್ಮ ಅನಿಸಿಕೆಗೆ ಹಾಗೂ ಹಾರೈಕೆಗೆ.. ವಂದನೆಗಳೊಂದಿಗೆ,  ಜ್ಯೋತಿ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.