Skip to main content

ಧರೆಯೊಳೆನಗೆ ತಾಯೇ ಧೈವ!!!

ಬರೆದಿದ್ದುDecember 23, 2007
noಅನಿಸಿಕೆ

ಅಮ್ಮ ತಾ ಭ್ರೂಣದೊಳು,
ಸಾಕಿ ಬೆಳೆಸಿದೆ ನನ್ನ...
ಅಕ್ಕರೆಯಂ ತೋರಿ, ಸಕ್ಕರೆಯ,
ಸವಿಪಾಕದೊಳಟ್ಟೆ ಎನ್ನ...!!

ನೋವು ನಲಿವುಗಳ ನುಂಗಿ,
ನನ್ನಧೀ ಶಿಶು ಎಂದು,
ಎದೆ ಹಾಲ ನೀ ಗೈದು,
ಮುತ್ತಿನಾ.. ಮಳೆ ಸುರಿದು,
ಸ್ವರ್ಗದ ಮಡಿಲೊಳಗಿಟ್ಟೆ ಎನ್ನ..!!

ಹೃದಯ ಮಂದಿರದೊಳು,
ಕೈ-ಮುಗಿದು ಮುನಿಯಪ್ಪನಿಗೆ,
ಬಾಳು ನೀ ಸುಖವಾಗೆಂದು,
ಹರುಸುವೆ ನನಗೆ..!

ಅರಿಯದೆ ಧರೆಯೊಳು,
ಮಲಗಿರೆ ನಿನ್ನ ಮಡಿಲೊಳು,
ತೋರಿಸಿದೆ ನೀ ನಡೆ ಎಂದು-
ಸತ್ಯದ ಮಾರ್ಗದೊಳು.
ಮುನಿಯನಿರುವ ಎಲ್ಲರ ಮನದೊಳು,
ಬಾಳೆಂದೆ ನೀ ಸುಖದೊಳು.

"ತಾಯಂದಿರ ಭ್ರೂಣದೊಳಗಿರುವಾಗ ಶಿಶು-
ನಿತ್ಯ ಪ್ರಾರ್ಥನೆ-ಮುನಿಯನಲ್ಲಿ.. ಶಿಶು ನನ್ನ ಕೈಗೊಪ್ಪಿಸು!!"

ಯಾರು ತೋರುವರೀ ರೀತಿ,
ಹೆತ್ತವ್ವ ತೋರುವಾ.. ಪ್ರೀತಿ,
ನೋವಾಗಿರೆ ಶಿಶುವಿಗೆ,
ತುಂಬಿ ಬರುವುದು ದುಃಖದಾ ಕಡಲು-
ಅವಳ ಮನದೊಳಗೆ..!

ತನ್ನ ಜೀವನವ ತೇಯ್ದು,
ಕಂದ ನನದೆಂದು,
ದುಃಖಿಸದೆ ಎಮ್ಮನವ,
ಬೆಳೆಸಿದಳು ತಾ.. ನೊಂದು..!!

ಪ್ರೀತಿಯ ಅಪ್ಪುಗೆಯೊಳಗೆನ್ನ ಬಂದಿಸಿ,
ಬಾಳಪುಟದೊಳಗೆ ಬರುವ-
ನೋವು-ನಲುವು ಗಳ ತಿಳಿಸಿ,

ಸತ್ಯಧೀ ನಡೆದರೆ, ಮೆಚ್ಹುವ ನಾ-
ಧರೆ ಒಡೆಯನೆಂದು,
ಕೊಟ್ಟಿಹಳು ಗಲ್ಲಕೆ-ಪ್ರೀತಿಯ ಕಾಣಿಕೆ...!!

- - - - - - - - - - - -

"ತಿಳಿಯಿತೆನಗೆ ಸರಿತಪ್ಪುಗಳ ದಾರಿ,
ಓಗಬಾರದು ಆಸೆಗಳ ಮಿತಿ ಮೀರಿ,

ನನದೆಂಬುದು ಧರೆಯೊಳೇನಿಲ್ಲ,
ಕೊಟ್ಟಿರುವಾತನದೇ ಎಲ್ಲ..,

ದೇಹ, ತಾ... ಅನುಭವಿಸುವುದೆಲ್ಲವಾ...
ಆತ್ಮ ತಾ.. ಪಡೆಯುವುದು ಪಾಪ, ಪುಣ್ಯಗಳ ಪಲಿತಾಂಶವ..!!

ಧರೆಯೊಳೆನಗೆ ತಾಯೇ.. ಧೈವ..!!

ಲೇಖಕರು

ಯೋಗೇಶ್

ನಿನಗೇಳದ ಮಾತೊಂದು ಮನದ(ನ)ಲ್ಲೆ ಉಳಿದಿದೆ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.