ಈ ಸಂಭಾಷಣೆ...ಪ್ರೇಮ ಸಂಭಾಷಣೆ...!
ಹುಡುಗ ಮಲಗುವುದಕ್ಕೆ ಅಂತಾ ಎಲ್ಲಾ ಸಿದ್ದ ಮಾಡಿಕೊಂಡಿರುತ್ತಾನೆ. ಬೆಳಗ್ಗೆಯಿಂದ ದುಡಿದು ಸಾಕಾಗಿ ಹೋಗಿರುತ್ತದೆ. ಕಣ್ಣು ಬಿಡಲು ಆಗದಷ್ಟು ನಿದ್ದೆ. ಆಗ ಅವನ ಲವರ್ ಪೋನ್ ಮಾಡ್ತಾಳೆ.
ಅವಳು ಅವನಿಗೆ ಎಂದಿನಂತೆ ಮಿಸ್ಡ್ ಕಾಲ್ ಕೊಟ್ಟಳು. ಅವನೂ ಸಹ ಎಂದಿನಂತೆ ಆ ಕಡೆಯಿಂದ ಕಾಲ್ ಮಾಡಿದ. ಇದ್ದದ್ದು ಬರೀ 20ರೂಪಾಯಿ ಕರೆನ್ಸಿ.
ಗಮನಿಸಿ : ಈ ಸಂಭಾಷಣೆಯಲ್ಲಿನ ಬ್ರ್ಯಾಕೆಟ್ ಒಳಗಿರುವುದು ಹುಡುಗ ತನ್ನಂತಾನೇ ಮಾತಾಡಿಕೊಳ್ಳುವುದು.
ಅವಳು: ಹಲೋ..
ಅವನು: (ಅಯ್ಯೋ ದೇವರೇ...ಇವತ್ತೇನು ಗ್ರಹಚಾರ ಕಾದಿದೆಯೋ? ನಿದ್ದೆ ನೆಗೆದು ಬಿದ್ದು ಹೋಯ್ತು) ಹೈ, ಏನೇ ಸಮಾಚಾರ...?
ಅವಳು: ಏನೂ ಇಲ್ಲ...ಹೀಗೇ ಕಾಲ್ ಮಾಡಿದೆ...
ಅವನು: (ದೆವ್ವ ಓಡಾಡೋ ಟೈಂನಲ್ಲಿ, ಹೂಂ......ನೀನೆಲ್ಲಿ ಕಾಲ್ ಮಾಡ್ತೀಯ? ಕರೆನ್ಸಿ ಖಾಲಿ ಆಗುತ್ತೆ ಅಂತಾ...ಬರೀ ಮಿಸ್ಡ್ ಕಾಲ್ ತಾನೇ ಕೊಟ್ಟಿದ್ದು... ಜುಗ್ಗಿ. ಎಲ್ಲಿ ಹೋಗುತ್ತೆ ಮನೆತನದ ಬುದ್ದಿ) ಸರೀ..ನೀನೇನ್ ಮಾಡ್ತಿದ್ದೆ ನನ್ನ ಡಾರ್ಲಿಂಗ್?
ಅವಳು: ಈಗ ತಾನೇ ಊಟ ಮುಗಿಸ್ದೆ... ನೀನೇನು ಮಾಡ್ತಿದ್ದೀಯಾ?
ಅವನು: ನಂದೂ ಈಗ ತಾನೇ ಊಟ ಮುಗೀತು...ಈಗ..."ಏನ್ ಹುಡ್ಗೀರೋ ...ಯಾಕಿಂಗಾಡ್ತೀರೋ?" ಹಾಡು ಕೇಳ್ತಿದೀನಿ ಎಫ್ಎಂನಲ್ಲಿ.
ಅವಳು: ಸಖತ್ ಹಾಡಲ್ವ?
(ಆಗ ಅವಳು ರಣಧೀರ ಚಿತ್ರದಿಂದ ಹಾಡೊಂದನ್ನ ಗುನುಗ್ತಾಳೆ.)
ಬಾ ಬಾರೋ ರಣಧೀರ. ನೀ ಬಂದರೆ ದಿಗ್ವಿಜಯದ ಹಾರ.
ಅವನು: (ಒಳ್ಳೆ ಕಾಗೆ ಕಿರುಚ್ದಂಗಾಗ್ತಿದೆ.. ಗಾರ್ದಭ ಕಂಠ ಅಹಾ.. ಇದನ್ನು ಏನಾದ್ರೂ ರವಿಚಂದ್ರನ್ ಕೇಳಿದ್ದರೆ ಪಿಚ್ಚರ್ ತೆಗೆಯೋದೆ ಬಿಟ್ಟಿರೋನು) ಅಯ್ಯೋ! ದೇವ್ರೇ ನನ್ನ ಕಾಪಾಡಪ್ಪ!
ನೀನು ಇಷ್ಟೊಂದು ಚೆನ್ನಾಗಿ ಹಾಡ್ತೀಯಾ ನಂಗೆ ಗೊತ್ತೇ ಇರಲಿಲ್ಲ...!
ಅವಳು: ಮತ್ತೆ ಗುನುಗ್ತಾಳೆ.
ಅವನು: ಇನ್ನೊಂದು ಹಾಡು ಹೇಳೆ ಪ್ಲೀಸ್...
ಅವಳು: ಇಷ್ಟೊತ್ತು ಏನು ಕಥೆನಾ ಹೇಳ್ತಿದ್ದೆ. ಹಹಹಹ ಇಲ್ಲಿ ಎಲ್ರೂ ಮಲಗಿದ್ದಾರೆ ಕಣೋ...ನಾನು ಹಾಡೋಕೆ ಶುರು ಮಾಡಿದ್ರೆ ಎಲ್ರೂ ಭೂಕಂಪ ಆಗಿದೆ ಅಂತ ಎದ್ಬಿಡ್ತಾರೆ...
ಅವನು:(ಅದೇನೋ ನಿಜ..ಭೂಕಂಪ ಅಲ್ಲ ಯಾವುದೋ ಭೂತ ಬಂದಿದೆ ಅಂತಾ ಓಡಿ ಹೋಗ್ತಾರೆ...) ಪ್ಲೀಸ್
ಅವಳು: ಪೀಡಿಸ್ಬೇಡ್ವೋ...ನಂಗೆ ಅಷ್ಟು ಚೆನ್ನಾಗಿ ಹಾಡು ಹೇಳೋಕೆ ಬರಲ್ಲ..
ಅವನು: (ಅದು ನನಗೂ ಗೊತ್ತು ಗೊತ್ತು ಬಿಡು... ) ಇಲ್ಲಾ ನೀ ತುಂಬಾ ಚೆನ್ನಾಗಿ ಹೇಳ್ತೀಯ.
ಪ್ಲೀಸ್ ಹೇಳೇ...
ಅವಳು: ಇಲ್ಲಾ ಕಣೋ ನಂಗೆ ಒಂಥರಾ ಆಗುತ್ತೆ
ಅವನು: (ನಿನ್ನನ್ನೇನೂ ಹಂಸಲೇಖನ ಹತ್ತಿರ ಕರೆದುಕೊಂಡು ಹೋಗಲ್ಲ, ಬೇಗ ಒದರಲೇ......)ಹಾಗೇನಿಲ್ವೆ...ಹೇಳೇ ಪ್ಲೀಸ್
ಈಗೇನು ನೀನು ಹಾಡ್ತೀಯೋ ಇಲ್ವೋ? ನಿಮ್ಮಪ್ಪನ ಮೇಲೆ ಆಣೆ.
ಅವಳು: ಯಾಕ್ ಹೀಗೆ ತೊಂದ್ರೆ ಕೊಡ್ತೀಯ? ನಂಗೆ ಅಂಥ ಒಳ್ಳೇ ಕಂಠ ಇಲ್ಲ ಕಣೋ.........
ನೀನಿಷ್ಟು ಹಠ ಮಾಡ್ತಿದೀಯ...ಬರೀ ಒಂದೇ ಒಂದು ಪ್ಯಾರಾ ಹೇಳ್ತೀನಿ ಸರೀನಾ?
ಅವನು: (ಅದನ್ನೇ ಒದರು. ಬೇಕಿತ್ತಾ ಇದು ನನಗೆ. ಮಲಗೋ ಟೈಮಲ್ಲಿ, ಬೆಸೀಟ್್ಲ್ಲಿ ಜಿರಲೆ ಬಿಟ್ಕಂಡಂಗೆ ಆಯ್ತು. ಇನ್ನು ಏನೇನು ಸಹಿಸಿಕೋಬೇಕಪ್ಪ ಶಿವನೇ?)
ಅವಳು: ಸರಿ, ಯಾವ ಹಾಡು ಹೇಳಲಿ ಹೇಳು?
ಅವನು: (ನಿಮ್ಮಜ್ಜಿ ಪಿಂಡ. ನೀನೇನಾದ್ರೂ ಹಾಡ್ಕೋ..ನಂಗಂತೂ ಇವತ್ತು ನಿದ್ದೆ ಹಾಳು..) ನಾನು ಕೋಳಿಕೆ ರಂಗಾ.............
ಅವಳು: ಹಾಡೇನೋ ಚೆನ್ನಾಗಿದೆ..ಆದ್ರೆ ಸಾಹಿತ್ಯ ನೆನಪಿಲ್ವಲ್ಲ...
ಆವನು: (ನಿನ್ ಟೆಕ್ಸ್ಟ್ ಬುಕ್ ಬಿಟ್ರೆ ಇನ್ನೇನ್ ಗೊತ್ತು ನಿಂಗೆ ಹೇಳು... ನನ್ನ ನಿದ್ದೆ ಹಾಳಾಗಿ ಹೋಯ್ತು) ಸರಿ ಯಾವುದೋ ಹೇಳು ಚಿನ್ನ
(ಅವಳು ಗಂಟಲು ಸರಿ ಮಾಡ್ಕಂಡು, ಒಂದು ಸಾಲು ಗುನುಗ್ತಾಳೆ)
ಅವಳು: ಇಲ್ಲಾ ಕಣೋ. ನಂಗೆ ನಾಚ್ಕೆಯಾಗುತ್ತೆ.
ಅವನು: (ಇದಕ್ಕೆ ನಾಚಿಕೆ ಬೇರೆ ಕೇಡು) ಹೇಳೇ ಪರ್ವಾಗಿಲ್ಲ...ನಿನ್ನ ಕಂಚಿನ ಕಂಠದ ದನಿಯ ಕಡಲಲ್ಲಿ ಮುಳುಗ್ಬೇಕು ಅಂತಿದ್ದೀನಿ...
ಅವಳು : ನಾಳೆ ಹೇಳ್ತೀನಿ
ಅವನು: (ಅಮ್ಮಾಡಾ.......ಸಧ್ಯ...ಬದುಕಿದೆಯಾ ಬಡ ಜೀವವೇ?) ಸರೀನಮ್ಮ ನಿಂಗೆ ಹೇಗನ್ಸುತ್ತೋ ಹಾಗೇ ಮಾಡು.
ಗುಡ್ ನೈಟ್
ಮತ್ತೆ ಸ್ವಲ್ಪ ಹೊತ್ತಾದ ಮೇಲೆ ಮತ್ತೆ ಕಾಲ್ ಮಾಡ್ತಾಳೆ(ಸಾರಿ...ಅವಳು ಯಾವತ್ತೂ ಕಾಲ್ ಮಾಡಲ್ಲ. ಅವಳೇನಿದ್ರೂ ಮಿಸ್ ಕಾಲಷ್ಟೇ ಕೊಡೋದು),,,,
ಅವಳು: ಹಾಯ್.. ಮಲಕ್ಕೋಂಡು ಬಿಟ್ಯಾ?
ಅವನು: (ಇಲ್ಲಾ ನನ್ ತಾಯಿ..ದೆವ್ವಗಳ ಜೊತೆ ಗೋಲಿ ಆಡ್ತಾ ಇದೀನಿ) ಇಲ್ಲಾ ಕಣೇ..
ಅವಳು: ಮತ್ತೇನ್ ಮಾಡ್ತಿದೀಯಾ?
ಅವನು: (ರಾತ್ರಿ ಹೊತ್ತಲ್ಲಿ ಇನ್ನೇನು ಗಿಲ್ಲಿ ದಾಂಡೂನಾ ಆಡ್ತಾರೆ...)ಮಲಗಕ್ಕೆ ಅಂತಾ ರೆಡಿಯಾಗ್ತಾ ಇದ್ದೆ.
ಹೇ..ಪರ್ವಾಗಿಲ್ಲ...ಹೇಳು
ಅವಳು: ನಾನ್ ಹಾಡ್ಲಿಲ್ಲಾ ಅಂತ ನಿಂಗೆ ಬೇಜಾರಾಯ್ತ?
(ಇದು ಯಾಕೋ ಟ್ರಿಕಿ ಪ್ರಶ್ನೆ ಅನ್ನಿಸಿದ್ರಿಂದ ಸ್ವಲ್ಪ ಹೊತ್ತು ಯೋಚಿಸ್ದ)
ಅವನು: (ಬೇಜಾರ್ ಮಾಡ್ಕೊಳ್ಳೋದಾ? ನಮ್ಮ ತಾಯಾಣೆಗೂ ಇಲ್ಲ. ನೀನು ಹಾಡ್ದೇ ಇದ್ರೆ ನನ್ ಜೀವಮಾನದಲ್ಲೇ ಅತ್ಯಂತ ಅದೃಷ್ಟದ ದಿನ..:- ) ಹಾಗೇನೂ ಇಲ್ಲ..ನೀನು ಹಾಡಲಿಲ್ವಲ್ಲ......ನೀನೇ ಹೇಳ್ದೆ ನಾನು ನಾಳೆ ಹಾಡ್ತೀನಂತ...ಅದಕ್ಕೆ, ನಾನು ಬಕಪಕ್ಷಿ ತರಾ ಕಾಯ್ತಿದ್ದೀನಿ...(ನಾನು ಬಚಾವಾದೆ ಅಂತ ಅನ್ಕೊಂಡಿದ್ನಲ್ಲಪ್ಪ...ಥತ್ ತೇರಿಕಿ:-()
ಅವಳು ಹಾಡೋಕೆ ಶುರು ಮಾಡ್ತಾಳೆ
'ಮಳೆ ನಿಂತು ಹೋದ ಮೇಲೆ...'
ಅವನು: ವ್ಹಾ ವ್ಹಾ..ಸಖತ್ತಾಗಿದೆ
ಅವಳು: ಸುಳ್ಳ...ನಂಗೊತ್ತು ನನ್ ಧ್ವನಿ ಅಷ್ಟು ಚೆನ್ನಾಗಿಲ್ಲ ಅಂತ
ಅವನು :(ಮಳೆ ಈಗ ಶುರು, ಸಧ್ಯ...ಈಗ್ಲಾದ್ರೂ self realization hai... ... ) ಇಲ್ಲ ಡಾರ್ಲಿಂಗ್ ನೀನು ನಿಜಕ್ಕೂ ಚೆನ್ನಾಗಿ ಹಾಡ್ತೀಯ
ಅವಳು: ಇಲ್ಲ, ನಂಗೊತ್ತು ನೀನು ಹೀಗೇ ಹೇಳ್ತಿಯಾ ಅಂತ
ಅವನು: (ಯಾರಾದ್ರೂ ಕಾಪಾಡ್ರೋ , ಈ ಪಾಪಿನಾ. ಅಬ್ಬಾ ಅಂತೂ, ಕಡೆಗೂ ನಿಂಗೆ ಗೊತ್ತಾಯ್ತಲ್ಲ...)ನಿನ್ ಧ್ವನಿ ಅಷ್ಟು ಕೆಟ್ದಾಗಿದ್ದಿದ್ರೆ ನಾನು ಇಷ್ಟೊತ್ತು ಕೇಳ್ತಾನೆ ಇರ್ಲಿಲ್ಲ.
ಅವಳು: ಸರಿ..ನೀನು ಮಲಕ್ಕೋ..ಗುಡ್ ನೈಟ್
ಅವನು:(ನಿನ್ ಹಾಡು ಕೇಳಿದ್ಮೇಲೂ ನಂಗೆ ನಿದ್ದೆ ಎಲ್ಲಿಂದ ಬರುತ್ತೆ...) ಗುಡ್ ನೈಟ್
ಮತ್ತೆ ಎರಡು ನಿಮಿಷ ಬಿಟ್ಟು ಮಿಸ್ ಕಾಲ್ ಕೊಟ್ಟಳು
ಅವನು: (ಅಯ್ಯೋ! ದೇವ್ರೆ..ಯಾಕೋ ಇವತ್ತು ಇವಳು ಬಿಡೋ ಹಗೆ ಕಾಣಿಸ್ತಿಲ್ವಲ್ಲಪ್ಪ, ಹುಡುಗಿಯರಿಂದ ಟಾರ್ಚರ್ ಅಂದ್ರೆ ಇದೇನಾ)...ಏನ್ ಸ್ವೀಟಿ?
ಅವಳು: ನಿಜ ಹೇಳೋ..ನನ್ ದನಿ ನಿಜಕ್ಕೂ ಚೆನ್ನಾಗಿದೀಯಾ...
ಅವನು: (ನಿನ್ ಧ್ವನೀನಾ ರೆಕಾರ್ಡ್ ಮಾಡ್ಕೊಂಡು ನೀನೇ ಯಾಕೆ ಒಂದ್ಸಲ ಕೇಳ್ಬಾರ್ದು)
Of course....ನಿಜವಾಗ್ಲೂ..
ಅವಳು: ನೀನ್ ಹೇಳ್ತಿದೀಯಾ ಅಂದ್ಮೇಲೆ ಅದು ನಿಜಾನೇ ಇರ್ಬೇಕು.. ಗುಡ್ ನೈಟ್
ಸಾಲುಗಳು
- Add new comment
- 3152 views
ಅನಿಸಿಕೆಗಳು
ಹಾಯ್ ಗಿರೀಶ್ ಎಲ್ಲಿ
ಹಾಯ್ ಗಿರೀಶ್ ಎಲ್ಲಿ ಹೋಗಿಬಿಟ್ಟಿದ್ದೀರಿ ಇಷ್ಟು ದಿನ ಚೆನ್ನಾಗಿದ್ದೀರಾ?
ತುಂಬಾ ಬೇಜಾರಿನಲ್ಲಿದ್ದ ನನಗೆ ನಿಮ್ಮ ಹಾಸ್ಯ ನನ್ನ ಮುಖದಲ್ಲಿ ನಗುವನ್ನು ಮೂಡಿಸಿತು ನಿಮ್ಮ ಹಾಸ್ಯಗಳನ್ನು ಹೀಗೆ ಮುಂದುವರೆಸಿ ತಂಬಾ ಚೆನ್ನಾಗಿದೆ.
ನಿಮ್ಮ ಪ್ರತಿಕ್ರಿಯೆಗೆ ನನ್ನ
ನಿಮ್ಮ ಪ್ರತಿಕ್ರಿಯೆಗೆ ನನ್ನ ದನ್ಯವಾದಗಳು, ನಾ ಚೆನ್ನಾಗಿದ್ದೀನಿ, ನೀವು ಚೆನ್ನಾಗಿದ್ದೀರಾ?
ಪರವಾಗಿಲ್ಲ ಸುಮಾರಾಗಿ ಇದ್ದೀನಿ.
ಪರವಾಗಿಲ್ಲ ಸುಮಾರಾಗಿ ಇದ್ದೀನಿ.
ಯಾಕ್ರೀ ಎನಾದ್ರು ಸಮಸ್ಯೆ ನಾ??
ಯಾಕ್ರೀ ಎನಾದ್ರು ಸಮಸ್ಯೆ ನಾ??
ಸಮಸ್ಯೆ ಎಂಬುವು ಮನುಷ್ಯನಿಗೆ
ಸಮಸ್ಯೆ ಎಂಬುವು ಮನುಷ್ಯನಿಗೆ ದೇವರು ಕೊಟ್ಟಿರುವ ವರ ಅದನಾ ನಾವು ಸಮಸ್ಯೆ ಅಂತ ತಿಳಿಯಬಾರದು.
"ವರ" ನ?
"ವರ" ನ?
yes god gift..
yes god gift..
i thought u were telling abt
i thought u were telling abt "groom(ವರ)"
ಗಿರೀಶ್ ಅವ್ರೆ ಹಳೆಯ ಸುಮಧುರ
ಗಿರೀಶ್ ಅವ್ರೆ ಹಳೆಯ ಸುಮಧುರ ಗಾನ ಒಂದನ್ನ ಶೀರ್ಷಿಕೆಯಾಗಿಸಿ ನೀವ್ ಬರ್ದ ಈ ಹಾಸ್ಯ ಬರಹ ಓದಿದೆ , ತುಂಬಾ ಚೆನ್ನಾಗಿದೆ...ಎಸ್ಟು ಕರಾರುವಾಕ್ಕಾಗಿ ಬರ್ದಿದೀರಾ ಅಂದ್ರೆ ಅದು ಬಹುಪಾಲು ಪ್ರೇಮಿಗಳಿಗೆ ಆಗೋದೆಯ...
ಅದನ್ನು ಅನುಭವಿದ್ದವರಂತೆಯೇ ಬರ್ದಿದೀರಾ ಅಂದ್ರೆ ಅದ್ನ 'ಕಾಂಪ್ಲಿಮೆಂಟ್ 'ಅಂದುಕೊಳ್ಳಿ.... ನಿಮ್ಮ ಈ ಹಾಸ್ಯ ಬರಹಗಳನ್ನ ಓದಿ ನ(ಮ್ಮ)ನ್ನ ಮನ ಮುದಗೊಂಡಿತು...
ಶುಭವಾಗ್ಲಿ...
thank u venkat, all jokes r
thank u venkat, all jokes r copied from other n dat credit should goes to them
ಅದ್ಬುತವಾಗಿದೆ ತುಂಬಾ ಚನ್ನಾಗಿದೆ
ಅದ್ಬುತವಾಗಿದೆ ತುಂಬಾ ಚನ್ನಾಗಿದೆ
thank u:)
thank u:)
ಹಾಯ್ ಗಿರೀಶ್, ಹಾಸ್ಯ ಚೆನ್ನಾಗಿ
ಹಾಯ್ ಗಿರೀಶ್, ಹಾಸ್ಯ ಚೆನ್ನಾಗಿದೆ. ಮಲಗಿದವರನ್ನ ಎಬ್ಬಿಸಿ, ಮಲಗಿದ್ರಾ ಅಂಥ ಕೇಳೋರಿಗೂ ಇದು ಅನ್ವಯಿಸುತ್ತೆ.. ಃ) ನಿಮ್ಮ ಲೇಖನ ಓದಿಮುಗಿಸೋಷ್ಟೂ ಹೊತ್ತು ನಗು ಮುಖದಿಂದ ಮಾಯವಾಗ್ಲಿಲ್ಲ. ಹೀಗೇ ಹಾಸ್ಯ ಲೇಖನಗಳನ್ನ ಬರೀತಾ ಇರಿ. ಧನ್ಯವಾದಗಳೊಂದಿಗೆ,ಜ್ಯೋತಿ.
tnk u:)
tnk u:)
ಅದ್ಬುತವಾಗಿದೆ
ಅದ್ಬುತವಾಗಿದೆ
ha ha ha thumbha channigide
ha ha ha thumbha channigide ige baritha iri danyavadagalu......
ನಕ್ಕು ನಕ್ಕು ಸಾಕಾಯ್ತು ಬಾಸ್
ನಕ್ಕು ನಕ್ಕು ಸಾಕಾಯ್ತು ಬಾಸ್ :)
ಪ್ಲೀಸ್ ಇದೆ ಥರ ಬೇರೆ ಲವೆರ್ಸ್ ಜೋಕೆಸ್ ನ ಪೋಸ್ಟ್ ಮಾಡಿ...
ಧನ್ಯವಾದ :)