Skip to main content

ನನ್ನ ಕಥೆ-ವ್ಯಥೆ

ಬರೆದಿದ್ದುFebruary 19, 2012
8ಅನಿಸಿಕೆಗಳು

ಅಯ್ಯೋ... ಏನಿದು ಇಷ್ಟೊಂದು ಬಿಸ್ಲು... ಥೂ ದಿನಾ ಇದೇ ಹಿಂಸೆ... ಯಾವತ್ತು ಇಲ್ಲಿಂದ ಬಿಡುಗಡೆ ಸಿಗುತ್ತೋ.. ದಿನಾ ವಾಹನಗಳಕಿವಿಗಡಚಿಕ್ಕೋ ಶಬ್ದ ಕೇಳಿ ಕೇಳಿ ಕಿವಿ ಕಿವುಡಾಗಿಬಿಟ್ಟಿದೆ.. ಜೊತೆಗೆ ವಿಚಿತ್ರ ಎಂಬಂತೆ ನೋಡೋ ನೂರಾರು ಕಣ್ಣುಗಳು.. ಅದೇನುಪಾಪ ಮಾಡಿ ಇಲ್ಲಿ ಸಿಕ್ಕಿ ಹಾಕಿಕೊಂಡು ಬಿಟ್ಟೆನೋ... ಮನಸ್ಸು ತನಗೆ ತೋಚಿದಂತೆ ಗೊಣಗಾಡುತ್ತಿದ್ದಾಗಲೇ ಒಂದು ಕೈ,ನೀರನ್ನ ಒಂದು ತಟ್ಟೆಗೆ ಬಗ್ಗಿಸಿ ನನ್ನೆದುರು ತಂದಿಟ್ಟಿತು.. ಸಿಕ್ಕಿದ್ದೇ ಪುಣ್ಯ ಅಂತ ಕುಡಿದು ಮುಗಿಸಿದೆ.. ಮನಸ್ಸಿಗೆ ಸ್ವಲ್ಪ ಹಾಯ್ ಅನ್ಸಿತು..ನನ್ನ ಜೊತೆಗಾರರೆಲ್ಲ ನಿದ್ರೆಗೆ ಶರಣಾಗಿದ್ರೆ, ಹೊಸತಾಗಿ ಸೇರ್ಪಡೆಯಾದ ಸ್ನೂಪಿ ಮಾತ್ರ ಏನೋ ಕಳಕೊಂಡವಳಂತೆ ಬೋನಿನೊಳಗೇ ಸುತ್ತುತ್ತಾ ಎಲ್ಲರನ್ನೂ ಎಬ್ಬಿಸೋ ಪ್ರಯತ್ನ ಮಾಡ್ತಾ ಇದ್ಲು..... ಹಾಗೇ ನಿದ್ರೆ ಜೋಂಪು ಹಿಡೀತು ಅನ್ನೋಷ್ಟ್ರೊಳಗೇ ಏನೋ ಜೋರಾದ ಶಬ್ದ!!ಬೆಚ್ಚಿಬಿದ್ದು, ಎಚ್ಚರಗೊಂಡು ಅಮ್ಮನನ್ನ ಹುಡುಕೋಕೆ ಶುರು ಮಾಡಿದೆ.. ಆದ್ರೆ ಅಮ್ಮ ಇಲ್ಲಿಲ್ಲ ಅನ್ನೋದು ನೆನಪಾಗಿ ಅಳು ಶುರುವಾಯ್ತು.. ಅಮ್ಮನ ಜೊತೆ ಬೆಚ್ಚಗೆ ಮಲಗಿದಾಗ, ಅವಳ ಹೊಟ್ಟೆಗಂಟಿಕೊಂಡಂತೆ ಮಲಗಿ, ಅವಳು ನನ್ನನ್ನ ಮೆಲುವಾಗಿ ನೇವರಿಸುವಾಗ ಆಗ್ತಾ ಇದ್ದಖುಶಿ, ಸಿಗ್ತಾ ಇದ್ದ ಆ ಧೈರ್ಯ, ಭದ್ರತೆಯ ಬಿಸುಪು ಇನ್ನಿಲ್ಲ... ಇನ್ನೇನಿದ್ರೂ ಈ ವಾಹನಗಳ ಶಬ್ದ, ಜನರ ಮಾತು, ನನ್ನನ್ನ ಆಟಿಕೆಯ ಹಾಗೆ ಕೈಯಿಂದ ಕೈಗೆ ಬದಲಾಯಿಸುತ್ತಾ ಗಮನಿಸೋ ಕಣ್ಣುಗಳು, ಸುಸ್ತೆನಿಸಿದಾಗ ಕುಡಿಯಲಿಕ್ಕೆ ಸಿಗೋ ನೀರು, ಆಹಾರ, ಮಲಗೋದಿಕ್ಕೆ ಎರಡಡಿಜಾಗ ಇಷ್ಟೇ.....................                                           ********************************** ಎಚ್ಚರ ಆದ ಕೂಡಲೇ ಮಗನಿಗಾಗಿ ಹುಡುಕಿದೆ... ಆಮೇಲೆ ನೆನಪಾಯ್ತು ಅವನಿಲ್ಲ... ಅವನು ಹೋಗಿ ಎರಡು ದಿನ ಆಯ್ತು..ಬರ್ತಾನೆ ಅನ್ನೋಆಸೆ ಬತ್ತಿ ಹೋಗಿದೆ.. ಅವನ ತುಂಟಾಟ, ಕೋಪ, ಪ್ರೀತಿ, ಜಗಳ ಇವೆಲ್ಲ ಇಲ್ಲದೆ ಅದೇನೋ ಶೂನ್ಯತೆ...ಖಾಲಿತನ... ಸಮಯಕ್ಕೆ ಸರಿಯಾಗಿ ಸಿಗೋ ಊಟ ಇತ್ಯಾದಿ ಹೊಟ್ಟೆ ತುಂಬಿಸುತ್ತದ್ಯೇ ಹೊರತು ಮನಸ್ಸನ್ನಲ್ಲ... ಕರುಳಿನ ಬಳ್ಳಿ ಇನ್ನೂ ಚುರು ಚುರುಗುಟ್ಟುತ್ತಲೇ ಇದೆ..ಕೊನೇ ಪಕ್ಷಅವನ ಜೊತೆ ನನ್ನನ್ನೂ ಕರೆದೊಯ್ದಿದ್ದರೆ ಅವನನ್ನ ಕಣ್ರೆಪ್ಪೆಯಂತೆ  ಕಾವಲು ಕಾಯುತ್ತಾ ಜೊತೆಯಾಗಿ ಇರ್ತಿದ್ದೆ.... ಆದ್ರೆ .... ಎಷ್ಟು ಯೋಚಿಸಿದ್ರೂ, ನರಳಿದ್ರೂ, ದೇವರನ್ನ ಕೇಳಿಕೊಂಡ್ರೂ ನನ್ನ ಕಂದ ಬರ್ತಾ ಇಲ್ಲ...ಮನೆಯವರೆಲ್ಲರನ್ನೂ ಕಾಡಿದ್ದಾಯ್ತು, ಬೇಡಿದ್ದಾಯ್ತು... ಉಪಯೋಗವಿಲ್ಲ... ಯಾರೆಷ್ಟೇ ಪ್ರೀತಿ ತೋರಿಸಿದ್ರೂ, ತಲೆ ನೇವರಿಸಿ ನನ್ನಿಷ್ಟದ ತಿಂಡಿ ಕೊಟ್ರೂ ಮನಸ್ಸು ಶಾಂತವಾಗ್ತಾ ಇಲ್ಲ.... ನನ್ನ ಕಂದ ಊಟ ಮಾಡಿರಬಹುದಾ??? ಅವನಿಗೆ ಯಾರಾದ್ರೂ ಹಿಂಸೆ ಕೊಟ್ರೆ... ಅವ್ನಿಗೆ ಹೊಟ್ಟೆ ನೋವಾದ್ರೆ... ಛೆ.. ಇದೆಂಥಾ ಬದುಕುದೇವ್ರೆ... ಮುದ್ದಾದ ನನ್ನ ಕರುಳಿನ ಕುಡಿಯನ್ನೂ ಉಳಿಸಿಕೊಳ್ಳೋದಿಕ್ಕೆ ಆಗ್ಲಿಲ್ವಲ್ಲಾ ನನ್ನಿಂದ.... .......                                                                              (ಮುಂದುವರೆಯುವುದು..........)

ಲೇಖಕರು

Jyothi Subrahmanya

ನೆನಪಿನ ನವಿಲುಗರಿ

ಭಾವನಾ ಜೀವಿ, ಚಿಕ್ಕ ಪುಟ್ಟ ಕನಸು ಕಾಣೋದು ಅಂದ್ರೆ ಇಷ್ಟ. ಮಳೆ, ಇಬ್ಬನಿ, ಹಸಿರು, ಆಕಾಶ, ನಕ್ಷತ್ರ, ರಾತ್ರಿ, ಇವೆಲ್ಲಾ ತುಂಬಾ ಇಷ್ಟ. ನನ್ನ ಬಗ್ಗೆ ಇನ್ನು ಜಾಸ್ತಿ ತಿಳ್ಕೊಳ್ಳೋಕೆ ನನ್ನ ಸ್ನೇಹಿತರಾಗಿ. ನಿಮಗೇ ತಿಳಿಯುತ್ತೆ. ;)

ಅನಿಸಿಕೆಗಳು

girish.g.h ಭಾನು, 02/19/2012 - 09:57

ಕಥೆ ನಿಗೂಡವಾಗಿದೆ,...  ಆದಷ್ಟು ಬೇಗ ಮುನ್ದುವರೆಸಿ .. ಕಾಯ್ತಾ ಇದೀನಿ....

girish.g.h ಭಾನು, 02/19/2012 - 10:21

ಇದು ಮನುಷ್ಯರಿಗೆ ರಿಲೇಟ್ ಆಗಿರೋ ಕಥೆ ತರ ಕಾಣ್ತಿಲ್ಲ... 

ನವೀನ್ ಚ೦ದ್ರ ಭಾನು, 02/19/2012 - 15:43

ಕಥೆ ಮುಗಿಸಿದ ಮೇಲೆ ಅಭಿಪ್ರಾಯ ಹೇಳ್ತೀನಿ,,,,,,,,,ಕಥೆ ಮುಂದುವರಿಸಿ...........

shubha ಗುರು, 02/23/2012 - 13:34

ಹಾಯ್ ಜ್ಯೋತಿ ತಾಯಿಯಿಂದ ಬೇರ್ಪಟ್ಟ ಮಗುವಿನ ಮನಸ್ಸು......ಪಾಪ.....  ಬೇಜಾರಾಗುತ್ತೆ.ದಯವಿಟ್ಟು ತಾಯಿಯ ಬಳಿ ಮಗುವನ್ನು ಆದಷ್ಟು ಬೇಗ ಸೇರಿಸಿ...

Malatesh ಶುಕ್ರ, 02/24/2012 - 11:19

kandita

Malatesh ಶುಕ್ರ, 02/24/2012 - 11:20

hi joti niv gmail use madatira maduvudadare edu nan mail id malatesh.mp@gmail.com k mail madi

ತ್ರಿನೇತ್ರ ಶುಕ್ರ, 02/24/2012 - 18:51

ಯಾವುದೋ ನಾಯಿ ಅಥವಾ ಬೆಕ್ಕು ರಸ್ತೆ ಬದಿಯಲ್ಲಿ ಮರಿಹಾಕಿರುತ್ತದೆ ಸಣ್ಣ ಮಕ್ಕಳು ಅಥವಾ ದೊಡ್ಡವರೇ ಆಗಿರಬಹುದು ಅಮ್ಮ ಮಲಗಿರುವಾಗ ಅದರ ಕಂದನನ್ನು ಮೆಲ್ಲಗೆ ಕದ್ದು ಹೊತ್ತೊಯ್ದು ಇತರೇ ಸಂಗಾತಿಗಳ ಜತೆ ಒಂದು ಬೋನಿನಲ್ಲಿ ಕೂಡಿಟ್ಟಿರುತ್ತಾರೆ.. ಇತ್ತ ಅಮ್ಮನಿಗೆ ತನ್ನ ಮಗುವನ್ನು ಕಳೆದುಕೊಂಡ ವ್ಯಥೆ... ಮಾಲೀಕ ಕೊಡುವ ಊಟ ರುಚಿಸುವುದಿಲ್ಲ ಅತ್ತ ಮಗುವಿಗೆ ಅಮ್ಮನ ಬಿಸಿಯಪ್ಪುಗೆಯ ಮಡಿಲಿನಿಂದ ದೂರಾದ ಚಿಂತೆ... ಆಗಿರಬಹುದೇ...?

raja vinay simha (ಪ್ರಮಾಣಿಸಲ್ಪಟ್ಟಿಲ್ಲ.) ಶನಿ, 07/28/2012 - 13:18

tumba channagide


 

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.