ನಿರೀಕ್ಷೆ
ವರ್ಷಗಳೇ ಉರುಳಿದವು
ನಿನ್ನ ನೆನಪುಗಳ ಧಾರೆಯಲಿ
ಕಾಯುತಿರುವೆ..........,
ಈ ಬದುಕಿಗೆ ಹೊಸ ಅರ್ಥ ಹುಡುಕುತಿರುವೆ
ನಿನ್ನ ಆಗಮನದ ನಿರೀಕ್ಷೆಯಲಿ.............,
ಗೆಳೆಯ ಭಾವನೆಗಳು ಮರಗಟ್ಟಿವೆ, ವ್ಯಕ್ತಪಡಿಸಲಾರದ ಅನುಭವಗಳ ಹುದುಲಿನಲ್ಲಿ ಸಿಕ್ಕು, ಹೊರ ಬರಲಾರದೆ ಒದ್ದಾಡುತ್ತಿರುವಾಗಲೇ ಮತ್ತೊಂದು ಹೊಸ ವರ್ಷವೇ! ಏನಂತ ಹಾರೈಸಲಿ..., ನನ್ನಲಂತೂ ಹೊಸ ವರ್ಷ ಆಚರಿಸುವ ಹುರುಪಿಲ್ಲ. ಕಾಲ ಗತಿಸಿದರು ನಿನ್ನ ನೆನಪುಗಳ ಕಳೆಬರದೊಂದಿಗೆ ಬದುಕುವುದೇ ಬದುಕಾಗಿದೆ.
ಗೆಳೆಯ ನಿನ್ನಲೊಂದು ಕೋರಿಕೆ
ಒಂದಾಗು
ಇಂದಾಗದಿದ್ದರು ಸರಿಯೇ
ಮುಂದೊಂದು ದಿನವಾದರು
ಒಂದಾಗು.........,
ದೇಹ ಬಾಗಿ-ಜೀವ ಮಾಗಿ
ಹೊಳೆಯುವ ಸೂರ್ಯ
ಕರಗುವ ಮುನ್ನ....,
ಸಾಲುಗಳು
- Add new comment
- 565 views
ಅನಿಸಿಕೆಗಳು
ಹೊಸ ವರ್ಷದಲ್ಲಿ
ಹೊಸ ವರ್ಷದಲ್ಲಿ ನಿಮ್ಮ ನಿರೀಕ್ಷೆಗಳು ನೆರವೇರಲಿ ಗೆಳತಿ,,
nireekshe-yashasin mudla
nireekshe-yashasin mudla guttu.nimma jeevanada nireekshe yashasiviyagali.
ಅಂಜಲಿ ನಿಮ್ಮ ಕವನದ ಆಶಯ
ಅಂಜಲಿನಿಮ್ಮ ಕವನದ ಆಶಯ ಚೆನ್ನಾಗಿದೆ...ಅದು ಕವನವೇ ಆಗಿರದೆನಿಮ್ಮದೇ ಮನದ ಭಾವನೆಯಾಗಿದ್ದರೆ 'ಅವರು' ಆದಸ್ಟು ಬೇಗ ಸಿಗಲಿ............. ನಿಮ್ಮ ಕಾತರ ನಿರೀಕ್ಷೆ ತಣಿಯಲಿ... ಶುಭವಾಗಲಿ...