Skip to main content

ಸೋಲಿನ ಸಾವು

ಇಂದ anjali n n
ಬರೆದಿದ್ದುDecember 24, 2011
6ಅನಿಸಿಕೆಗಳು

ತಿಯಾದ Expectation ಅಂದರೆ ಅತಿಯಾದ ನಿರೀಕ್ಷೆ ಒಳ್ಳೆಯದಲ್ಲ! ಯಾವುದೇ ಒಂದು ನಿರ್ದಿಷ್ಠ ಗುರಿ ಮುಟ್ಟಬೇಕಾದರೆ ಸಾಕಷ್ಟು ಪೂರ್ವ ಸಿದ್ಧತೆ, ನಿರ್ದಿಷ್ಠವಾದ ದಾರಿ... ಮುಖ್ಯ ಒಪ್ಕೋಳ್ತಿನಿ, ಆದ್ರೆ ಹೋಗಬೇಕಾದ ದಾರಿಯಲ್ಲಿ ಹೋಗ್ತ ಇರ್ತಿವೀ, ತಲುಪಬೇಕಾದ ಗುರಿ ಕೈಗೆಟಕುವ ಅಂತರದಲ್ಲಿರುವಾಗಲೆ ಮುಗ್ಗರಿಸಿ ಬೀಳ್ತೀವಿ. ಹುಮ್ಮಸ್ಸು, ಚೈತನ್ಯ, ಶಕ್ತಿ ಎಲ್ಲ ಮಣ್ಣುಪಾಲಾಗುತ್ತದೆ. ಬಿದ್ದ ಮೇಲೆಯೇ ಗೊತ್ತಾಗೋದು ಯಾಕೆ ಬಿದ್ವಿ, ಎಲ್ಲಿ ತಪ್ಪಾಯ್ತು ಅಂತ! but ಸರಿಪಡಿಸಿಕೊಳ್ಳೋಕೆ option ಇರಲ್ಲ, ಮತ್ತೆ ಅಂತ ಅವಕಾಶ ಸಹ ಸಿಗೊಲ್ಲ, ಸಿಕ್ಕರೂ ಸ್ಪರ್ಧೆ ದಿನದಿಂದ ದಿನಕ್ಕೆ ಕಠಿಣ, ಅಲ್ಲದೆ ಅಲ್ಲಿಯವರೆಗೂ ಸಾಕಷ್ಟು ಅವಮಾನ, ಅಪಮಾನ ಎದುರಿಸಬೇಕಾಗುತ್ತದೆ.ಮುಖ್ಯವಾಗಿ ನಂಬಿದವರಲ್ಲಿ ನಂಬಿಕೆ ಕಳೆದುಕೊಂಡಿರ್ತಿವಿ,ನಮಗೆ ಆಗದೆ ಇರೋರು ನಮ್ಮ ಸಾಮರ್ಥ್ಯಕ್ಕೆ ಒಂದು value ಕಟ್ಟಿ ವ್ಯಂಗ್ಯ ನಗೆ ಸೂಸಿ ನಾವು ಸೇರಬೇಕೆಂದಿದ್ದ ಜಾಗ ಸೇರಿರ್ತಾರೆ. ಮಲತಾಯಿ ಮುದ್ದನರಿಯಳೆ ಎಂಬಂತೆ ಆ ನೋವು-ನಿರಾಶೆ ಅನುಭವಿಸಿದವರಿಗೆ ಮಾತ್ರ ಗೊತ್ತು! ಇಲ್ಲಿ ಉದಾರತೆ-ಮನೋವೈಶಾಲ್ಯತೆ ಪ್ರಶ್ನೆ ಬರುವುದಿಲ್ಲ. ಪ್ರಯತ್ನ, ಆತ್ಮವಿಶ್ವಾಸ, ನಂಬಿಕೆ ಈ ಪದಗಳೆಲ್ಲ ಅರ್ಥ ಕಳೆದುಕೊಂಡಿರುತ್ತವೆ, ನೆಲಕ್ಕೆ ಬೋರಲಾಗಿ ಮಲಗಿ ಬಿಕ್ಕಿ-ಬಿಕ್ಕಿ ಅತ್ತರು ಸಮಾಧಾನ ಆಗೊಲ್ಲ.ಇದಕ್ಕೆ ಅನಿಸುತ್ತೆ  ನಮ್ಮ ಸಾಮಾರ್ಥ್ಯಕ್ಕೆ ತಕ್ಕಂತೆ ನಮ್ಮ ಗುರಿ-ಉದ್ದೇಶಗಳು ಇರಬೇಕು ಅಂತ ಹೇಳೋದು!
      ಒಳ್ಳೆಯ ಟೈಂಗಾಗಿ ಕಾಯುವ ಆಶಾವಾದಿತನ ಕಮರಿ ಹೋಗಿತ್ತೋ ಅಥವಾ ಕಾಯುವ ವ್ಯವಧಾನವೇ ಇರಲಿಲ್ಲವೋ ಗೊತ್ತಿಲ್ಲ, ಈ ಯಾಂತ್ರಿಕ ಬದುಕಿನಲಿ ತಮ್ಮನ್ನು ತಾವು Identification ಮಾಡಿಕೊಳ್ಳುವ ಆತುರದಲ್ಲಿ ಮುಗ್ಗರಿಸಿ ಬಿದ್ದವರ ಪೈಕಿ ಅವಳು ಒಬ್ಬಳು, ಸೋಲಿನ ಕಹಿ ಸವಿಯಲಾರದೆ ತನ್ನ ಬದುಕಿಗೆ ತಿಲಾಂಜಿಲಿ ಹಾಡಲು ತಿರ್ಮಾನಿಸಿದಳು,
ಅಸಲಿಗೆ ಈ Identification ಅನ್ನೋದು ಅಷ್ಟೊಂದು ಮುಖ್ಯನಾ? ಸಾಗರದಿ ಬಿದ್ದ ಮಳೆಹನಿಗಳೆಲ್ಲಾ ಮುತ್ತಾಗಬೇಕು ಅಂತ ಬಯಸೋದು ಎಷ್ಟು ಸರಿ...?
       ಒಂದು ಮಾತಂತು ಸತ್ಯ! ಸೋತವನಿದ್ದಾಗ ಮಾತ್ರ ಗೆದ್ದವನಿಗೆ ಬೆಲೆ, ಸೋತವರ ಮಧ್ಯೆ ತಾನೆ ಗೆದ್ದವನು ತನ್ನನ್ನು ತಾನು ಗುರ್ತಿಸಿಕೊಳ್ಳಲು ಸಾಧ್ಯವಾಗೋದು. ಅವಳಿಗೆ ಸಾವಿನ ಮನೆಯ ಕೊನೆಯ ಮೆಟ್ಟಿಲು ಹತ್ತಿದ ಮೇಲೆಯೇ ಗೊತ್ತಾಗಿದ್ದು ತಾನು ಗೆಲುವಿನ ಹಾದಿಯಲ್ಲಿ ಎಲ್ಲಿಯವರೆಗೆ ಪ್ರಯಾಣ ಬಳಸಿದ್ದೆ ಅಂತ, "ಗೆದ್ದು ಸೋತವರ ಮಧ್ಯೆ ಗೆಲುವನ್ನು ಗುರ್ತಿಸಿಕೊಳ್ಳುವುದಕ್ಕಿಂತ, ಗೆದ್ದವರು ಗೆಲುವನ್ನು ಗುರ್ತಿಸಿಕೊಳ್ಳಲು ಒಂದು ಸಣ್ಣ ನೆರವು ನಾನಾದರೆ ಸಾಕು" ಎಂದು. but ಕಾಲ ಮುಂಚಿ ಹೊಯ್ತು, ಕನಸು ಕಣ್ಣಲ್ಲೆ ಕಮರಿ ಹೊಯ್ತು.....,

ಲೇಖಕರು

anjali n n

ಕೇದಿಗೆ ಪ್ರಿಯೆ

o

ಅನಿಸಿಕೆಗಳು

simple gal nethra ಶನಿ, 12/24/2011 - 19:22

ತುಂಬಾ ಅರ್ಥ ಇದೇ ನಿಮ್ಮ ಮಾತಿನಲ್ಲಿ....  ಅಂಜಲಿ

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 12/27/2011 - 14:45

       IDENTFICATION-pratiyobra jeevandalli avara identification mukya,but idetification hudikidre sigodilla,adake expectation way nirdisttavada guri evanella roopiskollu agathya illa.nim pratibe nim identification thamolage ide.adu niv innobrige thorisu agatya illa.nim identifiction thorislike thalme irbeku.avakashagalu jeevanadalli matte barute.navu nam namalliru thalme n expectaion. irali.way ade thorisutte  

belstaff jackets (ಪ್ರಮಾಣಿಸಲ್ಪಟ್ಟಿಲ್ಲ.) ಗುರು, 12/29/2011 - 06:57

Dad is busy every day outside, do not have belstaff jackets time to read. He will do regret belstaff bags it? Sometimes I really want to belstaff jackets discuss these books determined to Dad, which can be thought belstaff uk of six mother goes on the bleak white belstaff uk powder coated long face, the same belstaff jackets block as the wall on the road the north face uk , immediately give up north face the idea. Each hospital has a mulberry bagssmall door set with a narrow mulberry bags sale garden path connected to mulberry handbags the left, leading to the garden. cyh12-29

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಶುಕ್ರ, 12/30/2011 - 17:39

ಅಂಜಲೀ ..........ದಾವಣಗೆರೆ ಬೆಣ್ಣೆ ತರ ಇದೆ ರೀ ನಿಮ್ಮ ಬರಹ ..........................ಥ್ಯಾಂಕ್ಸ್ ರೀ .......................ಯವ್ವ............................

ಅಥ೯ ಪೂಣ೯ ಬರಹ. 

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.