Skip to main content

ಮನಸ್ಸಿಗೆ ತೋಚಿದ್ದು...

ಬರೆದಿದ್ದುDecember 16, 2011
6ಅನಿಸಿಕೆಗಳು

        ಅದೇನೇನನ್ನೋ ಕಂಡುಹಿಡಿದ ಮನುಷ್ಯ, ಈ ಮನಸ್ಸು, ಅದರಲ್ಲಿ ಒಂದರ ಮೇಲೊಂದರಂತೆ, ಒಮ್ಮೊಮ್ಮೆ ಏಕಮುಖವಾಗಿ, ಮಗದೊಮ್ಮೆ ತದ್ವಿರುದ್ಧವಾಗಿ ಮೂಡುವ ಆಲೋಚನೆಗಳು, ಭಾವನೆಗಳು, ಅವುಗಳ ಮೂಲ ಇತ್ಯಾದಿಗಳ ಆಳ-ಅಗಲವನ್ನು ಕಂಡುಹಿಡಿಯಲು ವಿಫಲನಾಗುತ್ತಲೇ ಬಂದಿದ್ದಾನೆ.  ಒಂದೊಮ್ಮೆ ವ್ಯಕ್ತಿಯೊರ್ವ ತೀರಾ ಆಪ್ತನೆನಿಸಿದರೆ, ಬೆನ್ನಲ್ಲೇ ಆ ವ್ಯಕ್ತಿಯ ಕುರಿತಾದ ಕಹಿಯೊಂದನ್ನು ಯಾವುದೋ ಕೆಟ್ಟ ಘಳಿಗೆ ಮೂಡಿಸಿಬಿಡುತ್ತದೆ.  ಇನ್ನೊಬ್ಬರ ಕುರಿತಾಗಿ ಯೋಚಿಸುವುದರ ಬದಲು ನಿನ್ನ ಕುರಿತಾಗಿ ಆಲೋಚಿಸು ಎಂದು ಅದೆಷ್ಟೋ ಹಿತೈಷಿಗಳು ಬುದ್ಧಿವಾದ ನುಡಿದಿದ್ದರೂ ಮನಸ್ಸಂತೂ ಬೆನ್ನಿಗೆ ಚೂರಿ ಹಾಕಿದ, ಭಾವನೆಗಳನ್ನು ತೀರಾ ಘಾಸಿಗೊಳಿಸಿದವರ ನಡವಳಿಕೆ, ಹಿಂದಿನಿಂದ ಕುಹಕವಾಡಿದ ಸಂಬಂಧಿಕರ ಕುರಿತಾಗಿ ಆಗಾಗ್ಗೆ ವಿಶ್ಲೇಷಿಸುತ್ತಲೇ  ಇರುತ್ತದೆ.  ಮನುಷ್ಯ ಇಷ್ಟೊಂದು ಸ್ವಾರ್ಥಿಯಾಗಬಲ್ಲನೇ??? ಭಾವನೆಗಳೊಂದಿಗೆ ಆಟವಾಡಲು ಅವೇನು ದಾರಿ ಬದಿಯಲ್ಲಿ ಮಾರಲು ಇಟ್ಟ ವಸ್ತುಗಳೇ?? ತೀರಾ ಆಪ್ತನಾದ (ಳಾದ) ಹುಡುಗ/ಹುಡುಗಿ ಮನಸ್ಸನ್ನು ಕದ್ದು, ಆಳವಾಗಿ ಮನದಲ್ಲಿ ನೆಲೆಯೂರಿದ ಬಳಿಕ, ಯಾವುದೋ ಹಂತದಲ್ಲಿ ಸಮಾಜವನ್ನೆದುರಿಸಲಾರದೆ, "ನಿನ್ನ ಕುರಿತು ನನಗಂಥಾ ಭಾವನೆಗಳೇ ಇಲ್ಲ" ಎಂದು ತಣ್ಣಗೆ ನುಡಿದಾಗ ಮನಕ್ಕಾಗುವ ವೇದನೆ, ಹಿಂಸೆ, ಅವಮಾನ ಮಾತುಗಳಲ್ಲಿ, ಅಕ್ಷರಗಳಲ್ಲಿ ಬಿಡಿಸಿಡಲಾಗುವಂತಹುದೇ?? ಅದೇನಿದ್ದರೂ ಅನುಭವಿಸಿಯೇ ತೀರಬೇಕಾದ ವ್ಯಥೆ ಅಷ್ಟೇ.  ಮೌನವಾಗಿ, ಖರ್ಚಿಲ್ಲದೇ ಇನ್ನೊಬ್ಬ ವ್ಯಕ್ತಿಯ ಆತ್ಮಾಭಿಮಾನ, ಆತ್ಮವಿಶ್ವಾಸವನ್ನು ಕೊಲ್ಲಬೇಕಾದಲ್ಲಿ; ಅಪರಾಧೀ ಮನೋಭಾವನೆಯಿಂದ ಬೇಯುವಂತೆ ಮಾಡಬೇಕೆಂದಲ್ಲಿ ಪ್ರೀತಿಯ ನಾಟಕವಾಡಿದರೆ ಸಾಕು.    ಭಾವನಾಜೀವಿಯಾದ ಮನುಷ್ಯ ಇನ್ನೊರ್ವ ವ್ಯಕ್ತಿ ತನ್ನ ಭಾವನೆಗಳನ್ನು ಅರ್ಥೈಸಿಕೊಳ್ಳಲಿ, ಗೌರವಿಸಲಿ ಎಂದಷ್ಟೇ ಬಯಸುತ್ತಾನೆಯೇ ಹೊರತು ಇನ್ನೊಬ್ಬರ ಭಾವನೆಗಳೊಂದಿಗೆ ಆಟವಾಡುವ       ಅಪಾಯಕಾರೀ ಕೆಲಸಕ್ಕೆ ಕೈ ಹಾಕಲಾರ.  ಏನಂತೀರಾ?? 

ಲೇಖಕರು

Jyothi Subrahmanya

ನೆನಪಿನ ನವಿಲುಗರಿ

ಭಾವನಾ ಜೀವಿ, ಚಿಕ್ಕ ಪುಟ್ಟ ಕನಸು ಕಾಣೋದು ಅಂದ್ರೆ ಇಷ್ಟ. ಮಳೆ, ಇಬ್ಬನಿ, ಹಸಿರು, ಆಕಾಶ, ನಕ್ಷತ್ರ, ರಾತ್ರಿ, ಇವೆಲ್ಲಾ ತುಂಬಾ ಇಷ್ಟ. ನನ್ನ ಬಗ್ಗೆ ಇನ್ನು ಜಾಸ್ತಿ ತಿಳ್ಕೊಳ್ಳೋಕೆ ನನ್ನ ಸ್ನೇಹಿತರಾಗಿ. ನಿಮಗೇ ತಿಳಿಯುತ್ತೆ. ;)

ಅನಿಸಿಕೆಗಳು

girish.g.h ಶನಿ, 12/17/2011 - 11:40

ನಿಮ್ಮ ಮಾತುಗಳು ಎಷ್ಟೊಂದು ನಿಜ ಜ್ಯೋತಿಯವರೆ!!

shubha ಶನಿ, 12/17/2011 - 12:57

ಹಾಯ್ ಜ್ಯೋತಿ,   ನಿಮ್ಮ ಅನಿಸಿಕೆ ನಿಜ. ಭಾವನಾಜೀವಿಯಾದ ಮನುಷ್ಯ ಇನ್ನೊರ್ವ ವ್ಯಕ್ತಿ ತನ್ನ ಭಾವನೆಗಳನ್ನು ಅರ್ಥೈಸಿಕೊಳ್ಳಲಿ, ಗೌರವಿಸಲಿ ಎಂದಷ್ಟೇ ಬಯಸುತ್ತಾನೆಯೇ                                     ಹೊರತು ಇನ್ನೊಬ್ಬರ  ಭಾವನೆಗಳೊಂದಿಗೆ ಆಟವಾಡುವ ಅಪಾಯಕಾರೀ ಕೆಲಸಕ್ಕೆ ಕೈ ಹಾಕಲಾರ.  ಆದರೆ  ತನ್ನ ಭಾವನೆಗಳಿಗೆ ಗೌರವ ಸಿಗುತ್ತಿಲ್ಲಾ                                ಅಂತ ಅನ್ಸಿದ್ರೆ ಅವನು ಎಂಥಹ ಕೆಲಸ ಮಾಡಲು ಸಿದ್ಧನಿರುತ್ತಾನೆ ಅಂತ ನನ್ನ ಅನಿಸಿಕೆ. ಧನ್ಯವಾದಗಳು.............. 

Jyothi Subrahmanya ಭಾನು, 12/18/2011 - 17:31

ನಿಮ್ಮ ಮಾತುಗಳು ನಿಜ ಶುಭಾ.  ಅದಕ್ಕೆ ತಿಳಿದವರು ಹೇಳ್ತಾರೆ, ಭಾವನೆಗಳು ನಮ್ಮನ್ನು ಆಳದ ಹಾಗೆ ಸ್ವಲ್ಪ ಮಟ್ಟಿಗಾದ್ರೂ ನೋಡಿಕೊಳ್ಳಬೇಕು ಅಂತ.  ಭಾವನೆಗಳಿಗೆ ಗೌರವ ಸಿಗದಾಗ ಕೋಪ ಹತಾಶೆ ಹೊರಹೊಮ್ಮುವುದು ಸಹಜ.  ಆದರೆ ಅದರ ಪರಿಣಾಮ ಕೆಲವೊಮ್ಮೆ ವಿಪರೀತ ಅಲ್ವೇ? ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು..

ಸ್ಪಂದನ ಶುಕ್ರ, 12/23/2011 - 12:59

ನಮಸ್ಕಾರ ಜ್ಯೋತಿಯವರೇ..ಲೇಖನ ಚಿಕ್ಕದಾದರೂ ಅಪಾರ ಅರ್ಥ, ಭಾವನೆಗಳನ್ನೊಳಗೊಂಡಿದೆ. ನಿನ್ನ ಬಗ್ಗೆ ಮಾತ್ರ ಯೋಚಿಸು ಅಂತ ಯಾರೇ ಎಷ್ಟೇ ಹೇಳಿದರು ಅದು ಸಾಧ್ಯವಾಗುವುದಿಲ್ಲ. ನಿಮ್ಮ ಮಾತು ನಿಜ. ನೊಂದ ಮನಸ್ಸು ಅತಿ ಸೂಕ್ಷ್ಮವಾಗಿರುತ್ತದೆ ಬೇಡವೆಂದರೂ ಬೇಡದ ನೆನಪುಗಳ ಅಲೆಯ ಅಬ್ಬರ ಮನಸ್ಸನ್ನು ಪ್ರಶಾಂತವಾಗಿರಲು ಬಿಡುವುದಿಲ್ಲ. ನಮ್ಮ ಭಾವನೆಗಳೊಂದಿಗೆ ಆಟವಾಡಿದ ವ್ಯಕ್ತಿಯನ್ನಾಗಲಿ, ಸಂದರ್ಭವನ್ನಾಗಲೀ ಮರೆಯುವುದು ಸುಲಭದ ಮಾತಲ್ಲ.

Jyothi Subrahmanya ಶನಿ, 12/24/2011 - 17:54

ಧನ್ಯವಾದಗಳು ನಿಮ್ಮ ಅನಿಸಿಕೆಗೆ...... ಃ)

ನವೀನ್ ಚ೦ದ್ರ ಮಂಗಳ, 12/27/2011 - 10:24

 ಈ ಭಾವನೆಗಳ ಪ್ರಪಂಚದಲ್ಲಿ ಜೀವನ ತುಂಬಾ ಕಷ್ಟ ಜ್ಯೋತಿ,, ಏಕೆಂದರೆ ಲೋಕೋ ಭಿನ್ನರುಚಿಃ ಅನ್ನೋ ಹಾಗೇ ಭಾವನೆಗಳು ಒಬ್ಬರಿಂದೊಬ್ಬರಿಗೆ ಭಿನ್ನವಾಗಿರುತ್ತದೆ,,, ಅತಿಯಾದ ಭಾವುಕತೆಯು ಕೂಡ ಹಾಗೇ ಆ ಭಾವನೆಗೆ ಬೆಲೆ ಸಿಕ್ಕದಿದ್ದಾಗ ಮನಸ್ಸಿಗೆ ಘಾಸಿಯಾಗುವುದು ಸಹಜ,,, ಆದರೆ ಭಾವುಕತೆಯೇ ಜೀವನವಲ್ಲ,,, ನೀವು ಹೇಳುವ ಹಾಗೇ ಭಾವನೆಗಳು ನಮ್ಮನ್ನಾಳಬಾರದು ಅಷ್ಟೆ,,,,.....

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.