Skip to main content

ಯಾಕೆ ಹೀಗೆ???

ಬರೆದಿದ್ದುDecember 4, 2011
6ಅನಿಸಿಕೆಗಳು

Ethics, strict, disciplined, ಇತ್ಯಾದಿ ಶಬ್ದಗಳು ಮೈಗಂಟಿಕೊಂಡಂತೆ ಭಾಸವಾಗುತ್ತಿದೆ... ಕಾರಣ.. ಅವೆಲ್ಲಾ ನನಗೆ ನನ್ನ ಸುತ್ತಲಿನವರು ಕೊಟ್ಟಂತಹ ಬಿರುದು ಬಾವಲಿಗಳು.  ಆದರೆ, ETHICS MORAL VALUES (ನೈತಿಕ ಮೌಲ್ಯಗಳು) ಎನ್ನುವಂಥದ್ದು ನನಗೆ ನಾನೇ ಹಾಕಿಕೊಂಡಂತಹ ಬೇಲಿ, ಪರಿಧಿ.  ಅದನ್ನು ಮೀರುವ ಸಂದರ್ಭಗಳು ಹಲವಿದ್ದರೂ ಮನಸ್ಸು ಮಾತ್ರ ಚಂಡಿ ಹಿಡಿದ ಮಗುವಿನಂತೆ ಮುಗುಮ್ಮಾಗಿಬಿಡುತ್ತದೆ.  ಅದೆಷ್ಟೋ ಬಾರಿ ಹಲವರು ಬುಧ್ಧಿ ಹೇಳಿದ್ದಿದೆ, ಸ್ನೇಹಿತರು ಬೈದಿದ್ದಿದೆ... ಯಾವ ಓಬೀರಾಯನ ಕಾಲದಲ್ಲಿದ್ದೀಯೇ ಮಹರಾಯ್ತೀ.. ಲಂಚ, ಸುಳ್ಳು, ಮೋಸ ಇವೆಲ್ಲಾ ಸಮಾಜದಲ್ಲಿ ಹಾಸುಹೊಕ್ಕಾಗಿರುವ  ಗಂಟುಗಳು.  ನೀನದನ್ನು ಬಿಡಿಸುವ ಗೋಜಿಗೆ ಹೋದ್ರೆ ನೀನೇ ಮುಂದೆ ಪಶ್ಚಾತ್ತಾಪ ಪಡ್ತೀಯ.  ನಿನ್ನನ್ನ, ನಿನ್ನ ಈ ನೈತಿಕತೆಯನ್ನೇ ಜನ ಪರಿಹಾಸ್ಯ ಮಾಡ್ತಾರೆ, ದ್ವೇಷಿಸ್ತಾರೆ ಎಂದೆಲ್ಲಾ ಹೇಳಿದ್ದಿದೆ.  ಆದ್ರೂ ಐದು ಬೆರಳುಗಳೂ ಒಂದೇ ರೀತಿ ಇರ್ತಾವಾ??? ಇಲ್ವಲ್ಲ..!!!!!! ನಾ ಇರೋದೇ ಹೀಗೆ.  ಮನಸ್ಸಿನ ಮಾತನ್ನ ಮಾತ್ರ ಕೇಳ್ತೀನಿ ಎಂದುತ್ತರಿಸಿ ಕೆಲ ಸ್ನೇಹಿತರನ್ನ ದೂರ ಮಾಡಿಕೊಂಡಿದ್ದೂ ಉಂಟು.  ಆದ್ರೂ ಮನುಷ್ಯ ಎಷ್ಟು ಸ್ವಾರ್ಥಿ ಆಗ್ತಾ ಇದ್ದಾನಲ್ವ?? ತನ್ನ ಕೆಲಸ ಮಾಡಿಸಿಕೊಳ್ಳುವಾಗ ಸಲೀಸಾಗಿ ಜೇಬಿನಿಂದ ನೋಟುಗಳನ್ನು  ಹೊರತೆಗೆಯುವ  ಮನುಷ್ಯ , ಅದೇ ಒಬ್ಬ ತರಕಾರಿ ಮಾರುವವನೋ, ಹೂ ಮಾರುವವಳೋ  ಚಮ್ಮಾರನೋ  ನ್ಯಾಯವಾದ ಬೆಲೆ ಕೇಳಿದರೂ ಒಂದು ರೂಪಾಯಿ ಚೌಕಾಸಿಗೆ ನಿಂತು ಬಿಡುತ್ತಾನಲ್ಲ... ಯಾಕೆ?? ಸಾವು-ನೋವಿಗೆ, ಹಣ-ಅಧಿಕಾರದ ಬಲಕ್ಕೆ, ರೋಗ-ರುಜಿನಗಳಿಗೆ, ಅವಮಾನ-ದುಃಖ, ಜಾತಿ-ಅಂತಸ್ತು, ಒಂಟಿತನಕ್ಕೆ ಹೆದರೋ ಮನುಷ್ಯ ಆತ್ಮಸಾಕ್ಷಿಗೆ ಹೆದರದ ಭಂಡ ಯಾಕಾದ?? ಹೇಗಾದ? ??? ಯೋಚಿಸ್ತಾ ಹೋದ್ರೆ ಸಮಯ ಜಾರಿದ್ದೂ ತಿಳಿಯೋದಿಲ್ಲ... ಮನಸ್ಸು ಮಾತ್ರ ಜೇನುಗೂಡಾಗುತ್ತದೆ... 

ಲೇಖಕರು

Jyothi Subrahmanya

ನೆನಪಿನ ನವಿಲುಗರಿ

ಭಾವನಾ ಜೀವಿ, ಚಿಕ್ಕ ಪುಟ್ಟ ಕನಸು ಕಾಣೋದು ಅಂದ್ರೆ ಇಷ್ಟ. ಮಳೆ, ಇಬ್ಬನಿ, ಹಸಿರು, ಆಕಾಶ, ನಕ್ಷತ್ರ, ರಾತ್ರಿ, ಇವೆಲ್ಲಾ ತುಂಬಾ ಇಷ್ಟ. ನನ್ನ ಬಗ್ಗೆ ಇನ್ನು ಜಾಸ್ತಿ ತಿಳ್ಕೊಳ್ಳೋಕೆ ನನ್ನ ಸ್ನೇಹಿತರಾಗಿ. ನಿಮಗೇ ತಿಳಿಯುತ್ತೆ. ;)

ಅನಿಸಿಕೆಗಳು

Pattar ಭಾನು, 12/04/2011 - 10:25

ಮೌಲ್ಯಯುತವಾದ ಆರ್ಟಿಕಲ್ ಬರಿತಾ ಇದೀರಾ...ಅರ್ಧಕ್ಕೆ ಏಕೆ ನಿಲ್ಲಿಸಿದ್ದೀರಾ? ಜ್ಯೋತಿಯವರೆ...ಮು೦ದುವರೆಸಿ....ಸ್ವಾರ್ಥ ಪ್ರಪ೦ಚದಲ್ಲಿರುವ ಸು೦ದರತೆಗೂ ಕು೦ದು ಬ೦ದೊದಗಿರುವ ಬಗ್ಗೆ ತಿಳಿಸುವ ಜಾಣ್ಮೆ ನಿಮ್ಮಲ್ಲಿದೆ...Carry on.........

Jyothi Subrahmanya ಭಾನು, 12/04/2011 - 18:50

ಧನ್ಯವಾದಗಳು ಪತ್ತಾರ್ ರವರೇ...

ನವೀನ್ ಚ೦ದ್ರ ಭಾನು, 12/04/2011 - 16:11

ಜ್ಯೋತಿಯವರೆ,ನಾವು ಏನೇ ಮಾಡಿದರೂ ಈ ಸಮಾಜದಲ್ಲಿರುವ ಕೆಲವು ಸಣ್ಣ ಜನ ಇದ್ದಾರಲ್ಲಾ  ಅವರ ಮನಸ್ಥಿತಿಗನುಗುಣವಾಗಿರುವುದು ಕಷ್ಟ. ಜೀವನ ಎಂದ ಮೇಲೆ ನೈತಿಕ ಮೌಲ್ಯಗಳು ಇರಲೇಬೇಕು ಅವು ಇಲ್ಲದಿದ್ದರೆ ಜೀವನದಲ್ಲಿ ಅರ್ಥವೆಂಬುದೇ ಇರುವುದಿಲ್ಲ.ಯಾರೋ ಏನೋ ಹೇಳಿದರೂ ಅಂತಾ ನಿಮ್ಮ ತನವನ್ನು ಬಿಡಬೇಡಿ, ಅದರಲ್ಲು ತಾವು ಕಾನೂನಿನ ಅಂಗಳದಲ್ಲಿ ಮುನ್ನುಗ್ಗುತ್ತಿರುವವರು ಸದಾ ಈ ರೀತೀಯ ಮಾತುಗಳು ಮತ್ತು ಸನ್ನಿವೇಶಗಳು ಬರುವುದು ಸಹಜ ಎದೆಗುಂದದೇ ನಿಮ್ಮ ಮೌಲ್ಯಗಳನ್ನು ಮುಂದುವರಿಸಿ,ಹಾಗೇಯೇ ನಿಮ್ಮ ಲೇಖನವನ್ನು ಮುಂದುವರಿಸಿ,,,..,ಧನ್ಯವಾದಗಳೊಂದಿಗೆ ...., ನವೀನ್ ಚಂದ್ರ.......,

Jyothi Subrahmanya ಭಾನು, 12/04/2011 - 18:51

ಧನ್ಯವಾದಗಳು ನವೀನ್ ತಮ್ಮ ಅನಿಸಿಕೆಗೆ..

shubha ಗುರು, 12/08/2011 - 13:12

ಆತ್ಮೀಯ ಜ್ಯೋತಿ,ನನಗೆ ಅನ್ನಿಸ್ತಿದೆ ಸಮಾಜವನ್ನು ಬದ್ಲಾಯಿಸಕ್ಕಾಗಲ್ಲ ಅನ್ನೊ ಕೆಲವರ ಯೋಚನೆಯನ್ನೆ ಬದ್ಲಾಯಿಸಕ್ಕಾಗಲ್ವ ಅಂತಾ....ಸ್ವಾರ್ಥಕ್ಕೆ ಇನ್ನೊಂದು ಹೆಸರೇ ಮನುಷ್ಯನೋ ಏನೋ.....  

Jyothi Subrahmanya ಸೋಮ, 12/12/2011 - 18:52

ಸರಿಯಾಗಿ ಹೇಳಿದ್ರಿ ಶುಭಾರವರೇ...ಧನ್ಯವಾದಗಳು ತಮ್ಮ ಅನಿಸಿಕೆಗೆ...

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.