Skip to main content

ಮರೆವುದೇ ಈ ಮನ... ಅವನ....??

ಬರೆದಿದ್ದುNovember 30, 2011
16ಅನಿಸಿಕೆಗಳು

ನಾಳೆ ಹೊಸವರುಷದ ಹೊಸ ದಿನಮರೆವುದೇ ಈ ಮೊದ್ದು ಮನಪ್ರತಿ ದಿನವೂ ಹೊಚ್ಚ ಹೊಸತೆನಿಸಿದ ಅವನ........?ನೀನೆಂದರೆ ಇಷ್ಟ ಎಂದ....ಆದರೂ ಪ್ರೀತಿಸಲಾರೆನೆಂದು ನೊಂದನೆನಪಾಗಿ ಸುಳಿದ....ಕನಸಾಗಿ ಬೆಳೆದಕಂಬನಿಯಾಗಿ ಹರಿದವನ ನೆನಪಮರೆವುದೇ ಈ ಹುಚ್ಚು ಮನ....??ಪ್ರೀತಿಸಲಾರೆನೆಂದವನ ಕಂಗಳುಹರಿಸಿದವು ತುಂಬು ಪ್ರೀತಿಯ ಬೆಳದಿಂಗಳುನಾಲಗೆ ಸುಳ್ಳಾಡಬಹುದು; ನಯನಗಳು ಮೋಸಗೊಳಿಸಬಲ್ಲವೇಎಂದು ಪ್ರಶ್ನಿಸಿದ ಮುಗ್ಧ ಮನಮರೆವುದೇ ಅವನ............. ?????????   

ಲೇಖಕರು

Jyothi Subrahmanya

ನೆನಪಿನ ನವಿಲುಗರಿ

ಭಾವನಾ ಜೀವಿ, ಚಿಕ್ಕ ಪುಟ್ಟ ಕನಸು ಕಾಣೋದು ಅಂದ್ರೆ ಇಷ್ಟ. ಮಳೆ, ಇಬ್ಬನಿ, ಹಸಿರು, ಆಕಾಶ, ನಕ್ಷತ್ರ, ರಾತ್ರಿ, ಇವೆಲ್ಲಾ ತುಂಬಾ ಇಷ್ಟ. ನನ್ನ ಬಗ್ಗೆ ಇನ್ನು ಜಾಸ್ತಿ ತಿಳ್ಕೊಳ್ಳೋಕೆ ನನ್ನ ಸ್ನೇಹಿತರಾಗಿ. ನಿಮಗೇ ತಿಳಿಯುತ್ತೆ. ;)

ಅನಿಸಿಕೆಗಳು

ನಿಮ್ಮ ಕವಿತೆ ಚೆನ್ನಾಗಿದೆ.

Jyothi Subrahmanya ಗುರು, 12/01/2011 - 18:36

ಧನ್ಯವಾದಗಳು ಪ್ರಕಾಶ್.

Pattar ಗುರು, 12/01/2011 - 13:54

ನಿಸರ್ಗದಲ್ಲಿ ಅರಳಿ ಕೊನೆಗೆ ನಶಿಸಲೇಬೇಕಾದ ಎಲ್ಲ ಜೀವರಾಶಿಗಳಲ್ಲು ಮನುಷ್ಯನೂ ಹಾಗೂ ಅವನ ಭಾವನಾತ್ಮಕ ಚಟುವಟಿಕೆಗಳೂ ಒ೦ದು...ನಯನಗಳೂ ಮೋಸಗೊಳಿಸಬಲ್ಲವೇ..? ಎ೦ದು ಪ್ರಶ್ನಿಸಿದ ನೀವು "ಮುಗ್ಧ" ಎ೦ದು ಹೇಳುವ ನಿಮ್ಮ ಮನವನ್ನು ನೀವೇ ಏಕೆ ಸೋಲಿಸುತ್ತೀರಾ..?ಮರೆಯಲೇಬೇಕಾದ೦ತಹ ಭಾವನಾತ್ಮಕ ಭಾವನೆಗಾಗಿ ನಮ್ಮ ಮನಸ್ಸಿನಲ್ಲಿ ಯಾವ ಕ್ಷಣದಲ್ಲೂ ಪ್ರಶ್ನಾರ್ಥಕವಾದ ಅನಿಸಿಕೆ ಅಭಿಪ್ರಾಯಗಳು ಇರಲೇಬಾರದು. (ಈ ನಿಮ್ಮ ಕವನ ಕಾಲ್ಪನಿಕವಾಗಿದ್ದು ನನ್ನ ಅನಿಸಿಕೆ ಅನರ್ಹವಾಗಿದ್ದರೆ ದಯವಿಟ್ಟು ನನ್ನನ್ನು ಕ್ಷಮಿಸಿ ಜ್ಯೋತಿಯವರೇ....) 

Jyothi Subrahmanya ಗುರು, 12/01/2011 - 18:34

ಪತ್ತಾರ್ ರವರೇನಿಮ್ಮ ಅನಿಸಿಕೆಗೆ ಧನ್ಯವಾದಗಳು.  ಈಗಿನ ಕಾಲದಲ್ಲಿ ಕಣ್ಣಲ್ಲಿ ಕಾಣುವ ಪ್ರೀತಿಯನ್ನ ನಂಬೋದಿಕ್ಕೆ ಆಗೋದಿಲ್ಲ. ಯಾಕೆಂದ್ರೆ  ಅದನ್ನ ಮನುಷ್ಯ ಅಧಿಕೃತವಾಗಿ ಒಪ್ಪಿಕೊಳ್ಳೋದಿಲ್ಲ. ಹಾಗಾಗಿ 'ಮುಗ್ಧ' ಎಂಬ ಶಬ್ದ ಬಳಸಿದ್ದೇನೆ.  ನೀವು ಹೇಳುವ ಭಾವಾರ್ಥದಲ್ಲಿ ನೋಡಿದ್ರೆ ನಿಜವಾಗ್ಯೂ ಆ ಶಬ್ದ ಬಳಕೆ ಅಗತ್ಯ ಇರೋದಿಲ್ಲ.  ಭಾವನಾತ್ಮಕ ಭಾವನೆ ಈ ನಶ್ವರವಾದ ಜೀವನ ಜೀವದ ಜೊತೆ ಜೊತೆಗೆ ನಶಿಸಿ ಹೋಗ್ತದೆ ಅನ್ನೋದು ನಿಜ.  ಆದ್ರೆ ಹಾಗಂತ ಮನಸ್ಸು ತನ್ನ ಅಭಿಪ್ರಾಯವನ್ನ, ಅನಿಸಿಕೆಯನ್ನ ಪ್ರಶ್ನಾರ್ಥಕವಾಗಿ ಸೂಚಿಸಬಾರದು ಅಂತೇನೂ ಇಲ್ಲವಲ್ಲ.  ಕವಿತೆಯನ್ನು ಸೂಕ್ಷ್ಮವಾಗಿ ಆಳವಾಗಿ ಗಮನಿಸಿದ್ದೇ ಆದರೆ ನಿಮಗೆ ಗೊತ್ತಾಗುತ್ತೆ ಇಲ್ಲಿ ಪ್ರಶ್ನಾರ್ಥಕ ರೂಪದಲ್ಲಿ ಕವಿತೆಯಿದ್ದರೂ ಕೂಡ ಪ್ರೀತಿಸಿದ ವ್ಯಕ್ತಿಯ ತೊಳಲಾಟದಿಂದ ಕೂಡಿದ ಮನಸ್ಸು ತನ್ನ ಭಾವನೆಗಳನ್ನ ಪ್ರಶ್ನೆಯ ರೂಪದಲ್ಲಿ ಹೊರಹಾಕಿದೆ.  ಅದೆಂಥಾ ನಶ್ವರ ಕ್ಷಣಿಕ ಜೀವನ ಅಂತ ಗೊತ್ತಿದ್ದರೂ ಪ್ರೀತಿಯಲ್ಲಿ ಬೀಳೋ ಮನುಷ್ಯ ಸಾಯೋ ವರೆಗೂ ಖಂಡಿತಾ ಆ ಭಾವನಾತ್ಮಕ ಭಾವನೆಯನ್ನ ಮರೆಯೋದಿಕ್ಕೆ ಸಾಧ್ಯ ಇಲ್ಲ. ಅದು ಒಂದಿಲ್ಲೊಂದು ರೂಪದಲ್ಲಿ ಜೀವನದ ಪ್ರತೀ ಹಂತದಲ್ಲೂ ತನ್ನ ಇರುವಿಕೆಯನ್ನ ತೋರಿಸ್ತಾ ಇರ್ತದೆ.ಇದರರ್ಥ ನಿಮ್ಮ ಅನಿಸಿಕೆ ಅನರ್ಹ ಅಂತ ಅಲ್ಲ. ಕವನ ಕಾಲ್ಪನಿಕವೋ ಅಥವಾ ವಾಸ್ತವದ ಪ್ರತಿಬಿಂಬವೋ ಆದರೆ ಒಬ್ಬ ವ್ಯಕ್ತಿಯ ಭಾವನೆಗಳನ್ನ ಎಷ್ಟು ಜನ ಎಷ್ಟು ರೀತಿಯಾಗಿ ಅರ್ಥೈಸಿಕೊಳ್ಳುತ್ತಾರೆ ಅನ್ನೋದು ಅನಿಸಿಕೆಗಳಾಗಿ ಹೊರಹೊಮ್ಮುತ್ತವೆ. ಅಲ್ವೇ?? ನಿಮ್ಮ ಅನಿಸಿಕೆಗೆ ತುಂಬು ಹೃದಯದ ಧನ್ಯವಾದಗಳು.  ನನ್ನ ಪ್ರಕಾರ ಅನಿಸಿಕೆ ಅನ್ನೋದು ಒಬ್ಬ ವ್ಯಕ್ತಿಯ ಸ್ವಂತ ಅಭಿಪ್ರಾಯ.  ನಿಮಗೆ ನಿಮ್ಮ ಅಭಿಪ್ರಾಯ ಸೂಚಿಸೋ ಎಲ್ಲಾ ರೀತಿಯ ಸ್ವಾತಂತ್ರ್ಯ ಭಾರತದ ಸಂವಿಧಾನ ಕೊಟ್ಟಿದೆ Smile  ನಿಮ್ಮ ಅನಿಸಿಕೆಗಳಿಗೆ ಯಾವಾಗಲೂ ನನ್ನ ಸ್ವಾಗತ ಇದ್ದೇ ಇರ್ತದೆ. 

ನವೀನ್ ಚ೦ದ್ರ ಶುಕ್ರ, 12/02/2011 - 20:04

ಜ್ಯೋತಿರವರೆ ಪ್ರೀತಿ ಅನ್ನೋದು ವಿವಿಧ ಬಗೆಯಲ್ಲಿರುತ್ತೆ, ಕಣ್ಣಲ್ಲಿ ಕಾಣುವ ಪ್ರೀತಿಯನ್ನು ಯಾಕೆ ನಂಬೋದಿಕ್ಕೆ ಆಗೊಲ್ಲ? ನಿಮ್ಮ ಭಾವನೆಯಲ್ಲಿ ಅದು ನಂಬಿಕೆಗೆ ಹೊರತಾಗಿರಬಹುದು,ಪ್ರೀತಿ ಮೊದಲ ನೋಟದಲ್ಲೆ ಪ್ರಾರಂಭವಾಗುತ್ತೆ ಅಂತಾರೆ ಅಂತದ್ದರಲ್ಲಿ ಯಾಕೆ ನಂಬೊಲ್ಲ ಅಂತಿರಾ ಅಂತಾ ಗೊತ್ತಾಗುತ್ತಿಲ್ಲ? ಭಾರತದ ಸಂವಿಧಾನದಲ್ಲಿ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ಕೊಟ್ಟಿರಬಹುದು ಆದ್ರೆ ಆ ಅಭಿಪ್ರಾಯಗಳು ಕೆಲವೊಂದು ಚೌಕಟ್ಟಿನಲ್ಲಿರಬೇಕಲ್ಲವೇ??????

Jyothi Subrahmanya ಶನಿ, 12/03/2011 - 12:27

ನಂಬಿ ನೋಡಿ, ಗೆದ್ರೆ ಖುಷಿ.  ಮೋಸ ಆದ್ರೆ ನನ್ನ ಬೈಕೋಬೇಡಿ. Smile  ಕಾಲ ಬದಲಾಗಿದೆ.  ಪ್ರೀತಿಯ ಅರ್ಥ, ಪ್ರೀತಿ ಮಾಡುವವರ ಪ್ರಾಮಾಣಿಕತೆ ಎಲ್ಲಾ ಬದಲಾಗಿದೆ ನವೀನ್.  ಕಾನೂನು ವಿದ್ಯಾಭ್ಯಾಸ ಮಾಡಿದವಳು ನಾನು.  ಸಂವಿಧಾನದಲ್ಲಿ ಅನುಚ್ಛೇದ ೧೯(೧)(ಎ) ಏನು ಹೇಳುತ್ತೆ ಹಾಗೇ ೧೯(೨) ರಲ್ಲಿರೋ ಮಿತಿಗಳು ಯಾವುವು ಅಂತ ಗೊತ್ತು.  ಪತ್ತಾರ್ ರವರ ಅನಿಸಿಕೆ ಆ ಮಿತಿ/ಚೌಕಟ್ಟಿನೊಳಗೆ ಬರುವಂಥದ್ದಾಗಿದ್ರೆ ಅದನ್ನ ಹೇಳ್ತಿದ್ದೆ. ಬರೋ ರೀತಿಯ ಅನಿಸಿಕೆ ಅವ್ರು ಕೊಟ್ಟಿಲ್ಲ. ಬಹಳ ಪ್ರಾಮಾಣಿಕವಾಗಿ ಅವರಿಗೆ ಅನಿಸಿದ್ದನ್ನ ಹೇಳಿದ್ದಾರೆ.  ಅವರ ಅನಿಸಿಕೆ ಇಷ್ಟ ಆಯ್ತು.  ಆದ ಕಾರಣ ಅದಷ್ಟೇ ಹೇಳಿರೋದು.  ತಮಗೆ ಅರ್ಥ ಆಯ್ತು ಅನ್ಕೊಂಡಿದ್ದೀನಿ.  Smile

Pattar ಶನಿ, 12/03/2011 - 15:34

ಜ್ಯೋತಿಯವರೇ....ಮತ್ತು ...ನವೀನ್ ಚ೦ದ್ರ ಅವರೇ... ನಿಮ್ಮಿಬ್ಬರ ಅನಿಸಿಕೆಗಳನ್ನೂ ಓದಿ ತು೦ಬಾ ಸ೦ತೋಷವಾಯಿತು ನನಗೆ...ಪ್ರತಿಯೊಬ್ಬ ಮನುಷ್ಯನೂ ಜೀವನದಲ್ಲಿ ಭಾವನಾತ್ಮಕವಾಗಿ ಬದುಕಲೇಬೇಕು, ಹಾಗೆಯೇ ಬದುಕುತ್ತಾನೆ ಕೂಡ... ನಮ್ಮ ಭಾವನೆಗಳುನಮ್ಮ ಮನಸ್ಸಿಗೆ ಹೊ೦ದುವ೦ತೆ ಇರಬೇಕು ವಿನಃ  ನಾವು ಮಾಡುವ, ಮಾತನಾಡುವ ಚಟುವಟಿಕೆಗಳಲ್ಲಿ ಅಲ್ಲ... ಜೀವನದಲ್ಲಿ ನಾವು ಯಾವುದರಿ೦ದಬದುಕುತ್ತೇವೋ ಸದಾ ಅದರ ಅಭಿರುಚಿಯಲ್ಲೇ ನಾವು ನಡೆಯುತ್ತಿರುತ್ತೇವೆ...ಅದು ಸಹಜ ಕೂಡ...ಇದೊ೦ದು ಭಾವನೆಗಳ ಪ್ರಪ೦ಚ...ಗುರುತು ಪರಿಚಯವಿಲ್ಲದಿದ್ದರೂ ಒಬ್ಬರ ನೋವಿಗೆ/ಸ೦ತೋಷಕ್ಕೆ ಇನ್ನೊಬ್ಬರು ಸ್ಪ೦ದಿಸುವ ಸು೦ದರ ಬರಹಗಳ ತೋಟ... ಕೇವಲ ಮನಸ್ಸುಗಳುಮಾತ್ರ ಮಾತನಾಡಬಲ್ಲ ಸಾಹಿತ್ಯದ ಲೋಕ ಇದು.... ಪ್ರೀತಿಸಿದವರು ಪ್ರೀತಿಯ ಬಗ್ಗೆ.... ನೊ೦ದುಕೊ೦ಡವರು ನೋವಿನ ಬಗ್ಗೆ....ನಗಿಸುವವರು ಹಾಸ್ಯದ ಬಗ್ಗೆ... ಹೀಗೆ ಅನೇಕ ಚಟುವಟಿಕೆಗಳು ಇಲ್ಲಿ ಬರೀ ಬರಹದ ರೂಪದಲ್ಲಿ ಮಾತ್ರ ತಿಳಿಸಲು ಸಾಧ್ಯ... ಆದ್ರೆಎಲ್ಲರ ಆತ್ಮೀಯತೆ ಬೆಸೆಯುವ೦ಥ ಈ ಸು೦ದರ ತಾಣದಲ್ಲಿ ವಾದ ವಿವಾದಗಳಿಗೆ ನಾವು ಅವಕಾಶ ಕೊಡಬಾರದು ಅನ್ನೋದು ನನ್ನದೊ೦ದು ಮನವಿ...ನಾವು ಮಾಡುವ ಕೆಲಸದಲ್ಲಿ ಕಾರ್ಯದಕ್ಷತೆ.... ನಾವು ಬೆಳೆಸಿಕೊಳ್ಳುವ ಭಾವನೆಯಲ್ಲಿ ಆತ್ಮಸ್ಥೈರ್ಯತೆ...ನಾವು ಬಯಸುವ ಆಸೆಗಳಲ್ಲಿ ಆತ್ಮಸ೦ಹಿತೆ... ನಾವು ಪಡೆಯುವ ನೋವಿನಲ್ಲಿ ಅರಿಯದ ಅನಿವಾರ್ಯತೆ...ಆನ್ನೋ ಭಾವನೆಗಳು ನಮ್ಮ ಮನಸ್ಸಿನಲ್ಲಿ ನಾವು ಅಳವಡಿಸಿಕೊ೦ಡರೆ, ಈ ಮಾನವ ಜನ್ಮದಲ್ಲಿ ಎಲ್ಲರೂ ಸಮಭಾವದಿ೦ದ..ಸಮತೋಲನದಿ೦ದ ಬದುಕಿ ಕನಿಷ್ಠ ಬದುಕುವ ಕಲೆಯನ್ನಾದರೂ ನಾವು ಸಾಧಿಸಬಹುದು...(ಜ್ಯೋತಿಯವರೇ ನಿಮ್ಮ ಕವನವನ್ನು ಆಳವಾಗಿ ಓದಿ ಅರಿಯದೇ ನನ್ನ ಅನಿಸಿಕೆ ಬರೆದೆ ಕ್ಷಮಿಸಿ... ಪ್ರತಿಯೊಬ್ಬರ ಮನಸ್ಸಿನಲ್ಲಿ ಪ್ರಶ್ನಾಭಾವ ಇದ್ದೇ ಇರುತ್ತದೆ....ಆದರೆ ಆ ಪ್ರಶ್ನಾಭಾವಗಳಿಗೂ (ನಮ್ಮಲ್ಲೇ)ಇರುವ ಉತ್ತರಕ್ಕಾಗಿ ನಾವು ಪ್ರಯತ್ನಿಸುವುದು ಕ್ಷೇಮ...ಆ ಪ್ರಯತ್ನವೇ ಪ್ರತಿ ನೋವನ್ನೂ ಮರೆಯುವ ದಿವ್ಯೌಷಧ)

ನವೀನ್ ಚ೦ದ್ರ ಶನಿ, 12/03/2011 - 19:05

ಪತ್ತಾರ್ ರವರೇ ನಿಮ್ಮ ಮಾತು ನಿಜ, ಇಲ್ಲಿ ಮನಸ್ಸಿನ ಭಾವನೆಗಳ ಮತ್ತು ವಿಷಯಗಳ್ ಹಂಚಿಕೆ ಅಷ್ಟೆ, ವಾದ-ವಿವಾದಗಳಿಗೆ ಆಸ್ಪದವಿರಬಾರದು, ಯಾಕೆಂದರೆ ನಾನು ಮೊದ್ಲೆ ಹೇಳಿದೆನಲ್ಲಾ ಅವರವರ ಭಾವಕ್ಕೆ ಅನುಗುಣವಾಗಿ ಭಾವನೆಗಳು ಬಿತ್ತರವಾಗಿರುತ್ತವೆ, ಅವು ಕೆಲವು ನಿಮ್ಗೆ ಒಪ್ಪಿಗೆಯಾಗಬಹುದು ಮತ್ತೆ ಕೆಲವು ನನಗೆ ಒಪ್ಪಿಗೆಯಾಗದಿರಬಹುದು.ಅವುಗಳನ್ನು ವಿಚಾರ-ವಿನಿಮಯ ಮಾಡಿದಾಗಲೇ ಅದರ ಪೂರ್ಣ ಸತ್ಯ ತಿಳಿಯುವುದು,,,,,,,,,,,,,,,,,ಧನ್ಯವಾದಗಳೊಂದಿಗೆ,,,,,,,,,,,,, ನವೀನ್ ಚಂದ್ರ.........

Pattar ಭಾನು, 12/04/2011 - 10:33

ನನ್ನ ಅನಿಸಿಕೆಗೆಯನ್ನು ತಳ್ಳಿಹಾಕದೇ ನನ್ನ ಮನವಿಯನ್ನು ಅ೦ಗೀಕರಿಸಿದ್ದಕ್ಕೆ ಧನ್ಯವಾದಗಳು ನವೀನ್ ಚ೦ದ್ರ ಅವರೇ...."ಅವರವರ ಭಾವಕ್ಕೆ ಅನುಗುಣವಾಗಿ ಭಾವನೆಗಳು ಬಿತ್ತರವಾಗಿರುತ್ತವೆ," "ಸತ್ಯವಾದ ಮಾತು"...........ಆದರೆ ಭಾವನೆಗಳ ಮೇಲೆಯೇ ಅವರ ಮನಸ್ಥಿತಿ ಅವಲ೦ಬಿತವಾಗಿರುತ್ತದೆ ಅನ್ನೋದು ಎಷ್ಟರ ಮಟ್ಟಿಗೆ ಸರಿ ನವೀನ್..?   

Jyothi Subrahmanya ಭಾನು, 12/04/2011 - 08:04

ನಿಮ್ಮ ಅಭಿಪ್ರಾಯಗಳಿಗೆ ಧನ್ಯವಾದಗಳು.  

ನವೀನ್ ಚ೦ದ್ರ ಶನಿ, 12/03/2011 - 18:54

ಜ್ಯೋತಿಯವರೇ ನಾನ್ಯಾಕೆ ನಿಮ್ಮನ್ನು ಬೈದುಕೊಳ್ಳಲಿ, ಪ್ರೀತಿಯ ಹುಟ್ಟನ್ನು ಅರಿಯುವುದು ತುಂಬಾ ಕಷ್ಟ, ಯಾಕೆಂದರೆ ಅದು ಯಾವಾಗಲು ಅದು ಅವರವರ(ಪ್ರೀತಿಸುವವರ) ಮನಸ್ಥಿತಿಗೆ ಅನುಗುಣವಾಗಿರುತ್ತೆ. ಪ್ರೀತಿಯಲ್ಲಿ ಯಾವಾಗ ಬಿರುಕು ಕಾಣಿಸುತ್ತದೆ, ಮತ್ತೆ ಯಾವಾಗ ಸಂದಿಸುತ್ತದೆ ಎಂಬುದನ್ನು ಹೇಳಲು ಆಗುವುದಿಲ್ಲ. ಅಂದ ಹಾಗೇ ತಾವು ಕಾನೂನು ಪದವಿ ಮಾಡಿರುವುದು ಗೂತ್ತು, ಅದರಲ್ಲಿ ಚಿನ್ನದ ಪದಕ ಪಡೆದುಕೊಂಡಿರುವುದು ನನಗೆ ಗೊತ್ತಿರುವ ವಿಚಾರನೇ,,,,,ಸಂವಿಧಾನದ ೧೯ನೇ ಅನುಚ್ಹೇದವನ್ನು ವಿಸ್ತರಿಸುವ ಅವಶ್ಯಕತೆ ಈ ವಿಷಯದಲ್ಲಿ ಅಪ್ರಸ್ಥುತ ಅನಿಸುತ್ತಿದೆ. ನನ್ನ ಅಭಿಪ್ರಾಯದಿಂದ ನೋವಾದರೆ ಕ್ಷಮೆ ಇರಲಿ...............ಧನ್ಯವಾದಗಳೊಂದಿಗೆ.............. ನವೀನ್ ಚಂದ್ರ....... 

Jyothi Subrahmanya ಭಾನು, 12/04/2011 - 08:10

ನವೀನ್ ರವರೆ, ಸಂವಿಧಾನದ ಚೌಕಟ್ಟಿನ ಕುರಿತು ಪ್ರಶ್ನಿಸಿದ್ದಕ್ಕೆ ಅದನ್ನು ವಿಸ್ತರಿಸುವ ಅಗತ್ಯತೆ ಬಂತು.  ನಿಮ್ಮ ಅಭಿಪ್ರಾಯದಿಂದ ನೋವಾಗಿಲ್ಲ.  ಮೊದಲೇ ಹೇಳಿದ ಹಾಗೆ ಒಬ್ಬರ  ಅನಿಸಿಕೆ ಅವರ ಮನಸ್ಥಿತಿಯನ್ನು ಆಲೋಚನೆಯನ್ನು ಬಿಂಬಿಸುತ್ತದೆ.  ವಾದ ಮಾಡುವ ಉದ್ದೇಶವೂ ನನಗಿಲ್ಲ ಹಾಗೇ  ಚಿನ್ನದ ಪದಕ ಪಡೆದ ಕುರಿತು ಇಲ್ಲಿ ಚರ್ಚಿಸುವ ಯೋಚನೆಯೂ ಇಲ್ಲ.  ನಿಮ್ಮ ಅನಿಸಿಕೆಗಳಿಗೆ ಮುಕ್ತ ಸ್ವಾಗತ.  ಧನ್ಯವಾದಗಳು.

ನವೀನ್ ಚ೦ದ್ರ ಭಾನು, 12/04/2011 - 10:07

ಶಾಂತರಾಗಿ,,,,,,,,,,,,,,,

ನವೀನ್ ಚ೦ದ್ರ ಶುಕ್ರ, 12/02/2011 - 19:44

  ಪತ್ತಾರ್ ರವರೆ ನೀವು ಹೇಳುವ ಹಾಗೆ, ನಿಸರ್ಗದಲ್ಲಿ ಅರಳಿ ಕೊನೆಗೆ ನಶಿಸಲೇಬೇಕಾದ ಎಲ್ಲ ಜೀವರಾಶಿಗಳಲ್ಲು ಮನುಷ್ಯನೂ ಹಾಗೂ ಅವನ ಭಾವನಾತ್ಮಕ ಚಟುವಟಿಕೆಗಳೂ ಒ೦ದೇ ಹಾಗಿರಬಹುದು ಆದರೆ ಮನುಷ್ಯನ ಭಾವನೆಗಳು ಮಿಕ್ಕೆಲ್ಲಾ ಜೀವರಾಶಿಗಳಿಗಿಂತ ಭಿನ್ನವಾದುದು,, ಭಾವನೆಗಳು ಅವರವರ ಅನುಭವಕ್ಕನುಗುಣವಾಗಿ ಇರುತ್ತೆ, ಇಲ್ಲಿ ಸೋಲು ಗೆಲುವಿನ ಪ್ರಶ್ನೆ ಬರುವುದೇ ಇಲ್ಲ...........ಧನ್ಯವಾದಗಳೊಂದಿಗೆ...... ನವೀನ್ ಚಂದ್ರ............

ಮರೆಯುವುದೆ ಈ ಮನ ಅವನ ಕವಿತೆ ಚೆನ್ನಾಗಿದೆ. ನಿಮ್ಮ ಕವಿತೆಯಲ್ಲಿ ಮುದ್ದು ಮನದ ಬದಲಾಗಿ ಮೊದ್ದು ಮನ ಅಂತ ಬರೆದಿದ್ದಿರಿ ಅದನ್ನ ತಿದ್ದಿಕೊಳ್ಳಿ...

Jyothi Subrahmanya ಸೋಮ, 12/05/2011 - 19:09

ಪ್ರಕಾಶ್ ರವರೇ, ಅದು ಮೊದ್ದು ಮನ.. ಮುದ್ದು ಮನ ಅಲ್ಲ. ಃ) ಧನ್ಯವಾದಗಳು ನಿಮ್ಮ ಅನಿಸಿಕೆಗೆ..

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.