Skip to main content

ಕನ್ನಡಿಗರೆ ನಿಮಗೆ ಕನ್ನಡದಲ್ಲಿ ಗ್ರೀಟಿಂಗ್ಸ್ ಬೇಕೆ ????

ಬರೆದಿದ್ದುDecember 13, 2007
5ಅನಿಸಿಕೆಗಳು

ವಿಸ್ಮಯನಗರಿಯ ಎಲ್ಲಾ ಓದುಗರಿಗು ಪರಿಚಯಿಸುತ್ತಿರುವ ಈ ತಾಣ ಕನ್ನಡ-ಗ್ರೀಟಿಂಗ್ಸ್.ಕಾಂ ಕನ್ನಡಿಗರಿಗೆ ಸುಂದರವಾದ ಶುಭಾಶಯಗಳನ್ನು ಕಳುಹಿಸಲು ಒಂದು ಹೊಚ್ಚ ಹೊಸ ತಾಣ. ಇದು ಕನ್ನಡದಲ್ಲೆ ಅಚ್ಚು ಕಟ್ಟಾದ ಶುಭಾಶಯಗಳನ್ನು ಒದಗಿಸುವ ಒಂದು ಪ್ರಯತ್ನ. ಶುಭಾಶಯಗಳ ಮುಖಾಂತರ ಹಬ್ಬ, ಹುಟ್ಟುಹಬ್ಬ, ಪ್ರೀತಿ, ವಿರಹ, ಸ್ನೆಹ, ಮದುವೆ ಇತ್ಯಾದಿ ಯಾವುದೆ ವಿಷಯಗಳ ಮೆಲೆ ನೀವು ನಿಮ್ಮ ಸ್ನೇಹಿತರಿಗೆ ಹಾಗು ಬಂಧು ಮಿತ್ರರಿಗೆ ಶುಭ ಕೋರಬಹುದು.

[img_assist|nid=2036|title=www.kannadagreetings.com|desc=|link=none|align=center|width=640|height=206]

ಲೇಖಕರು

ಯೋಗೇಶ್

ನಿನಗೇಳದ ಮಾತೊಂದು ಮನದ(ನ)ಲ್ಲೆ ಉಳಿದಿದೆ.

ಅನಿಸಿಕೆಗಳು

ಶಿವಕುಮಾರ ಕೆ. ಎಸ್. ಮಂಗಳ, 12/18/2007 - 11:55

ಗುರೂ

ವಿಸ್ಮಯವನ್ನ ಬೇರೆ ಯಾವ್ಯಾವುದೋ ವೆಬ್-ಸೈಟ್ ಗಳ ಜಾಹೀರಾತಿಗೋಸ್ಕರ ಉಪಯೋಗಿಸ್ಕೊಳ್ಳೋದು ಬೇಡ ಗುರೂ...

ಮೇಲಧಿಕಾರಿ ಶುಕ್ರ, 12/21/2007 - 09:18

ಶಿವಕುಮಾರ ಅವರು ಹೇಳುವದರಲ್ಲಿ ಕೂಡಾ ಸತ್ಯ ಇದೆ. ವಿಸ್ಮಯ ನಗರಿಯ ಅನೇಕ ಓದುಗರ ಅಭಿಪ್ರಾಯ ಒಂದೇ ವಿಸ್ಮಯ ಕೇವಲ ಉತ್ತಮ ಗುಣಮಟ್ಟದ ಲೇಖನ, ಸಾಹಿತ್ಯ ಗಳಿಗೆ ತಾಣ ಆಗಬೇಕು. ಆದ್ದರಿಂದ ಮೊದಲ ಹಂತದ ಮಾಡರೇಶನ ಈಗಾಗಲೇ ಜಾರಿಗೆ ಬಂದಿದೆ. ಕೇವಲ ಉತ್ತಮ ಗುಣಮಟ್ಟದ ಲೇಖನಗಳನ್ನು ಮಾತ್ರ ಮುಖ ಪುಟದಲ್ಲಿ ಕಾಣಿಸಿಕೊಳ್ಳುತ್ತದೆ. ಕಳಪೆ ಮಟ್ಟದ ಲೇಖನ, ಕವನಗಳನ್ನು ಅಳಿಸಬೇಕೆ ಅಥವಾ ಹಾಗೇ ಬಿಡಬೇಕೆ ಅನ್ನೋ ನಿರ್ದಾರ ಶೀಘ್ರದಲ್ಲಿ ತೆಗೆದುಕೊಳ್ಳಲಾಗುವದು.

sanjaykattimani ಮಂಗಳ, 12/18/2007 - 18:57

ವಿಸ್ಮಯದ ಪ್ರಜೆಯಾದ ನಾನು ತಯಾರಿಸಿದ ತಾಣ ಅದು. ಕನ್ನಡಿಗರಿಗಾಗಿ ಕನ್ನಡದಲ್ಲಿ ತಯಾರಿಸಿದ ತಾಣದ ಬಗ್ಗೆ ಇತರರಿಗೆ ಕನ್ನಡದ ಒಂದು ಅಪ್ಪಟ ತಾಣ(ವಿಸ್ಮಯ)ದಲ್ಲಿ ತಿಳಿಸುವದು ತಪ್ಪಾ ಗುರು?

[url=http://www.kannada-greetings.com]http://www.kannada-greetings.com[/url]

Bhyrappa.M ಮಂಗಳ, 12/18/2007 - 20:37

ಸಂಜಯ ಅವರು ಹೇಳೋದು ಸರಿ ಶಿವು ಅವರೇ, ಈ ತಾಣ ದಿಂದ ಕನ್ನಡದ, ಕನ್ನಡಿಗರ ,ಮತ್ತೊಂದು ಕನ್ನಡ ತಾಣದ ಪ್ರಚಾರವಾಗುವುದರಲ್ಲಿ ತಪ್ಪೇನೂ ಇಲ್ವಲ್ಲಾ..? ಕನ್ನಡ ಚೆನ್ನಾಗಿ ಬೆಳೆಯಬೇಕಂದ್ರೆ ಕನ್ನಡಿಗರೆಲ್ಲರೂ ಹಾಗೂ ಕನ್ನಡ ತಾಣಗಳೂ ಪ್ರೋತ್ಸಾಹ ಕೊಟ್ಟರೆ ತಾನೆ ಸಾಧ್ಯ..? ಮತ್ತೊಂದು ಕನ್ನಡ ತಾಣವನ್ನು ಕೊಟ್ಟಿರೋದಕ್ಕೆ ಸಂಜಯ ಅವರಿಗೆ ತುಂಬಾ ಧನ್ಯವಾದಗಳು.

ಕನ್ನಡ ಪ್ರೇಮಿ
ಭೈರಪ್ಪ. ಎಂ.

munna (ಪ್ರಮಾಣಿಸಲ್ಪಟ್ಟಿಲ್ಲ.) ಭಾನು, 06/28/2009 - 20:29

its very nice

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.