Skip to main content

ಬದುಕೊಂದು ಮಾಯಾನಗರಿ...!

ಬರೆದಿದ್ದುDecember 11, 2007
3ಅನಿಸಿಕೆಗಳು

ಬದುಕೊಂದು ಮಾಯಾನಗರಿ,
ಸಹಜ ಕ್ರಿಯೆ, ಹುಟ್ಟು-ಸಾವಿನ ಪರಿ.
ಹುಟ್ಟು-ಸಾವಿನ ನಡುವೆ,
ನಮ್ಮದೇ ಆದ ದಾರಿ...!!

ದಾರಿಯೊಳು ಹೂವುಂಟು, ಹಸಿರುಂಟು,
ಬೆಳಕುಂಟು, ನಗುವುಂಟು..!!
ನೋವುಂಟು, ಮುಳ್ಳುಂಟು, ಕಲ್ಲುಂಟು,
ನಗೆಯಿರದ ಕ್ಷಣವುಂಟು..!!

ನೂರಾರು ಜನರುಂಟು,
ಅವರವರದೆ ಕಥೆಯುಂಟು,
ಅಸನಾಗದ ಬದುಕಲ್ಲಿ,
ಸಾಯುವವರು ಉಂಟು..!!

ಮನುಕುಲದ ಮನದೊಳು,
ಮಲಗಿರಲು ಮಾತುಂಟು,
ಯಾರ್ಯಾರಿಗೇನು..? ಒಳಿತು-ಕೆಡುಕುಗಳ-
ಬಗೆಯುವುದೋ.., ದೇವರಿಗೆ ಗೊತ್ತುಂಟು...!!!

ಯಾರು-ಯಾರಿಗೂ... ಆಗರು,
ಆದರು "ನೋವ" ಪಡೆಯಲಾರರು..
ಮನದಾಳದ ಇಂಗಿತವ,
ಅವರವರೆ ಬಲ್ಲರು...!!

ನೋವಿರದ ದೇಹವಿಲ್ಲ..
ನೋವು ದೇವರಿಗು ಬಿಟ್ಟಿಲ್ಲ..
ಮಾಡುವ ಕಾಯಕವ ಮಾಡದೆ ನರರು..,
ಮೂಡನಂಬಿಕೆಯ ’ಜಾಡು’ ಬಿಟ್ಟಿಲ್ಲ...!!

ಇರುಳಾಗಲು ಶರಣಾಗಿ ನಿದ್ದೆಗೆ,
ಹಗಲು ಮೂಡಲು, ಓಡುವರು ಕೆಲಸಕ್ಕೆ,
ಯಾರ್ಯಾರದೇನೋ..?? ಬಲ್ಲವರು ಯಾರು?
ಇರುವೆರೆಡು ಘಳಿಗೆ, ಸಾಧಿಸಿದ್ದು ಅಲ್ಪಜನರು...!!

ನಾನು-ನನ್ನದೊಳು ಮಿಂದು,
ನನದೆಂದು ಮೆರೆದಾಡಿ,
ಹಗಲು ಮೂಡಲು, ಅಗಲಿಹರು..!!
ಉಳಿದವರೆಲ್ಲ ಬಯ್ಯುತಿಹರು...!!

ಮೇಲು-ಕೀಳಿನವರಿಗೆ,
ಬೇರೆ-ಬೇರೆ ಶಾಲೆ.
ಜೇಬಿನಲ್ಲಿ ’ಮನಿ’ ಇದ್ದರೆ-
ಅವನ ಲೆವಲ್ಲೇ ಬೇರೆ..!!

ಸಾಯುವವರು ಎಷ್ಠೋ....???
ಹುಟ್ಟುವವರು ಎಷ್ಠೋ...????
ಕಾರಣ ಒಂದಾ...?? ಎರಡಾ...?!
ಏಳಿದರೆ ಮೌಂಟ್ ಎವರಷ್ಠು...!!

ನಡೆಯುತಿದೆ ಹೇಗೋ.. ಜೀವನ,
ಬಂದೋದವರು ಬಹಳಷ್ಠು ಜನ,
ಮುಂದೇನಾಗುವುದೆಂಬುದು-
ನಿಗೂಢ ಕ್ಷಣ..!
ಇರುವವರೆಗು ಏನಾಗುವುದೋ..
ಕಾದು ನೋಡೋಣ.....!!

ಯೋಗೇಶ್.

ಲೇಖಕರು

ಯೋಗೇಶ್

ನಿನಗೇಳದ ಮಾತೊಂದು ಮನದ(ನ)ಲ್ಲೆ ಉಳಿದಿದೆ.

ಅನಿಸಿಕೆಗಳು

srinivas ಧ, 12/12/2007 - 14:10

sir nimma vayasige mirida kavana baritha iddira anusthaidhe....

Hedeyalli tumbiralu Novugalu Noorondhu..
Mudi seralendhu Kadhide Mallige Hoovondhu...

Anandada mogadalli..
Chendanada Siriyalli ... Nalidadali Hunnimeya Naguvebdhu...????

Balinolage Naguvirali.....
Naguve Jeevana Nenapiraliiii

s h ghante ಮಂಗಳ, 10/18/2011 - 15:38

ಸರಿಯಾಗಿದೆ ನಿವು ಬರೆದ ಕವನ .

s h ghante ಮಂಗಳ, 10/18/2011 - 16:13

ನಿವು ಬರೆದ ಕವನ ಸರಿಯಾಗಿದೆ ಹಲವಾರು ಕವನಗಳು ಬರೆಯಿರಿ. ಹುಟ್ಟು ಆಕಸ್ಮಿಕ, ಬದುಕು ಅನಿವಾರ್ಯ,ನಿಶಿತ ಸಾವು ಯೆಂದು ಹೆಳಿದಿರಾ ತನ್ನ ಇಚ್ಚೆ ಮೆಚ್ಚುವುದಿ ಮನ ಇದಿರಿಚ್ಚೆಯು ಮೆಚ್ಚದಿ ಮನ ಎಂದು ಬಸವಣ್ಣನವರು  ಹೆಳಿದ ಹಾಗೆ ಮಾನವ ಯಾವಾಗಲು ಅಹಂಕಾರಿಯಾಗಿ ಕಂಡು ಬರುತ್ತಾನೆ,ಎನ್ನಬಹುದು .   

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.