Skip to main content

ಆಕಿ ಒಂಟ್ಯಾಳ ತವರಿಗ...!

ಬರೆದಿದ್ದುNovember 9, 2007
2ಅನಿಸಿಕೆಗಳು

ಕಲ್ಪನೆಗೆ ಏನಾದರೇನು? ಯಾವುದಾದರೇನು? ನಾ ಕಲ್ಪಿಸಿ ಕೊಂಡು ಬರೆದ ಈ ಕಾವ್ಯ "ಆಕಿ ಒಂಟ್ಯಾಳ ತವರಿಗ" ಕಾವ್ಯದ ಪದಗಳು ತಪ್ಪಿದ್ದಲ್ಲಿ ಮನ್ನಿಸಿ..

ಆಕಿ ಒಂಟ್ಯಾಳ ತವರಿಗ...!
ಬಲು ಬೇಸರ ನನಗ...!
ಬ್ಯಾಡ.. ಅಂತೀವ್ನಿ ಮನಸಿನ್ಯಾಗ...!

ನನ್ನ ಕಂಡ್ರ ಪ್ರಾಣ ಆಕಿಗ...
ನನ್ನದ್ರುಷ್ಠ-ಸಿಕ್ಕಾಳ ಜೊತಿಗ...
ಯವ್ವಿ-ಯವ್ವಿ, ಎಂತ-
ಚೆಂದ ಕಾಣಿಸ್ತಾಳ ನಕ್ಕಾಗ...!

ನಾ ಓದಿಲ್ಲ-ಬರೀಲಿಲ್ಲ ಶಾಲೀನಾಗ..!
ಒಡ್ಡ-ದಡ್ಡ, ಅಂತರ ಮನೀಗ..!

ಕಲಿಸ್ತಾಳೆ ನನ್ನಾಕಿ ಗುರುವಂಗ..,
ನೋಡ್ಕೊಂತಾಳೆ ನನ್ನ ಮಗುವಂಗ..!

ಕೈರಟ್ಟೆನಾಗ ಶಕ್ತಿ ಅದ...
ಅಂಬಲಿಯೋ - ಗಂಜಿಯೋ.. ಮನೆಗಿರ್ತದ..
ಕುಡಿಯಾಂಗಿಲ್ಲ - ಬೀಡಿ ಸೇದೊಂಗಿಲ್ಲ-
ಯಾರ ತಂಟಿಗ್ ನಾ ಹೋಗಾಕು ಇಲ್ಲ...!

ಖುಷಿ ಆಗ್ತದ ಈಗ ನಂಗ...
ಆಕಿ ಜೊತಿ ನಾ ಕಳೆಯೊ ದಿನದಾಗ..!
ಬಾಳ ಮುದ್ ಮಾಡ್ತಾಳೆ ನಂಗ...!!

ಮೊನ್ನೆ ಹಿಂಗ ಬಾ ಅಂತ ಕರೆದ್ಲು ನಂಗ...?!
ಕಿವಿಯಲ್ಲಿ ಹೇಳಿದ್ಲು, ಮೂರುತಿಂಗಳು ನಂಗೀಗ...!!??
ತಲೀಗೊಳಿಲಿಲ್ಲ.. ನಂಗಾ..ಗ...???!!!

ನಾಚ್ಕೊಂತ - ನನ್ನ ಸತಾಯಿಸ್ಕೊಂತ,
ಹೇಳಿದ್ಲು - ನೀ ಅಪ್ಪ ಆಗ್ತೀಯಂತ...!!

ಅಪ್ಪ-ಸಾಮೀ...!! ಕುಣಿದ್-ಕುಣಿದ್,-
ನಲಿದಾಡ್ ಬಿಟ್ಟೆ ಮನೆತುಂಬ..!!
ನಾನೆ ಮಗಿನಂಗ...!!!

ಈಗ ಬಾಣಂತನಕ್ ಒಂಟ್ಯಾಳ ತವರಿಗ...!
ಬ್ಯಾಡ ಅಂದ್ಕೊಂಡೆ ಮನಸಿನ್ಯಾಗ...!!
ನನ್ನ ಮನೀಗ ಹುಟ್ಟುದ್ರೆ, ಬ್ಯಾಡಂತದೇನ್ ನನ್ ಮಗ....!?

ಅಯ್ಯೋ.. ನನ್ ಬುದ್ದಿಗಿಷ್ಠು, ನಾ ಹೇಲಿದ್ದೆಲ್ಲ ಆಯ್ತದ.?
ಅದ್ಕೊಂಡಿದ್ ಸಾಕಂತೇಳಿ,
ಆಕೀನ ಕಳಿಸಿಕೊಟ್ ಬಂದೆ ತವರಿಗ...!!

ಲೇಖಕರು

ಯೋಗೇಶ್

ನಿನಗೇಳದ ಮಾತೊಂದು ಮನದ(ನ)ಲ್ಲೆ ಉಳಿದಿದೆ.

ಅನಿಸಿಕೆಗಳು

ಕೆಎಲ್ಕೆ ಸೋಮ, 11/12/2007 - 09:30

""ಆಕಿ ಹೊಂಟಾಳ ತವರೀಗ
ನಲಿಯಾಕ ಹತ್ತೈತಿ ಮನಸೀಗ
ಅನಿಸಾಕ ಹತ್ತೈತಿ ನನಗ ಬರೆ ಇಪ್ಪತ್ತು ವಯಸೀಗ
ಹೊಗೆಬತ್ತಿ ಬಾಟಲಿಗಳಿಗೆ ಮನೆಯಲ್ಲೀಗ ಖಾಯಂ ಜಾಗ
ಎಫ್ ಟಿವಿ ಚಾನೆಲ್ ಗಂತೂ ಬಂತು ಯೋಗಾಯೋಗ
ಎದುರು ಮನೆಯಾಕಿಯ ಚೆಲುವ ನಾ ಹೀರಿದರ ತಡೆಯೋರ್ ಯಾರೀಗ? """"

etc, etc ......ಪದ್ಯ ಇರುತ್ತೆ ಅಂದ್ಕೊಂಡಿದ್ದೆ ! ನಿಮಗೆ ಮದುವೆ ಆಗಿಲ್ಲ ಅಂತಾಯ್ತು ಬಿಡಿ!
I am just kidding; ನಿಮ್ಮ ಪದ್ಯ ಚೆನ್ನಾಗಿದೆ!

ಯೋಗೇಶ್ ಮಂಗಳ, 11/13/2007 - 16:19

ಯೋಗೇಶ್

ಹ್ಹ, ಹ್ಹ, ಹ್ಹ...!!!! ಪರವಾಗಿಲ್ಲ ಬಿಡಿ..! ಅಂದ ಹಾಗೆ.. ನಿಮ್ಮ ಅಣುಕು ಕೂಡ ಚೆನ್ನಾಗಿದೆ.. ಮತ್ತು ಈ ನನ್ನ ಕವನ ದಟ್ಸ್ಕ್ ಕನ್ನಡದಲ್ಲು ಪ್ರಕಟವಾಗಿದೆ. http://thatskannada.oneindia.in/literature/poem/2007/1211-ecstacy-of-a-would-be-dad.html

ಧನ್ಯವಾದಗಳು ನನ್ನ ಕವನ ಮೆಚ್ಚಿದ್ದಕ್ಕೆ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.