Skip to main content

ಆ ಭಯಾನಕ ರಾತ್ರಿ!

ಇಂದ ಗಣೇಶ
ಬರೆದಿದ್ದುAugust 27, 2007
6ಅನಿಸಿಕೆಗಳು

ದಿವ್ಯಾ! ನನ್ನ ಕ್ಲೋಸ್ ಫ್ರೆಂಡು. ಅವಳು ನನಗೆ ಸುಮಾರು 5 ವರ್ಷಗಳಿಂದ ಗೊತ್ತು.ಕಾಲೇಜ್‌ನಲ್ಲಿ ನನ್ನ ಕ್ಲಾಸ್‌ಮೇಟ್ ಆಗಿದ್ಲು.ನಾವು ಒಟ್ಟಿಗೆ ತಿರುಗಾಡುತ್ತಿದ್ವಿ.ನನಗೆ ಅವಳ ಬಗ್ಗೆ ಎಲ್ಲಾ ಗೊತ್ತಿತ್ತು. ಅವಳ ತಂದೆ-ತಾಯಿ ಬ್ಯುಸಿನೆಸ್ ಜನ. ಯಾವಾಗ್ಲೂ ತುಂಬಾನೇ ಬ್ಯುಸಿ. ಅವಳು ಒಮ್ಮೆ ತನ್ನ ಸತ್ತಿರುವ ತಂಗಿ ಬಗ್ಗೆ ಹೇಳಿದ್ದಳು.ನನಗೆ ದಿವ್ಯಾ ಪರಿಚಯ
ಆಗೋಕ್ಕಿಂತ ಎರಡು ವರ್ಷ ಮುಂಚೇನೆ ಅವಳು ತೀರಿಕೊಂಡಳಂತೆ. ಅವಳ ತಂದೆ ತಾಯಿಗಳಿಗೂ ನಾನು ಚೆನ್ನಾಗಿ ಗೊತ್ತಿತ್ತು. ನಾನು ಅವರ ಮನೆಗೆ ಯಾವಾಗ್ಲೂ ಹೋಗ್ತಾ ಇದ್ದೆ....ನಾವು ಬರಿ ಫ್ರೆಂಡ್ಸ್ ಮಾತ್ರ ಆಗಿದ್ದೆವು.

ನಾಲ್ಕು ವರ್ಷಗಳ ನಂತರ ನಾವಿಬ್ಬರೂ ಇಂಜನಿಯರಿಂಗ್ ಮುಗಿಸಿದೆವು. ಕೊನೆಯ ವರ್ಷ ಅಂತೂ ಇಬ್ಬರು ಹೆಚ್ಚು ಮಾತಾಡಲೇ ಇಲ್ಲ. ನಾವು ಬೇರೆ ಬೇರೆ ಕಂಪನಿ ಸೇರಿದೆವು.ನಾನು ಕೆಲವೊಮ್ಮೆ ಅವಳೊಂದಿಗೆ ಫೋನ್ ನಲ್ಲಿ ಮಾತಾಡುತ್ತಿದ್ದೆವ.ಹೀಗೆ ಒಂದು ವರ್ಷ ಕೆಲವೇ ದಿನಗಳಂತೆ ಕಳೆದು ಹೋಯ್ತು! ನಾನು ಅವಳನ್ನು ಕೊನೆಯ ಒಂದು ವರ್ಷಗಳಲ್ಲಿ ಭೇಟಿ ಆಗಲೇ ಇಲ್ಲ.

ಆ ದಿನ ವಿಭಿನ್ನವಾಗಿತ್ತು. ಆಫೀಸ್ ನಿಂದ ಬೇಗ ಜಾಗ ಖಾಲಿ ಮಾಡಿದೆ. ನಾನು ಮನೆಗೆ ಹೋಗ್ತಾ ಇದ್ದೆ, ಅದ್ಯಾಕೋ ಗೊತ್ತಿಲ್ಲ ದಿವ್ಯಾಳ ನೆನಪು ಬಲವಾಗಿ ಬಂತು. ತಕ್ಷಣ ಬೈಕನ್ನು ಅವಳ ಮನೆಯ ಕಡೆ ತಿರುಗಿಸಿದೆ. ನಾನು ಅವಳ ಮನೆ ತಲುಪಿ ಕಾಲ್ ಬೆಲ್ ಬಾರಿಸಿದೆ. ಮನೆ ಒಳಗೆ ಕತ್ತಲಿತ್ತು. ಇದಕ್ಕಿದ್ದಂತೆ ಲೈಟ್ ಆನ್ ಆಯ್ತು. ನಾನು ಅವಳು ಬಾಗಿಲು ತೆಗೆಯುತ್ತಾಳೆ ಅಂತಾ ಕಾದಿದ್ದೆ.

ಬಾಗಿಲೇನೋ ತೆರೆಯಲ್ಪಟ್ಟಿತು.ಆದರೆ ನಾನು ಬೇರೆ ಯಾರನ್ನೋ ನೋಡಿದೆ. ತುಂಬಾ ಮುದ್ದಾದ ಹುಡುಗಿ. ಬಹುಶಃ ನನಗಿಂತ ಎರಡು ವರ್ಷ ಚಿಕ್ಕವಳಿರಬೇಕು. ನಾನು ಅವಳ ಸುಂದರ ಮುಖ ನೋಡಿ ಮನಸ್ಸಿನಲ್ಲೇ ವಾವ್ ಅಂದೆ. ಆದರೂ ನನ್ನ ಕಣ್ಣುಗಳೆರಡು ನನ್ನ ಮನಸ್ಸಿನ ಹತೋಟಿಯಲ್ಲಿಲ್ಲದೇ ಅವಳನ್ನು ಕೆಕ್ಕೆರಿಸಿಕೊಂಡು ನೋಡುತ್ತಿದ್ದವು.
ಅವಳ ಮುಖ ಭಾವನೆ "ಯಾರು ಬೇಕಿತ್ತು?" ಅಂತಾ ಕೇಳುವಂತಿತ್ತು. ನಾನು ಏನು ಹೇಳಲಿಲ್ಲ. ಅವಳೇ ಬಾಯಿ ಬಿಟ್ಟು ಕೇಳಿದಳು "ಯಾರು ಬೇಕು?" ನಾನು ಅದು ನನ ಫ್ರೆಂಡ್ ಮನೆ ಅನ್ನೋದನ್ನು ಖಚಿತ ಮಾಡಿಕೊಳ್ಳಲು ಸುತ್ತ ಮುತ್ತ ಒಮ್ಮೆ ನೋಡಿದೆ. ನಾನು ಹೇಳಿದೆ " ನಾನು ದಿವ್ಯಾಳ ನೋಡಬೇಕಿತ್ತು" ಅವಳು ಮನೆಯಲ್ಲಿಲ್ಲ ಅವಳು ಇನ್ನು ಅರ್ಧ ಗಂಟೆಯಲ್ಲಿ ಬರುತ್ತಾಳೆ. ನಾನು ತಂದೆ-ತಾಯಿ ಬಗ್ಗೆ ಕೇಳಿದೆ. ಅವರು ಯಾವುದೋ ಪಾರ್ಟಿಗೆ ಹೋಗಿದ್ದರಂತೆ.

ನಾನು ಹಿಂತಿರುಗಿ ಬರುವದರಲ್ಲಿದ್ದೆ. ಅಷ್ಟರಲ್ಲಿ ಆ ತರುಣಿ ನನ್ನ ಕರೆದಳು. ನೀವು ಕಾಯ ಬಹುದು ಅಂದಳು. ಆಗ ನನಗೆ ಸ್ವರ್ಗಕ್ಕೆ ಮೂರೇ ಗೇಣಿದೆ ಅನಿಸಿತು. ಮತ್ತೆ ಅಷ್ಟೊಂದು ಸುಂದರ ಹುಡುಗಿ ಜೊತೆಗೆ ಆ ಸಂಜೆಯಲ್ಲಿ ಕಾಲ ಕಳೆಯಬಹುದಾದ ಸೌಭಾಗ್ಯ! ನಾನು ಮನೆಯ ಒಳಕ್ಕೆ ಹೋಗಿ ಕುಳಿತೆ. ಅವಳು ನನಗಾಗಿ ನೀರು ತಂದು ಕೊಟ್ಟಳು.ಅವಳು ಪ್ರಶ್ನೆ ಕೇಳುತ್ತಿದ್ದಳು.

ಅವಲ ದ್ವನಿ ಕಿವಿಗೆ ಹಿತ ಕೊಡುತಿತ್ತು. ನಾನು ನನ್ನ ಬಗ್ಗೆ ಎಲ್ಲ ತಿಳಿಸಿದೆ. ಅವಳು ಕಾಫಿ ಕುಡಿತೀಯಾ ಕೇಳಿದ್ಲು. ಟಿವಿ ಆನ್ ಆಗಿತ್ತು. ನಾವಿಬ್ಬರೂ ನೋಡ್ತಾ ಇದ್ವಿ. ಅವಳು ನನ್ನ ಮುಂದೆ ಕುಳಿತಿದ್ಲು. ನಾನು ಅವಳನ್ನು ಪದೇ ಪದೇ ನೋಡುತ್ತಾ ಇದ್ದೆ.

ಅವಳ ಸುಂದರ ವದನ ನನ್ನ ಮೋಡಿ ಮಾಡಿತ್ತು. ಅವಳ ಮಾದಕ ನಗು ನನ್ನ ಕಣ್ಣ ನೋಟವನ್ನು ಕಟ್ಟಿ ಹಾಕಿತ್ತು. ಆದರೆ ಅವಳು ಅದಕ್ಕೆ ಗಮನ ಕೊಡದೆ ಟಿವಿ ನೋಡ್ತಾ ಇದ್ದಳು.
ನಾನು ಅವಳ ಗಮನ ಸೆಳೆಯಲು "ನೀನ್ಯಾರು? ನಾನು ನಿನ್ನನ್ನು ಇಲ್ಲಿ ನೋಡಿಯೇ ಇಲ್ಲ" ಎಂದೆ. ಅವಳು ನಕ್ಕು " ನಾನು ದಿವ್ಯಾಳ ತಂಗಿ" ಅಂದಳು. ನನಗೆ ಆಶ್ಚರ್ಯ ಆಯ್ತು. ಅವಳು ಸತ್ತು ಎಷ್ಟೋ ವರ್ಷಗಳಾಗಿವೆ. ಮೈಯಲೆಲ್ಲಾ ನಡುಕ ಉಂಟಾಯ್ತು. ಇದು ಹೇಗೆ ಸಾಧ್ಯ ಅಂತಾ ನಾನು ಕಂಗಾಲಾಗಿ ಯೋಚಿಸುತ್ತಾ ಇರುವಾಗಲೇ ಅವಳು ಇದಕ್ಕಿದ್ದಂತೆ ಎದ್ದು ನಿಂತಳು. ನನ್ನ ಪಕ್ಕದಲ್ಲಿದ್ದ ಕೋಣೆಯೊಳಕ್ಕೆ ಹೋದಳು. ಅವಳು ಕೋಣೆಯೊಳಕ್ಕೆ ಹೋಗುವಾಗ "ಹೋಗ್ತಿನಿ" ಅಂದ ಹಾಗೆ ಆಯ್ತು! ಆ ಕೋಣೆಯ ಲೈಟ್ ಆಫ್ ಆಯ್ತು. ನನಗೆ ಆಶ್ಚರ್ಯ ಆಯ್ತು.

ಆ ಕೋಣೆಯೊಳಕ್ಕೆ ಹೋಗುವಾಗ "ಹೋಗ್ತಿನಿ" ಅಂತಾ ಯಾಕೆ ಹೇಳಿದಳು? ನಾನು ಕೋಣೆಯೊಳಕ್ಕೆ ಬೆವರುತ್ತಾ, ಹೆದರುತ್ತಾ ಹೋಗಿ ಲೈಟ್ ಆನ್ ಮಾಡಿದೆ. ಗೋಡೆಗೆ ಈಗ ತಾನೆ ನೋಡಿದ ಹುಡುಗಿಯ ಫೋಟೋ ತೂಗು ಹಾಕಿತ್ತು. ಆದರೆ ಆ ಕೋಣೆಯಲ್ಲಿ ಯಾರೂ ಇರಲಿಲ್ಲ. ಅಯ್ಯೋ ಈಗ ತಾನೆ ನಾನು ಮಾತನಾಡಿದ ಹುಡುಗಿಯೇ ಅಲ್ಲವೇ ಇವಳು! ನಾನು ಬದುಕಿದೆಯಾ ಬಡ ಜೀವವೇ ಎಂದು ಕೊಳ್ಳುತ್ತಾ ಭಯದಿಂದ ನಡುಗುತ್ತಾ ಮನೆಯಿಂದ ಹೊರಕ್ಕೋಡಿದೆ.

ಲೇಖಕರು

ಗಣೇಶ

ಜಿನಿಕ್ಸ್ ಬ್ಲಾಗ್

ನಾನು ಸಾಫ್ಟವೇರ ಅಭಯ೦ತರ

ಅನಿಸಿಕೆಗಳು

ಸುನಿಲ ಜಯಪ್ರಕಾಶ (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 08/28/2007 - 13:53

ಬಹುಶಃ ಆ ತಂಗಿಯೇ ನಿಮ್ಮ ಮನದಲ್ಲಿ ನುಸುಳಿ ಆ ದಿನ ದಿವ್ಯಾಳ ಮನೆಗೆ ಹೋಗುವಂತೆ ಪ್ರೇರೇಪಿಸಿರಬೇಕು.

ಗಿರಿರಾಜ ಭಟ್ ಧ, 08/29/2007 - 14:54

ಕಥೆ ಚೆನ್ನಾಗಿದೆ...

lokesh ಧ, 02/04/2009 - 10:49

ಆ ಭಯಾನಕ ರಾತ್ರಿ!
ಕಥೆ ಚೆನ್ನಾಗಿದೆ
Lokesh

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಧ, 12/21/2011 - 11:03

Super Story ,,,,,,,,,,,,

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಧ, 12/21/2011 - 11:07

ಸೂಪರ್ ಸ್ಟೋರಿ ಫ್ರೆಂಡ್

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಧ, 12/21/2011 - 11:08

ಸೂಪರ್ ಸ್ಟೋರಿ ಫ್ರೆಂಡ್

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.