Skip to main content

ಸಂಸಾರದ ಸವಿ

ಇಂದ anjali n n
ಬರೆದಿದ್ದುNovember 2, 2011
9ಅನಿಸಿಕೆಗಳು

ನೀನು  ಅಂದ್ರೆ ನನಗೆ ತುಂಬ ಅಂದ್ರೆ ತುಂಬನೇ ಇಷ್ಟ, ನೀನಿಲ್ಲದೆ ನಾನು ಇರೋಕೆ ಆಗೊಲ್ಲ ಅಂತೆಲ್ಲ ಹೇಳಿದ್ರೆ ಪ್ರೀತಿ ತುಂಬ ಸಂಕುಚಿತ ಅನಿಸುತ್ತೆ, ಅದನ್ನು ಒಂದು ಸೀಮಿತ ಗಡಿಯೊಳಗೆ ಬಂಧಿಸಿಡಲು ನನಗೆ ಇಷ್ಟ ಇಲ್ಲ.ನೀವು ಪದೆ-ಪದೆ ಕೇಳ್ತಿದ್ರಿ, ನನ್ನಲ್ಲಿ ಏನು ಕಂಡು ಪ್ರೀತಿಸಿದೆ ಅಂತ;ತುಂಬ ಸಾರಿ ಯೋಚನೆ ಮಾಡಿದೆ, ಗೊತ್ತಾಗ್ಲಿಲ್ಲ! ನಿಮ್ಮ ಸಮಾಧಾನಕ್ಕಾಗಿ ನಿಮ್ಮ ನಗು ಇಷ್ಟ, ನಿಮ್ಮ ಮಾತು, ಪ್ರಾಮಾಣಿಕತೆ ಅಂತೆಲ್ಲ ದೊಡ್ಡ ಪಟ್ಟಿಯೇ ನಿಮ್ಮ ಮುಂದಿಟ್ಟೆ,ಆದ್ರೆ ಕಾರಣ ಗೊತ್ತಿಲ್ಲ ಅನ್ನುವುದು ಮಾತ್ರ ಸತ್ಯ!.
ಈ ಬದುಕಿನ ದಾರಿಯಲ್ಲಿ ಆಕಸ್ಮಿಕವಾಗಿ ಸಿಕ್ಕು, ಬದುಕಿನ ಉಳಿದ ಮಜಲುಗಳನ್ನು ಜೊತೆ-ಜೊತೆಯಾಗಿಯೇ ದಾಟಬೇಕೆಂದು ಒಪ್ಪಂದ ಮಾಡಿಕೊಂಡವರು ನಾವು ಅನ್ನೂದು ಮಾತ್ರ ಮರೆತಿಲ್ಲ ಗೆಳೆಯ! ನೀನು  ವಾಸ್ತವವಾದಿ ಆದ್ರೆ, ನಾನು ನನ್ನದೆ ಆದ ಕಲ್ಪನ ಲೋಕದಲ್ಲಿ ಭಾವನೆಗಳಿಗೆ ಬಣ್ಣ ಹಚ್ಚಿ ಬದುಕುತ್ತಿರುವವಳು....,
ಸುರಿಯುವ ಮಳೆಯಲ್ಲಿ ತುಸು ದೂರ ಆದ್ರೂ ನಿನ್ ಜೊತೆ ನಡೆಯಬೇಕು ಅಂದ್ರೆ ಬೇಡ ಮಳೆಯಲ್ಲಿ ನೆನೆದರೆ ನಿಂಗೆ ಶೀತ ಆಗುತ್ತೆ, ಜ್ವರ ಬರುತ್ತೆ ಅಂತಿಯಾ!     ಇಳಿಸಂಜೆ ಹೊತ್ತಲ್ಲಿ ಪಬ್ಲಿಕ್ ಪಾರ್ಕ್ ನ ಕಲ್ಬೆಂಚಿನ ಮೇಲೆ ಕೂತು ಚುರು-ಮುರಿ ತಿನ್ನೋನ ಅಂದ್ರೆ ಬೇಡ ಅಲ್ಲಿ ಸೊಳ್ಳೆ ಕಾಟ, ಚುರು-ಮುರಿ ಅಂತೂ ಬೇಡವೇ-ಬೇಡ ಮೊದ್ಲೆ ನಿಂಗೆ ಗ್ಯಾಸ್ಟ್ರಿಕ್ ಅಂತಿಯಾ! ಹೋಗ್ಲಿ ಕೈ ತುಂಬ ಬಳೆ ತೊಟ್ಟು ಜಣ್-ಜಣ  ಸದ್ದಿನಲ್ಲಿ ಸದ್ದಿಲ್ಲದೆ ಬರುವ ಹೊಸ-ಹೊಸ ಬಾವನೆಗಳಿಗೆ ಬಣ್ಣ ಹಚ್ಚುತ್ತಾ, ನಿನ್ನ ಹೆಜ್ಜೆ ಜೊತೆಗೆ ಹೆಜ್ಜೆ ಜೋಡಿಸೋಣ ಅಂದ್ರೆ ಅದೇನದು ಜಣ್-ಜಣ ಸದ್ದು, ಸಿಂಪಲಾಗಿ ಒಂದೊ-ಎರಡೋ ಬಳೆ ಹಾಕಬಾರದ ಅಂತೆ ಹೇಳುವ ನಿನ್ನ ವಾರೆನೋಟ ಬೇರೆ;
ಹೀಗೆ ಕಲ್ಪನೆ ಹಾಗೂ ವಾಸ್ತವತೆಯ ಸಂಘರ್ಷದಲ್ಲಿ ಎಷ್ಟೋ ಬಾರಿ ಮುಖ ತಿರುಗಿಸಿ ಮಲಗಿದರೂ ಬಹುಪಾಲು ಗೆಲ್ಲೋದು ವಾಸ್ತವತೆನೆ ಅಲ್ವಾ!
ಹಿಂದೆಲ್ಲ ಬಸ್ ಹತ್ತಿ ಕುಳಿತರೆ ಸಾಕು ಗಂಟೆಗೆ ಹತ್ತಾರು ಬಾರಿ ಕರೆಗಳು, ಮಿಸ್ಡ್ ಕಾಲ್ ಗಳು, ೫-೬ ಸಂದೇಶಗಳು ರವಾನೆಯಾಗ್ತಿದ್ವು, ಹುಷಾರು widow ಪಕ್ಕ ಕುಳಿತ್ತಿದ್ದಿಯಾ! widow close ಮಾಡು, ಕಿವಿಗೆ ಕಾಟನ್ ಇಟ್ಕೋ, ಶಾಲು ಮನೆಯಲ್ಲೆ ಮರೆತು ಬಂದ್ಯಾ? ಬರಿ ನಿಂದು ಇದೇ ಆಯ್ತು, ಆಹಾ! ಬಸ್ನಲ್ಲಿ ಬರುವ ಚಕ್ಕಲಿ-ಚಿಪ್ಸ್ ಅಂತ ಹಾಳ-ಮುಳ ತಿನ್ಬೇಡ, ನಿನ್ ದೇಹಕ್ಕೆ ಒಗ್ಗಲ್ಲ ಅಂತ ಪ್ರೀತಿ ಹೊಳೆ ಹರಿಸುತಿದ್ದೆ,
 ಈಗ ನಿನ್ನ value ಏನು ಅಂತ ನಂಗೆ ಚನ್ನಾಗಿ ಗೊತ್ತಾಗಿದೆ ನಿನ್ನ ನಿಬ್ಬಂಧನೆಗೆ ಒಳಪಟ್ಟ ಬದುಕು secure ಆಗಿತ್ತು, ಅಪ್ಪನ ಪ್ರೀತಿ-ಅಮ್ಮನ ಹಾರೈಕೆ, ಅಕ್ಕನ ಅಕ್ಕರೆ ಇದ್ಯಾವುದು ನಿನ್ನ ನಿಬಂಧನೆಗೆ ಒಳಪಟ್ಟ ಬದುಕಿಗೆ ಸಮನಲ್ಲ.
please,   ತಪ್ಪು-ಒಪ್ಪುಗಳ ವಿಮರ್ಶೆ ಬೇಡ, ಅಪರಾಧಿ ನಾನು! ತೀರ್ಪುಗಾರ ನೀನು! ಕೋರಿಕೆಯೊಂದೆ....., ಸರಸ-ವಿರಸದಿ ಕಳೆದ ಆ ಸಂಸಾರದ ಸವಿಯ ಜೀವನದುದ್ದಕ್ಕೂ ಕರುಣಿಸು ......, ಕರುಣಿಸುತ್ತಿಯಾ ಅಲ್ವಾ!

ಲೇಖಕರು

anjali n n

ಕೇದಿಗೆ ಪ್ರಿಯೆ

o

ಅನಿಸಿಕೆಗಳು

venkatb83 ಗುರು, 11/03/2011 - 17:38

ಅಂಜಲಿ ಅವ್ರೆ ಬರಹ ಚೆನ್ನಾಗಿದೆ.
ಕಲ್ಪನೆ ಹಾಗೂ ವಾಸ್ತವತೆಯ ಸಂಘರ್ಷದಲ್ಲಿ ಎಷ್ಟೋ ಬಾರಿ ಮುಖ ತಿರುಗಿಸಿ ಮಲಗಿದರೂ ಬಹುಪಾಲು ಗೆಲ್ಲೋದು ವಾಸ್ತವತೆನೆ ಅಲ್ವಾ!
ಪ್ರಶ್ನೆಯಲ್ಲೇ  ಉತ್ತರವೂ ಇದೆಯಲ್ಲ!!!

  'ಭಾವನಾತ್ಮಕ ಬರಹಗಳನ್ನ' ಬಹು ಚೆನ್ನಾಗಿ ನೀವು ಬರೆಯುತ್ತೀರಾ.   ಆಶೆ-ಆಕಾಕ್ನ್ಷೆ-ನಿರೀಕ್ಷೆ-ನಿರಾಸೆ -ಕಾತುರ - ಕಾಳಜಿ-ತಳಮಳ ಎಲ್ಲವೂ ನಿಮ್ಮ ಬರಹದಲ್ಲಿ ಸೇರಿಸಿದ್ದು ನನಗೆ ಇಷ್ಟವಾಯ್ತು.
ನಿಮ್ಮ ಬರಹ ಕೃಷಿ ನಿರ್ವಿಘ್ನವಾಗಿ ಮುಂದುವರೆಯಲಿ...
ನಿಮ್ಮ ಬರಹಗಳು ಇಲ್ಲಿಯೂ WWW.SAMPADA .NET   ,   ಬಂದರೆ ಚೆನ್ನ  ಅಂತ ನನ  ಅನಿಸಿಕೆ.
ಕನ್ನಡ ರಾಜ್ಯೋತ್ಸವದ ಶುಭಾಶಯಗಳು...

anjali n n ಶುಕ್ರ, 11/04/2011 - 10:21

ತಮ್ಮ ಪ್ರೋತ್ಸಾಹ ಸದಾ ಇರಲಿ......., ಧನ್ಯವಾದಗಳು

venkatb83 ಗುರು, 11/03/2011 - 17:39
P.D.Nayaka ಧ, 11/09/2011 - 18:05

ನಿಮ್ಮ ಮನಿಸ್ಸಿನ ಬಾವನೆಗಳನ್ನು ತುಂಬ ಚೆನ್ನಾಗಿ ಹೊರಗೆಡಿವಿದ್ದಿರಿ ಅದನ್ನು ಓದಿದರೆ ಮನಮುಟ್ಟುವಂತಿದೆ.ಮತ್ತೊಮ್ಮೆ ಮುಂಗಾರು ಮಳೆ ಸಿನೆಮಾ ನೆನಪಿಸ್ತು ನನಗೆ ಈ ನಿಮ್ಮ ಬರಹ.ಇಗೆ ಮುಂದುವರಿಸಿ ನಿಮ್ಮ ಬರಹ.                    ದನ್ಯವಾದಗಳು.

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಧ, 11/09/2011 - 18:55

nivu nimma bavanegalige kalpanikavagi banna hachi kushi padtira,nim jeevanadalli iru aa gelaya ean artha madikondidane anta keli plz.aa nim gelaya nim bavanegala prapanchake banna tumbi hejje haku vyakti agidra prakise madi madam

ಸ್ಪಂದನ ಶುಕ್ರ, 12/02/2011 - 09:55

ನಿಮ್ಮ ಬರಹ ಎಷ್ಟು ಚೆನ್ನಾಗಿದೆಯೋ ಅಷ್ಟೇ ಸತ್ಯ ಅಂಜಲಿಯವರೆ.. ಬಹಳಷ್ಟು ಮಂದಿಯ ಬದುಕಲ್ಲಿ ಇಂತಹ ಅನುಭವ ಆಗಿರುತ್ತೆ. ನಿಮಗೆ ಶುಭವಾಗಲಿ

belstaff jackets (ಪ್ರಮಾಣಿಸಲ್ಪಟ್ಟಿಲ್ಲ.) ಸೋಮ, 12/12/2011 - 08:32

When visiting your belstaff jackets household vet, you should certainly belstaff bags get your entire pets shots modern, and it’s best belstaff jackets to obtain a new copy with the pet’s healthcare belstaff jackets records. Store those records belstaff uk within your glove container, along in belstaff uk your car’s registration mark and insurance belstaff jackets policy papers. belstaff jackets 2011Since a pets’ health north face and safety is regarding great importance mulberry bags to your, be certain to enquire about mulberry bags sale the advantages and drawbacks of doggie mulberry handbags tranquilizers as well as motion mulberry bags outlet health issues medications to enable you to make mulberry handbags an educated decision how you desire to proceed. cyh12-12

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.