Skip to main content

ಹೊಸ್ತಿಲು / ಹೊಸಿಲು / ಹೊಸಲು

ಬರೆದಿದ್ದುOctober 29, 2017

ಅರ್ಥ: ಮನೆ ಅಥವಾ ಕೋಣೆಯ / ರೂಮಿನ ಬಾಗಿಲಿನ ಕೆಳಗೆ ಇರುವ ಕಟ್ಟಿಗೆ ಅಥವಾ ಕಲ್ಲಿನ ಪಟ್ಟಿ. ಬಾಗಿಲ ಚೌಕಟ್ಟಿನ ಕೆಳಗಿನ ಪಟ್ಟಿ. ಮನೆಯ ಒಳಗೆ ಅಥವಾ ಹೊರಗೆ ಹೋಗಲು ಇದನ್ನು ದಾಟಿ ಹೋಗಬೇಕು.

ಪೊಸಂ + ತಿಲ್ = ಪೊಸಂತಿಲು ಅಥವಾ ಪೊಸ + ತಿಲು = ಪೊಸತಿಲು ಹೊಸ + ತಿಲು = ಹೊಸತಿಲು

ಅಂದರೆ ಮನೆಯ ಪ್ರಾರಂಭದ ಭಾಗ ಎಂದರ್ಥ .

ಇದಕ್ಕೆ ಪ್ರಾರಂಭದಲ್ಲಿರುವ ಅನ್ನುವ ಅರ್ಥ ಕೂಡ ಇದೆ. ಉದಾ: ಯೌವನದ ಹೊಸ್ತಿಲಲ್ಲಿ ಅಥವಾ ವೃದ್ದಾಪ್ಯದ ಹೊಸ್ತಿಲಲ್ಲಿ

ಉದಾಹರಣೆ:

1. ಮನೆಯ ಹೊಸ್ತಿಲು / ಹೊಸಿಲು ದಾಟಿ ಹೋದ ಆಕೆ ಮತ್ತೆ ಬರಲಿಲ್ಲ.

ಸುಧಾ / ಸುಧೆ

ಬರೆದಿದ್ದುOctober 21, 2017

ಅರ್ಥ 1

ಸುಧಾ ಎಂದರೆ ಹೂವಿನ ಮಕರಂದ, ಅಮೃತ ಎಂದರ್ಥ. ಅಂದರೆ ಹೂವಿನಲ್ಲಿ ಕೀಟಗಳನ್ನು ಆಕರ್ಷಿಸಲು ಸೂಸುವ ರಸ. ಸಂಸ್ಕೃತ ಮೂಲದ ಸುಧಾ ಕನ್ನಡದಲ್ಲಿ ಸುಧೆ ಎಂಬ ರೂಪದಲ್ಲಿ ಕೂಡಾ ಇದೆ.

ಉದಾಹರಣೆ:

  • ಎಲ್ಲರಿಗೂ ಅಧ್ಯಾತ್ಮದ ಸುಧೆ ಹಂಚಿದ ಹರಿದಾಸರು.
  • ಜನಪ್ರಿಯ ಗಾಯಕ ಅಮೋಘ ಅವರ ಗಾಯನ ಸುಧೆ ಸವಿಯಲು ಕಾತರದಿಂದ ಕಾಯುತ್ತಿದ್ದೇವೆ.

ಇದೇ ಅರ್ಥದ ಪದಗಳು: 

ಮಕರಂದ, ಅಮೃತ, ಸುಧೆ

ಮೂಲ:

ಸಂಸ್ಕೃತ

ಬಳಕೆ:

ಈ ಪದ ಬರಹಗಳಲ್ಲಿ ಕಾಣ ಸಿಗುತ್ತದೆ.

ಈ ಪದ ಆಧಾರಿತ ಪದಗಳು:

ದೀಪಾವಳಿ

ಬರೆದಿದ್ದುOctober 21, 2017

ಅರ್ಥ:

ದೀಪ ಎಂದರೆ ಬೆಳಕನ್ನು ಕೊಡುವ ವಸ್ತು. ಅದು ಎಣ್ಣೆಯ ದೀಪ ಇರಬಹುದು. ಅಥವಾ ವಿದ್ಯುತ್ ದೀಪ ಸಹ ಇರಬಹುದು. ಎಲ್.ಇ.ಡಿ ದೀಪ ಸಹ ಆಗಿರಬಹುದು.
ಅವಲೀ ಎಂದರೆ ಸಂಸ್ಕೃತದಲ್ಲಿ ಸಾಲು ಎಂದರ್ಥ. ಸಾಲು ಸಾಲಾಗಿ ಹಚ್ಚಿದ ದೀಪಗಳನ್ನು ದೀಪ +  ಅವಲೀ = ದೀಪಾವಲೀ ಅನ್ನುತ್ತಾರೆ. ಹಿಂದೂ ಸಂಸ್ಕೃತಿಯಲ್ಲಿ ನರಕ ಚತುರ್ದಶಿ/ ಅಮಾವಾಸ್ಯೆ /  ಬಲಿ ಪಾಡ್ಯಮಿ ಈ ಮೂರು ದಿನಗಳನ್ನು ಸಾಲು ದೀಪ ಹಚ್ಚಿ ಇನ್ನಿತರ ಪೂಜೆ ಮೂಲಕ ಆಚರಿಸುತ್ತಾರೆ. ಅದನ್ನು ದೀಪಾವಲೀ ಹಬ್ಬ ಎಂದು ಕರೆಯುತ್ತಾರೆ. ಈ ದೀಪಾವಲೀ ಪದವು ಕನ್ನಡದಲ್ಲಿ ದೀಪಾವಳಿ ಎಂದಾಗಿದೆ. ಭಾರತ ದೇಶದಲ್ಲಿ ಹಿಂದೂಗಳು ಆಚರಿಸುವ ಅತಿ ಮುಖ್ಯ ಹಬ್ಬ.

ಉದಾಹರಣೆ:

ಮಳೆ 'ಬಿದ್ದಾಗ'...

ಇಂದ SaumyaSimha
ಬರೆದಿದ್ದುAugust 13, 2017
noಅನಿಸಿಕೆ

ಮೊನ್ನೆ ಮೊನ್ನೆವೆರೆಗೂ ಕೊತ - ಕೊತ ಕುದಿಯುತ್ತಿದ್ದ ಭೂಮಿತಾಯಿ ಈಗ ತಾನೇ ಜಳಕ ಶುರುವಿಟ್ಟುಕೊಂಡಿದ್ದಾಳೆ ! ಇನ್ನೆಷ್ಟು ಹೊತ್ತು ಅವಳ ಆಟ ವರುಣನೊಡನೆಎಂಬ ಯೋಚನಾಲಹರಿಯನ್ನು ಸ್ವಲ್ಪ ಬದಿಗೊತ್ತಿ ವರ್ಷಧಾರೆಯೊಂದಿಗಿನ ನಮ್ಮಒಡನಾಟವನ್ನು ತೆರೆದುಕೊಳ್ಳುವ ಸಮಯವಿದು. ನೀನ್ಯಾರೋ...

ಫೇಸ್ ಬುಕ್ ಸ್ನೇಹ

ಇಂದ Nandini nanda
ಬರೆದಿದ್ದುAugust 4, 2017
2ಅನಿಸಿಕೆಗಳು

ಯಾರ ಗೊಡವೆಗೂ ಹೋಗದ ಅವಳು ತಾನಾಯ್ತು ತನ್ನ ಕೆಲಸ ಆಯಿತು ಅಂತ ಇದ್ದ ಹುಡುಗಿಗೆ ಅವತ್ತು ಅವಳ ಅದೃಷ್ಟವೋ ದುರಾದ್ರಷ್ಟವೋ ಎಂಬಂತೆ ಒಂದು ಫ್ರೆಂಡ್ ರಿಕ್ವೆಸ್ಟ್ ಬಂದಿತ್ತು...ಅದನ್ನ ಓಪನ್ ಮಾಡಿ ರಿಕ್ವೆಸ್ಟ್ accept ಮಾಡಿದ್ದಾಯಿತು...ಆ ಕಡೆಯಿಂದ ಸಂದೇಶಗಳ ಸುರಿಮಳೆ ..ನಿಮ್ಮ ಹೆಸರು ಏನು..ನೀವು ಹುಡುಗಾ ನಾ ಹುಡುಗೀನಾ ಅಂತಾ..ನ

ನಮ್ಮ ನಮ್ಮಲ್ಲೇ ಈ ಕಚ್ಚಾಟ ಬೇಕೇ..?

ಬರೆದಿದ್ದುJuly 30, 2017
2ಅನಿಸಿಕೆಗಳು

ಹಿಂದೂ ಧರ್ಮದವರು ಎಂದು ಮೇಲೆ ಮಾತ್ರ ಹೇಳಿಕೊಳ್ಳುತ್ತಾ ಈಗ ದೈನಂದಿನ ನಡೆಯುತ್ತಿರುವಂತೆ ಒಳಗೊಳಗೇ ಸಣ್ಣ ಸಣ್ಣ ಜಾತಿ ಪಂಥ ಗಳೂ ನಮ್ಮದು ಬೇರೆಯೇ ಧರ್ಮ ಇದರಿಂದ ಬೇರೆ ಎಂದು ಪರಿಗಣಿಸಿ ಎಂದು ಕಚ್ಚಾಡುತ್ತಿದ್ದರೆ ಅಂತಹಾ ಸಮಯದಲ್ಲಿ ಪಟ್ಟಭದ್ರ ಹಿತಾಸಕ್ತಿ ಉಳ್ಳವರು ಇಂತಹಾ ಸುವರ್ಣಾವಕಾಶವನ್ನು ಸದುಪಯೋಗ ಪಡಿ

ಅಮ್ಮಾ ನೀ ಡಿಫೆರೆಂಟ್

ಇಂದ Madhav Kulkarni
ಬರೆದಿದ್ದುJune 30, 2017
1ಅನಿಸಿಕೆ

ನಾನು ಇಡಿಯಾಗಿ ನೆಂದ
ಜೋರು ಮಳೆಯ ರಾತ್ರಿ

ಮನೆಯೊಳಗೆ ಕಾಲಿಡುತ್ತಲೆ
ಕೇಳಿದ ಅಣ್ಣ "ಒಯ್ಯಬಾರದಿತ್ತೇ ಛತ್ರಿ"

ದಾವಣಿ ಸರಿಪಡಿಸುತ್ತಾ ಬಂದು
ಪಿಸುಗುಟ್ಟಿದಳು ತಂಗಿ
“ಮಳೆ ನಿಲ್ಲುವವರೆಗೆ ತಡೆದು
 ಬರಬಾರದಿತ್ತೇ ಕಮಂಗಿ"

ಗುಬ್ಬಿಯಂಥ ಜೀವಾ

ಇಂದ Madhav Kulkarni
ಬರೆದಿದ್ದುJune 30, 2017
noಅನಿಸಿಕೆ

ಗುಬ್ಬಿಯಂಥ ಜೀವಾ
(ಮರಾಠಿ ಕವಿ ಬರೇದ “ದೂರ ದೇಶಿ ಗೇಲಾ ಬಾಬಾ" ದ ನನ್ನ ಕನ್ನಡ ಅವತರಣಿಕೆ)
 
ದೂರ ದೆಶಕ್ಕ ಹೊಗ್ಯಾನ ಅಪ್ಪಾ
ನೌಕರಿಗೆ ಹೊಗ್ಯಾಳ ಅವ್ವಾ
ಮನ್ಯಾಗ ಯಾರೂ ಇಲ್ಲಾ
ಕಣ್ಣೀರು ಕಪಾಳ ದಾಟಿ ತುಟಿಗೆ ಬಂದಾವ
ಮನ್ಯಾಗ ಯಾರೂ ಇಲ್ಲಾ
 
ಗುಬ್ಬಿಯಂಥ ಜೀವಾ
ಒದ್ದ್ಯಾಡಿ ಹಾರಾಡಿ ಸುಸ್ತಾದರೂ