praveen.kulkarni
ಸದಸ್ಯರು
5 ವರ್ಷಗಳು 9 ತಿಂಗಳುಪ್ರವೀಣ್.ಎಸ್.
ಕುಲಕರ್ಣಿ ಚಿತ್ತಾಪುರ
ನಾನು ಬಿಸಿಲ ನಗರಿ ಗುಲಬರ್ಗಾದ ಚಿತ್ತಾಪುರದವನಾದರು ಎಲ್ಲರಿಗೂ ತಂಪೆರೆಯುವ ಸ್ವಭಾವದವನು.ಬರೆಯೋ ಹುಚ್ಚು ಹತ್ತಿ ಹತ್ತು ಹನ್ನೆರಡು ವರ್ಷವಾಯಿತು.ವಿಜಯ ಕರ್ನಾಟಕ ಹಾಗು ರಾಯಚೂರ ವಾಣಿ ಪತ್ರಿಕೆಯಲ್ಲಿ ನಾ ಬರೆದ ಕೆಲವು ಕವನಗಳು ಪ್ರಕಟವಾಗಿವೆ. ರಾಯಚೂರ ಆಕಾಶವಾಣಿಯಲ್ಲಿ ಹಲವು ಬಾರಿ ಕವನವಾಚನ,ನಾಟಕಗಳನ್ನು ಮಾಡಿದ್ದೇನೆ.ಹರಿದಾಸ ಹವ್ಯಾಸಿ ಕಲಾವಿದರ ನಾಟಕ ಸಂಘದವರಲ್ಲಿ ನಾನು ಒಬ್ಬ.ವಿಜಯದಾಸರು,ಗೋಪಾಲದಾಸರು,ಪ್ರಾಣೇಶದಾಸರು ಹೀಗೆ ಹಲವು ದಾಸರ ನಾಟಕಗಳನ್ನು ರಾಯಚೂರ ಜಿಲ್ಲೆಯ ಹಲವು ಕಡೆ ಮಾಡಿದ್ದೇವೆ.ಒಂದೆರಡು ಕನ್ನಡ ಆಲ್ಬಮ್ ಗೆ ಹಾಡು ಬರೆದಿದ್ದೇನೆ.
ತುಂಬಾ ಭಾವ ಜೀವಿ.ಕನಸುಗಳೆಂದರೆ ತುಂಬಾ ಪ್ರೀತಿ.ಕನ್ನಡವೆಂದರೆ ಅಚ್ಚುಮೆಚ್ಚು.ಆತ್ಮೀಯ ಸ್ನೇಹಿತರೊಂದಿಗೆ ಮಾತ್ರ ಜಾಸ್ತಿ ಮಾತಾಡ್ತೀನಿ,ಮಾತು ಕಮ್ಮಿ ಮೌನ ಜಾಸ್ತಿ.ದೇವರನ್ನು ಅತಿಯಾಗಿ ನಂಬುವೆ.ಮಳೆಹನಿ,ರಾತ್ರಿ .ಚುಕ್ಕಿಗಳು ನನಗೆ ಇಷ್ಟ .ನನಗೆ ಬರೆಯೋವಾಗ ಈ ಇರುಳು ತುಂಬಾ ಪ್ರಶಸ್ತವೆನಿಸುತ್ತದೆ.ಇನ್ನು ಚುಕ್ಕಿ ಎಂಬುದು ನನಗೆ ಅತಿ ಇಷ್ಟವಾದುದು.ಅದು ನನ್ನ ಹೆಸರಿನೊಂದಿಗೆ ಸದಾ ಇರಬೇಕು.ಪ್ರತಾಪ್ ಸಿಂಹ,ಸುಧಾ ಮೂರ್ತಿ,ಬರಗೂರು ಮುಂತಾದವರ ಬರವಣಿಗೆ ಇಷ್ಟ.ಯಾವುದೇ ಕವನ ಲೇಖನ ಇಷ್ಟವಾದಲ್ಲಿ ಅದನ್ನು ಮನಸಾರೆ ಹೊಗಳಲು ತುಂಬಾ ಇಷ್ಟ.ಇನ್ನೂ ನನ್ನ ಬಗ್ಗೆ ತಿಳಿದುಕೊಳ್ಳಲು ನನ್ನೊಂದಿಗೆ ಸ್ನೇಹಿತರಾಗಿ.ಜಗತ್ತಲ್ಲಿ ಸ್ನೇಹ ಎಂದೆಂದೂ ಅಮರ.......ನಿಮ್ಮ
..ಚುಕ್ಕಿ
ಚಿತ್ತಾಪುರ ಚುಕ್ಕೀಸ್
ಬರೆಯುವುದು,ಹಾಡುವುದು,ಓದುವುದು,ಟಿವಿ,ಸಿನಿಮಾ ನೋಡುವುದು
ಹಲವು
ಗಾಳಿಪಟದ ಕವಿತೆ ಕವಿತೆ,ಉಪೇಂದ್ರದ ಏನಿಲ್ಲ ಏನಿಲ್ಲ,ಎಂ.ಡಿ.ಪಲ್ಲವಿಯ ಹಿಂದ ನೋಡದ,ರಘು ದಿಕ್ಷಿತ್ ಅವರ ನೀನೆ ಬೇಕು,ಗುಡುಗುಡಿಯ ಸೇದಿ ನೋಡು ಇವು ನಾ ಮರೆಯದ ಹಾಡುಗಳು..ದ ರಾ ಬೇಂದ್ರೆ ಅವರ ಅನೇಕ ಹಾಡುಗಳು ನನಗೆ ಹುಚ್ಚು ಹಿಡಿಸುತ್ತವೆ.
ಹಲವು
ಕ್ರಿಕೆಟ್ ,ಚೆಸ್
ಗೋಬಿ ಮಂಚೂರಿ,ಬದನೇಕಾಯಿ ತುಂಬುಗಾಯಿ,
sampada.net,vismayanagari.com,chukkigoodu.blogspot.in
ಬೆತ್ತಲೆ ಜಗತ್ತು,ತೂಫಾನ್ ಮೇಲ್,