ತ್ರಿನೇತ್ರ
ಸದಸ್ಯರು
6 ವರ್ಷಗಳುತ್ರಿನೇತ್ರ
ಶಿವ
ನಾನು ಹುಟ್ಟು ಕನ್ನಡಿಗ ಓದಿ ಬೆಳೆದಿದ್ದು ಬೆಂಗಳೂರಿನಿಂದ ಮೈಸೂರಿನವರೆಗೂ ವಿವಿಧ ಊರುಗಳಲ್ಲಿ. ವೃತ್ತಿಗಾಗಿ ಅಲೆದದ್ದು ಬೆಂಗಳೂರಿನಿಂದ ಕೊಡಗಿನವರೆಗೆ ನಂತರ ರಾಷ್ಟ್ರದ ರಾಜಧಾನಿ ದೆಹಲಿ ಹಾಗೊ ಅದರ ಸುತ್ತಲಿನ ಹರ್ಯಾಣಾ ಗಳಲ್ಲಿ ೨೧ ವರ್ಷ ಸೇವೆ ಸಲ್ಲಿಸಿ ಮತ್ತೆ ತಾಯ್ನಾಡಿನ ರಾಜಧಾನಿ ಬೆಂಗಳೂರಿಗೆ ಬಂದು ನೆಲೆಸಿರುವೆ. ಆದರೂ ಕನ್ನಡ ಮರೆತಿಲ್ಲ ಮರೆಯುವಂತಿಲ್ಲ. ಕನ್ನಡದ ಯಾವುದೇ ಲೇಖನ ಕಥೆ ಕವಿತೆ ಇತ್ಯಾದಿ ಓದುವುದು ಹಿಂದಿನ ಅಭ್ಯಾಸ. ಸಮಯ ಸಿಕ್ಕಾಗ ಏನಾದರೂ ಚಿಕ್ಕ ಪುಟ್ಟದ್ದು ಬರೆವುದು ಇತ್ತೀಚಿಗೆ ಬೆಳೆಸಿಕೊಂಡ ಹವ್ಯಾಸ ಹಾಗಾಗಿ ಈ ವಿಸ್ಮಯನಗರಿಗೆ ಪ್ರವೇಶ...!
ನಾವಿರೋದೇ ಹೀಗೆ...!
ಮೇಲೆ ತಿಳಿಸಿರುವಂತೆ ಸಂಗೀತ ಸಿನಿಮಾ ಓದು ಇತ್ಯಾದಿ ಅಲ್ಲದೇ ಜಲವರ್ಣ ಚಿತ್ರಗಾರಿಕೆಯಲ್ಲಿ ಬಹಳ ಇಚ್ಛೆ ಇದೆ. ಸಣ್ಣ ಪುಟ್ಟ ಕವನ ಕಥೆ ಲೇಖನಗಳನ್ನು ಬರೆಯುವುದು ಚಿಕ್ಕಂದಿನಿಂದಲೂ ಮನದೊಳಗೇ ಹುದುಗಿದ್ದ ಆದರೆ ಇತ್ತೀಚಿಗೆ ಹೊರಗೆಡುವುತ್ತಿರುವ ಒಂದು ಹವ್ಯಾಸ. ಇದುವರೆಗೂ ದೇಶದ ಬಹಳಷ್ಟು ಸ್ಥಳಗಳನ್ನು ಸುತ್ತಿ ನೋಡಿದ್ದೇನೆ ಇನ್ನು ವಿದೇಶ ಸುತ್ತಿಬರಬೇಕೆಂಬ ಪ್ರಭಲ ಇಚ್ಛೆಯೂ ಇದೆ. ಸಮಯ ಸಿಕ್ಕಾಗ ಅಲ್ಲಿ ಇಲ್ಲಿ ಸುತ್ತುವ ಪ್ರವಾಸವೂ ನನ್ನ ಹವ್ಯಾಸಗಳಲ್ಲೊಂದು.
ಪುಟ್ಟಣ್ಣ ಕಣಗಾಲ್ ಅಂತಹವರ ನಿರ್ಧೇಶನದ ಸುಶ್ರಾವ್ಯ ಸಾಹಿತ್ಯ ಸಂಗೀತ ಹೊಂದಿದ ಹಳೇ ಕನ್ನಡ ಚಿತ್ರಗಳು, ಹಿಂದೀ ಮಾಚಿಸ್, ಹಂ ದಿಲ್ ದೇಚುಕೇ ಸನಂ,ಅ ವೆಡ್ನೆಸ್ಡೇ, ಸರ್ಫರೋಶ್, ಕ್ರಾಂತಿವೀರ್, ಪರಿಂದಾ, ಕಲಿಯುಗ್ ಇಂತಹಾ ಕ್ಲಾಸಿಕ್ ಸಿನೆಮಾಗಳು, ಆಂಗ್ಲ ಕ್ಲಾಸಿಕ್ ಚಿತ್ರಗಳಾದ ಬೆನ್-ಹರ್, ಟೆನ್ ಕಮಾಂಡ್ಮೆಂಟ್ಸ್, ಓಮರ್ ಮುಕ್ತಾರ್, ಟೈಟಾನಿಕ್, ಜುರಾಸಿಕ್ ಪಾರ್ಕ್, ಕ್ಲಿಫ್ ಹ್ಯಾಂಗರ್,ಬ್ಲೂ ಲಗೂನ್, ಬುಲೆಟ್ ಟ್ರೈನ್, ಘೋಸ್ಟ್ ಇನ್ ದ ಶೆಲ್, ಟರ್ಮಿನೇಟರ್, ಗಾಡ್ಸ್ ಮಸ್ಟ್ ಬಿ ಕ್ರೇಜೀ, ಮತ್ತು ವೈಜ್ಞಾನಿಕ ಹಾಗೂ ಕುತೂಹಲ ಕೆರಳಿಸುವಂತಾ ಕಥೆ ಆಧಾರಿತ ಚಿತ್ರಗಳು ಬಹಳ ಮನಸ್ಸಿಗೆ ಹಿಡಿಸಿವೆ ಹಾಗೂ ಇಂದಿನ ಶೃಜನಶೀಲ ಎಂದು ಕರೆಯಬಹುದಾದ ವಿನೂತನ, ನೈಜತೆಗೆ ಅತೀ ಸಮೀಪ ಎನ್ನಿಸುವಂತಹಾ ಚಿತ್ರಗಳು ಹಾಗೂ ಕೊನೆವರೆಗೂ ಕುತೂಹಲ ಉಳಿಸಿಕೊಂಡು ಸೂಕ್ತ ಕ್ಲೈಮಾಕ್ಸ್ ಇರುವಂತಾ ಉಪೇಂದ್ರರ "A", ಆಪ್ತ ಮಿತ್ರ, ದಂತಾ ಚಿತ್ರಗಳು ಮೆಚ್ಚುಗೆಯಾಗುತ್ತವೆ.
ಕರ್ನಾಟಕ ಮತ್ತು ಹಿಂದೂಸ್ಥಾನೀ ಸಂಗೀತ, ಲಘು ಸಂಗೀತ, ಜನಪದ, ಭಕ್ತಿಗೀತೆಗಳು ಹಳೇ ಕನ್ನಡ ಮತ್ತು ಹಿಂದೀ ಚಿತ್ರಗಳ ಭಾವಪೂರಿತ ಹಾಡುಗಳು ಮತ್ತು ಪ್ರಪಂಚದ ಯಾವದೇ ರೀತಿಯ /ಭಾಷೆಯ ಮನಸ್ಸಿಗೆ ಹಿತ ನೀಡುವಂತಾ ಮೃಧು ಮಧುರ ಸಂಗೀತ... ಇತ್ತೀಚಿನ ಸಿನಿಮಾ ಗೀತೆಗಳಾದ "ಮಳೆಬರುವಾಹಾಗಿದೆ..." "ಅನಿಸುತಿದೆ ಯಾಕೋ ಇಂದು..." ಈ ರೀತಿಯ ಸಾಹಿತ್ಯ ಸಂಗೀತ ... ಇತ್ಯಾದಿ
ಕನ್ನಡ ಚ್ಯಾನಲ್ ಗಳಾದ ಈ-ಟೀವಿ - ಕಾರ್ಯಕ್ರಮ "ಎದೆತುಂಬಿ ಹಾಡುವೆನು", ಉದಯ, ಟೀವೀ-೯, ದೂರಧರ್ಶನ, NDTV CNBC National Geographic,Discovery,History, Fashion Travel etc...
ಕ್ರಿಕೆಟ್ ಅಂದರೆ ಆಗೋಲ್ಲಾ, ಹಿಂದೆ ಆಡಿದ್ದೆ ಈಗ ಆಡುವುದೂ ಇಲ್ಲ ನೋಡುವುದೂ ಇಲ್ಲ... ವಾಲಿಬಾಲ್, ಫುಟ್ ಬಾಲ್, ಒಳಾಂಗಣ ಕ್ರೀಡೆಗಳಾದ ಕೇರಮ್, ಚೆಸ್ಸ್, ಷಟಲ್,ಟೆನ್ನಿಸ್ ಚೆನ್ನ.
ಕರ್ನಾಟಕದ ಅನ್ನ ಸಾಂಬಾರ್, ಮಲ್ಲಿಗೆ ಇಡ್ಲಿ, ವಡೆ, ಬೆಣ್ಣೆ ಮಸಾಲೆ ದೋಸೆ, ರಸಂ, ರಾಗಿಮುದ್ದೆ ಅದಕ್ಕೆ ಹೊಂದುವ ಹುಳಿ ಪಲ್ಯಗಳು ಇವುಗಳಂತೂ ನನ್ನ ಜೀವನ ಶೈಲಿಯಲ್ಲಿ ಅಳವಡಿಸಿಕೊಂಡು ಒಗ್ಗಿರುವ ಪ್ರಿಯ ಭೋಜನಗಳು. ಹಳ್ಳಿಗಳಲ್ಲಿ ಮಾಡುವ ಸೊಪ್ಪಿನ ಬಸ್ ಸಾರು ಮತ್ತು ಉಪ್ಪುಸಾರು ಅಂದರೆ ಪರಮಪ್ರಿಯ.ಇವಷ್ಟೇ ಅಲ್ಲದೇ ಎಲ್ಲಾ ದೇಶದ ಎಲ್ಲಾ ರೀತಿಯ ವಿಧವಿಧವಾದ ವ್ಯಂಜನಗಳನ್ನು ರುಚಿ ನೋಡಬಯಸುತ್ತೇನೆ. ಬರೀ ಮಾಡಿದ್ದನ್ನು ಕೂತು ತಿಂದು ಸಲಹೆ ಕೊಡುವ ಜಾತಿಗೆ ಸೇರಿದವನಲ್ಲ ನಾನು ಬದಲಾಗಿ ಕೆಲವಾರು ಮುಖ್ಯ ಅಡುಗೆ ಗಳನ್ನು ರುಚಿಯಾಗಿ ಮಾಡುವುದರಲ್ಲಿ ಪ್ರಾವೀಣ್ಯತೆ ಕೂಡಾ ಇದೆ ಹಾಗೂ ಈ ವಿಚಾರದಲ್ಲಿ ಹೊಸಹೊಸ ಪ್ರಯೋಗ ಮಾಡಿ ನನ್ನದೇ ರೀತಿಯ ಹೊಸರುಚಿ ಕಂಡುಕೊಳ್ಳುವುದು ನನಗೆ ಚೆನ್ನಾಗಿ ಕಾಣುತ್ತೆ.
ಯಾವುದೇ ಆರೋಗ್ಯ ಮತ್ತು ಜೀವನದ ಇತರೆ ಸಂಬಂಧಪಟ್ಟ ವಿಚಾರಗಳಿಗಾಗಿ : http://doctor.ndtv.com/
ಕರ್ನಾಟಕದಲ್ಲಿನ ವಾರ್ತೆ ವಿಚಾರಗಳಿಗಾಗಿ - http://www.karnataka.com/;
ವೃ ತ್ತಿಗೆ ಸಂಭಂದಪಟ್ಟಂತೆ ಉಪಯೋಗ ಬರುವ ಕೆಲವು ಸೈಟ್ ಗಳು, ಮನೋರಂಜನೆಗಾಗಿ ಕೆಲವು ಬ್ಲಾಗ್ ಗಳು, wikimapia, wikipedia, Google Earth ಇತ್ಯಾದಿ.
ಹಿಂದೆ ಓದಿದ್ದ ಬದುಕಲು ಕಲಿಯಿರಿ, ವೈಜ್ಞಾನಿಕ ಮತ್ತು ಮನಸ್ಸಿಗೆ ಯೋಚಿಸಲು ಟಾನಿಕ್ ನೀಡುವಂತಹಾ ಯಾವುದೇ ಉತ್ತಮ ಕಥೆ ಕಾದಂಬರಿಗಳು ಉದಾಹರಣೆಗೆ ಯಯಾತಿ, ವಿಜಯ್ ಸಾಸನೂರ್ ಅವರು ಬರೆಯುವ ಕಥೆಗಳು, ಎಂಡಮೂರಿ ವೀರೇಂದ್ರನಾಥ್ ಅವರ ತುಳಸಿ, ತುಳಸೀದಳ, ದುಡ್ಡು ದುಡ್ಡು, ಕೆಲವು ಪತ್ತೇದಾರಿ ಕಥೆಗಳು ಲಘು ಕವನ ಲೇಖನಗಳು ಇತ್ಯಾದಿ ಅಲ್ಲದೇ ಇದೇರೀತಿಯ ಹಿಂದೀ ಮತ್ತು ಕೆಲವು ಆಂಗ್ಲ ಕಥೆ ಕಾದಂಬರಿಗಳು. Hypnosis, Occult Scince, Positive Imagery, ಮತ್ತು Psychology ಸಂಭಂದಿತ ಲೇಖನಗಳು ಮನಸೆಳೆಯುತ್ತವೆ.