Jyothi Subrahmanya
ಸದಸ್ಯರು
6 ವರ್ಷಗಳು 4 ತಿಂಗಳುಜ್ಯೋತಿ
ಸುಬ್ರಹ್ಮಣ್ಯ ಭಟ್
ಭಾವನಾ ಜೀವಿ, ಚಿಕ್ಕ ಪುಟ್ಟ ಕನಸು ಕಾಣೋದು ಅಂದ್ರೆ ಇಷ್ಟ. ಮಳೆ, ಇಬ್ಬನಿ, ಹಸಿರು, ಆಕಾಶ, ನಕ್ಷತ್ರ, ರಾತ್ರಿ, ಇವೆಲ್ಲಾ ತುಂಬಾ ಇಷ್ಟ. ನನ್ನ ಬಗ್ಗೆ ಇನ್ನು ಜಾಸ್ತಿ ತಿಳ್ಕೊಳ್ಳೋಕೆ ನನ್ನ ಸ್ನೇಹಿತರಾಗಿ. ನಿಮಗೇ ತಿಳಿಯುತ್ತೆ. ;)
ನೆನಪಿನ ನವಿಲುಗರಿ
ಕವಿತೆ, ಚುಟುಕುಗಳನ್ನ ಬರೆಯೋದು, ಹೊಸ ಭಾಷೆಗಳನ್ನು ಕಲಿಯೋದು, ಅಡಿಗೆಯಲ್ಲಿ ಹೊಸ ರುಚಿಗಳನ್ನ ತಯಾರಿಸಿ ಕುಟುಂಬದ ಸದಸ್ಯರ ಮೇಲೆ ಪ್ರಯೋಗ ಮಾಡೋದು :) ಕಾರ್ಟೂನ್ ಬಿಡಿಸೋದು, ಗಣೇಶನ (ನನ್ನ ಇಷ್ಟದ ದೇವರು, ಸಿನೆಮಾ ಹೀರೋ ಅಲ್ಲ!!!) ಛಾಯಾಚಿತ್ರಗಳನ್ನ, ಮೂರ್ತಿಗಳನ್ನ ಸಂಗ್ರಹಿಸೋದು, ಕಾದಂಬರಿ, ಇನ್ನಿತರೆ ಮೆಚ್ಚಿನ ಪುಸ್ತಕಗಳನ್ನು ಓದುವುದು.
ಬೆಳದಿಂಗಳ ಬಾಲೆ, ಕೆಲ ರಾಜಕುಮಾರ್ ಸಿನೆಮಾಗಳು, ಬಾಳೊಂದು ಭಾವಗೀತೆ, ಕಾಮನಬಿಲ್ಲು (ಕನ್ನಡ), ಕಲ್ ಹೋ ನ ಹೋ, ಫನಾ, ದಿಲ್ವಾಲೆ ದುಲ್ಹನಿಯಾ ಲೇಜಾಯೇಂಗೆ, ಕ್ಯಾ ಕೆಹೆನಾ (ಹಿಂದಿ), ಬೊಮ್ಮರಿಲ್ಲು (ತೆಲುಗು), ವರ್ನಮಾಯಿರಂ, ದೈವತಿರುಮಗಳ್, ಅಯನ್ (ತಮಿಳು) Gods must be crazy, baby's day out, (English)ಇಷ್ಟದ ಸಿನೆಮಾಗಳು.
ಭಾವಗೀತೆಗಳು, ಎಲ್ಲಾ ತರಹದ ಸುಮಧುರ ಹಾಡುಗಳು. ಸೋನು ನಿಗಮ್, ಶ್ರೇಯಾ ಘೋಷಾಲ್, ರಾಜೇಶ್ ಕೃಷ್ಣನ್, ಚಿತ್ರಾ, ಎಸ್.ಪಿ.ಬಾಲಸುಬ್ರಹ್ಮಣ್ಯಂ, ಸಂಗೀತಾ ಕಟ್ಟಿ, ರಾಜು ಅನಂತಸ್ವಾಮಿ ಮುಂತಾದವರು ಇಷ್ಟದ ಹಾಡುಗಾರರು. ಯಾವ ಮೋಹನ ಮುರಳಿ ಕರೆಯಿತೋ, ಮನಸೇ (ಅಮೃತವರ್ಷಿಣಿ), ನಗುವ ನಯನ (ಪಲ್ಲವಿಅನುಪಲ್ಲವಿ), ನೀನಿರದೆ ಬಾಳೊಂದು ಬಾಳೇ ಕೃಷ್ಣ, ಹಾಗೂ ಹಲವು ಹಿಂದಿ ಹಾಡುಗಳು ಬಹಳ ಇಷ್ಟ.
ವಾರ್ತೆಗಳನ್ನು ಬಿಟ್ಟರೆ, ಸೋನಿ ಚಾನೆಲ್ ನಲ್ಲಿ ಪ್ರಸಾರವಾಗುವ ಬಡೇ ಅಚ್ಚೆ ಲಗ್ತೇ ಹೈ ಧಾರಾವಾಹಿ ತುಂಬಾ ಇಷ್ಟ.
ಶಟಲ್, ಮತ್ತು ಕೆಲ ಒಳಾಂಗಣ ಆಟಗಳು.
ಶುದ್ಧ ಸಸ್ಯಾಹಾರಿ ಆಹಾರ. ಇಡ್ಲಿ ವಡಾ, ಪುಲಾವ್, ಚಪಾತಿ, ಮೊಸರನ್ನ, ಹಾಗೂ ನಮ್ಮೂರ ಕಡೆಯ ಪತ್ರೊಡೆ, ಹಲಸಿನ ಕೊಟ್ಟಿಗೆ ಇತ್ಯಾದಿ ತುಂಬಾ ಇಷ್ಟ.
ಗೂಗಲ್, mp3hungama.com.
ವ್ಯಕ್ತಿತ್ವ ವಿಕಸನದ ಕುರಿತಾದ, ಆಧ್ಯಾತ್ಮದ ಕುರಿತಾದ, ಮನಸ್ಸಿನ ಕುರಿತಾದ ಪುಸ್ತಕಗಳು ತುಂಬಾ ಇಷ್ಟ. ತ್ರಿವೇಣಿ, ಸಾಯಿಸುತೆ, ಉಷಾ ನವರತ್ನರಾಮ್, ರವಿ ಬೆಳಗೆರೆ, ವಿಶ್ವೇಶ್ವರ ಭಟ್, ವಿವೇಕಾನಂದ ಕಾಮತ್, ಮುಂತಾದವರ ಕನ್ನಡ ಕಾದಂಬರಿಗಳು ಇಷ್ಟ. ಹಾಗೇ, who will cry when you die, etc. ರಾಬಿನ್ ಶರ್ಮರವರ ಬರಹಗಳು, ಪೌಲ್ ಕೊಹೆಲೋ ರವರ ಬರಹಗಳು,ಇಷ್ಟ.