Skip to main content

nimmashivu

ಸದಸ್ಯರು

8 ವರ್ಷಗಳು 2 ತಿಂಗಳು
ಮೊದಲ ಹೆಸರು

ಶಿವಕುಮಾರ್

ಕೊನೆಯ ಹೆಸರು

ಕೆ. ಎಸ್

ಲಿಂಗ
ಗಂಡು
ಮಾತೃಭಾಷೆ
ಕನ್ನಡ
ಜೀವನದ ಸ್ಥಿತಿ
ಬ್ರಹ್ಮಚಾರಿ
ಈಗಿರುವ ರಾಜ್ಯ
ಕರ್ನಾಟಕ
ಈಗಿರುವ ದೇಶ
ಭಾರತ
ನನ್ನ ಬಗ್ಗೆ

ನಾನು ನಾಸ್ತಿಕನಾದರೂ ಅಂಧ ಮೂರ್ತಿಭಂಜಕನಲ್ಲ. ಮಾನವ ಕೇಂದ್ರಿತ ಧರ್ಮದಲ್ಲಿ ನನಗೆ ನಂಬಿಕೆ. ಧರ್ಮ ಆಚರಣಾವಾದಿಯಾಗಬಾರದು, ನೀತಿವಾದಿ ಆಗಿರಬೇಕು. ಮಾನವೀಯ ಮೌಲ್ಯಗಳಲ್ಲಿ ನಂಬಿಕೆಯಿರುವ ಸ್ವಾರ್ಥರಹಿತ ಪ್ರಾಮಾಣಿಕನಾದ ಆಸ್ತಿಕನನ್ನು- ಅಮಾನವೀಯ, ಅಪ್ರಾಮಾಣಿಕ, ಆತ್ಮ ಕೇಂದ್ರಿತ ವಿಚಾರವಾದಿ ಅಥವಾ ನಾಸ್ತಿಕನಗಿಂಥ ಉತ್ತಮನೆಂದು ಪರಿಗಣಿಸುತ್ತೇನೆ. ದೇವರಲ್ಲಿ ನಂಬಿಕೆ ವಿನಾಶಕಾರಿಯಲ್ಲ. ದೇವರು ನಮ್ಮ ದೈನಂದಿನ ವ್ಯವಹಾರಗಳಲ್ಲಿ ಪ್ರವೇಶಿಸುತ್ತಾನೆಯೇ ಎಂಬುದು ನಿರ್ಣಾಯಕ ಅಂಶ.
ಬುದ್ಧ, ಸ್ವಾಮಿ ವಿವೇಕಾನಂದ, ಗಾಂಧೀಜಿ, ಬಸವಣ್ಣ, ಕುವೆಂಪುರವರ ವಿಚಾರಗಳು ನನ್ನ ಮೇಲೆ ಅಗಾಧ ಪ್ರಭಾವ ಬೀರಿವೆ. ಗುರಿಯಷ್ಟೇ ಸಾಧನಗಳೂ ಮುಖ್ಯ ಎಂಬುದನ್ನು ನಾನು ಈ ಮಹಾನ್ ವ್ಯಕ್ತಿಗಳಿಂದ ಕಲಿತೆ. ದೇವರ ಇರುವಿಕೆ, ಇಲ್ಲದಿರುವಿಕೆ, ಜೀವನ ಮೂಲ ಆಕಸ್ಮಿಕವೇ? ಬದುಕಿಗೊಂದು ಉದ್ದೇಶವಿದೆಯೆ? 'ಸಾವು' ಬದುಕಿನ ಕೊನೆಯೆ? ಮರಣಾನಂತರವೂ ವ್ಯಕ್ತಿತ್ವ ಉಳಿಯಬಲ್ಲುದೆ? ಮುಂತಾದ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಿದ್ದೇನೆ . ಧಾರ್ಮಿಕ ಸಾಹಿತ್ಯವನ್ನು ಸಾಕಷ್ಟು ವಿಸ್ತೃತವಾಗಿ ಅಧ್ಯಯನ ಮಾಡಿದರೂ, ಆಗಿಂದಾಗ್ಗೆ ಧಾರ್ಮಿಕ ವ್ಯಕ್ತಿಗಳು, ಬುದ್ಧಿಜೀವಿಗಳು, ವಿಚಾರವಾದಿಗಳು ಮತ್ತು ನಾಸ್ತಿಕರೊಂದಿಗೆ ಸುದೀರ್ಘ ಚರ್ಚೆ ನಡೆಸಿದರೂ ಈ ಮೂಲಭೂತ ಸಮಸ್ಯೆಗಳಿಗೆ ಸಮಾಧಾನಕರ ಉತ್ತರ ನನಗೆ ದೊರೆತಿಲ್ಲ. ಆದರೆ ಧರ್ಮ ಮತ್ತು ದೇವರನ್ನು ಶೋಷಣೆ ಹಾಗೂ ವ್ಯಾಪಾರೀ ಸಿದ್ಧಾಂತಗಳ ಸಾಧನವಾಗಿ ವ್ಯಾಪಕವಾಗಿ ಬಳಸಿಕೊಳ್ಳಲಾಗುತ್ತಿದೆ ಎಂಬ ತೀರ್ಮಾನಕ್ಕೆ ಬಂದಿದ್ದೇನೆ. ಯಾವುದೇ ಧರ್ಮಗ್ರಂಥ ದೈವೋಕ್ತವೆಂದಾಗಲಿ, ಅಧಿಕೃತವೆಂದಾಗಲಿ ಅಥವಾ ಎಲ್ಲ ಕಾಲಕ್ಕೂ ಪ್ರಸ್ತುತವೆಂದಾಗಲಿ ನಾನು ಪರಿಗಣಿಸುವುದಿಲ್ಲ. ವಿಜ್ಞಾನ ಮತ್ತು ವೈಜ್ಞಾನಿಕ ವಿಧಾನದಲ್ಲಿ ನನಗೆ ದೃಢವಾದ ನಂಬಿಕೆ. ಸಮಾಜವನ್ನು- ಮುಖ್ಯವಾಗಿ ಧರ್ಮವನ್ನು ಪರಿಷ್ಕರಿಸಲು, ರೂಪಾಂತರಿಸಲು ವೈಜ್ಞಾನಿಕ ವಿಧಾನ ಅತ್ಯಂತ ಪ್ರಬಲ ಸಾಧನ ಎಂದು ನನಗನಿಸುತ್ತದೆ.
ನಾನು ಯಾವುದೇ ಧರ್ಮ, ದೇವರಲ್ಲಿ ನಂಬಿಕೆ ಇಟ್ಟಿಲ್ಲ ... ಇಡುವುದೂ ಇಲ್ಲ .... ಸ್ನೇಹ, ಪ್ರೀತಿ, ವಿಶ್ವಾಸಗಳಲ್ಲಿ ನನಗೆ ನಂಬಿಕೆ. ಕನ್ನಡ ಭಾಷೆಯ ಮೇಲೆ ನನಗೆ ಅಭಿಮಾನ .. ಇತರೆ ಭಾಷೆಗಳ ಮೇಲೆ ಅಷ್ಟೇ ಗೌರವ. ಕನ್ನಡ ಸಾಹಿತ್ಯದಲ್ಲಿ ಆಸಕ್ತಿ ( ವಿಶೇಷವಾಗಿ ವಚನ ಸಾಹಿತ್ಯದಲ್ಲಿ ) ಇನ್ನು ಮುಂದಿನ ವಿಷಯಗಳ ಬಗ್ಗೆ ನನ್ನ ಪ್ರೊಫೈಲ್ ಓದಿದರೆ ನಿಮಗೆ ಗೊತ್ತಾಗುತ್ತದೆ. ಇನ್ನು ಏನಾದರು ವಿವರಗಳು ಅಗತ್ಯ ಎನಿಸಿದರೆ ಸ್ಕ್ರಾಪ್ ಮಾಡಿ :) ಅಥವಾ ನನ್ನ ಸ್ನೇಹಿತರನ್ನು ಕೇಳಿ.

ಕೆಲಸ
0
ಸಿನಿಮಾಗಳು

Lord of the rings (all three parts),Spider Man (1,2&3), Harry Potter (all 5 series), Kal ho naa ho, Hum Aap ke hain kaun, Puttanna Kanagal's Films, 300, Black, Dr. Raj films and all horror films, Hum dil de chuke sanam,1942 a love story, Devdas, America America, Transformers, superman, SAW 1,2,3., Wake up sid!

ಸಂಗೀತ

ಕದ್ರಿ ಗೋಪಾಲನಾಥರ ಸ್ಯಾಕ್ಸೋಫೋನ್ ವಾದನ, ಪ್ರವೀಣ್ ಗೋಡ್ಖಿಂಡಿ ಯವರ ಕೊಳಲು ವಾದನ, ಎ. ಆರ್. ರೆಹೆಮಾನ್ ರವರ ಸಂಗೀತ, ಹಳೆಯ ಹಾಗು ಹೊಸ ಸುಮಧುರ ಹಾಡುಗಳು, ಕೆಲವೊಮ್ಮೆ ಕರ್ನಾಟಕ ಶಾಸ್ತ್ರಿಯ ಸಂಗೀತ, ಮೈಸೂರು ಅರಮನೆಯಲ್ಲಿ ನಡೆಯುವ ಅರಮನೆ ತಂಡದವರು ನಡೆಸುವ ಸಂಗೀತ. ರಾಬರ್ಟ್ ಮೈಲ್ಸ್ ರವರ ಪಾಶ್ಚಾತ್ಯ ಸಂಗೀತ.

ಟಿವಿ

Tat antha heli (chandana), Maximum style guru (Zoom),Just for laugh (pogo), Mr.Bean, Ultimate Gunnies Record (AXN)& all reality Shows. And all cartoon shows,

ಪುಸ್ತಕಗಳು

ಭಾರತಿಯ ಕಾವ್ಯ ಮೀಮಾಂಸೆ, ರಂ. ಶ್ರೀ. ಮುಗಳಿಯವರ ಕನ್ನಡ ಸಾಹಿತ್ಯ ಚರಿತ್ರೆ, ವಡ್ಡಾರಾಧನೆ, ಕುವೆಂಪುರವರ ಕಾನೂರು ಸುಬ್ಬಮ್ಮ ಹೆಗ್ಗಡತಿ, ಮಲೆಗಳಲ್ಲಿ ಮಧುಮಗಳು, ಗಿರೀಶ್ ಕಾರ್ನಾಡರ ಹಯವದನ, ಬಸವಣ್ಣನವರ ವಚನಗಳು, ಅಕ್ಕಮಹಾದೇವಿಯ ವಚನಗಳು, ಅಲ್ಲಮ ಪ್ರಭುವಿನ ವಚನಗಳು, ಸರ್ವಜ್ಞನ ತ್ರಿಪದಿಗಳು, ಕುಮಾರವ್ಯಾಸನ ಗದುಗಿನ ಭಾರತ, ರನ್ನನ ಗಧಾಯುದ್ಧ, ಕನಕದಾಸರ ಮೋಹನ ತರಂಗಿಣಿ, ಹರಿಹರನ ಗಿರಿಜಾಕಲ್ಯಾಣ; ಪಂಪಾಶತಕ; ರಕ್ಷಾಶತಕ; ಮುಡಿಗೆಯ ಅಷ್ಟಕ; ಶಿವಗಣದ ರಗಳೆಗಳು, ರಾಘವಾಂಕನ ಹರಿಶ್ಚಂದ್ರ ಚಾರಿತ್ರ, ಸಿದ್ಧರಾಮ ಚಾರಿತ್ರ, ವೀರೇಶ್ವರಚರಿತೆ, ಸೋಮನಾಥಚಾರಿತ್ರ, ಶರಭ ಚಾರಿತ್ರ, ಹರಿಹರ ಮಹತ್ವ. ಜನ್ನನ ಯಶೋಧರಚರಿತೆ, ಅನುಭವಮುಕುರ. ಆಂಡಯ್ಯನ ಕಬ್ಬಿಗರಕಾವ.ಕೇಶಿರಾಜ ವಿರಚಿತ ಶಬ್ಧಮಣಿದರ್ಪಣಂ, ಪುಳುಗೆರೆಯ ಸೋಮನಾಥನ ಸೋಮೇಶ್ವರಶತಕ. ಡಿ.ವಿ. ಗುಂಡಪ್ಪನವರ ಮಂಕುತಿಮ್ಮನ ಕಗ್ಗ, ವಿಶ್ವೇಶ್ವರ ಭಟ್ಟರ ನೂರೆಂಟು ಮಾತು, ವಕ್ರತುಂಡೋಕ್ತಿ, ಶಿವರಾಮ ಕಾರಂತರ ಮೈ ಮನಗಳ ಸುಳಿಯಲ್ಲಿ, ಎಂ. ಕೆ. ಇಂದಿರಾರವರ ಪ್ರವಾಸ ಕಥನಗಳು ಹಾಗು ಅವರ ಕೆಲವು ಕಾದಂಬರಿಗಳು ( ತಗ್ಗಿನ ಮನೆ ಸೀತೆ, ಫಣಿಯಮ್ಮ ), ನರಸಿಂಹಸ್ವಾಮಿಯವರ ಮೈಸೂರು ಮಲ್ಲಿಗೆ, ಮಾಸ್ತಿಯವರ ಸಣ್ಣ ಕಥೆಗಳು, ಡಾ. ಎಚ್. ನರಸಿಂಹಯ್ಯನವರ ತೆರೆದ ಮನ. ಕೆಲವು ಜಾನಪದ ಕಥೆಗಳುಳ್ಳ ಪುಸ್ತಕಗಳು, ಇತರೆ ಅಡಿಗೆ, ಪಾಕ ಶಾಸ್ತ್ರದ ಪುಸ್ತಕಗಳು.

ಡ್ರೆಸ್ಸು , ಬಟ್ಟೆ
ಪ್ಯಾಂಟ್ - ಶರ್ಟ್