ನೋಕಿಯಾದಿಂದ ೪೧ ಮೆಗಾ ಪಿಕ್ಸೆಲ್ ಕ್ಯಾಮರಾ ಫೋನು ಬಿಡುಗಡೆ - ಲುಮಿಯಾ ೧೦೨೦
ನೋಕಿಯಾ ತನ್ನ ಸಿಂಬಿಯನ್ ಆಪರೇಟಿಂಗ್ ಸಿಸ್ಟೆಮ್ ಬಿಟ್ಟು ವಿಂಡೋಸ್ ಫೋನ್ ೮ ಅನ್ನು ತನ್ನ ಸ್ಮಾರ್ಟ್ ಫೋನು ಆಪರೇಟಿಂಗ್ ಸಿಸ್ಟೆಮ್ ಎಂದು ಘೋಷಿಸಿದಾಗ ಅದಕ್ಕೆ ಅನೇಕ ಟೀಕೆ ಕೇಳಿ ಬಂದಿತ್ತು.ಅದರಲ್ಲಿ ಒಂದು ಗೂಗಲ್ ನ ಅಂಡ್ರಾಯಿಡ್ ಬಳಸಿ ಎನ್ನುವದು ಒಂದು. ಆದರೆ ನೋಕಿಯಾ ಮೊದಲು ಗೂಗಲ್ ಅಂಡ್ರಾಯಿಡ್ ಬಳಸಲು ಗೂಗಲ್ ಜೊತೆ ಚರ್ಚೆ ಮಾಡಿತ್ತು. ಗೂಗಲ್ ಹಾಕಿದ ಹಲವು ಕಂಡೀಶನ್ ಗಳು ಅದಕ್ಕೆ ಸರಿ ಬರಲಿಲ್ಲ. ಅದರಲ್ಲಿ ಒಂದು ಗೂಗಲ್ ಬ್ರಾಂಡ್ ಅನ್ನು ಫೋನ್ ಮೇಲೆ ಬರೆಯುವದು.