ಈ ಇತಿಹಾಸದಲ್ಲಿ ಅದೆಷ್ಟು ಸತ್ಯಗಳು ಜೀವಂತ ಸಮಾಧಿಯಾಗಿರುತವೋ ಗೊತ್ತಿಲ್ಲ. ಆದರೆ ಒಂದಂತು ಸತ್ಯ. ಸತ್ಯಕ್ಕೆ ಸಾವಿಲ್ಲ.
1852ರ ಒಂದು ದಿನ ಭಾರತಿಯ ಹುಡುಗನೊಬ್ಬ ಡೆಹ್ರಡೂನ್ನಲ್ಲಿರುವ ತನ್ನ ಆಫಿಸಿಗೆ ಓಡಿಬಂದವನೆ ನೇರವಾಗಿ ಬಾಸ್ ಹತ್ತಿರ ಹೋಗಿ “ಸರ್ ಪ್ರಪಂಚದ ಅತೀ ಎತ್ತರದ ಪರ್ವತವನ್ನು ನಾನು ಕಂಡು ಹಿಡಿದಿದ್ದೇನೆ ಸರ್” ಎಂದ, ನಿಜಕ್ಕೂ ಅವನು ಮಾಡಿದ ಸಾಧನೆ Exellent. ನಿರಂತರವಾಗಿ ನಾಲ್ಕು ವರ್ಷಗಳ ಕಾಲ ಗಣಿತದ ಅನೇಕ ಲೆಕ್ಕಾಚಾರಗಳೊಂದಿಗೆ ಗುದ್ದಾಡಿ, ಭೌಗೋಳಿಕ ನಕಾಶೆಗಳನ್ನೆಲ್ಲಾ ಜಾಲಾಡಿ ಹಿಮಾಲಯ ಪರ್ವತ ಶ್ರೇಣಿಯ ಇಪ್ಪತ್ತೈದನೇ ಶಿಖರದ (ಪೀಕ್ ಟ್ವೆಂಟಿಪೈವನ) ಎತ್ತರವನ್ನು ಕರಾರುವಕ್ಕಾಗಿ ಕಂಡು ಹಿಡಿದಿದ್ದ. ಆ ಶಿಖರ ಸರಿಯಾಗಿ ಇಪ್ಪತ್ತೋಂಬತ್ತು ಸಾವಿರದ ಎರಡು ಅಡಿ ಅಂತ ಅವನು ಹೇಳಿದ ಮೇಲೆ ಅನೇಕ ಗಣಿತಜ್ಞರು ಅದನ್ನು ಪರೀಕ್ಷಿಸಿ ನೋಡಿದರು: ಉಹುಂ ಅವನು ಹೇಳಿದ್ದ ಅಳತೆ ಒಂದಿಷ್ಷು ಆಚೀಚೆಯಾಗಿರಲ್ಲಿಲ್ಲ.