Skip to main content

ಶಿವಾಂತ ಕೂತಿದ್ದೆ ಬಾರಿನಲ್ಲಿ ಸಿಕ್ಕಾಪಟ್ಟೆ ದುಡ್ಡಿತ್ತು ಜೋಬಿನಲಿ

ಇಂದ lokesh
ಬರೆದಿದ್ದುJune 27, 2011
noಅನಿಸಿಕೆ

 ಗುಂಡ : ಎ, ಬಿ, ಸಿ, ಡಿ ಮಧ್ಯೆ 'ಬಿ'ಗೆ ತುಂಬಾ ಚಳಿ ಆಗುತ್ತೆ..
ತಿಮ್ಮ : ಯಾಕೆ ?
ಗುಂಡ : ಯಾಕೆಂದ್ರೆ ಅದು ಎಸಿ ಮಧ್ಯೆ ಇದೆಯಲ್ವಾ ಅದಕ್ಕೆ! ಹಾಗೆ 'ಸಿ'ಗೆ ತುಂಬಾ ಕೆಮ್ಮು ಬರುತ್ತೆ ಯಾಕೆ ಗೊತ್ತಾ.
ತಿಮ್ಮ : ಗೊತ್ತಾಗ್ಲಿಲ್ಲ, ನೀನೇ ಹೇಳಿ ಬಿಡು.
ಗುಂಡ : ಅದು ಬಿಡಿ ಮಧ್ಯೆ ಇದೆಯಲ್ವಾ?! ಹುಡುಗ, ಹುಡುಗಿ ಪಾರ್ಕ್ ನಲ್ಲಿ ಕೂತಿದ್ದರು. ಮೆತ್ತಗೆ ಹುಡುಗ ಹುಡುಗಿಯ ಮೈ ಟಚ್ ಮಾಡುತ್ತಾನೆ
ಹುಡುಗಿ: ನನ್ನ ಮೈ ಮುಟ್ಟ ಬೇಡ, ಅದೆಲ್ಲಾ ಏನಿದ್ದರೂ ಮದುವೆಯಾದ ಮೇಲೆ
ಹುಡುಗ: ಓಕೆ, ಹಾಗಾದ್ರೆ ನಿನ್ನ ಮದುವೆ ಆದ ಮೇಲೆ ಕರೀ..  ಗುಂಡನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ವೈದ್ಯರು ಗುಂಡನನ್ನು ಕೇಳಿದರು..
ವೈದ್ಯ: ಗುಂಡ ಅವರೇ, ಆಸ್ಪತ್ರೆಗೆ ನೀವು ದಾಖಲಾಗಿ ಇಂದಿಗೆ ಮೂರು ದಿನವಾಯಿತು. ಹೇಗಿದೆ ನಿಮ್ಮ ಆರೋಗ್ಯ, ಏನನಿಸುತಿದೆ?
ಗುಂಡ: ಪರವಾಗಿಲ್ಲ ಡಾಕ್ಟರ್, ಆದರೆ ಒಂದು ವಿಶ್ಯಕ್ಕಂತೂ ತುಂಬಾ ಕಷ್ಟವಾಗುತ್ತಿದೆ.
ವೈದ್ಯ: ಏನು ಕಷ್ಟ?
ಗುಂಡ: ಅದೇ ಡಾಕ್ಟರ್, ಈ ಸುಂದರವಾದ ನರ್ಸ್ ಗಳನ್ನೂ ಸಿಸ್ಟರ್ ಎಂದು ಕರೀಬೇಕಲ್ಲಾ ಶಾಂಪೂ ಜಾಹೀರಾತು ನಿರ್ವಹಣೆ ಜವಾಬ್ದಾರಿ ವಹಿಸಿಕೊಂಡಿದ್ದ ಗುಂಡ, ಈ ಬಾರಿ ಜಾಹೀರಾತಿಗೆ ಕ್ರಿಕೆಟ್ ಅಥವಾ ಸಿನಿಮಾ ತಾರೆಯರನ್ನು ಕರೆಸುವ ಬದಲು ರಾಜಕಾರಿಣಿಯೊಬ್ಬರನ್ನು ಬಳಸಿಕೊಳ್ಳಲು ನಿರ್ಧರಿಸಿದ. ಕೊನೆಗೆ ನಮ್ಮ ದೇವೇಗೌಡರನ್ನು ಇದಕ್ಕಾಗಿ ಒಪ್ಪಿಸಿದ. ಗುಂಡ ಕೊಟ್ಟ ಡೈಲಾಗ್ ಅನ್ನು ಗೌಡ್ರು ತಮ್ಮ ಎಂದಿನ ನೈಜ ಅಭಿನಯದ ಮೂಲಕ ಪ್ರಸ್ತುತ ಪಡಿಸಿದರು. "ಕ್ಲಿನಿಕ್ ಪ್ಲಸ್ ಶಾಂಪೂ ಮತ್ತು ವಾಟಿಕಾ ಹೈರ್ ಆಯಿಲ್ ಬಳಸಿದ ಮೇಲೆ ನನ್ನ ತಲೆ ಕೂದಲು ಉದುರುವುದು ಸಂಪೂರ್ಣವಾಗಿ ನಿಂತು ಹೋಯಿತು. ನೀವು ಇದನ್ನೇ ಬಳಸಿ ತಲೆಗೂದಲು ಉದುರುವುದರಿಂದ ಬಚಾವ್ ಆಗಿ". ಯಾವುದೋ ವಿಷಯಕ್ಕೆ ಚಿಂತೆ ಮಾಡ್ಕೊಂಡು ಗುಂಡ ಬಾರ್ ನಲ್ಲಿ ಕೂತಿದ್ದ. ಪಕ್ಕದಲ್ಲಿ ಫುಲ್ ಟೈಟ್ ಕೂತಿದ್ದ ಆಸಾಮಿಯೊಬ್ಬ ಜಾಕಿ ಚಿತ್ರದ ಮೊದಲ ಸಾಲನ್ನು ತನ್ನದೇ ರೀತಿಯಲ್ಲಿ ಹಾಡುತ್ತಿದ್ದ.

ಶಿವಾಂತ ಕೂತಿದ್ದೆ ಬಾರಿನಲ್ಲಿ..
ಸಿಕ್ಕಾಪಟ್ಟೆ ದುಡ್ಡಿತ್ತು ಜೋಬಿನಲಿ..
ಫುಲ್ ಬಾಟಲ್ ಏರ್ಸಿ ಬಿಟ್ಟೆ ಜೋಶಿನಲಿ..
ನಾ.. ಬಿದ್ದೆ ಮೊರಿಯಲಿ.. ಮೊರಿಯಲಿ.. ಮೊರಿಯಲಿ ಗುಂಡ : ತಿಮ್ಮ.. ಪಕ್ಕದ ಮೋಹನ್ ಅಂಕಲ್ ಮನೆಯಿಂದ ಒಂದೆರಡು ಈರುಳ್ಳಿ ತೆಗೆದುಕೊಂಡು ಬಾ..
ತಿರುಗಿ ಬಂದ ತಿಮ್ಮ : ಹೋಗಿದ್ದೆ .. ನಿಮ್ಗೆ ತೆಗೊಳ್ಳೋಕೆ ಏನು ಧಾಡಿ? ಕೊಡೊಲ್ಲಾ ಅಂದ್ಬಿಟ್ಟು ಗದರಿಸಿದ್ರು.
ಗುಂಡ : ಏನ್ ಜಿಪುಣ್ರಪ್ಪಾ ಜನಾ.. ಹೋಗ್ಲಿ.. ನಮ್ಮ ಮನೆ ಫ್ರಿಜ್ ನಲ್ಲಿರೋ ಈರುಳ್ಳಿನೇ ತಗೊಂಡು ಬಾ. ಲೇ ಗುಂಡ.. ಮುಂದಿನ ಐಪಿಎಲ್ ಪಾಕಿಸ್ತಾನದಲ್ಲಂತೆ ಕಣೋ. ಏನೇನು ಸವಲತ್ತು ಪಾಕ್ ಸರಕಾರ ನೀಡುತ್ತೆ ಗೊತ್ತಾ? ಕೇಳಿದ್ರೆ ಸುಸ್ತಾಗಿ ಬಿಡ್ತೀಯಾ. ಎಲ್ಲಾ ಪಂದ್ಯಕ್ಕೂ ಅಲ್ ಖೈದಾ, ತಾಲಿಬಾನ್ ಪಡೆಗಳು ಭದ್ರತೆ ನೀಡುತ್ತವೆ. ಬುರ್ಖಾ ಹಾಕ್ಕೊಂಡ ಚಿಯರ್ ಗರ್ಲ್ಸ್ ಗಳು, ಯಾವುದೇ ತಂಡದ ಯಾವುದೇ ಆಟಗಾರ ಇರ್ಲಿ ಸಿಕ್ಸ್ ಹೊಡೆದ ಕೂಡಲೇ ಒಂದೊಂದು ಬಾಂಬ್ ಬ್ಲಾಸ್ಟ್. ಮ್ಯಾನ್ ಆಫ್ ದಿ ಮ್ಯಾಚ್ ಗೆ ಎಕೆ 47 ರೈಫಲ್. ಅಷ್ಟೇ ಅಲ್ಲ.. ಮ್ಯಾನ್ ಆಫ್ ದಿ ಸಿರೀಸ್ ಗೆ ಮಿಸೈಲ್ ಲಾಂಚರ್.. ಸರಣಿಯ ಸರ್ವೋತ್ತಮ ಆಟಗಾರನಿಗೆ ನ್ಯೂಕ್ಲಿಯರ್ ಬಾಂಬ್! ಗುಂಡ: ಎಮ್ಮೆ ಹಾಲು ಕುಡಿದ್ರೆ ಮೈಂಡ್ ಶಾರ್ಪ್ ಆಗುತ್ತಂತೆ!
ತಿಮ್ಮ: ಸುಮ್ನಿರಲೋ..ಯಾಕೋ ಸುಳ್ಳು ಹೇಳ್ತೀಯ.
ಗುಂಡ: ಯಾಕೋ?
ಗುಂಡ: ಎಮ್ಮೆ ಹಾಲು ಕುಡ್ದು ಮೈಂಡ್ ಶಾಪ್ ಆಗೋದಾದರೆ, ಎಮ್ಮೆ ಕರು ಸೈಂಟಿಸ್ಟ್ ಆಗುತ್ತಿತ್ತು. ಗುಂಡ ತನ್ನ ಹೆಂಡತಿಗೆ ಮೆಸೇಜ್ ಮಾಡಿದ. ಹೆಂಡತಿಗೆ ಸ್ವಲ್ಪ ಇಂಗ್ಲಿಷ್ ಶೋಕಿ.
ಗುಂಡ : ಹಾಯ್ ಡಾರ್ಲಿಂಗ್.. ಏನು ಮಾಡ್ತಾ ಇದ್ದೀಯಾ?
ಹೆಂಡತಿ : ಐ ಯಾಂ ಡೈಯಿಂಗ್
ಗುಂಡ : ಒಹ್ ಚಿನ್ನ.. ನೀನು ಇಲ್ದೆ ನಾನು ಹೇಗೆ ಬದುಕಲಿ?
ಹೆಂಡತಿ : ಇಡಿಯಟ್, ನಾನು ಹೇಳಿದ್ದು ನಾನು ಹೈರ್ ಡೈಯಿಂಗ್ ಮಾಡ್ತಾ ಇದ್ದೀನಿಂತ ಅನರ್ಥ ಕೊಶಗಳುಡಾಕ್ಟರ್ - ಯಮಧರ್ಮರಾಯನ ಏಜೆಂಟ್ಜೈಲು - ಮಂತ್ರಿಗಳ ಬೇಸಿಕ್ ಟ್ರೈನಿಂಗ್ಕಾಯಿಲೆ - ದೇಹವು ಆತ್ಮಕ್ಕೆ ಕಟ್ಟುವ ಕಂದಾಯಸೂರ್ಯ - ಕತ್ತಲಾದಾಗ ಹೊರಬರದ ಹೇಡಿರೆಪ್ಪೆ - ಕಣ್ಣಿನ ಮೇಲೆ ಇರುವ ಭೂತಹಾಲು - ದ್ರವ ರೂಪದ ಹಸುವಿನ ಮಾಂಸಹೋಟೆಲ್ - ಪರಸ್ಪರ ಎಂಜಲನ್ನು ಸಾರ್ವಜನಿಕರು ಹಂಚಿಕೊಳ್ಳುವ ಕ್ಷೇತ್ರಫಾಲಿಡಾಲ್ - ಬೇಜಾರಾದಾಗ ಸಂತೊಷಕ್ಕೆ ತೆಗೆದುಕೊಳ್ಳುವ ಶುದ್ದ ಔಷದಅನುಭವ - ಈಗ ಮಾಡುವ ತಪ್ಪುಗಳಿಗೆ ನಾಳೆಕೊಡುವ ಹೆಸರುಜಾಣತನ - ಮೋಸ ಮಾಡಿ ತಪ್ಪಿಸಿಕೊಳ್ಳುವ ಶಕ್ತಿತಿರುಪೆ - ನಮ್ಮ ದೇಶದಲ್ಲಿ ಬಂಡವಾಳವಿಲ್ಲದ ಒಂದು ದೊಡ್ಡ ಕೈಗಾರಿಕೆಕಳ್ಳ - ಅನ್ಯರ ಆಸ್ತಿಗೆ ಒಡೆಯಅಗಸ - ಇತರರ ಬಟ್ಟೆಗಳನ್ನು ಚೆನ್ನಾಗಿ ಧರಿಸುವ ವ್ಯಕ್ತಿ..ಜ್ಯೋತಿಷಿ - ಅನ್ಯರ ದುಡ್ಡಿನಿಂದ ತನ್ನ ಭವಿಷ್ಯ ರೂಪಿಸಿ ಕೊಳ್ಳುವವ.ವಕೀಲ - ನ್ಯಾಯ ದೇಗುಲದಲ್ಲಿ ಅನ್ಯಾಯ ಎತ್ತಿ ಹಿಡಿಯುವ ವ್ಯಕ್ತಿ.  ಬೆಟ್ಟದ ತುದಿಯಿಂದ ಗುಂಡ ಒಂದು ಹುಡುಗಿಯನ್ನು ತಳ್ಳಿ ಸಾಯಿಸುತ್ತಾನೆ.
ಜಡ್ಜ್ : ಯಾಕೋ ಆ ಹುಡುಗಿಯನ್ನು ಸಾಯಿಸಿದೆ?
ಗುಂಡ: ನಾನು ಅವಳ ಹೆಸರನ್ನು ಕೇಳಿದೆ ಸಾರ್, ಅವಳು ಪುಷ್ಪಾಂತ (ಪುಷ್ ಪಾ) ಹೇಳಿದಳು. ಅದಕ್ಕೆ ತಳ್ಳಿದೆ.
ಜಡ್ಜ್: ಅಯ್ಯೋ ಪಾಪಿ.. ಸಿಕ್ಕಾಪಟ್ಟೆ ಕುಡಿದಿರುವವನೊಬ್ಬ ಬಸ್ ಸ್ಟ್ಯಾಂಡಿನಲ್ಲಿ ಸುಂದರ ಹುಡುಗಿಯ ಪಕ್ಕ ಅತೀ ಹತ್ತಿರದಲ್ಲಿ ನಿಂತಿರ್ತಾನೆ. ಅವನ ಬಾಯಿಂದ ಬರುವ ವಾಸನೆ, ಹತ್ತಿರವೇ ನಿಂತಿದ್ದನ್ನು ಸಹಿಸಲಾರದೆ ಕುಡುಕನಿಗೆ ಸುಂದರ ಹುಡುಗಿ ಕಪಾಳಕ್ಕೆ ಹೊಡೆಯುತ್ತಾಳೆ.
ಕುಡುಕ : ಕ್ಷಮಿಸಿ, ನೀವು ನನ್ನ ಹೆಂಡತಿಯ ಹಾಗೆಯೇ ಕಾಣ್ತೀರಾ.
ಹುಡುಗಿ ಮತ್ತಷ್ಟು ರೇಗಿ ಬಾಯಿಗೆ ಬಂದಂತೆ ಬೈಯಲು ಪ್ರಾರಂಭಿಸುತ್ತಾಳೆ.
ಕುಡುಕ : ವಾವ್, ನೀವು ನನ್ನ ಹೆಂಡತಿಯ ತರಹಾನೂ ಆಡ್ತೀರಾ

ಲೇಖಕರು

lokesh

ಮರೆಯೋಲ್ಲ ನಿನ್ನ! ಮರೆತರೂ ನನ್ನ

ನನ್ನ ಬಗ್ಗೆ ನಾನೇ ಹೇಳಬೇಕ ......

ಅಲ್ವೇ ಮತ್ತೆ ನನ್ನ ಬಗ್ಗೆ ನೀವೇ ಹೇಳೋಕೆ ನಾನೇನು ಗಾಂಧಿ ಪೀಸಾ... ಇಲ್ಲಾ ಕ್ರೇಜಿ ಸ್ಟಾರ್ ರವಿಚಂದ್ರನ್ ?
ಹ್ಹಾ ಹ್ಹಾ ಹ್ಹಾ .....!!!! ಅರೇ ನಿಲ್ಲಿ ಸ್ವಲ್ಪ ನನ್ನ ಪ್ರೊಫೈಲ್ ಇನ್ನು ಮುಗಿದಿಲ್ಲ ಆಗಲೇ ಬೇಜಾರ. ಅಲ್ಲಾ.... ನೀವು ಬೇಜಾರಾದ್ರೆ ನಾನೇನು ಮಾಡೋಕಾಗಲ್ಲ,,,,,,ಈಗ್ಲೂ ಬೇಜಾರಾದ್ರೆ ಸ್ವಲ್ಪ ಅಡ್ಜೆಸ್ಟ್ ಮಾಡ್ಕೊಳ್ಳಿ,,, ಏಕೆಂದರೆ ನೀವು ನನ್ನ ಫ್ರೆಂಡ್ಸ್ ಅಲ್ಲ್ವಾ. ನೋಡಿ ಇದು ನನ್ನ ಪ್ರೊಫೈಲ್ ಆಗಿರೋದ್ರಿಂದ ನಾನು ನನ್ನ ಸ್ಟೈಲ್ ನಲ್ಲಿ ಹೇಳ್ತೀನಿ ಕಿವಿ (!) ಇದ್ರೆ ಕೇಳಿ......
ಕ್ಷಮಿಸಿ ಅದು ಕೇಳೋಕೆ ಬರಲ್ಲ ಓದಿ ತಿಳಿಕೊಳ್ಳಿ.

Hello ನನ್ನ ಬಗ್ಗೆ ಜಾಸ್ತಿ ಕೇಳಬೇಡಿ ನಿಮ್ಮ ಕಿವಿಗೆ ಒಳ್ಳೇದಲ್ಲ.........
ನಾನು ♥ಸ್ವಲ್ಪ ತರ್ಲೆ♥ಸ್ನೇಹ ಪೂರ್ವ ♥ಬುದ್ದಿವಂತ ♥ಆಶ್ಚರ್ಯ ♥ಜವಬ್ದಾರಿ ♥ಕಳ್ಳ ♥ಮಳ್ಳ ♥ಸುಂದರ ♥ತುಂಟ ♥ಮನಪೂರ್ವಕ ♥ಮಿಂಚುವ ♥ತಲೆ ಕೆಡಿಸುವ ♥ಒಳ್ಳೆ ಮನಸಿನ ♥ಸ್ವಲ್ಪ ಗಲಾಟೆ ♥ಕಣ್ಣ ಸಂಚಲ್ಲಿ ಮಿಂಚುವ ಮಿಂಚು ♥
ನನಗೆ ಕನಸಿದೆ♥ನಗುವಿದೆ♥ಜೊತೆಗೆ ಹೇಳಲಾಗದ ದುಃಖ ಇದೆ♥ಮರೆಯಲಾಗದ ಸಂತೋಷವಿದೆ♥ಕಾಣಿಸದ ಕಣ್ಣೀರಿದೆ♥
ಹಂಚಲಾಗದ ಆಘಾತವಿದೆ♥ದುಃಖ ಮರೆಸೋ ಮನಸುಗಳಿವೆ♥ಕಣ್ಣಿರುಒರೆಸೋ ಕೈಗಳಿವೆ♥ಸುಖ ದುಃಖ ಹಂಚಿಕೊಳ್ಳಲು ನಿಮ್ಮೆಲ್ಲರ ಸ್ನೇಹವಿದೆ♥ಈ ಸ್ನೇಹ ಹೀಗೆ ಚಿರವಾಗಿರಲಿ ಎಂದು ಆಶಿಸೋ ನನ್ನ ಮನಸಿದೆ ♥ಆ ಮನಸಿಗೆ ನಿಮ್ಮ ಸ್ನೇಹದ ಅವಶ್ಯಕತೆ ಇದೆ ♥
my facebook id: llokesh023@gmail.com
97310 31333

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.