Skip to main content

ದೇವರು

ಇಂದ Nalini
ಬರೆದಿದ್ದುJune 1, 2011
20ಅನಿಸಿಕೆಗಳು

ಜೀವನ ನಾವು ಅಂದುಕೊಂಡ ಹಾಗೆ ಇರುತ್ತದೆ ಅನ್ನುವುದು ಮಾತ್ರ ಸುಳ್ಳು ಅಂತ ಹಿರಿಯವರು ಹೇಳುತ್ತಾರಲ್ವ ,ಹಾಗೇ ಒಂದು ಜೀವಿ ಸ್ರುಶ್ಟಿ ಮಾಡಿ ಅದು ಹೀಗೆ ಅಂತ ದೇವರು ನಿಣ್ರಯಿಸಿರಬೇಕಾದರೆ ಮನುಶ್ಯ ಮಾಡುವ ಎಲ್ಲಾ ಸರಿ ತಪ್ಪುಗಳಿಗೆ ದೇವರು ಕಾರಣ ಅಂದುಕೊಳ್ಳಬಹುದ ಹಾಗಾದರೆ ..............?
ನೀನು ಮಾಡಿದ ಪಾಪವನ್ನು ಭಗವಂತ ನೋಡಿಕೊಳ್ಳುತ್ತಾನೆ ಅಂತ ಶಪಿಸುತ್ತಿವಲ್ಲ ಯಾರಾದರು ಅದರ ಫಲಿತಾಂಶ ಅನುಭವಿಸುತ್ತಾರ ಅನ್ನುವುದು ನನಗೆ ಅನುಮಾನವಾಗಿದೆ. .ನಾನು ಸಹ ಹೇಳುತ್ತೀನಿ ಈಗ ನಡೆಯುತ್ತಿರುವ ಎಲ್ಲಾ ಭು ವೈಪರಿತ್ಯಗಳಿಗೆ  ಮನುಶ್ಯ ಕಾರಣ ಅಂತ . ನಮ್ಮನ್ನು ದೇವರು ಸ್ರುಶ್ಟಿ  ಮಾಡಿರಬೇಕಾದರೆ ನಮ್ಮ ಭೂಮಿ ಹಾಳು ಮಾಡುವಂತ ಕೆಟ್ಟ ಬುದ್ದಿ ಯಾತಕ್ಕೆ ಕೊಟ್ಟದ್ದು, ಯಾರೊ ಒಬ್ಬ ಅಥವಾ ಒಂದು ದೇಶ ಮಾಡುವ ತಪ್ಪಿಗೆ ಇಡೀ ಮನುಕುಲ ಎನ್ ಮಾಡೋಕಾಗುತ್ತೆ  ಯಾಕೆ ಅವರಿಗೆ ಇಂತ ದೊಡ್ಡ ಶಿಕ್ಸ್ಯೆ . ಇದಕ್ಕೆಲ್ಲ ಭಗವಂತ ಕಾರಣ ಆಗೊಲ್ವ ನಮ್ಮನ್ನು ಭೂಮಿಗೆ ತಂದಿದ್ದು ಅವನೆ ಆದ್ರೆ ಒಳ್ಳೆ ಬುದ್ದಿ ಕೊಡೊಕೆ ಎನಾಯ್ತು. ಸುಳ್ಳು ಇರಬೇಕಾದರೆ ಸತ್ಯ ಸಹ ಇರಲೆಬೇಕು ಅಂತ ಅದ್ನ ಪ್ರೂವ್ ಮಾಡಲು ಆಗುತ್ತ? ಹಾಗಾದರೆ ಭಗವಂತ ಇರಬೇಕಾದರೆ ದೆವ್ವಗಳೂ ಇರಬೇಕು ಅಲ್ವಾ !
ಈಗ ರಿಸೆಂಟ್ ಆಗಿ ವಿಶ್ವ ಕಪ್ ಮ್ಯಾಚ್ ನಡಿತಲ್ವ ಅದರ  ಫೈನಲ್ನಲ್ಲಿ ನಮ್ ಸಚಿನ್ ೧೦೦ ರನ್ ಮಾಡ್ಲಿ ಅಂತ ಎಲ್ಲ ಕ್ರಿಕೆಟ್  ಪ್ರೇಮಿಗಳಾ ಆಸೆ ಆಗಿತ್ತಲ್ವ ಕಪ್ ವಿನ್ ಆಗಿದ್ದು ಸೆಕಂಡರಿ. ಸುಪ್ರಸಿದ್ದ ಗಾಯಕಿ ಅದಂತಹ ಲತಾ ಮಂಗೇಶ್ಕರ್ ಅಂತ ಎಶ್ಟು ಅಭಿಮಾನಿಗಳೂ ಹರಕೆ ಹೊತ್ತಿದ್ದರು, ಅದರಲ್ಲು ನಾನು ಸಹ ಒಬ್ಬಳೂ . ಅವತ್ತು  ಸಚಿನ್  ಬೇಗ ಔಟ್ ಆದ  GOD ಅವನ  ಕೆಲಸಕ್ಕೆ ಲಿವ್ ಮಾಡಿದ್ನ ಹಾಗಾದರೆ? ಇದ್ನ ಒದಿದವರು ಹೇಳಬಹುದು ಅವನ ಪರಿಶ್ರಮ ಅವತ್ತು ಚೆನ್ನಾಗಿರಲಿಲ್ಲ ಅಂತ . ಆಗಾದರೆ ದೇವರು ಭಕ್ತರ ಬೇಡಿಕೆಯನ್ನು ನೆರವೇರಿಸಲು ಆಗೊಲ್ವ ಅವನಿಗಿಂತ ಮಿಗಿಲಾದ ಶಕ್ತಿ ಯಾವುದಿಲ್ಲ ಅಂತ ಹೇಳಬೇಕಾದರೆ ಇದು ಅವನಿಗೆ ಆಗದ ಕೆಲಸಾನ. ಅಣೂ ಅಣೂವಿನಲ್ಲಿ ದೇವರಿದ್ದಾನೆ ಅನ್ನುವುದು ಸುಳ್ಳು ಅಂದುಕೊಳ್ತೇನೆ ಇವತ್ತಿಂದ ಹಾಗಾದರೆ.
ಇದೇ ತರಹ ಮುಂದುವರೆದರೆ ನಾಳೇ ಹುಟ್ಟುವ ಮಕ್ಕಳು ಆಸ್ತಿಕರಾಗಿರುತ್ತಾರೆ ಅನ್ನುವುದಕ್ಕೆ ಎನು ಗ್ಯಾರಂಟಿ ಅಲ್ವಾ.ಇಂತಹ ಎಶ್ಟೋ ಉದಾಹರಣೆಗಳೀವೆ ಹೇಳಲು.
ಒಟ್ಟಿನಲ್ಲಿ ಎಲ್ಲಾದಕ್ಕು ಮನುಶ್ಯನ ಅತಿಯಾದ ಆಸೆ ಎಲ್ಲಾ ನಾಶಗಳಿಗು ಕಾರಣ ಆಗೊದಾದ್ರೆ ಮನುಶ್ಯನ್ನ ಹುಟ್ಟಿಗೆ GOD ಕಾರಣಾ ಅಲ್ವ. SO  ಇದರ ಎಲ್ಲಾ ಕ್ರೆಡಿಟ್ ಅವನಿಗೆ ಸೇರಬೇಕು ನನ್ನ ಪ್ರಕಾರ. ಇದು ನನ್ನ ಅನಿಸಿಕೆ ಎಲ್ಲಾರಿಗು ವಿಭಿನ್ನ ರೀತಿಯ ಅಭಿಪ್ರಾಯಗಳಿರುತ್ತೆ ಅನ್ನುವ ಕಾರಣಕ್ಕೆ ಇದನ್ನು ಬರೆದಿರುವುದು.

ಲೇಖಕರು

Nalini

Thulasi

ನನ್ನ ಬಗ್ಗೆ ನಾನು ಹೇಳಿಕೊಂಡರೆ ಚೆನ್ನಾಗಿರುವುದಿಲ್ಲ

ಅನಿಸಿಕೆಗಳು

mahesh_dodamani ಶುಕ್ರ, 06/03/2011 - 22:35

ನಿಜ ನಿಮ್ಮ ಮಾತು ದೆವರಿದ್ದಾನೆ ನಲಿನಿ...............ನಿಮ್ಮ್ ಬರಹ ತುಂಬಾ ಚೆನ್ನಾಗಿದೆ........................ಯಾರು ದೆವರ ಮೆಲಿನ ನಂಬಿಕೆ ಕಲೆದುಕೊಲಬಾರದು...............................ನಿಮ್ಮ ಕವನದಿಂದ ತುಂಬಾ ಜನರಿಗೆ ದ್ಯಾನೊದಯ ಆಗುತೆ ಅಂತಾ ನಂಗೆ ಅನಿಸತಿದೆ ನಲಿನಿ ಅವರೆ.........................
 
ಮಹೆಶ ದೊಡ್ಡಮನಿ.....................

ನಾಗರಾಜು (ಪ್ರಮಾಣಿಸಲ್ಪಟ್ಟಿಲ್ಲ.) ಶನಿ, 06/04/2011 - 15:01

ಅಪ್ಪಾ ಕನ್ನಡ ಪಾ೦ಡಿತ್ಯ ಮಹಾಶಯ....ಕನ್ನಡ ಭಾಷೆಯನ್ನು ಸಣ್ಣ ಪುಟ್ಟ ತಪ್ಪುಗಳಿ೦ದ ಗಾಯಗೊಳಿಸು...ಅದು ಸಹಿಸುತ್ತದೆಆದರೆ ಅದನ್ನು ಕೊಲೆನೇ ಮಾಡ್ತಾಯಿದಿಯಲ್ಲಾ ಗುರುವೇ...?

ಎಚ್ಡಿ.ರೇವಣ್ಣ (ಪ್ರಮಾಣಿಸಲ್ಪಟ್ಟಿಲ್ಲ.) ಭಾನು, 06/05/2011 - 11:19

ತಂಗ್ಯವ್ವ,

"ನೀನು ಮಾಡಿದ ಪಾಪವನ್ನು ಭಗವಂತ ನೋಡಿಕೊಳ್ಳುತ್ತಾನೆ ಅಂತ ಶಪಿಸುತ್ತಿವಲ್ಲ ಯಾರಾದರು ಅದರ ಫಲಿತಾಂಶ ಅನುಭವಿಸುತ್ತಾರ ಅನ್ನುವುದು ನನಗೆ ಅನುಮಾನವಾಗಿದೆ."

"ಪೋಲೀಸ್ರ ಮಕ್ಳು ಕಳ್ಳೋವೇ" ಅಂತ ಕೇಳಿಲ್ವ? ವಬ್ರಾದ್ರೂ ಉದ್ದಾರಾಗಿದ್ನ ಕಂಡೀಯ? ಆಳಾಗ್ಲಿ ಬುಡು...ಲಂಚ ತಿನ್ನೋರ್ ಮಕ್ಳ ಸೀನು ಯಂಗೈತೆ ನೋಡೀಯ? ಯಿನ್ನೂ ಕ್ಯಟ್ದಾಗೈತೆ.ಸೆಂದಾಕೇ ಬರೀತಿಯ.ಸ್ವಲ್ಪ ಕಾಗುಣಿತ ನೋಡ್ಕಂಡು ಬರಿ ನಮ್ಮವ್ವ.ಎಚ್ಡಿ.ರೇವಣ್ಣ

ಉಮಾಶಂಕರ ಬಿ.ಎಸ್ ಸೋಮ, 06/06/2011 - 12:40

ನಳಿನಿ ಮೇಡಂಮಾಯ ಮಂತ್ರ ಮಾಡುವ ದೇವರು ಇದ್ದಾನೆಂಬುದರಲ್ಲಿ ನನಗೆ ನಂಬುಗೆಯಿಲ್ಲ, ಹಾಗೊಂದು ವೇಳೆ ಅವನು ಇದ್ದದ್ದೇ ಆದಲ್ಲಿ ಅವನನ್ನೂ ಸಹ ಲಂಚಾವತಾರಿಯನ್ನಾಗಿ ನಮ್ಮ ಹರಕೆಗಳಮೂಲಕ, ಭ್ರಷ್ಟನನ್ನಾಗಿಸಿದ್ದೇವೆಯಾದ್ದರಿಂದ 'ಅವನಿಲ್ಲ ಅವನಿಲ್ಲ'. ಆದರೂ ನಮ್ಮ ಕೆಲಸವೇ  ದೇವರು 'ಕಾಯಕವೇ ಕೈಲಾಸ'ಇತಿ ಉಮಾಶಂಕರ 

ನಳಿನಿ (ಪ್ರಮಾಣಿಸಲ್ಪಟ್ಟಿಲ್ಲ.) ಶನಿ, 09/24/2011 - 10:01

ಸರ್ ದೇವರು ಇದ್ದಾರೆ ಅಂತ ನಂಬಲೇಬೇಕು.

ಅಶ್ವಿನಿk ಗುರು, 06/16/2011 - 21:40

ಕಣ್ಣಿಗೆ ಕಾಣದ ದೇವರು ಹುಟ್ಟಿಸಿದ್ನೊ ಇಲ್ವೊ ಗೊತ್ತಿಲ್ಲ. ಆದರೆ, ಕಣ್ಣಿಗೆ ಕಾಣುವ ಅಪ್ಪ ಅಮ್ಮ  ಅನ್ನೋ ದೇವರು ಒಳ್ಳೆ ಬುದ್ದಿ ಬೆಳೆಸಿಕೊಳ್ಳಿ ಅ೦ತ ಹೇಳಿದ್ದು ಎಷ್ಟು ಕೇಳ್ತೀವಿ? ಹಾಗಾಗಿ, "ಮಾಡಿದ್ದುಣ್ಣೋ ಮಹರಾಯ"...ಎನ್ನೋ ಮಾತು ಸಾಕಷ್ಟು ಬಾರಿ ಅನ್ವಯ ಆಗುತ್ತೆ. ನಮ್ಮ ಮನಸ್ಸನ್ನ ನಾವೇ, ಕನ್ನಡೀಲಿ ಮುಖ ನೋಡಿದ೦ತೆ ನೋಡೋಕೆ ಶುರು ಮಾಡಿದಾಗ, ಒಳ್ಳೆದೂ ಕೆಟ್ಟದ್ದೂ ನಮ್ಮ ಕೈಲೇ ಇದೆ ಅನ್ನಿಸೋಕೆ ಶುರುವಾಗುತ್ತೆ.  

ಮೋಹನ ಸೋಮ, 06/20/2011 - 10:18

Yes you are correct

suresha ಭಾನು, 07/03/2011 - 22:30

ಮಾನ್ಯ ನಲಿನಿಯವರೆ,
ನಿಮ್ಮ ಲೆಖನ ಚೆನ್ನಾಗಿದೆ. ನೋಡಿ ಮಾನ್ಯರೆ, ದೇವರ ಬಗ್ಗೆ ನಾಸ್ತಿಕರಿಗೆ ತಿಳಿಯದು. ದೇವರ ಬಗ್ಗೆ ಹೇಳೋಕೋದ್ರೆ ದೇವರೆಲ್ಲಿದ್ದಾನೆ? ಎನ್ನುವರು. ನಾಸ್ತಿಕರಿಗೆ ; ಹೇಗೆ ಹುಟ್ಟಿದಿ? ಅಂದ್ರೆ, ತಾಯಿ ಗರ್ಭದಿಂದ ಎನ್ನುತ್ತಾರೆ. ಮತ್ತೆ ಆ ತಾಯಿ ಎಲ್ಲಿಂದ ಹುಟ್ಟಿದ್ರು ಅಂದ್ರೆ. ಅವ್ರು ಅವರ ತಾಯಿ ಗರ್ಭದಿಂದ ಅಂತಾರೆ ಒಟ್ಟಾರೆ ಮೂಲ ತಾಯಿ ಕೇಳಿದರೆ ಗೊತ್ತಿಲ್ಲ ಎನ್ನುವುದು ಕೊನೆ ಉತ್ತರ. ಹಾಗೂ ಸತ್ತು ಎಲ್ಲಿಗೆ ಹೋಗುತ್ತೇವೆ? ಇವೆಲ್ಲಾ ಯಾರ್ ಬಲ್ಲೋರು ಅನ್ನೋದೇ ದೊಡ್ಡ ಪ್ರಶ್ನೆ. ಬೇಡ ಬಿಡ್ರಿ ಹೆಚ್ಚು ಮಾತಾಡಿದ್ರೆ ತಲೆ ಕೆಡೋಪಕಿ ಬಿಡ್ರಿ. ನಿಮ್ ದೇವ್ರಿಗೇ ಗೊತ್ತು ನನ್ಗೇನ್ ಗೊತ್ತು ಅನ್ತಾರೆ. ಬಿಡಿ. ಇವೆಲ್ಲಾ ನಾಸ್ತಿಕರಿಗೆ ಎಷ್ಟೇಳಿದ್ರು ತಿಳ್ಕೋದಿಲ್ಲ. 
ದೇವರು ಸರ್ವಾ ಂತರ್ಯಾಮಿ. ಭೂಮಿಯ ಎಲ್ಲದರಲ್ಲೂ ದೇವರಿದ್ದಾನೆ. ಮನುಷ್ಯನು ಹೇಗೆ ತನ್ನ ಆತ್ಮವನ್ನು ಕಾಣುವುದಿಲ್ಲವೋ. ಹಾಗೇ ದೇವರನ್ನೂ ಕಣುವುದಿಲ್ಲ. ಆದ್ರೆ ದೇವರು ಮತ್ರ ಒಂದು ಕಾಣದ ಅದ್ಭುತ ಶಕ್ತಿ. ಅದು ಅಗೋಚರ, ಅನನ್ಯ, ಅನಂತ.
ನೀವು ದೇವರ ಮೇಲಿಟ್ಟಿರುವ ನಂಬಿಕೆ ನನಗೆ ಸಂತೋಷ ತಂದಿದೆ. ನಿಮ್ಮ ನಂಬಿಕೆ ಪಕ್ವವಾಗಲಿ ಎಂಬುದೇ ನನ್ನ ಆಸೆ.

ನಳಿನಿ (ಪ್ರಮಾಣಿಸಲ್ಪಟ್ಟಿಲ್ಲ.) ಶನಿ, 09/24/2011 - 10:02

ಪ್ರತಿಕ್ರಿಯೆಗೆ ಧನ್ಯಾವಾದಗಳು.

venkatt ಭಾನು, 10/02/2011 - 18:47

ತುಂಬಾ ತಡವಾಗಿ ಓದಿ, ತಡವಾಗಿ ಉತ್ತರಿಸಬೇಕೆನಿಸ್ತಾ ಇದೆ.  ಸುರೇಶ್ ರವರು ಹಾಕೋದಾದ್ರೆ  ಸ್ವಲ್ಪ ತಡವಾಗಿ ನಿಮ್ಮ ದೇವ್ರಿಗೆ ಹೇಳಿ ಶಾಪ ಹಾಕಿಸಿಬಿಡಿ.                                                                          ದೇವರ ಬಗ್ಗೆ ನಾಸ್ತಿಕರಿಗೆ ತಿಳಿಯದು. ದೇವರ ಬಗ್ಗೆ ಹೇಳೋಕೋದ್ರೆ ದೇವರೆಲ್ಲಿದ್ದಾನೆ?ಎನ್ನುವರು.                                                       --ಅಸಲು ತಾವು ಯಾವ ಯೂನಿವರ್ಸಿಟಿಯಲ್ಲಿ ದೇವರ ಬಗ್ಗೆ ಉಪದೇಶ ಮಾಡುವಂತಹ ಡಾಕ್ಫ್ಟರೇಟ್ ಪಡೆದಿರುವಿರೋ...                            ಇವೆಲ್ಲಾ ನಾಸ್ತಿಕರಿಗೆ ಎಷ್ಟೇಳಿದ್ರು ತಿಳ್ಕೋದಿಲ್ಲ.                                                                                                                  -ಅಸಲಿಗೆ ತಿಳಿಹೇಳೊಕೆ ನಿಮಗೆ ಯಾವ ಅದಿಕಾರವಿದೆ ಅಂತೀನಿ.                                                                                         "ನೀವು ದೇವರ ಮೇಲಿಟ್ಟಿರುವ ನಂಬಿಕೆ ನನಗೆ ಸಂತೋಷ ತಂದಿದೆ. ನಿಮ್ಮ ನಂಬಿಕೆ ಪಕ್ವವಾಗಲಿ ಎಂಬುದೇ ನನ್ನ ಆಸೆ"    ಅಂತ ಬರೀತೀರಲ್ಲಾ, -ಹಾಗಾದ್ರೆ ನನಗೂ ದೇವರ ಬಗ್ಗೆ ಸಕತ್ ನಂಬಿಕೆ ರೀ ಅಂತ ಬರೆದರೆ ನಿಮ್ಗೆ ಇನ್ನೂ ಜಾಸ್ತಿ ಸಂತೋಷ  ಆಗುತ್ತಾ?                                            ನಿಮಗೆ ದೇವರ ಬಗ್ಗೆ ನಂಬಿಕೆ ಇದೆಯಾ  Its ok. ಅದು ನಿಮಗೆ ಬಿಟ್ಟಿದ್ದು. ಅದು ಬಿಟ್ಟು ಬೇರೆಯವರು ನಿಮ್ಮಂತೆ  ದೇವರನ್ನು ನಂಬಲಿ ಅಂತ ಯಾಕೆ ಬಯಸ್ತೀರಾ?   ನಿಮ್ಮನ್ನ ನೀವೇ ದೇವರ ಪ್ರತಿನಿದಿಗಳು ಅಂತೇನಾದ್ರೂ ತಿಳ್ಕೊಂಡಿದ್ದರೆ ಅದು ನಿಮ್ಮ ಅಜ್ಞಾನವಲ್ಲದೆ ಬೇರೇನೂ ಅಲ್ಲ.     ನೋಡಿ ದೇವರ ಬಗ್ಗೆ ನಿಮಗೆ  ಎಷ್ಟು  ತಿಳಿದಿದೆಯೋ ಗೊತ್ತಿಲ್ಲ. ಆದ್ರೆ ನಿಮಗಿಂತ ಜಾಸ್ತಿ ತಿಳ್ಕೊಂಡ ಬಹಳಷ್ಟು ಸಾದಕರು ನಾಸ್ತಿಕರ ಸಾಲಿನಲ್ಲೇ ಗುರುತಿಸಿಕೊಳ್ತಾರೆ ಅನ್ನೋದನ್ನು ತಿಳ್ಕೊಳ್ಳಿ.  ಪರಮ ಆಸ್ತಿಕರು ಅಂತನಿಸಿಕೊಂಡವರೆಲ್ಲ ಸ್ವರ್ಗಕ್ಕೆ  ಹೋಗ್ತಾರೆ, ನಾಸ್ತಿಕರೆಲ್ಲಾ  ನರಕಕ್ಕೆ ಹೋಗ್ತಾರೆ ಅಂತ ನನಗನಿಸುವುದೇ ಇಲ್ಲ.     ಆಸ್ತಿಕರ ವಾದ ನಿಜಾನೇ ಆದರೆ ಈ ನಮ್ಮ ಯಡಿಯೂರಪ್ಪನಿಗೆ ಈಗಾಗಲೇ ಸ್ವರ್ಗದಲ್ಲಿ ಒಂದು ಸೀಟು ರಿಸರ್ವ್ ಆಗಿಬಿಟ್ಟಿರುತ್ತೆ.  ಏಕೆಂದ್ರೆ ಈತ ಪರಮ ದೈವಭಕ್ತ. ಈತ ಹೋಗದೇ ಉಳಿದ ದೇವಾಲಯವಿಲ್ಲ. ಬೇಡದೇ ಬಿಟ್ಟ ದೇವರಿಲ್ಲ.   ಆದ್ದರಿಂದ ನಿಮಗೇನಾದ್ರು ಸ್ವರ್ಗದ ಆಸೆಯೇನಾದ್ರು ಇದ್ದ್ರೆ ಮೊದಲು ಈ ಯಡಿಯೂರಪ್ಪನ ಹೆಜ್ಜೆಯಲ್ಲೇ ಹೆಜ್ಜೆ ಹಾಕಿ ಸ್ವರ್ಗ ಸಿಕ್ಕಿದರೂ ಸಿಗಬಹುದು. ನೋಡಿ ಸ್ವಾಮಿ ನಮಗಂತೂ ನಿಮ್ಮ ಹಾಗೆ   ದೇವಾಲಯ,ಮಸೀದಿ, ಚರ್ಚ್ ಗಳಿಗೆ ಹೋಗುವಷ್ಟು ಪುರುಸೊತ್ತಿಲ್ಲ. ಈಗಾಗಲೇ ಮೂವತ್ತು ಮುಗಿದಿದೆ. ಇನ್ನೊಂದು ಎಪ್ಪತ್ತು ಬಾಕಿ ಉಳಿದಿರಬಹುದು.  ಇದರ ನಡುವೇನೆ ಉಳಿದ ಪ್ರತಿ ಕ್ಷಣವನ್ನೂ ಆನಂದದಿಂದ ಅನುಬವಿಸಿಬಿಡಬೇಕು. ಹೇಗೂ ನೀವೂ ನಾವೆಲ್ಲಾ ಸಾಯ್ತೀವಲ್ಲಾ. ಸತ್ತು ನೀವೇನಾದ್ರೂ  ಸ್ವರ್ಗಕ್ಕೆ ಹೋದರೆ  ನಿಮ್ಮ ದೇವರಿಗೆ ರೆಕಮೆಂಡ್ ಮಾಡಿ ನಮ್ಮನ್ನೂ ಅಲ್ಲಿಗೆ ಕರೆಸಿಕೊಳ್ಳೋಕೆ ಪ್ರಯತ್ನ ಮಾಡಿ.    

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 10/04/2011 - 10:08

neevu devaranna nambi anta heltilla devru nambodu bidodu nim ishta avra abhipraya avru heliddu ashte.

venkatt ಮಂಗಳ, 10/04/2011 - 23:27

ತಮ್ಮ  ನಾಮಧೇಯವನ್ನು ತಾವು ತಿಳಿಸಿಲ್ಲ. ಇರಲಿ. ನಿಮಗೆ ಸುರೇಶ್ ರವರ ಅಭಿಪ್ರಾಯ/ಒಳಾರ್ಥ  ಸರಿಯಾಗಿ  ಅರ್ಥ ಆಗಿಲ್ಲ ಅಂಥ ಕಾಣಿಸುತ್ತೆ. ಮತ್ತೊಮ್ಮೆ ಆ ಬರಹವನ್ನು ಓದಿ. ಆ ನಂತರ ನಿಮ್ಮ ಅಭಿಪ್ರಾಯವನ್ನು ತಿಳಿಸಿ. ಆರೋಗ್ಯಕರ ಚರ್ಚೆಗೆ ನಾನು ಸಿದ್ದ. 

suresha ಭಾನು, 10/09/2011 - 17:11

ಮಾನ್ಯ ವೆಂಕಟ್ ಅವರೆ,ನಳಿನಿಯವರ ದೇವರ ಲೇಖನವನ್ನು ತಾವು ಸರಿಯಾಗಿ ಓದಿಲ್ಲವೆನಿಸುತ್ತದೆ. ಅವರು ದೇವರು ಲೇಖನದಲ್ಲಿ ರೀಸೆಂಟ್ ಆಗಿ ನಡೆದ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಸಚಿನ್ ೧೦೦ ರನ್ ಮಾಡ್ಲಿ ಅಂತ ಎಲ್ಲ ಕ್ರಿಕೆಟ್ ಪ್ರೇಮಿಗಳ ಆಸೆ ಆಗಿತ್ತಲ್ವ. ಕಪ್ ವಿನ್ ಆಗಿದ್ದು ಸೆಕೆಂಡರಿ. ಸುಪ್ರಸಿದ್ದ ಗಾಯಕಿ ಆದಂತಹ ಲತಾ ಮಂಗೇಶ್ಕರ್ ಅಂತ ಎಷ್ಟೋ ಅಭಿಮಾನಿಗಳೂ ಹರಕೆ ಹೊತ್ತಿದ್ದರು, ಅದರಲ್ಲಿ ನಾನೂ ಸಹ ಒಬ್ಬಳು ಎಂಬ ಸಾಲು ಓದಿರುತ್ತೀರಿ ಎಂದುಕೊಳ್ಳುತ್ತೇನೆ.ನಳಿನಿಯವರು ದೇವರ ಮೇಲಿಟ್ಟಿರುವ ನಂಬಿಕೆಯನ್ನು ಲೇಖನದಲ್ಲಿ ವ್ಯಕ್ತಪಡಿಸಿದ್ದಾರೆ. ಅವರು, ಒಟ್ಟಿನಲ್ಲಿ ಎಲ್ಲದಕ್ಕೂ ಮನುಷ್ಯನ ಅತಿಯಾದ ಆಸೆ ಎಲ್ಲಾ ನಾಶಗಳಿಗೂ ಕಾರಣ ಆಗೊದಾದ್ರೆ, ಮನುಷ್ಯನ ಹುಟ್ಟಿಗೆ ದೇವರು ಕಾರಣ ಅಲ್ವ ಹಾಗಾದರ ಇದರ ಎಲ್ಲಾ ಕ್ರೆಡಿಟ್ ಅವನಿಗೆ ಸೇರಬೇಕು ಎಂಬುದು ದೇವರು ಲೇಖನದಲ್ಲಿ ಇರುತ್ತದೆ.ಇಲ್ಲಿ ತಿಳಿದುಬರುತ್ತದೆ ವಿಶ್ವಕಪ್ ಫೈನಲ್ ನಲ್ಲಿ ಸಚಿನ್ ೧೦೦ ರನ್ ಮಾಡದ ಕಾರಣಕ್ಕಾಗಿಯೇ ನಳಿನಿಯವರು ದೇವರು ಎಂಬ ವಿಷಯವನ್ನು ತೆಗೆದುಕೊಂಡು ಇಷ್ಟೆಲ್ಲಾ ಬರೆದಿರುತ್ತಾರೆ ಎಂಬ ಕಾರಣಕ್ಕೆ ನಾನು ನಳಿನಿಯವರ ದೇವರು ಲೇಖನಕ್ಕೆ ಅನಿಸಿಕೆ ಕಳುಹಿಸಿದೆ.ಇಷ್ಟಕ್ಕೂ ನಾನು ನಳಿನಿಯವರ ದೇವರು ಲೇಖನಕ್ಕೆ ಕಳುಹಿಸಿದ ಅನಿಸಿಕೆಯಲ್ಲಿ ಸ್ವರ್ಗದ ವಿಷಯವನ್ನೇ ತೆಗೆದುಕೊಂಡಿಲ್ಲ. ತಾವ್ಯಾಕೆ ಸ್ವರ್ಗದ ವಿಷಯವನ್ನು ತೆಗೆದುಕೊಂಡಿರೋ ಗೊತ್ತಿಲ್ಲ? ಹಾಗೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಸ್ವರ್ಗದ ವಿಷಯಕ್ಕೆ ಉದಾಹರಣೆಯಾಗಿ ತೆಗೆದುಕೊಂಡಿರೋ ಗಿತ್ತಿಲ್ಲ.?ನೋಡಿ ಸ್ವಾಮಿ ದೇವಾಲಯ ಸುತ್ತಿದರೆ ಸ್ವರ್ಗಕ್ಕೆ ಹೋಗುವರು ಎಂಬುದು ನನಗಂತೂ ಗೊತ್ತಿಲ್ಲ.ಯಡಿಯೂರಪ್ಪನವರನ್ನು ಉದಾಹರಣೆಗೆ ತೆಗೆದುಕೊಂಡಿರಲ್ಲ ಅವರಿಗೆ ಸ್ವರ್ಗದ ದಾರಿ ಗೊತ್ತಿರಬೇಕು. ನನಗಂತ್ರೂ ಗೊತ್ತಿಲ್ಲ.ಧರ್ಮಾಚರಣೆ, ಇಷ್ಟ ದೇವರ ಪ್ರಾರ್ಥನೆ, ಇವು ಅವರವರ ನಂಬಿಕೆಯ ಮೇಲೆ ಬಿಟ್ಟಿದ್ದು. ನಾನು ನಳಿನಿಯವರ ದೇವರು ಲೇಖನಕ್ಕೆ ಕಳುಹಿಸಿದ ಅನಿಸಿಕೆಯಿಂದಾಗಿ ನಿಮಗೆ ನೋವುಂಟಾಗಿದ್ದರೆ ಕ್ಷಮಿಸಿ.ವೈದ್ಯ ವಸ್ತ್ರ ಧರಿಸಿದರೆ ವೈದ್ಯನಾಗುವುದಿಲ್ಲ. ವೇಷ ಧರಿಸಿದರೆ ಸಾಮರ್ಥ್ಯ ಬಾರದು ಹಾಗೆಯೇ ಮನುಷ್ಯನ ಕಲಿಕೆಗೆ, ತಿಳುವಳಿಕೆಗೆ, ಅನುಭವಕ್ಕೆ ಕೊನೆಯೇ ಇಲ್ಲ.ಇನ್ನೊಬ್ಬರ ಅಜ್ಞಾನವನ್ನು ಗುರುತಿಸುವಷ್ಟು ಜಾಣ ನಾನಲ್ಲ. ಹಾಗೂ ನಾನೇನು ಡಾಕ್ಟರೇಟ್ ಪಡೆದವನೂ ಅಲ್ಲ. ಸ್ವಾಮಿ ನಿಮಗಿಂತ ಚಿಕ್ಕವನು.ನಿಮ್ಮ ಅನಿಸಿಕೆಯಲ್ಲಿ ಯಾವ ಅದಿಕಾರವಿದೆ ಎಂಬ ಶಬ್ದದಲ್ಲಿ ಧಿ ಎಂದು ಮಹಾಪ್ರಾಣ ಬರಬೇಕಿತ್ತು, ಟೈಪ್ ಮಾಡುವಲ್ಲಿ ತಪ್ಪಾಯಿತೋ ಏನೊ ಒಟ್ಟಿನಲ್ಲಿ ಆ ಅಧಿಕಾರವಿದೆ ಎಂಬ ಶಬ್ದ ತಪ್ಪಾಗಿದೆ. ಹಾಗೂ ಅನುಬವಿಸಿಬಿಡಬೇಕು ಎಂಬ ಶಬ್ದದಲ್ಲಿ ಭ ಮಹಾಪ್ರಾಣ ಬಳಸಿಲ್ಲಟೈಪ್ ಮಾಡುವಲ್ಲಿ ತಪ್ಪಾಯಿತೋ ಗೊತ್ತಿಲ್ಲ ಅನುಭವಿಸಿಬಿಡಬೇಕು ಎಂಬ ಶಬ್ದವನ್ನು ತಪ್ಪು ಮಾಡಿದ್ದೀರಿ. 

suresha ಶನಿ, 10/22/2011 - 16:40

ಮಾನ್ಯ ವೆಂಕಟ್ ಅವರೆ,

ನಳಿನಿಯವರ ದೇವರು ಲೇಖನವನ್ನು ತಾವು ಸರಿಯಾಗಿ ಓದಿಲ್ಲವೆನಿಸುತ್ತದೆ. ಅವರು ದೇವರು ಲೇಖನದಲ್ಲಿ ರೀಸೆಂಟ್ ಆಗಿ ನಡೆದ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಸಚಿನ್ ೧೦೦ ರನ್ ಮಾಡ್ಲಿ ಅಂತ ಎಲ್ಲ ಕ್ರಿಕೆಟ್ ಪ್ರೇಮಿಗಳ ಆಸೆ ಆಗಿತ್ತಲ್ವ. ಕಪ್ ವಿನ್ ಆಗಿದ್ದು ಸೆಕೆಂಡರಿ. ಸುಪ್ರಸಿದ್ದ ಗಾಯಕಿ ಆದಂತಹ ಲತಾ ಮಂಗೇಶ್ಕರ್ ಅಂತ ಎಷ್ಟೋ ಅಭಿಮಾನಿಗಳೂ ಹರಕೆ ಹೊತ್ತಿದ್ದರು, ಅದರಲ್ಲಿ ನಾನೂ ಸಹ ಒಬ್ಬಳು ಎಂಬ ಸಾಲು ಓದಿರುತ್ತೀರಿ ಎಂದುಕೊಳ್ಳುತ್ತೇನೆ.

ನಳಿನಿಯವರು ದೇವರ ಮೇಲಿಟ್ಟಿರುವ ನಂಬಿಕೆಯನ್ನು ಲೇಖನದಲ್ಲಿ ವ್ಯಕ್ತಪಡಿಸಿದ್ದಾರೆ. ಅವರು, ಒಟ್ಟಿನಲ್ಲಿ ಎಲ್ಲದಕ್ಕೂ ಮನುಷ್ಯನ ಅತಿಯಾದ ಆಸೆ ಎಲ್ಲಾ ನಾಶಗಳಿಗೂ ಕಾರಣ ಆಗೊದಾದ್ರೆ, ಮನುಷ್ಯನ ಹುಟ್ಟಿಗೆ ದೇವರು ಕಾರಣ ಅಲ್ವ ಹಾಗಾದರ ಇದರ ಎಲ್ಲಾ ಕ್ರೆಡಿಟ್ ಅವನಿಗೆ ಸೇರಬೇಕು ಎಂಬುದು ದೇವರು ಲೇಖನದಲ್ಲಿ ಇರುತ್ತದೆ.

ಇಲ್ಲಿ ತಿಳಿದುಬರುತ್ತದೆ ವಿಶ್ವಕಪ್ ಫೈನಲ್ ನಲ್ಲಿ ಸಚಿನ್ ೧೦೦ ರನ್ ಮಾಡದ ಕಾರಣಕ್ಕಾಗಿಯೇ ನಳಿನಿಯವರು ದೇವರು ಎಂಬ ವಿಷಯವನ್ನು ತೆಗೆದುಕೊಂಡು ಇಷ್ಟೆಲ್ಲಾ ಬರೆದಿರುತ್ತಾರೆ ಎಂಬ ಕಾರಣಕ್ಕೆ ನಾನು ನಳಿನಿಯವರ ದೇವರು ಲೇಖನಕ್ಕೆ ಅನಿಸಿಕೆ ಕಳುಹಿಸಿದೆ.

ಇಷ್ಟಕ್ಕೂ ನಾನು ನಳಿನಿಯವರ ದೇವರು ಲೇಖನಕ್ಕೆ ಕಳುಹಿಸಿದ ಅನಿಸಿಕೆಯಲ್ಲಿ ಸ್ವರ್ಗದ ವಿಷಯವನ್ನೇ ತೆಗೆದುಕೊಂಡಿಲ್ಲ. ತಾವ್ಯಾಕೆ ಸ್ವರ್ಗದ ವಿಷಯವನ್ನು ತೆಗೆದುಕೊಂಡಿರೋ ಗೊತ್ತಿಲ್ಲ? ಹಾಗೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಸ್ವರ್ಗದ ವಿಷಯಕ್ಕೆ ಉದಾಹರಣೆಯಾಗಿ ತೆಗೆದುಕೊಂಡಿರೋ ಗಿತ್ತಿಲ್ಲ.?

ನೋಡಿ ಸ್ವಾಮಿ ದೇವಾಲಯ ಸುತ್ತಿದರೆ ಸ್ವರ್ಗಕ್ಕೆ ಹೋಗುವರು ಎಂಬುದು ನನಗಂತೂ ಗೊತ್ತಿಲ್ಲ.ಯಡಿಯೂರಪ್ಪನವರನ್ನು ಉದಾಹರಣೆಗೆ ತೆಗೆದುಕೊಂಡಿರಲ್ಲ ಅವರಿಗೆ ಸ್ವರ್ಗದ ದಾರಿ ಗೊತ್ತಿರಬೇಕು. ನನಗಂತ್ರೂ ಗೊತ್ತಿಲ್ಲ.

ಧರ್ಮಾಚರಣೆ, ಇಷ್ಟ ದೇವರ ಪ್ರಾರ್ಥನೆ, ಇವು ಅವರವರ ನಂಬಿಕೆಯ ಮೇಲೆ ಬಿಟ್ಟಿದ್ದು. ನಾನು ನಳಿನಿಯವರ ದೇವರು ಲೇಖನಕ್ಕೆ ಕಳುಹಿಸಿದ ಅನಿಸಿಕೆಯಿಂದಾಗಿ ನಿಮಗೆ ನೋವುಂಟಾಗಿದ್ದರೆ ಕ್ಷಮಿಸಿ.

ವೈದ್ಯ ವಸ್ತ್ರ ಧರಿಸಿದರೆ ವೈದ್ಯನಾಗುವುದಿಲ್ಲ. ವೇಷ ಧರಿಸಿದರೆ ಸಾಮರ್ಥ್ಯ ಬಾರದು ಹಾಗೆಯೇ ಮನುಷ್ಯನ ಕಲಿಕೆಗೆ, ತಿಳುವಳಿಕೆಗೆ, ಅನುಭವಕ್ಕೆ ಕೊನೆಯೇ ಇಲ್ಲ.

ಇನ್ನೊಬ್ಬರ ಅಜ್ಞಾನವನ್ನು ಗುರುತಿಸುವಷ್ಟು ಜಾಣ ನಾನಲ್ಲ. ಹಾಗೂ ನಾನೇನು ಡಾಕ್ಟರೇಟ್ ಪಡೆದವನೂ ಅಲ್ಲ. ಸ್ವಾಮಿ ನಿಮಗಿಂತ ಚಿಕ್ಕವನು.

ನಿಮ್ಮ ಅನಿಸಿಕೆಯಲ್ಲಿ ಯಾವ ಅದಿಕಾರವಿದೆ ಎಂಬ ಶಬ್ದದಲ್ಲಿ ಧಿ ಎಂದು ಮಹಾಪ್ರಾಣ ಬರಬೇಕಿತ್ತು, ಟೈಪ್ ಮಾಡುವಲ್ಲಿ ತಪ್ಪಾಯಿತೋ ಏನೊ ಒಟ್ಟಿನಲ್ಲಿ ಆ ಅಧಿಕಾರವಿದೆ ಎಂಬ ಶಬ್ದ ತಪ್ಪಾಗಿದೆ. ಹಾಗೂ ಅನುಬವಿಸಿಬಿಡಬೇಕು ಎಂಬ ಶಬ್ದದಲ್ಲಿ ಭ ಮಹಾಪ್ರಾಣ ಬಳಸಿಲ್ಲಟೈಪ್ ಮಾಡುವಲ್ಲಿ ತಪ್ಪಾಯಿತೋ ಗೊತ್ತಿಲ್ಲ ಅನುಭವಿಸಿಬಿಡಬೇಕು ಎಂಬ ಶಬ್ದವನ್ನು ತಪ್ಪು ಮಾಡಿದ್ದೀರಿ.

venkatt ಭಾನು, 10/02/2011 - 18:48

ತುಂಬಾ ತಡವಾಗಿ ಓದಿ, ತಡವಾಗಿ ಉತ್ತರಿಸಬೇಕೆನಿಸ್ತಾ ಇದೆ.  ಸುರೇಶ್ ರವರು ಹಾಕೋದಾದ್ರೆ  ಸ್ವಲ್ಪ ತಡವಾಗಿ ನಿಮ್ಮ ದೇವ್ರಿಗೆ ಹೇಳಿ ಶಾಪ ಹಾಕಿಸಿಬಿಡಿ.                                                                          ದೇವರ ಬಗ್ಗೆ ನಾಸ್ತಿಕರಿಗೆ ತಿಳಿಯದು. ದೇವರ ಬಗ್ಗೆ ಹೇಳೋಕೋದ್ರೆ ದೇವರೆಲ್ಲಿದ್ದಾನೆ?ಎನ್ನುವರು.                                                       --ಅಸಲು ತಾವು ಯಾವ ಯೂನಿವರ್ಸಿಟಿಯಲ್ಲಿ ದೇವರ ಬಗ್ಗೆ ಉಪದೇಶ ಮಾಡುವಂತಹ ಡಾಕ್ಫ್ಟರೇಟ್ ಪಡೆದಿರುವಿರೋ...                            ಇವೆಲ್ಲಾ ನಾಸ್ತಿಕರಿಗೆ ಎಷ್ಟೇಳಿದ್ರು ತಿಳ್ಕೋದಿಲ್ಲ.                                                                                                                  -ಅಸಲಿಗೆ ತಿಳಿಹೇಳೊಕೆ ನಿಮಗೆ ಯಾವ ಅದಿಕಾರವಿದೆ ಅಂತೀನಿ.                                                                                         "ನೀವು ದೇವರ ಮೇಲಿಟ್ಟಿರುವ ನಂಬಿಕೆ ನನಗೆ ಸಂತೋಷ ತಂದಿದೆ. ನಿಮ್ಮ ನಂಬಿಕೆ ಪಕ್ವವಾಗಲಿ ಎಂಬುದೇ ನನ್ನ ಆಸೆ"    ಅಂತ ಬರೀತೀರಲ್ಲಾ, -ಹಾಗಾದ್ರೆ ನನಗೂ ದೇವರ ಬಗ್ಗೆ ಸಕತ್ ನಂಬಿಕೆ ರೀ ಅಂತ ಬರೆದರೆ ನಿಮ್ಗೆ ಇನ್ನೂ ಜಾಸ್ತಿ ಸಂತೋಷ  ಆಗುತ್ತಾ?                                            ನಿಮಗೆ ದೇವರ ಬಗ್ಗೆ ನಂಬಿಕೆ ಇದೆಯಾ  Its ok. ಅದು ನಿಮಗೆ ಬಿಟ್ಟಿದ್ದು. ಅದು ಬಿಟ್ಟು ಬೇರೆಯವರು ನಿಮ್ಮಂತೆ  ದೇವರನ್ನು ನಂಬಲಿ ಅಂತ ಯಾಕೆ ಬಯಸ್ತೀರಾ?   ನಿಮ್ಮನ್ನ ನೀವೇ ದೇವರ ಪ್ರತಿನಿದಿಗಳು ಅಂತೇನಾದ್ರೂ ತಿಳ್ಕೊಂಡಿದ್ದರೆ ಅದು ನಿಮ್ಮ ಅಜ್ಞಾನವಲ್ಲದೆ ಬೇರೇನೂ ಅಲ್ಲ.     ನೋಡಿ ದೇವರ ಬಗ್ಗೆ ನಿಮಗೆ  ಎಷ್ಟು  ತಿಳಿದಿದೆಯೋ ಗೊತ್ತಿಲ್ಲ. ಆದ್ರೆ ನಿಮಗಿಂತ ಜಾಸ್ತಿ ತಿಳ್ಕೊಂಡ ಬಹಳಷ್ಟು ಸಾದಕರು ನಾಸ್ತಿಕರ ಸಾಲಿನಲ್ಲೇ ಗುರುತಿಸಿಕೊಳ್ತಾರೆ ಅನ್ನೋದನ್ನು ತಿಳ್ಕೊಳ್ಳಿ.  ಪರಮ ಆಸ್ತಿಕರು ಅಂತನಿಸಿಕೊಂಡವರೆಲ್ಲ ಸ್ವರ್ಗಕ್ಕೆ  ಹೋಗ್ತಾರೆ, ನಾಸ್ತಿಕರೆಲ್ಲಾ  ನರಕಕ್ಕೆ ಹೋಗ್ತಾರೆ ಅಂತ ನನಗನಿಸುವುದೇ ಇಲ್ಲ.     ಆಸ್ತಿಕರ ವಾದ ನಿಜಾನೇ ಆದರೆ ಈ ನಮ್ಮ ಯಡಿಯೂರಪ್ಪನಿಗೆ ಈಗಾಗಲೇ ಸ್ವರ್ಗದಲ್ಲಿ ಒಂದು ಸೀಟು ರಿಸರ್ವ್ ಆಗಿಬಿಟ್ಟಿರುತ್ತೆ.  ಏಕೆಂದ್ರೆ ಈತ ಪರಮ ದೈವಭಕ್ತ. ಈತ ಹೋಗದೇ ಉಳಿದ ದೇವಾಲಯವಿಲ್ಲ. ಬೇಡದೇ ಬಿಟ್ಟ ದೇವರಿಲ್ಲ.   ಆದ್ದರಿಂದ ನಿಮಗೇನಾದ್ರು ಸ್ವರ್ಗದ ಆಸೆಯೇನಾದ್ರು ಇದ್ದ್ರೆ ಮೊದಲು ಈ ಯಡಿಯೂರಪ್ಪನ ಹೆಜ್ಜೆಯಲ್ಲೇ ಹೆಜ್ಜೆ ಹಾಕಿ ಸ್ವರ್ಗ ಸಿಕ್ಕಿದರೂ ಸಿಗಬಹುದು. ನೋಡಿ ಸ್ವಾಮಿ ನಮಗಂತೂ ನಿಮ್ಮ ಹಾಗೆ   ದೇವಾಲಯ,ಮಸೀದಿ, ಚರ್ಚ್ ಗಳಿಗೆ ಹೋಗುವಷ್ಟು ಪುರುಸೊತ್ತಿಲ್ಲ. ಈಗಾಗಲೇ ಮೂವತ್ತು ಮುಗಿದಿದೆ. ಇನ್ನೊಂದು ಎಪ್ಪತ್ತು ಬಾಕಿ ಉಳಿದಿರಬಹುದು.  ಇದರ ನಡುವೇನೆ ಉಳಿದ ಪ್ರತಿ ಕ್ಷಣವನ್ನೂ ಆನಂದದಿಂದ ಅನುಬವಿಸಿಬಿಡಬೇಕು. ಹೇಗೂ ನೀವೂ ನಾವೆಲ್ಲಾ ಸಾಯ್ತೀವಲ್ಲಾ. ಸತ್ತು ನೀವೇನಾದ್ರೂ  ಸ್ವರ್ಗಕ್ಕೆ ಹೋದರೆ  ನಿಮ್ಮ ದೇವರಿಗೆ ರೆಕಮೆಂಡ್ ಮಾಡಿ ನಮ್ಮನ್ನೂ ಅಲ್ಲಿಗೆ ಕರೆಸಿಕೊಳ್ಳೋಕೆ ಪ್ರಯತ್ನ ಮಾಡಿ.    

venkatt ಭಾನು, 10/02/2011 - 18:48

ತುಂಬಾ ತಡವಾಗಿ ಓದಿ, ತಡವಾಗಿ ಉತ್ತರಿಸಬೇಕೆನಿಸ್ತಾ ಇದೆ.  ಸುರೇಶ್ ರವರು ಹಾಕೋದಾದ್ರೆ  ಸ್ವಲ್ಪ ತಡವಾಗಿ ನಿಮ್ಮ ದೇವ್ರಿಗೆ ಹೇಳಿ ಶಾಪ ಹಾಕಿಸಿಬಿಡಿ.                                                                          ದೇವರ ಬಗ್ಗೆ ನಾಸ್ತಿಕರಿಗೆ ತಿಳಿಯದು. ದೇವರ ಬಗ್ಗೆ ಹೇಳೋಕೋದ್ರೆ ದೇವರೆಲ್ಲಿದ್ದಾನೆ?ಎನ್ನುವರು.                                                       --ಅಸಲು ತಾವು ಯಾವ ಯೂನಿವರ್ಸಿಟಿಯಲ್ಲಿ ದೇವರ ಬಗ್ಗೆ ಉಪದೇಶ ಮಾಡುವಂತಹ ಡಾಕ್ಫ್ಟರೇಟ್ ಪಡೆದಿರುವಿರೋ...                            ಇವೆಲ್ಲಾ ನಾಸ್ತಿಕರಿಗೆ ಎಷ್ಟೇಳಿದ್ರು ತಿಳ್ಕೋದಿಲ್ಲ.                                                                                                                  -ಅಸಲಿಗೆ ತಿಳಿಹೇಳೊಕೆ ನಿಮಗೆ ಯಾವ ಅದಿಕಾರವಿದೆ ಅಂತೀನಿ.                                                                                         "ನೀವು ದೇವರ ಮೇಲಿಟ್ಟಿರುವ ನಂಬಿಕೆ ನನಗೆ ಸಂತೋಷ ತಂದಿದೆ. ನಿಮ್ಮ ನಂಬಿಕೆ ಪಕ್ವವಾಗಲಿ ಎಂಬುದೇ ನನ್ನ ಆಸೆ"    ಅಂತ ಬರೀತೀರಲ್ಲಾ, -ಹಾಗಾದ್ರೆ ನನಗೂ ದೇವರ ಬಗ್ಗೆ ಸಕತ್ ನಂಬಿಕೆ ರೀ ಅಂತ ಬರೆದರೆ ನಿಮ್ಗೆ ಇನ್ನೂ ಜಾಸ್ತಿ ಸಂತೋಷ  ಆಗುತ್ತಾ?                                            ನಿಮಗೆ ದೇವರ ಬಗ್ಗೆ ನಂಬಿಕೆ ಇದೆಯಾ  Its ok. ಅದು ನಿಮಗೆ ಬಿಟ್ಟಿದ್ದು. ಅದು ಬಿಟ್ಟು ಬೇರೆಯವರು ನಿಮ್ಮಂತೆ  ದೇವರನ್ನು ನಂಬಲಿ ಅಂತ ಯಾಕೆ ಬಯಸ್ತೀರಾ?   ನಿಮ್ಮನ್ನ ನೀವೇ ದೇವರ ಪ್ರತಿನಿದಿಗಳು ಅಂತೇನಾದ್ರೂ ತಿಳ್ಕೊಂಡಿದ್ದರೆ ಅದು ನಿಮ್ಮ ಅಜ್ಞಾನವಲ್ಲದೆ ಬೇರೇನೂ ಅಲ್ಲ.     ನೋಡಿ ದೇವರ ಬಗ್ಗೆ ನಿಮಗೆ  ಎಷ್ಟು  ತಿಳಿದಿದೆಯೋ ಗೊತ್ತಿಲ್ಲ. ಆದ್ರೆ ನಿಮಗಿಂತ ಜಾಸ್ತಿ ತಿಳ್ಕೊಂಡ ಬಹಳಷ್ಟು ಸಾದಕರು ನಾಸ್ತಿಕರ ಸಾಲಿನಲ್ಲೇ ಗುರುತಿಸಿಕೊಳ್ತಾರೆ ಅನ್ನೋದನ್ನು ತಿಳ್ಕೊಳ್ಳಿ.  ಪರಮ ಆಸ್ತಿಕರು ಅಂತನಿಸಿಕೊಂಡವರೆಲ್ಲ ಸ್ವರ್ಗಕ್ಕೆ  ಹೋಗ್ತಾರೆ, ನಾಸ್ತಿಕರೆಲ್ಲಾ  ನರಕಕ್ಕೆ ಹೋಗ್ತಾರೆ ಅಂತ ನನಗನಿಸುವುದೇ ಇಲ್ಲ.     ಆಸ್ತಿಕರ ವಾದ ನಿಜಾನೇ ಆದರೆ ಈ ನಮ್ಮ ಯಡಿಯೂರಪ್ಪನಿಗೆ ಈಗಾಗಲೇ ಸ್ವರ್ಗದಲ್ಲಿ ಒಂದು ಸೀಟು ರಿಸರ್ವ್ ಆಗಿಬಿಟ್ಟಿರುತ್ತೆ.  ಏಕೆಂದ್ರೆ ಈತ ಪರಮ ದೈವಭಕ್ತ. ಈತ ಹೋಗದೇ ಉಳಿದ ದೇವಾಲಯವಿಲ್ಲ. ಬೇಡದೇ ಬಿಟ್ಟ ದೇವರಿಲ್ಲ.   ಆದ್ದರಿಂದ ನಿಮಗೇನಾದ್ರು ಸ್ವರ್ಗದ ಆಸೆಯೇನಾದ್ರು ಇದ್ದ್ರೆ ಮೊದಲು ಈ ಯಡಿಯೂರಪ್ಪನ ಹೆಜ್ಜೆಯಲ್ಲೇ ಹೆಜ್ಜೆ ಹಾಕಿ ಸ್ವರ್ಗ ಸಿಕ್ಕಿದರೂ ಸಿಗಬಹುದು. ನೋಡಿ ಸ್ವಾಮಿ ನಮಗಂತೂ ನಿಮ್ಮ ಹಾಗೆ   ದೇವಾಲಯ,ಮಸೀದಿ, ಚರ್ಚ್ ಗಳಿಗೆ ಹೋಗುವಷ್ಟು ಪುರುಸೊತ್ತಿಲ್ಲ. ಈಗಾಗಲೇ ಮೂವತ್ತು ಮುಗಿದಿದೆ. ಇನ್ನೊಂದು ಎಪ್ಪತ್ತು ಬಾಕಿ ಉಳಿದಿರಬಹುದು.  ಇದರ ನಡುವೇನೆ ಉಳಿದ ಪ್ರತಿ ಕ್ಷಣವನ್ನೂ ಆನಂದದಿಂದ ಅನುಬವಿಸಿಬಿಡಬೇಕು. ಹೇಗೂ ನೀವೂ ನಾವೆಲ್ಲಾ ಸಾಯ್ತೀವಲ್ಲಾ. ಸತ್ತು ನೀವೇನಾದ್ರೂ  ಸ್ವರ್ಗಕ್ಕೆ ಹೋದರೆ  ನಿಮ್ಮ ದೇವರಿಗೆ ರೆಕಮೆಂಡ್ ಮಾಡಿ ನಮ್ಮನ್ನೂ ಅಲ್ಲಿಗೆ ಕರೆಸಿಕೊಳ್ಳೋಕೆ ಪ್ರಯತ್ನ ಮಾಡಿ.    

Nanjunda Raju Raju ಶನಿ, 07/30/2011 - 12:33

ಶ್ರೀಮತಿ ನಳಿನಿಯವರೇ, ದೇವರು ಸೃಷ್ಟಿ ಮಾಡಿದ ನಿಜ. ಆದರೆ ಬೆಳೆಯುತ್ತಾ ಬೆಳೆಯುತ್ತಾ, ತಂದೆ ತಾಯಿಗಳಿಂದ ಒಳ್ಳೆಯ ಗುಣ ಕಲಿತು. ಅಂದರೆ ವಿದೇಯತೆ ಕಲಿತಿರಬೇಕು. ನಂತರ ಗುರುಗಳ ಹತ್ತಿರ ಒಳ್ಳೆಯ ವಿದ್ಯೆ ಕಲಿತು. ಇದರೊಂದಿಗೆ ತಾನು ಕೂಡ ಅನುಭವದಿಂದ, ಉತ್ತಮ ಗ್ರಂಥಗಳನ್ನು ಓದುವುದರಿಂದ, ಮನುಷ್ಯನಾಗಬೇಕು. ಸಾಮಾನ್ಯವಾಗಿ ಪ್ರಪಂಚದಲ್ಲಿರುವ ಥರ್ಮಗಳು ಲೋಕ ಕಂಟಕನಾಗುವಂತೆ, ಸಮಾಜ ಕಂಟಕನಾಗುವಂತೆ ಹೇಳುವುದಿಲ್ಲ. ಒಬ್ಬ ಮನುಷ್ಯ ಧರ್ಮ ಅರಿತರೆ ಸಾಕು ತಾನು ಯಾವ ಕೆಲಸ ಮಾಡಬೇಕು ಯಾವ ಕೆಲಸ ಮಾಡಬಾರದು ಎಂಬುದು ತಿಳಿಯುತ್ತದೆ. ಮಾಡುವ ಸಂದರ್ಭಬಂದಾಗ ಸಹ ಅವನ ಮನಸ್ಸು ಎಚ್ಚರಿಸುತ್ತದೆ.  ಅಂದರೆ, ಬೇರೆಯವರಿಗೆ ಯಾವ ರೀತಿಯಿಂದಲೂ ತೊಂದರೆ ಕೊಡಬಾರದು. ಕಳ್ಳತನ ಮಾಡಬಾರದು, ಕೊಲೆ ಮಾಡಬಾರದು, ಹತ್ಯಾಚಾರ ಮಾಡಬಾರದು. ಸುಳ್ಳು ಹೇಳಬಾರದು. ಅತೀಕ್ರಮ ಪ್ರವೇಶ ಮಾಡಬಾರದು. ಆತ್ಮಹತ್ಯೆ ಮಾಡಿಕೊಳ್ಳಬಾರದು. ಇದು ಸಾಮಾನ್ಯವಾಗಿ, ನಮ್ಮ ಧರ್ಮದ ಮೂಲಗಳಾದ ಮಹಾಭಾರತ, ರಾಮಾಯಣ ಇವುಗಳಲ್ಲಿ ಅರಿವು ಮಾಡಿಕೊಳ್ಳಬಹುದು. ಇವೆಲ್ಲಾ ಬುನಾಧಿ ಇಲ್ಲದಿದ್ದರೇ ನಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರವಾಗಲಿ, ಉತ್ತರವಾಗಲಿ ಸಿಗುವುದಿಲ್ಲ.
ಎರಡನೆಯದಾಗಿ, ನೀವು ತಿಳಿಸಿರುವಂತೆ, ಇತ್ತೀಚೆಗೆ ನಡೆದ ಅಂತಿಮ ವಿಶ್ವ ಟೆಸ್ಟ್ ಮ್ಯಾಚಿನಲ್ಲಿ ಸಚಿನ್ ದೇವರನ್ನು ಬೇಡಿದರೂ ಸೆಂಚುರಿ ಬಾರಿಸಲಿಲ್ಲ ಎಂದಿದ್ದೀರಿ. ಆದರೆ, ದೇವರು ಬೇಡಿದವರ ಪಕ್ಷಪಾತಿಯಲ್ಲ ಅಲ್ಲವೇ, ಹಾಗಾದರೆ ಎದುರಾಳಿಗಳು ಸಚಿನ್ ಸೆಂಚುರಿ ಬಾರಿಸುವುದು ಬೇಡವೆಂದು ಬೇಡಿರಬಹುದು. ಪ್ರಯತ್ನವನ್ನೂ ಮಾಡಿರಬಹುದು. ಆದರೆ, ಸಚಿನ್ ಎಚ್ಚರಿಕೆಯಿಂದ ಆಡಿದ್ದರೆ ಮತ್ತು ಪ್ರಯತ್ನಿಸಿದ್ದರೆ ಸೆಂಚುರಿ ಬಾರಿಸುತ್ತಿದ್ದನೇನೋ! ನಮ್ಮ ಗುರುಗಳು ಹೇಳುತ್ತಿದ್ದರು. ಒಬ್ಬ ವಿಧ್ಯಾರ್ತಿ ಏನೂ ಓದದೆ, ಪರೀಕ್ಷೆಯಲ್ಲಿ ಉತ್ತರ ಬರೆಯದೆ ದೇವರನ್ನು ಬೇಡಿದರೆ ಪಾಸಾಗಲು ಹೇಗೆ ಸಾಧ್ಯ! ಹಾಗೆ ಒಬ್ಬ ಯೋಧ ವೀರಾವೇಶದಿಂದ ಯುದ್ದ ಮಾಡದೆ ಯುದ್ದದಲ್ಲಿ ಗೆಲ್ಲಲು ಹೇಗೆ ಸಾಧ್ಯ. ಹಾಗೆ ಒಬ್ಬ ಬಿಕ್ಷುಕ ಜೋಳಿಗೆಯನ್ನು ಗೂಟಕ್ಕೆ ನೇತು ಹಾಕು ಊಟ ಕೊಡು ದೇವರೆ ಎಂದರೆ ಹೇಗೆ ಕೊಟ್ಟಾನು? ಮನೆಮನೆಗೆ ಹೋಗಿ ಬೇಡಿದರೆ ತಾನೆ ಆತನಿಗೆ ಊಟ ಸಿಗುವುದು. ದೇವರಿದ್ದಾನೆ ಹಾತಾಶರಾಗಬೇಡಿ. ನಂಬಿ ಪ್ರಯತ್ನಿಸಿ. ಜಯ ಸಾದಿಸಿ.
ಅಂತಿಮವಾಗಿ, ಮನುಷ್ಯನ್ನನ್ನು ಸೃಷ್ಟಿಸಿದವನು ಅವನಾದರೂ ಉತ್ತಮ ಮಾರ್ಗದಲ್ಲಿ ನಡೆ ಎನ್ನುತ್ತಾನೆ. ಮೀರಿದರೆ ನಂತರ ಅವನಿಗೆ ಸಿಗುವುದು ಜೈಲು, ಸಾವು ನಂತರ ನರಕ ಎನ್ನುತ್ತಾರೆ. ಉತ್ತಮ ಜನರೆಲ್ಲಾ ಸಾಮಾನ್ಯವಾಗಿ ಬೇಡುವುದು. ಮುಕ್ತಿ ಸಿಗಲಿ ಎಂಬುದು. ಅದಕ್ಕೆ ಉತ್ತಮ ನಡೆ, ಯಾರಿಗೂ ಯಾವುದೇ ತೊಂದರೆ ಕೊಡದಿರುವುದು. ಧರ್ಮ ಮಾರ್ಗದಲ್ಲಿ ನಡೆಯುವುದು ಮುಖ್ಯ ಅಲ್ಲವೆ?
ಸಾಮಾನ್ಯವಾಗಿ, ದೇವರು ಸೃಷ್ಟಿಸುವುದು ಒಳ್ಳೆಯವರಾಗಲಿ ಎಂದು. ಆದರೆ, ಹಿಂದೆ ಸಹ ರಾಮಾಯಣದಲ್ಲಿ ರಾವಣ, ಮಾರೀಚ, ಮುಂತಾದವರು ಇದ್ದರು, ಮಹಾಭಾರತದಲ್ಲಿ ದೃತರಾಷ್ಟ್ರ, ದುರ್ಯೋಧನ, ದುಶ್ಯಾಸನ, ಮುಂತಾದವರಿದ್ದರೂ ಈಗ ಕಲಿಯುಗ ಹೆಚ್ಚಾಗಿದ್ದಾರೆ ಅಷ್ಟೆ. ಏನಂತಿರಿ?

ನಳಿನಿ (ಪ್ರಮಾಣಿಸಲ್ಪಟ್ಟಿಲ್ಲ.) ಶನಿ, 09/24/2011 - 09:58

ನೀವು ಹೇಳಿದ್ದು ಸರಿ .

ನಾಗರಾಜ ಶನಿ, 09/24/2011 - 08:07

ಅಕ್ಕ ನೀವು ದೇವರಮೇಲೆ ಯಾಕೊ ಸಿಟ್ಟು ಬಂದಿದೆ ದೇವರು ಇಲ್ಲದೆ ನಾವು ಇಲ್ಲಾ ನಾವು ಎಲ್ಲಿಯೋ ದೇವರು ಅಲ್ಲಿ ನಾವು ದೇವರು ಇಲ್ಲಾ ಎಂದು ಬಾವಿಸುವದು ತಪ್ಪು ನನಗು ದೇವರ ಮೇಲೆ ಕೇಲೊಂದು ಸಾರೆ ಸಿಟ್ಟು ಬರುತೆ ಆದರೆ ನಮ್ಮ ಕಾಲ ಮೇಲೆ ನಾವೆ  ಕಲ್ಲು ಆಕಿ ಕೋಳುತೆವೆ ನನಗೆ ತೀಳಿದ ಮೇಟಿ  ಸಲಹೆ ನೀಡಿದೆನೆ ಅಕ್ಕ

ನಳಿನಿ (ಪ್ರಮಾಣಿಸಲ್ಪಟ್ಟಿಲ್ಲ.) ಶನಿ, 09/24/2011 - 09:57

ಪ್ರತಿಕ್ರಿಯೆ ನೀಡಿದ್ದಕ್ಕೆ ಧನ್ಯಾವಾದಗಳು.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.