Skip to main content

ವಿಸ್ಮಯ ನಗರಿ 2011ರ ಸುಧಾರಿತ ಹೊಸ ರೂಪ

ಬರೆದಿದ್ದುApril 3, 2011
8ಅನಿಸಿಕೆಗಳು

ನಮಸ್ಕಾರ ಆತ್ಮೀಯ ವಿಸ್ಮಯ ಪ್ರಜೆಗಳೇ ಹಾಗೂ ಅನಾಮಿಕ ಓದುಗ ಬಂಧುಗಳೇ,
ವಿಸ್ಮಯ ನಗರಿಯ ಸುಧಾರಿತ ಹೊಸ ರೂಪ ನಿಮ್ಮ ಮುಂದಿದೆ. ಹೊಚ್ಚ ಹೊಸತಾಗಿ ನಿರ್ಮಿಸಿದ ತಾಣ ಇದಾದುದರಿಂದ ಸಣ್ಣ ಪುಟ್ಟ ತೊಂದರೆ ಏನಾದರೂ ಕಾಣಿಸಿದರೆ ತಕ್ಷಣ ನಮಗೆ ಸಂಪರ್ಕಿಸಿ. ವಿಸ್ಮಯ ನಗರಿಯ ಈ ಯಶಸ್ಸಿಗೆ ಸೂಕ್ತ ಸಲಹೆ ನೀಡುವ ಮೂಲಕ, ಬರೆಯುವದರ ಮೂಲಕ  ಬೆಂಬಲಿಸಿದ ಎಲ್ಲರಿಗೂ ನನ್ನ ಹೃದಯಪೂರ್ವಕ ಧನ್ಯವಾದಗಳು.ಹೊಸ ವಿಸ್ಮಯ ನಗರಿಯಲ್ಲಿ ಮುಖ್ಯವಾಗಿ ಈ ಮುಂದಿನ ಬದಲಾವಣೆಗಳಿವೆ.ಹೆಚ್ಚಿನ ವೇಗಹೊಸ ವಿಸ್ಮಯದ ಪುಟಗಳು ಮೊದಲಿಗಿಂತ ಬೇಗ ತೆರೆದುಕೊಳ್ಳುತ್ತವೆ. ಆದರೆ ಹೊಸತಾಗಿ ಸೇರಿಸಿದ ಲೇಖನಗಳು, ಅನಿಸಿಕೆಗಳು ಕಾಣಿಸಿಕೊಳ್ಳಲು ಕೆಲವೊಮ್ಮ ಸ್ವಲ್ಪ ಸಮಯ ಬೇಕಾಗುತ್ತದೆ.ಳ್ಳ ಟೈಪಿಂಗ್ ದೋಷ ಪರಿಹಾರ
ಹಿಂದೆ LLa ಎಂದು ಟೈಪ್ ಮಾಡಿದಾಗ ಹಳೆಗನ್ನಡದ ಳ್ಳ ಕಾಣಿಸಿಕೊಳ್ಳುತ್ತಿತ್ತು. ಸರಿಪಡಿಸಲಾಗಿದೆ. ಇನ್ನು ಮುಂದೆ ಸರಿಯಾಗಿ ಟೈಪ್ ಆಗುತ್ತದೆ.ಹೊಚ್ಚ ಹೊಸ ವಿನ್ಯಾಸ
ವೆಬ್ ಡಿಸೈನ್ ಅನ್ನು ಅಧ್ಯಯನ ಮಾಡಿ ಹೊಸ ವಿಸ್ಮಯ ನಗರಿಯ ವಿನ್ಯಾಸ ರೂಪಿಸಲಾಗಿದೆ. ಸುಲಭವಾಗಿ ಓದಲು ಇದು ಸಹಕಾರಿಯಾಗಿದೆ. ವಿಸ್ಮಯ ನಗರಿಯ ಬಳಕೆಯನ್ನು ಸುಲಭವಾಗಿಸುವ ಹಾಗೂ ಇನ್ನಷ್ಟು ಆಕರ್ಷಕ ಗೊಳಿಸುವ ಗುರಿಯೊಂದಿಗೆ ವಿನ್ಯಾಸ ಮಾಡಲಾಗಿದೆ.ಕವನ, ಹಾಸ್ಯ ಲೇಖನದ ಬಗೆಗಳು ಪಿಸುಮಾತಿನಿಂದ ಪ್ರತ್ಯೇಕ
ಹಳೆಯ ವಿಸ್ಮಯದಲ್ಲಿ ಹಾಸ್ಯ ಹಾಗೂ ಕವನವನ್ನು ಪಿಸುಮಾತಿನಲ್ಲಿ ಆಯಾ ಟ್ಯಾಗ್ ಆರಿಸುವ ಮುಖಾಂತರ ಸೇರಿಸಬೇಕಿತ್ತು. ಆದರೆ ಇನ್ನು ಮುಂದೆ ಹಾಗೆ ಮಾಡಬೇಕಾಗಿಲ್ಲ. ನೇರವಾಗಿ ಕವನ ಹಾಗೂ ಹಾಸ್ಯ ಲೇಖನದ ಬಗೆಯನ್ನು ಆರಿಸುವದರ ಮೂಲಕ ಸೇರಿಸಬಹುದು. ಇದು ಇಲ್ಲಿಯವರೆಗೆ ಇದ್ದ ಎಲ್ಲ ಗೊಂದಲವನ್ನು ನಿವಾರಿಸುತ್ತದೆ. ಈಗಿನ ಎಲ್ಲ ಕವನ ಹಾಗೂ ಹಾಸ್ಯಗಳ ಲೇಖನದ ಬಗೆಗಳನ್ನು ಪಿಸುಮಾತಿನಿಂದ ಕವನ ಅಥವಾ ಹಾಸ್ಯ ಲೇಖನ ಬಗೆಯಾಗಿ ಬದಲಾಯಿಸಲಾಗಿದೆ.ಹೊಸ ಮಾಹಿತಿ ಹಾಗೂ ವಿಮರ್ಶೆ ವಿಭಾಗಗಳು
ವೈದ್ಯಕೀಯ, ತಂತ್ರಜ್ಞಾನ, ಇತಿಹಾಸ, ಕಾನೂನು, ಅರ್ಥಶಾಸ್ತ್ರ ಹೀಗೆ ಯಾವುದೆ ವಿಷಯದಲ್ಲಿ ನಿಮ್ಮ ಅನುಭವದಿಂದ ಅಥವಾ ಆಳವಾದ ಅಧ್ಯಯನದಿಂದ ತಿಳಿದ ಮಾಹಿತಿಯನ್ನು ನೀಡಲು ಮಾಹಿತಿಯು ಸೂಕ್ತ ವಿಭಾಗ.
ಇತ್ತೀಚೆಗೆ ಓದಿದ ಪುಸ್ತಕ, ನೋಡಿದ ಸಿನಿಮಾ, ಟಿವಿ ದಾರಾವಾಹಿ, ನೀವು ಖರೀದಿಸಿ ಬಳಸಿ ನೋಡಿದ ಕಾರು, ಬೈಕ್, ಟಿವಿ, ಮೊಬೈಲ್, ಫ್ರಿಡ್ಜ್, ವಾಶಿಂಗ ಮಶಿನ್ ಇತ್ಯಾದಿಗಳ ಬಗ್ಗೆ ಪಕ್ಷಪಾತವಿಲ್ಲದ ಪ್ರಾಮಾಣಿಕ ವಿಮರ್ಶೆಗೆ ಹೊಸ ವಿಭಾಗ ವಿಸ್ಮಯ ವಿಮರ್ಶೆ ಅತಿ ಸೂಕ್ತವಾಗಿದೆ.
ವಿಸ್ಮಯ ಪಿಸುಮಾತು ಎಂದಿನಂತೆ ಕಥೆ, ಅನುಭವ, ಪ್ರವಾಸಿ ಕಥನ, ಚಿಂತನೆ, ಆಧ್ಯಾತ್ಮ, ರಾಜಕೀಯ ಇತ್ಯಾದಿ ವಿಷಯಗಳಿಗೆ ಸೂಕ್ತವಾಗಿದೆ. ಅಕಸ್ಮಾತ್ ನಿಮ್ಮ ಲೇಖನವನ್ನು ಯಾವ ವಿಭಾಗಕ್ಕೆ ಸೇರಿಸ ಬೇಕು ಎಂಬ ಗೊಂದಲ ನಿಮ್ಮನ್ನು ಕಾಡಿದರೆ ವಿಸ್ಮಯ ಪಿಸುಮಾತು ಲೇಖನ ಬಗೆಯಾಗಿ ಬರೆಯಿರಿ. ನಂತರ ಅದನ್ನು ಸೂಕ್ತ ಲೇಖನ ಬಗೆಯಾಗಿ ಬದಲಾಯಿಸಲಾಗುವದು.ಹಲವು ಬ್ರೌಸರ್ ಬೆಂಬಲ
ವಿಸ್ಮಯ ನಗರಿಯನ್ನು ನೀವು ಐಇ 6-9, ಫೈರ್ ಫಾಕ್ಸ್, ಗೂಗಲ್ ಕ್ರೋಮ್, ಸಫಾರಿ ಹೀಗೆ ಯಾವುದೆ ಬ್ರೌಸರ್ ಬಳಸಿ ನೋಡಬಹುದಾಗಿದೆ. ಐಪಾಡ್, ಅಂಡ್ರಾಯಿಡ್, ಐಫೋನ್ ಅಥವಾ ವಿಂಡೋಸ್ ಫೋನ್ ಅಲ್ಲೂ ಸಹ ಇವನ್ನು ನೋಡಬಹುದಾಗಿದೆ. ವಿಸ್ಮಯ ನಗರಿಯ ಮಾಡರೇಟಿಂಗ್ ಅನ್ನು ಬಿಗಿಗೊಳಿಸಬೇಕು ಎಂಬುದು ಹಲವರ ಬೇಡಿಕೆ. ಹೊಸ ವಿಸ್ಮಯ ನಗರಿಯಲ್ಲಿ ಉತ್ತಮ ಗುಣಮಟ್ಟದ ಲೇಖನಗಳಿಗೆ ಆದ್ಯತೆ ನೀಡಲಾಗುವದು.ವಿಸ್ಮಯ ನಗರಿಯಲ್ಲಿ ನಿಮ್ಮ ಸ್ನೇಹಿತರನ್ನು ಆಮಂತ್ರಿಸಬಹುದು. ಹಾಗೂ ಅವರಿಗೆ ಸಂದೇಶಗಳನ್ನು ಕಳುಹಿಸಬಹುದು. ಈ ಸಂದೇಶಗಳು ಎಲ್ಲ ವಿಸ್ಮಯ ಓದುಗರಿಗೆ ಓದಲು ಲಭ್ಯ ಇರುವದು.
ವಿಸ್ಮಯ ನಗರಿಯ ವಿಡಿಯೋ ಒಂದನ್ನು ಯುಟ್ಯೂಬ್ ನಲ್ಲಿ ಅಪ್ ಲೋಡ್ ಮಾಡಿದ್ದು ಈ ಕೆಳಗೆ ನೋಡಬಹುದು.ಬಾಲಚಂದ್ರ ಹಾಗೂ ರಮೇಶ ಬಾಬು ಅವರ ಸಲಹೆಯಂತೆ ಸರಪಣಿ ಕಥೆಯೊಂದನ್ನು ಶೀಘ್ರದಲ್ಲಿ ಆರಂಭಿಸಲಾಗುವದು. ಪ್ರಕಣೆಗಾಗಿ ನಿರೀಕ್ಷಿಸಿ.
ವಿಸ್ಮಯ ನಗರಿಯಲ್ಲಿ ಇನ್ನೂ ಹಲವು ಬದಲಾವಣೆ ಬಾಕಿ ಇದ್ದು ಅವು ಕಾಲಕ್ರಮೇಣ ಕಾಣಿಸಿಕೊಳ್ಳಲಿವೆ.ವಿಸ್ಮಯ ನಗರಿಗೆ ನೀವು ನೀಡುತ್ತಿರುವ ಬೆಂಬಲಕ್ಕಾಗಿ ಧನ್ಯವಾದಗಳು. ನಿಮ್ಮ ಬೆಂಬಲ ಹೀಗೆ ಇರಲಿ. ಹೊಸ ವಿಸ್ಮಯ ಹೇಗೆ ಅನ್ನಿಸಿತು?ಇನ್ನೂ ಹೇಗೆ ಸುಧಾರಿಸಬಹುದು? ಎಂಬ ಸಲಹೆಗಳನ್ನು ಅನಿಸಿಕೆಗಳ ಮೂಲಕ ತಿಳಿಸಿ.

ಲೇಖಕರು

ಅನಿಸಿಕೆಗಳು

Dr. K. Ramesh Babu ಮಂಗಳ, 04/05/2011 - 14:39

ನಾನು ಊಹಿಸಿದಂತೆ ಉಗಾದಿಯ ದಿನವೇ ವಿಸ್ಮಯನಗರದ ಹೊಸ ಅವತರಣಿಕೆಯನ್ನು ಹೊರತಂದಿದ್ದೀರಿ. ತುಂಬಾ ಆಕರ್ಷಕವಾಗಿದೆ. ಅಭಿನಂದನೆಗಳು. ವಿಸ್ಮಯನಗರಿ ಸದಭಿರುಚಿಯ ಲೇಖನಗಳೊನ್ನಳಗೊಂಡು ಮೈಕೈತುಂಬಿಕೊಳ್ಳಲಿ  ಎಂದು ಹಾರೈಸುತ್ತೇನೆ.

ಮೇಲಧಿಕಾರಿ ಧ, 04/06/2011 - 23:06

ನಮಸ್ಕಾರ ಡಾ॥ ರಮೇಶ್ ಬಾಬು ಅವರೇ,ಧನ್ಯವಾದಗಳು. ಖಂಡಿತ ಮುಂದಿನ ದಿನಗಳಲ್ಲಿ ಹಲವು ಪ್ರಯೋಗ ಕೈಗೊಳ್ಳಲಿದ್ದೇನೆ. ಅವು ನಿಮಗೆ ಇಷ್ಟ ಆದೀತು.

ವಿ.ಎಂ.ಶ್ರೀನಿವಾಸ ಶನಿ, 04/09/2011 - 15:59

ನಮಸ್ತೇ ಸಾರ್
ವಿಸ್ಮಯದ ಹೊಸ ರೂಪ ಚೆನ್ನಾಗಿದೆ.
 

ರಾಜೇಶ ಹೆಗಡೆ ಭಾನು, 04/10/2011 - 15:08

ಹಾಯ್ ಶ್ರೀನಿವಾಸ್ ಅವರೇ,ನಿಮ್ಮ ಮೆಚ್ಚುಗೆಯ ನುಡಿಗೆ ಧನ್ಯವಾದಗಳು. ನಿಮ್ಮ ಸಲಹೆಗಳಿಗೂ ಸ್ವಾಗತ.

ಉಮಾಶಂಕರ ಬಿ.ಎಸ್ ಭಾನು, 04/10/2011 - 12:28

ವ್ಹಾ!!! ವ್ಹಾರೆವ್ಹಾಹ್ಹ್!!ನಿಜಕ್ಕೂ ಅತ್ಯದ್ಬುತ!!! ಸರ್ ವಿಸ್ಮಯಾಭಿಮಾನಿಉಮಾಶಂಕರ ಬಿ.ಎಸ್

ವೆಂಕಟೇಶ.ಕುಲ್ಕರ್ಣೀ ಭಾನು, 04/10/2011 - 13:43

Hello Umashankar my name is Venkatesh.Kulkarni  estu dinaa neevu ellige hogiddiri???

ರಾಜೇಶ ಹೆಗಡೆ ಭಾನು, 04/10/2011 - 15:14

ಹಾಯ್ ಉಮಾಶಂಕರ್ ಅವರೇ,ಧನ್ಯವಾದಗಳು. ನನ್ನ ಯಥಾಶಕ್ತಿ ಉತ್ತಮ ತಾಣವನ್ನು ನೀಡಲು ಪ್ರಯತ್ನಿಸಿದ್ದೇನೆ. ಏನಾದರೂ ಸಲಹೆಗಳಿದ್ದರೆ ತಿಳಿಸಿ. ಇನ್ನೂ ಉತ್ತಮ ಪಡಿಸಲು ಸಹಾಯಕವಾದೀತು. ನಿಮ್ಮಂತಹ ಅನೇಕ ಅಭಿಮಾನಿಗಳೇ ವಿಸ್ಮಯ ನಗರಿಗೆ ಜೀವಾಳ. ವಿಸ್ಮಯ ನಗರಿಯಲ್ಲಿ ಬರೆಯುತ್ತಿರುವ/ಬರೆದ ಪ್ರತಿ ಲೇಖಕರೂ ಇದನ್ನು ಬಳಸುತ್ತಿರುವ ಪ್ರತಿಯೊಬ್ಬರೂ ಈ ಯಶಸ್ಸಿನಲ್ಲಿ ಭಾಗಿಗಳು. ಎಲ್ಲರಿಗೂ ನನ್ನ ಧನ್ಯವಾದಗಳು. :)

belstaff jackets (ಪ್ರಮಾಣಿಸಲ್ಪಟ್ಟಿಲ್ಲ.) ಗುರು, 12/29/2011 - 06:54


Dad is busy every day outside, do not have belstaff jackets time to read. He will do regret belstaff bags it? Sometimes I really want to belstaff jackets discuss these books determined to Dad, which can be thought belstaff uk of six mother goes on the bleak white belstaff uk powder coated long face, the same belstaff jackets block as the wall on the road the north face uk , immediately give up north face the idea. Each hospital has a mulberry bagssmall door set with a narrow mulberry bags sale garden path connected to mulberry handbags the left, leading to the garden. cyh12-29

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.