Skip to main content

ಛೀ....... ಬೆಂಗಳೂರು ಅಂದ್ರೆ ಇಷ್ಟೇನಾ? ನಾಚಿಗ್ಗೆಡು................

ಇಂದ ashu
ಬರೆದಿದ್ದುMarch 7, 2007
11ಅನಿಸಿಕೆಗಳು

ಅಡ್ಡಾ ದಿಡ್ಡಿ ರಸ್ತೆಗಳು, ಮೆಜೆಸ್ಟಿಕ್‌ನಲ್ಲಿ ಜನ ಜಂಗುಳಿ, ಎಲ್ ನೋಡಿದ್ರೂ ಬಿಲ್ಡಿಂಗ್ ಗಳೆ(ನೋಡೋಕ್ ಚೆನ್ನಾಗಿರೋದ್ ಅಲ್ಲ ಸ್ವಾಮಿ, ವಾಂತಿ ತರ್ಸೋವಂಥದ್ದು)... [img_assist|nid=621|title=ಬೆಂಗಳೂರು ಅಂದ್ರೆ ಇಷ್ಟೇನಾ|desc=|link=none|align=right|width=339|height=173]

ಆಹಾ, ಹೋಟೇಲುಗಳಂತೂ ಶುಭ್ರ ಶುಭ್ರ... ಇನ್ನ, ಹೊಸೂರ್ ರೋಡ್ ಬಗ್ಗೆ ಹೇಳಲಾ?...
ಬೇಡಾ ಬಿಡಿ, ಎಲ್ಲಾದ್ರೂ ಮೋನೀಟರ್ ನಾ ಗಲೀಜು ಮಾಡಿ ಬಿತ್ಟೀರಿ(ವಾಂತೀನಾ ತಡಿಯೋಕ್ ಆಗ್ದೇ)...
ಹಾಗೆ, ನಿಮ್ಗೆ ಎಲೆಕ್ಟ್ರಾನಿಕ್ಸ್ ಸಿಟಿ ನೀರ್ ಬಗ್ಗೆನು ಹೇಳಿ ಬಿಡ್ತೀನಿ....
ಪಕ್ಕಾ ಗಡಸು ನೀರು, ತಲೆಲೀ ಒಂದ್ ಚಂಬ್ ಹಾಕಿ ಸಾಕು, ಕ್ಷೌರಿಕನ ಹತ್ತಿರ ಹೋಗೋ ಅವಶ್ಯಕತೆನೇ ಇಲ್ಲ, ಎಲ್ಲ ಕೂದಲುಗಳು, ಆಟೊಮ್ಯಾಟಿಕ್ ಆಗಿ ಉದುರಿ ಹೋಗುತ್ತೆ...
ಇನ್ನ, ಎಲೆಕ್ಟ್ರಾನಿಕ್ಸ್ ಸಿಟಿ ಗಿಡಗಳ ಬಗ್ಗೆ ಹೇಳಲಾ...?

ಎಲ್ಲಾನೂ ಮಟಾಶ್ ಗುರುವೇ... ದೂರ್ಬಿನ್ ಹಿಡ್ಕೊಂಡ್ ನೋಡ್ತಾ ಇದೀನಿ.. ಬರೀ ಬಿಸಿಲು.....ಹೈದರಾಬಾದಿನಷ್ಟೇ ಬಿಸಿಲು...

****ಇದಕ್ಕಾಗೇನಾ ಕನಿಷ್ಟ ಮೂರು ತಿಂಗಳು ನನ್ನ ಪಿ.ಎಮ್. ಜೊತೆ ಜಾಗಳಾಡಿ, ಫ್ರೀಪೂಲ್‌ಗೆ ಬಂದು, ಬೆಂಗಳೂರಿಗೆ ವರ್ಗಾವಣೆ ಮಾಡಿಸಿಕೊಂಡದ್ದು...

ಹೈದರಾಬಾದಿನಲ್ಲಿ, ಕನಿಷ್ಟ ರಸ್ತೆಗಳಾದ್ರೂ ದೊಡ್ಡದಾಗಿದೆ, ಅಡ್ಡಾಡೊಕೆ, ಇಲ್ಲೇನಿದೆ?
ಆಮೆ ವೇಗದಲ್ಲಿ, ಹೊಸೂರ್ ರಸ್ತೆ ನಿರ್ಮಾಣ ಮಾಡ್ತಾ ಇದಾರೆ...
ಯಾವನಿಗೂ ಬೆರೆಯೋರ್ ಬಗ್ಜ್ಗೆ ಕಾಳಜಿನೇ ಇಲ್ಲ... ಎಲ್ರೂ ಕನ್ ಮುಚ್‌ಕೊಂಡ್ ಅವ್ರೇ...

ಅಲ್ಲಿ, ಟ್ರಾಫಿಕ್ ಇಲ್ದೇ ಇದ್ರುವೆ, ಭವಿಷ್ಯಕ್ಕೆ ತೊಂದರೆ ಆಗದಂತೆ, ಫ್ಲೈ ಓವರ್ ಮಾಡ್ತಾ ಇದಾರೆ... ಇಲ್ಲಿ?
ಭೂಗಿಲೆದ್ದಿರೋ ಟ್ರಾಫಿಕ್‌ನೆ ಸುಧಾರಿಸ್ತಾ ಇಲ್ಲ..

ಹೈದರಾಬಾದಿನಲ್ಲಿ ಇರೋ ಸೆಖೆ, ಇಲ್ಲಿ ಸೆಖೆ, ಸೇಮ್ ಸೇಮ್. ಕಾರಣಗಳು ನೂರೆಂಟು ಇರಬಹುದು, ಆದರೆ ಪರಿಹಾರ ಹುಡುಕೋರ್ ಯಾರು?

ಎಲ್ಲ, ತಾನಾಗೇ ಆಗ್ಲೀ, ಅಂತ ಕೈ ಕಟ್ಕೊಂಡ್ ಕೂತಕೊಳ್ಳೋರೇ...

ಯಾಕೆ, ಯಾರಿಗೂ ಇದರ ಮನಿವರಿಕೆ ಆಗ್ತಾ ಇಲ್ಲ.....

ಬಂದಾಗಿಂದ , ಮನ್ಸು ವೀಲಿ ವೀಲಿ ಒದ್ದಾಡ್ತಾ ಇದೆ.. ಇದಕ್ಕಾಗೇನಾ ನಾನು, ಇಷ್ಟೊಂದ್ ಕಷ್ಟ ಪಟ್ಟು ಬೆಂಗಳೂರಿಗೆ ಬಂದಿದ್ದು ಅಂತ :(

ಹೋಗಲಿ ಬಿಡಿ, ನಾನು, ಮತ್ತೆ ಕೇಳಿದ್ರೆ, ಬರೋ ನವೆಂಬರಿನಲ್ಲಿ ವರ್ಗಾವಣೆ ಮಾಡ್ತಾರೆ, ನಾನು ಮತ್ತೆ ಬೆಂಗಳೂರನ್ನು ಬಿಟ್ಟು ಹೋಗ್ತೀನಿ...

ಆದ್ರೆ, ಕನ್ನಡಿಗನಾದ ನಾನು, ಸೋಲನ್ನು ಒಪ್ಪಬೇಕೆ? ಗೆಲ್ಲಲು ನೂರೆಂಟು ಅವಕಾಶಗಳಿದ್ದಾಗ, ಯಾಕೆ ಸುಮ್ನಿರಬೇಕು?

ರಸ್ತೆ ನಿರ್ಮಾಣ ಆಮೆ ಗತಿಯಲ್ಲಿ ಸಾಗ್ತಾ ಇರ್ಬೇಕಾರೆ, ಅದನ್ನ ಪ್ರಶ್ನಿಸೋ ಅಧಿಕಾರ ನನಗಿದೆ...
ಗಿಡಗಳನ್ನ ಯಾರಾದ್ರೂ ಕಡೀತಾ ಇದ್ರೆ, ಅದನ್ನ ತಡಿಯೋ ಅಧಿಕಾರ ನನಗಿದೆ.. ಯಾರಾದ್ರೂ, ರಸ್ತೆ/ಸಾರ್ವಜನಿಕ ಆಸ್ತಿ/ಬಸ್ಸುಗಳು/ಅದು ಇದು ಎಲ್ಲ.....
ಎಲ್ಲಾನೂ ಪ್ರಶ್ನಿಸೋ ಅಧಿಕಾರ ಪ್ರತಿಯೊಬ್ಬ ಕನ್ನಡಿಗನಿಗೂ ಇದೆ...

ಹಾಗಿದ್ರೆ, ನಾವ್ ಯಾಕ್ ಅದನ್ನ ಮಾಡ್ತಾ ಇಲ್ಲ?

ಯಾಕೆ, ಎಲ್ಲ ಕನ್ನಡಿಗರು ಒಂದಾಗಿ, ಪ್ರಗತಿಯತ್ತ ಮುಖ ಮಾಡುತ್ತಿಲ್ಲ?

ನಡೀರಿ, ಈಗ್ಲೇ ಶುರು ಮಾಡೋಣ... ನಮ್ಮ ಸಹಾಯಕ್ಕೆ ಕ.ರಾ.ವೆ ಇದೆ. ನಾನಾ ಬಳಗಗಳು ಇವೆ...
ಎಲ್ರೂ ಸೇರಿ, ಏನೋ ಒಂದು ಮಾಡೋಣ...

ಕೈ ಕತ್ಕೊಂಡು ಕೂತ್ರೆ ಎನ್ಮಾಡೋಕೂ ಆಗೋಲ್ಲ ಗುರು...

ವಾರದಲ್ಲಿ, 5-6 ದಿನ ದುಡಿದು, ಕೇವಲ 2-3 ಗಂಟೆ ಸಾಕು,,, ಕರ್ನಾಟಕ ಸುಧಾರಣೆಗೆ ಮುಡಿಪಾಗಿಡೋಣ...

ಗರ್ಲ್ ಫ್ರೆಂಡ್ ಜೊತೆ, ವಾರಕ್ಕೆ, 20-30 ಗಂಟೆಗಳು ಹಾಳು ಮಾಡೋ ನಾವು, ತಾಯಿ ಭುವನೇಶ್ವರಿಯ ಒಳಿತಿಗಾಗಿ/ಸೌಂದರ್ಯಕ್ಕಾಗಿ/ಸ್ವಚ್ಛತೆಗಾಗಿ/ 2-3 ಗಂಟೆ ಮೀಸಲು ಇಡಲಾಗುವದಿಲ್ಲವೇ?

ನಾನಂತೂ, ಬರೋ ರವಿವಾರ, ನಮ್ಮ ಮನೆ ಮುಂದಿರೊ ರಸ್ತೆ ಪಕ್ಕದಲ್ಲಿ ಗಿಡಾ ನೇಡೊ, ಕಾರ್ಯಕ್ರಮ ಹಮ್ಕೊಂಡಿದಿನಿ..
ಹಾಗೆ, ಬಿ.ಡಿ.ಎ ಗೆ ಹೊಸೂರ್ ರಸ್ತೆ ಬಗ್ಗೆ, ಪತ್ರನು ಬರಿಯೋನ್ ಇದೀನಿ...

ಇದು ಜಸ್ಟ್ ಬಿಗಿನೀಂಗ್...

ಈ ಅಂಕಣ, ಪೂರ್ತಿ ಮಾಡೋದು ನಿಮ್ ಕೆಲ್ಸಾ... ಕನ್ನಡಿಗರೆಲ್ಲರೂ ಒಗ್ಗೂಡಿ, ಬೆಂಗಳೂರು ಅಷ್ಟೇ ಅಲ್ಲದೇ, ಅಕ್ಕ ಪಕ್ಕದ ಜಿಲ್ಲೆಗಳು, ಉತ್ತರ ಕರ್ನಾಟಕ ಜಿಲ್ಲೆಗಳತ್ತ, ಗಮನ ಹಾರಿಸೋದು ನಮ್ (ಕನ್ನಡಿಗರು) ಕೆಲ್ಸಾ.

ನಿಮಗೆ ಬೇರೆ ಉಪಾಯಗಳು ಹೊಳೆದರೆ, ಕೆಳಗೆ ದಯವಿಟ್ಟು ತಿಳಿಸಿ...

ಬನ್ರೀ, ಒಂದ್ ಕೈ ನೋಡಿ ಬಿಡುವ... ಆಲಸ್ಯತನ ನಂನ ಗೆಲ್ಲುತ್ತೋ, ಅಥ್ವ, ನಾವ್ ಅದ್ನಾ ಗೆಲ್ತೀವೋ ಅಂತ ......................................

ಲೇಖಕರು

ashu

ashu

ಸ್ನೇಹಿತರೆಲ್ಲರಿಗೂ ನಮಸ್ಕಾರಗಳು... ನಾನು ವಿಪ್ರೋನಲ್ಲಿ ಕೆಲ್ಸಾ ಮಾಡ್ತಾ ಇದೀನಿ.... ಮರಳಿ ಮಣ್ಣಿಗೆ ಎಂಬಂತೆ, ನಾನು ಮತ್ತೆ ಬೆಂಗಳೂರಿಗೆ ಬರುತ್ತಿದ್ದೇನೆ...
ಮಾರ್ಚ್ ಮೊದಲ ದಿನಗಳಲ್ಲಿ, ಎಲೆಕ್ಟ್ರಾನಿಕ್ ಸಿಟಿಯಲ್ಲಿ ಪ್ರಾಜೆಕ್ಟ್ ಸೇರಲಿದ್ದೇನೆ. ಕೊನೆಗೂ, ವರ್ಗಾವಣೆ ಪಡೆಯಲು ನಾ ಪಟ್ಟ ಕಷ್ಟವನ್ನು ದೇವರು ಕೊನೇಗೋಳಿಸಿದ್ದಾನೆ... ವಿಪ್ರೋನಲ್ಲಿ, ಬೆಂಗಳೂರಿಗೆ ಪ್ಯಾರಾಡೈಸ್ ಎಂದು ಕರೆಯುತ್ತಾರೆ.. ಬೆಂಗಳೂರಿಗೆ ವರ್ಗಾವಣೆ ಸಿಗಲು, ಸೀನಿಯರ್ ಗಳ ಜೊತೆ ಹರಸಾಹಸ ಮಾಡಬೇಕಾಗುತ್ತೆ.. ಎಲ್ಲ ಮೆಟ್ಟಿ ನಿಂತು, ಗೆಲುವಿನೊಂದಿಗೆ....ಬರುತ್ತಿದ್ದೇನೆ..............

ನನ್ನ ಮನಸಲ್ಲಿಗ ಒಂದೇ ಸಾಂಗು..

ಬ್ಯಾಂಗ್ ಬ್ಯಾಂಗ್, ಬೆಂಗಳೂರು ಗೊತ್ತ....
ಬ್ಯಾಂಗ್ ಬ್ಯಾಂಗ್, ಬೆಂಗಳೂರು ಗೊತ್ತ....(ಶಿವಣ್ಣ ನಟಿಸಿದ ಯುವರಾಜ ಚಿತ್ರದ್ದು)

ಅನಿಸಿಕೆಗಳು

ರಾಜೇಶ ಹೆಗಡೆ ಗುರು, 03/08/2007 - 08:50

ಬಹುಶಃ ಬೆಂಗಳೂರು ಯಾವುದೇ ಪ್ಲಾನ್ ಇಲ್ಲದೇ ಅಡ್ಡಾದಿಡ್ಡಿ ಬೆಳೆದಿರುವದೇ ಕಾರಣ ಅನ್ನಿಸುತ್ತೇ. ಇಲ್ಲಿನ ಇನ್ಫ್ರಾಸ್ಟ್ರಕ್ಚರ್ ಸರಿ ಇಲ್ಲ ಅಂತಾ ಅಜಿಮ್ ಪ್ರೇಮಜಿ, ನಾರಾಯಣ ಮೂರ್ತಿ ಎಲ್ಲರೂ ಪ್ರತಿಭಟಿಸಿದ್ದಾರೆ.

ಕೋರಮಂಗಲದಂತಹ ಸ್ಲಂ ಏರಿಯಾ ಕೂಡಾ ಈಗ ಸಾಫ್ಟ್‌ವೇರ್ ಪಾರ್ಕ್ ಆಗಿದೆ. ಆದ್ರೆ ಕೆಲವು ಕಡೆ ಬಿಟ್ಟು ಒಳ ಬಾಗಗಳಲ್ಲಿ ಇನ್ನೂ ರಸ್ತೆಗಳಲ್ಲಿ ನಡೆಯುವದೆಂದರೆ ತಿಪ್ಪೆಯಲ್ಲಿ ನಡೆದಂತೆ!
ಇದ್ದುದದರಲ್ಲಿ ಜಯನಗರ ಪರವಾಗಿಲ್ಲ.

veeresh ಗುರು, 03/08/2007 - 10:27

[img_assist|nid=590|title=ಬೆಂಗಳೂರು ನರಕ ವೆಂಬ ನನ್ನ ಬರಹ|desc=ಬೆಂಗಳೂರು ನರಕ ವೆಂಬ ನನ್ನ ಬರಹ|link=none|align=center|width=521|height=737]ಹು ಅಶು... ಇಲ್ಲಿ ನೋಡಿ ಬೆಂಗಳೂರು ನರಕ ಅಂತ ನನ್ನ ಬರಹ....

ashu ಗುರು, 03/08/2007 - 10:40

ನಿಮ್ಮ ಲೇಖನ ತುಂಬಾ ಚೆನ್ನಾಗಿದೆ ವೀರೇಶ್..

ಹಾಗೆ, ಒಂಚೂರು ಗಿಡಗಳು, ಸ್ವಚ್ಛತೆ ಬಗ್ಗೆನು ನೀವು ಲೇಖನ ಬರೆದು, ಪತ್ರಿಕೆಗಳಲ್ಲಿ ಹಾಕಿದ್ರೆ, ಪ್ರಭಾವ ಹಾಗೂ ಪ್ರತಿಕ್ರಿಯೆ ಚೆನ್ನಾಗಿರುತ್ತೆ ಅಂತ ನನ್ನ ಭಾವನೆ...

ಅನನುಭವಿ,
-ಅಶು

ಮೇಲಧಿಕಾರಿ ಮಂಗಳ, 03/13/2007 - 22:17

ಹಾಯ್ ಅಶುರವರೆ,

ತಮ್ಮ ಲೇಖನ ಮುಖಪುಟದಲ್ಲಿ ಹೈಲೈಟ್ ಆಗಲಿ ಎಂಬ ಕಾರಣದಿಂದ ನಿಮ್ಮ ಲೇಖನಕ್ಕೆ ಒಂದು ಬೆಂಗಳೂರಿನ ಚಿತ್ರ ಹಾಕಿದ್ದೇನೆ.
ಇದಕ್ಕಾಗಿ ಕ್ಷಮೆ ಇರಲಿ.

ನಿಮಗೆ ತಿಳಿದಂತೆ ವಿಸ್ಮಯದಲ್ಲಿ ಈಗ ಯಾರು ಬೇಕಾದರೂ ಚಿತ್ರವನ್ನು ಲೇಖನದಲ್ಲಿ, ಅಭಿಪ್ರಾಯದಲ್ಲಿ ಹಾಕಬಹುದು.
ಅದಕ್ಕಾಗಿ ಟೆಕ್ಸ್ಟ್ ಬಾಕ್ಸ್ ಕೆಳಗೆ ಇರುವ ಹಸಿರು ಬಣ್ಣದ ಐಕಾನ್ ಕ್ಲಿಕ್ ಮಾಡಿ.

ವಂದನೆಗಳು
--ಮೇಲಧಿಕಾರಿ

ಅನಾಮಿಕ (ಪ್ರಮಾಣಿಸಲ್ಪಟ್ಟಿಲ್ಲ.) ಸೋಮ, 03/12/2007 - 17:20
mahadeva M ಧ, 04/11/2007 - 15:59
mahadeva M ಧ, 04/11/2007 - 16:07

ಅಡ್ಡಾ ದಿಡ್ಡಿ ರಸ್ತೆಗಳು, ಮೆಜೆಸ್ಟಿಕ್‌ನಲ್ಲಿ ಜನ ಜಂಗುಳಿ, ಎಲ್ ನೋಡಿದ್ರೂ ಬಿಲ್ಡಿಂಗ್ ಗಳೆ(ನೋಡೋಕ್ ಚೆನ್ನಾಗಿರೋದ್ ಅಲ್ಲ ಸ್ವಾಮಿ, ವಾಂತಿ ತರ್ಸೋವಂಥದ್ದು)... ಬೆಂಗಳೂರು ಅಂದ್ರೆ ಇಷ್ಟೇನಾ

ಟ್ರಾಫಿಕ್ ಬಗೆಗಿನ ನಿಮ್ಮ ಲೇಖನ ಆವೇಶಭರಿತವಾಗಿದೆ, ಬಹುಶ ಈ ವಯಸ್ಸಲ್ಲಿ ಅದು ಸಹಜಾ ಇರಬಹುದು ಕೂಡ.
ಆದರ ಒಬ್ಬ ಕನ್ನಡಿಗರಾಗಿದ್ದುಕೊಂಡು, ನೀವು ಈ ರೀತಿಯಾಗಿ ಬೆಂಗಳೂರನ್ನು ಬೇರೆ ರಾಜ್ಯಕ್ಕೆ ಹೋಲಿಸಿ ಅವಮಾನವೆಸಗೊ ಪ್ರಯತ್ನ ಮಾಡಬಾರದಿತ್ತು ಇದು ಎಷ್ಟುಅಪರಾಧವೆಂದರೆ ಭಾರತವನ್ನು ಮತ್ತಾವುದೋ ದೇಶಕ್ಕೆ ಹೋಲಿಸಿ, ಆ ದೇಶದಲ್ಲಿ ಏನೇನಲ್ಲಾ ಇದೆ, ಆದರೆ ನಮ್ಮ ಭಾರತದಲ್ಲಿ ಏನೂ ಇಲ್ಲ, ಇದಕ್ಕೆನಾ ನಾನು ಭಾರತಕ್ಕೆ ಬಂದಿದ್ದು ಎನ್ನುವಷ್ಟು. ಸಮಸ್ಯೆಗಳು ಎಲ್ಲಾ ಕಡೆ ಇರುತ್ತವೆ ಆದರೆ ಇಲ್ಲಿ ಸ್ವಲ್ಪ ಜಾಸ್ತಿ ಇದ್ದಾವೆ ಅದು ನಮ್ಮಿಂದಲ್ಲ ಬೇರೆ ರಾಜ್ಯದಿಂದ ನಮ್ಮಲ್ಲಿನ ಕೆಲಸಕ್ಕಾಗಿ ಬಂದ ಗುಲಾಮರಿಂದಾಗಿ ನಮಗೆ ಇಷ್ಟೊಂದು ಕಷ್ಟ.
ಇದಕ್ಕಾಗಿ ನಾವು ಇಲ್ಲಿನ ವ್ಯವಸ್ಥೆಯನ್ನು ಕೀಳಾಗಿ ಕಾಣಬೇಕಿಲ್ಲ, ನಮ್ಮ ನಾಡು-ನುಡಿ ಬಗ್ಗೆ ನಾವೇ ತಾತ್ಸಾರ ಮಾಡಿದರೆ, ಇನ್ನು ನಮ್ಮ ಗುಲಾಮರು ಬಿಟ್ಟಾರೆ,.? ದಯವಿಟ್ಟು ಇಂತಹುದಕ್ಕೆ ಮತ್ತೊಮ್ಮೆ ಅವಕಾಶ ಕೊಡಬೇಡಿ, ಆಮೇಲೆ ನಮ್ಮ ಜೊತೆ ಕ.ರಾ.ವೇ ಇದೆ ಅಂದಿದ್ದೀರಿ ನಿಜ ಕ.ರಾ.ವೇ ಇದೆ ಆದರೆ ಅದು ನಿಮಗೋಸ್ಕರವಾಗಲಿ, ಇಲ್ಲಿನವರ ವಿರುದ್ಧವಾಗಲಿ ಹೋರಾಡಲಿಕ್ಕಿಲ್ಲ, ಅದಿರುವುದು ಈ ಮಣ್ಣಿಗೆ ಅವಮಾನ ಮಾಡಿದವರಿಗೆ ಬುದ್ಧಿ ಕಲಿಸಲು ಇರುವುದು.

ಪತ್ರದ ನಿರೀಕ್ಷೆಯಲ್ಲಿ.
ಧನ್ಯವಾದಗಳು.

ತಮ್ಮ ಲೇಖನ ಓದಿ, ಖುಷಿ , ದು:ಖ ಎರಡೂ ಆಯ್ತು,
ಬೆಂಗಳೂರಿನ ಬಗ್ಗೆ ನಿಮ್ಮ ಕಾಳಜಿಗೆ, ವಂದನೆಗಳೂ....
ಆದರೆ ಬೆಂಗಳೂರನ್ನು, ಹೈದರಾಬಾದ್ ಗೆ ಹೋಲಿಸಿದ್ದು, ಸ್ವಲ್ಪ ನೋವು ಮಾಡುತ್ತದೆ,
ನಮ್ಮಮ್ಮ ಹಳೇ ಸೀರೆ ಉಟ್ಟಿದ್ದಾಳೆ ಅಂತ, ಹೊಸ ಸೀರೆ ಉಟ್ಟವರನ್ನ ಅಮ್ಮ ಅನ್ನೊದಕ್ಕಾಗುತ್ತ,
so Please dont compare,

ಬೆಂಗಳೂರಿನ ಮತ್ತೆ "ಗ್ರೀನ್ ಸಿಟಿ" ಆಗಲಿ ಆ ನಿಮ್ಮ ಕಾರ್ಯಕ್ಕೆ ನಮ್ಮೆಲ್ಲರ ಸಹಕಾರ ಖಂಡಿತ ಇದೆ,

ವರುಣ (ಪ್ರಮಾಣಿಸಲ್ಪಟ್ಟಿಲ್ಲ.) ಧ, 03/26/2008 - 11:52

ಹೈದರಾಬಾದ್ ಏನು ತುಂಬಾ ಚೆನ್ನಾಗಿಲ್ಲ... ಡಬ್ಬ ಊರು... ಡಬ್ಬ ಜನ...
ಅಲ್ಲಿನ ಜನ ಫುಲ್ ಫಿಲ್ಮಿ....

ದಯವಿಟ್ಟು ಬೆಂಗಳೂರನ್ನು ಯಾವ್ಯಾವುದೋ ದರಿದ್ರ ಊರುಗಳಿಗೆ ಹೋಲಿಸಬೇಡಿ..

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.