Skip to main content

ಮಾಡ್ಬೇಕಾ??

ಇಂದ ಲಕ್ಷ್
ಬರೆದಿದ್ದುDecember 1, 2009
1ಅನಿಸಿಕೆ

ಮಾಡ್ಬೇಕಾ??
ಬೆಂಗಳೂರಿನಲ್ಲಿ ವ್ಯಾಸಂಗ ಮುಗಿಸಿ ದ. ಕ. ದ ಪುತ್ತೂರಿಗೆ ರಮಾ ಬಂದಿದ್ದಳು. ಅಲ್ಲಿನ ಒಂದು ಶಾಲೆಯಲ್ಲಿ ಅವಳಿಗೆ ಶಿಕ್ಷಕಿಯ ಉದ್ಯೋಗ ಲಭಿಸಿತ್ತು. ಬೆಂಗಳೂರು ಮತ್ತು ದ. ಕ. ದ ಆಡು ಭಾಷೆ ಕನ್ನಡವೇ ಆಗಿದ್ದರೂ ಕೆಲವೊಂದು ಶಬ್ದಗಳು ಬೇರೆಯೇ ಅರ್ಥ ಕೊಡುತ್ತವೆ. ಪ್ರದೇಶದಿಂದ ಪ್ರದೇಶಕ್ಕೆ ಭಾಷೆಯಲ್ಲಿ ಅಲ್ಪ ಸ್ವಲ್ಪ ವ್ಯತ್ಯಾಸವಿರುವುದು ಸಹಜ. ಸತ್ಯ ಸಂಗತಿ.

ಅಂದು ಶನಿವಾರ, ಮೊದಲ ತರಗತಿಯನ್ನು ತೆಗೆದುಕೊಳ್ಳುವ ಅವಕಾಶ ರಮಾಳಿಗೆ ದೊರೆತಿತ್ತು. ತರಗತಿಯ ಆರಂಭದಲ್ಲಿ ಪ್ರಾರ್ಥನೆ ಮಾಡಿ ನಂತರ ಪಾಠ ಆರಂಭಿಸುವ ವಾಡಿಕೆ ನಮ್ಮ ಶಾಲೆಯಲ್ಲಿತ್ತು. ಮಕ್ಕಳೆಲ್ಲಾ ಶಿಕ್ಷಕಿ ಹೇಳಿದ ಬಳಿಕ ಪ್ರಾರ್ಥನೆ ಪ್ರಾರಂಭಿಸೋಣವೆಂದು ಕಾಯುತ್ತಿದ್ದರೆ ಶಿಕ್ಷಕಿ, ಮಕ್ಕಳು ಈಗ ಆರಂಭ ಮಾಡುವರು ಈಗ ಆರಂಭಿಸುವರೆಂದು ಎದುರು ನೋಡುತ್ತಿದ್ದಾಗ ಮಕ್ಕಳಲ್ಲೊಂದು ಹೆಣ್ಣು ಮಗು
"ಗುರುಗಳೇ! ಪ್ರಾರ್ಥನೆ ಮಾಡ್ಬೇಕಾ?" ಎಂದು ಕೇಳಿದಳು. ಶಿಕ್ಷಕಿ "ಇದೇನು ಹಾಗೆ ಕೇಳ್ತಿದೀಯಾ? ಪ್ರತಿದಿನ ಪ್ರಾರ್ಥ್ನೆ ಮಾಡ್ಬೇಕಂತ ಗೊತ್ತಿಲ್ವಾ?'' ಎನ್ನುತ್ತ ಕೂಗಾಡಿದಳು.(ರೇಗಾಡಿದಳು)

ಮಕ್ಕಳೆಲ್ಲಾ ನಡುಗುತ್ತಾ ಪ್ರಾರ್ಥನೆ ಮಾಡಿದ ಬಳಿಕ ಶಿಕ್ಷಕಿ ಪಾಠ ಮಾಡಿ ಮುಗಿಸಿ ಹೊರ ಬಂದು ಸಹ ಶಿಕ್ಷಕರಾಗಿರುವ ನಮ್ಮೆಲ್ಲರ ಬಳಿ (ನಮ್ಮೊಂದಿಗೆ) ನಡೆದ ಸಂಗತಿ ತಿಳಿಸಿ "ಅಲ್ಲಾ ಎಂಥಾ ಮಕ್ಳು?! ದಿನಾ ಪ್ರಾರ್ಥ್ನೆ ಮಾಡ್ಬೇಕಂತ ಗೊತ್ತಿದ್ರೂ 'ಮಾಡ್ಬೇಕಾಂತ' ಕಣಿ ಕೇಳ್ತವೆ. ಈ ಮಕ್ಳಿಗೆ ಹಾಂಕಾರ" ಎಂದಳು.
ನಮಗೆಲ್ಲಾ ಬಾಯಿಯೇ ಹರಿದು ಹೋಗುವಷ್ಟು ನಗು ಬಂದಿತು. ನಮ್ಮಲ್ಲೊಬ್ಬ ಶಿಕ್ಷಕಿ " ಅದು ಹಾಗೆ ಅಲ್ಲ. 'ಪ್ರಾರ್ಥನೆ ಮಾಡಬಹುದೆ?' 'ಮಾಡಲು ಅಪ್ಪಣೆ ಉಂಟೆ/ಇದೆಯೇ?' ಎಂಬ ಅರ್ಥದಲ್ಲಿ ಆ ಮಕ್ಕಳು ನಿಮ್ಮ ಬಳಿ (ಹತ್ತಿರ) ಹಾಗೆ ಕೇಳಿದ್ದಾರೆಯೇ ವಿನಃ (ಹೊರತು) ಬೇರೇನೂ ಅಲ್ಲ. ಇಷ್ಟಕ್ಕೂ ದ. ಕ. ದಲ್ಲಿ "ಬಹುದೇ"? ಎಂಬುದಕ್ಕಿಂತ "ಬೇಕಾ"? ಎಂಬುದು ಹೆಚ್ಚು ವಾಡಿಕೆಯಲ್ಲಿದೆ. ಮಾಡ್ಬೇಕಾ? ಹೋಗ್ಬೇಕಾ? ಬರ್ಬೇಕಾ? ಹೀಗೆ.... ನೀವು ಬೆಂಗಳೂರಿನವರಾದ ಕಾರಣ (ಬೆಂಗಳೂರಿನವರಾದುದರಿಂದ) ನಿಮಗದು ತಿಳಿಯದು (ತಿಳಿದಿಲ್ಲ ಅಷ್ಟೆ)."ಎಂದಾಗ ರಮಾಳೂ ಕೂಡ ನಗಲಾರಂಭಿಸಿ, ನಂತರ "ಛೇ! ಎಂಥ ಕೆಲ್ಸ ಆಗ್‍ಹೊಯ್ತು. ಆ ಮಕ್ಕಳ್ನ ಅಪಾರ್ಥ ಮಾಡ್ಕೊಂಡು ಅವ್ರ ಮೇಲೆಲ್ಲಾ ಕೂಗಾಡ್ಬಿಟ್ನಲ್ಲಾ" ಎಂದು ಹೇಳುತ್ತಾ ಪೇಚಾಡಿದಳು.

ಲೇಖಕರು

ಲಕ್ಷ್

K£ÉAzÀÄ §gÉAiÀÄĪÀÅzÀÄ?

ಅನಿಸಿಕೆಗಳು

manav ಮಂಗಳ, 12/01/2009 - 19:48

ವಿಲ್ ರೈಟರ ಗೆಟ ಸಂ ಮನಿ ಆರ ವಾಟ್?
will writer get some money or what?

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.