ಇಲ್ಲೇನ್ ನೋಡ್ತಿಯ ಮೇಲ್ನೋಡೋ
ಇಲ್ಲೇನ್ ನೋಡ್ತಿಯ ಮೇಲ್ನೋಡೋ !!
ಈ ವಿಷಯ ಬರಿದಿದ್ದದ್ದು ನಮ್ಮ ಕಾಲೇಜ್ ನ ವಾಶ್ ರೂಂ (tiolet) ನಲ್ಲಿ ಮಿರರ್ ನ ಮೇಲೆ . ಅದನ್ನು ಓದಿದ ನಾನು ಮೇಲೆ ನೋಡಿದೆ ಅಂದರೆ ಸೀಲಿಂಗ್ (ಕಾಂಕ್ರೀಟ್ ಸೀಲಿಂಗ್) ಅಲ್ಲಿ ಬರೆದಿತ್ತು ಇಲ್ಲೇನ್ ನೋಡ್ತಿಯೋ ಮಂಗ ಹೋಗಿ ನೋಟೀಸ್ ಬೋರ್ಡ್ ನೋಡೋ ? ಅಂತ ಬರದಿತ್ತು .,
ನನಗೆ ಬಾಂಬ್ ಸಿಡಿದಂತೆ ಆಯ್ತು , ಕಾರಣ ಅದು ನನ್ನ ಪಿಯಸಿ ಮೊದಲ ದಿನ , ನಾನು ಬರಿ ಯೋಚನೆ ಮಾಡಿದ್ದು ಈ ಕಾಂಕ್ರೀಟ್ ಸೀಲಿಂಗ್ ಗೆ ಹೇಗೆ ಬರೆದಿರಬಹುದು , ಈ ಮಹಾನ್ ಕಲಾಕಾರನ ಬಗ್ಗೆ ಚಿಂತಿಸುತ್ತ ನೋಟೀಸ್ ಬೋರ್ಡ್ ನೋಡೋಣ ಅಂತ ಹೋದೆ ಅಲ್ಲಿ ನನ್ನಂತೆ ಬಹಳ ಹುಡುಗರು ನಿಂತಿದ್ರು , ಎಲ್ಲರು ಏನೋ ಹುಡುಕುತ್ತಿದ್ದರು ಅಲ್ಲಿ ಮಾತ್ರ ಏನು ಇರಲ್ಲಿಲ್ಲ .,.,.,.,.,.
ಕ್ಲಾಸ್ ಪ್ರಾರಂಭ ಆಯ್ತು ಫಸ್ಟ್ ಬಂದ ಲೆಕ್ಚರರ್ ಎಲ್ಲರ ಹೆಸರುಗಳನ್ನು ಕೇಳಿದರು, ನಂತರ ಅವರು ಪ್ರಾರಂಭಿಸಿದ್ದು ಹೀಗೆ ನೋಡಿ ನಿಮಗೆ ಈ ಕಾಲೇಜ್ ಗೆ ಸ್ವಾಗತ ಅಂದ ಹಾಗೆ ಇಲ್ಲಿಗೆ ಬಂದವರು ಎಲ್ಲರು ಒಂದೊಂದು ರೀತಿಯ ಸಾಧನೆ ಮಾಡಿ ಕಾಲೇಜ್ ಗೆ ಹೆಸರು ತಂದಿದ್ದಾರೆ ಅಂತರಾಷ್ಟ್ರೀಯ ಮಟ್ಟದಲ್ಲಿ , ರಾಜ್ಯ ಮಟ್ಟದಲ್ಲಿ, ಕಾಲೇಜಿನ ಇತಿಹಾಸ ಪುಟಗಳಲ್ಲಿ ಜೀವನದಲ್ಲಿ ರಾಜಕೀಯದಲ್ಲಿ ನಂತರ ಬಿಸಿನೆಸ್ ನಲ್ಲಿ ,.,. ಇನ್ನು ಕೆಲವರು ಕಾಲೇಜಿನ ಕಲ್ಲುಗಳಲ್ಲಿ ಬೆಂಚುಗಳಲ್ಲಿ ತಮ್ಮ ಹೆಸರುಗಳನ್ನೂ ಕೆತ್ತಿ ಸಾದನೆ ಮಾಡಿದ್ದರೆ ಇನ್ನು ಕೆಲವರು .,,.., ಅಂತ ಹೇಳುತ್ತಿದಂತೆಯೇ ನಾನು ಎದ್ದು ನಿಂತು ಹೌದು ಸಾರ್ ಕಾಲೇಜಿನ ವಾಶ್ ರೂಂ ಗಳಲ್ಲಿ ಸೀಲಿಂಗ್ನಲ್ಲಿ ಎಲ್ಲ ತಮ್ಮ ಸಾಧನೆ ಗಳನ್ನು ತೋರಿಸಿದ್ದಾರೆ ಅಂದೇ , ಇಡೀ ಕ್ಲಾಸ್ ಗೊಳ್ಳೆಂದು ನಗತೊಡಗಿತು .,.,.,,..,
ಇಂದು ಇದು ನೆನಪಾಗಲು ಕಾರಣ ಇಂದು ಬೆಳಗ್ಗೆ ನಮಗೆ AMT & Est. DXB ಯಲ್ಲಿ ಒಂದು ಮೀಟಿಂಗ್ ಇತ್ತು ಇದರ ಮಧ್ಯದಲ್ಲಿ ಬ್ರೇಕ್ ಸಮಯದಲ್ಲಿ ನಾನು ವಾಶ್ ರೂಂ (toilet) ಗೆ ಹೋದಾಗ ಅಲ್ಲಿ ಪ್ಯಾನಲ್ ಮೇಲೆ ಈ ರೀತಿ ಬರೆದಿತ್ತು
" Sit like a King " - " Don't sit like Monkey "
.,.,.,.,.,.,.,.,., !!!!!!
ಸಾಲುಗಳು
- Add new comment
- 640 views
ಅನಿಸಿಕೆಗಳು
ಸಾಮಾನ್ಯವಾಗಿ ಎಲ್ಲರೂ ನೋಡಿರೋದೇ
ಸಾಮಾನ್ಯವಾಗಿ ಎಲ್ಲರೂ ನೋಡಿರೋದೇ ಆದರೂ ಚೆನ್ನಾಗಿ ನೆನಪಿಸಿದ್ದೀರಾ.. :D
ನಮ್ಮ ಕಾಲೇಜಿನ Toilet ಮೇಲಿದ್ದ ಬರಹಃ
CRITICAL WORK IN PROGRESS.