Skip to main content

ಸ್ಪಂಜಿನ ಹೊಡೆತ

ಬರೆದಿದ್ದುJuly 21, 2009
4ಅನಿಸಿಕೆಗಳು

ರೇಶ್ ಇಂದೆನಾಯಿತೋ ಹೊಸದು, ಹೌದು ಪರೇಶ್ ಹುಟ್ಟಿದ್ದು ಬೆಳೆದದ್ದು ಧಾರವಾಡ ಆದರೆ ಈಗ ಇರುವುದು ಶಿವಮೊಗ್ಗ. ಅದೆಂದರೆ ಅವನು ೭ ತರಗತಿ ವರೆಗೆ ಓದಿದ್ದಾನಂತೆ . ಆದರೆ ಇವನ ಮಾತು ಕೆಲಸ ಎಲ್ಲ ಹೊಡೆತ ತಿನ್ನುವಂತದೆ ಆದರೆ ಇವನ ಮನಸ್ಸು ತುಂಬ ಒಳ್ಳೆಯದು, ಜನ ಮನಸ್ಸು ನೋಡೋದಲ್ಲ, ಇವನ ಕೆಲಸ ಅಂತಹುದು.
ಏನಾದರು ಆದರೆ ಮೊದಲು ಬಂದು ನನ್ನ ಬಳಿ ಹೇಳಿ ನಂತರ ಸಮಾದಾನ ಮಾಡಿದ ನಂತರ ಮನೆಗೆ ಹೋಗುತ್ತಾನೆ ಅಲ್ಲಿ ವರೆಗೂ ನಿದ್ದೆ ಮಾಡುವದಿಲ್ಲಾ.

ಇಂದು ಅದೇ ಆದದ್ದು ಅದು ಆದದ್ದು ಹೀಗೆ, ಸಂಜೆ ಫಸ್ಟ್ ಶೋ ಸಿನಿಮಾ ನೋಡಲು ವಿನಾಯಕ ಟಾಕಿಸಿಗೆ ಹೋದಾಗ ಸಿನಿಮಾ ಪ್ರಾರಂಭವಾಗಿ ೨೦ ನಿಮಿಷ ಆಗಿತ್ತು ನಮಗೆಲ್ಲಾ ತಿಳಿದಿರುವಂತೆ ಗೇಟ್ ಮ್ಯಾನ್ ಟಾರ್ಚ್ ಹಾಕಿ ದಾರಿ ತೋರಿಸುತ್ತಾನೆ ಅದರಂತೆ ನಾವು ಹೋಗಿ ಕೂರುತ್ತೇವೆ. ಇಲ್ಲೂ ಅದೇ ಆದದ್ದು ಇವನು ಕತ್ತಲೆಯಲ್ಲಿ ಹೋಗಿ ಸೀಟಿನಲ್ಲಿ ಕುಳಿತ ನಂತರ, ಎದುರು ಸೀಟಿಗೆ ಕಾಲು ತಾಗಿಸಿ ಕುಳಿತ ಅದು ಸ್ಪಂಜಿನ ಸೀಟು ನಮಗೆಲ್ಲ ತಿಳಿದಿದೆ . ಸಿನಿಮಾ ನೋಡುವದರಲ್ಲಿ ತಲ್ಲಿನನಾದ ಪರೇಶ್ ಗೆ ಇದು ಸ್ಪಂಜಿಗಿಂತ ಮೃದು ಇದೆ ಎಂಬ ವಿಷಯ ತಿಳಿಯಲು ಸುಮಾರು ೩೦ ನಿಮಿಷ ಕಳೆದಿತ್ತು. ಕ್ರಮೇಣ ತನ್ನ ಎರಡು ಕಾಲುಗಳನ್ನು ಎದುರಿನ ಸ್ಪಂಜಿನ ಮೇಲೆ ಒತ್ತ ತೊಡಗಿದ ಅಷ್ಟರಲ್ಲಿ ಕತ್ತಲೆಯಲ್ಲಿ ಎದುರಿನ ಸೀಟಿನಿಂದ ಒಂದು ಆಕೃತಿ ಇವನ ಕಡೆಗೆ ತಿರುಗಿ ಚಟಾರಣೆ ಬೀಸಿ ಇವನ ಕೆನ್ನೆಗೆ ಹೊಡೆಯಿತು .

ಕಾರಣ ಇಷ್ಟೇ ಸ್ಪಂಜು ಎಂದು ಇವನು ತಿಳಿದದ್ದು ಮುಂದೆ ಕುಳಿತಿದ್ದ ಹೆಂಗಸಿನ ಸೀಟ್ ಆಗಿತ್ತು ಅವಳು ನೋವು ತಡೆಯಲಾರದೆ ಚಟಾರಣೆ ಬಾರಿಸಿದ್ದಳು ಕ್ಷಣಮಾತ್ರದಲ್ಲಿ ಇದು ನಡೆದು ಹೋಯಿತು. ರಾಸ್ಕಲ್ ಅರ್ದ ಗಂಟೆ ಇಂದ ನೋಡ್ತಿದೀನಿ ಎಂದು ಗಲಾಟೆ ಶುರು ಮಾಡಿದಳು ಅಷ್ಟರಲ್ಲಿ ಇವನು ಅಲ್ಲಿಂದ ಓಡಿದ್ದು ಮತ್ತೆ ಬಂದು ಕುಳಿತದ್ದು ನಮ್ಮ ಮನೆಯ ಮುಂದಿನ ಕಾಂಪೌಂಡ್ ನಲ್ಲಿ ಇದಿಷ್ಟು ನಡೆದ ಸಂಗತಿ .
ಇದು ನಾನು ಬೇಕಂತ ಮಾಡಿದ್ದಲ್ಲ ಕತ್ತಲೆಯಲ್ಲಿ ನನಗೆ ಗೊತ್ತಾಗಲಿಲ್ಲ ಅಂತ ಅಳತೊಡಗಿದ ನಂತರ ನಗತೊಡಗಿದ . ನಾನು ಅವನಿಗೆ ಮನೆ ಒಳಗೆ ಕರೆದು ಮುಖ ನೋಡಿದಾಗ ಸರಿ ಸುಮಾರೋ ೧೦೦ ಪೌಂಡ್ ಹೊಡೆತ ಬಿದ್ದ ಹಾಗೆ ಕಿವಿ ಕೆನ್ನೆ ಎಲ್ಲಾ ಸರಿಯಾಗಿ ಊದಿಕೊಂಡಿತ್ತು , ಇನ್ನಾದರು ಹುಷಾರಾಗಿರು ಅಂತ ಹೇಳಿ ಮನೆ ಕಳಿಸಿದೆ . ಇದು ಅಲ್ಲಿಗೆ ಮುಗಿಯಲಿಲ್ಲಾ ಮತ್ತೊಂದು ವಾರದಲ್ಲಿ ಹೊಸ ವಿಷಯ ಮಾಡಿ ಕೊಂಡು ಬಂದ ಅದು ನಿಮಗೆ ಮುಂದೆ ತಿಳಿಸುತ್ತೇನೆ ,,.,.,.,.,.,.,.

ಲೇಖಕರು

ಇಸ್ಮಾಯಿಲ್ ಶಿವಮೊಗ್ಗ

" ಮಲೆನಾಡ ಮನಸ್ಸು ಮರಳುಗಾಡಿನಲ್ಲಿ "

I am a simple person like you
ನನ್ನದು ಮಲೆನಾಡಿನ ತವರೂರು ಶಿವಮೊಗ್ಗ, ಕಲಿತದ್ದು ಸಹ್ಯಾದ್ರಿ ಕಾಲೇಜ್, ಈಗ ಇರುವುದು ಅಬುಧಾಬಿ - ಯು. ಎ. ಯಿ .
ಓದುವುದು, ಬರಿಯುವುದು, ಛಾಯಾಗ್ರಹಣ, ಇಂಪಾದ ಹಾಡುಕೆಳುವುದು,,,,,,,
ನಿಮ್ಮೊಂದಿಗೆ ನಿಮ್ಮ ಭಾಷೆಯಲ್ಲಿ ಮಾತನಾಡುವುದು ...!

ಅನಿಸಿಕೆಗಳು

ಕೆಎಲ್ಕೆ ಧ, 07/22/2009 - 10:46

ಮರಳುಗಾಡಿನ ಕನ್ನಡ ಪ್ರೀತಿಗೆ ಸ್ವಾಗತ. ಚೆನ್ನಾಗಿ ಬರೆಯುತ್ತೀರಿ ಇಸ್ಮಾಯಿಲ್ .ಇನ್ನೂ ಒಳ್ಳೆ ಬರಹ ,ಕವನಗಳನ್ನು ವಿಸ್ಮಯಕ್ಕೆ ನೀಡಿ.

ಬಹಳ ಸಂತೋಷ
ಧನ್ಯವಾದಗಳು
ನಾನು ಇತ್ತೀಚೆಗಷ್ಟೆ ವಿಸ್ಮಯ ನಗರಿಗೆ ಬಂದದ್ದು ಮೊದಲ ಪ್ರತಿಕ್ರಿಯೆ ನಿಮ್ಮದೇ

ನರಸೀಪುರ (ಪ್ರಮಾಣಿಸಲ್ಪಟ್ಟಿಲ್ಲ.) ಧ, 07/22/2009 - 18:03

ಅದು ಯಾರು ಸ್ವಾಮಿ ಅರ್ಧ ಗಂಟೆಯ ತನಕ 'ಆನಂದಿಸುತ್ತ' ಕುಳಿತಿದ್ದು ಆಮೇಲೆ ಇದ್ದಕ್ಕಿದ್ದಂತೆ ಕೆರಳಿ ಕೆನ್ನೆಗೆ ಹೊಡೆದವಳು?

ಸಿದ್ರಾಮಯ್ಯ (ಪ್ರಮಾಣಿಸಲ್ಪಟ್ಟಿಲ್ಲ.) ಗುರು, 07/23/2009 - 12:10

ಅದು 'ಆನಂದಿಸುತ್ತ' ಅಲ್ಲ ಕನ್ಲಾ. ಸಹಿಸ್ಕಂತ ಕುಂತಿದ್ದು. ಆಮ್ಯಾಕೆ ಇವನವ್ನ ಅಂದ್ಕಂಡು ಕಪಾಳಕ್ಕೆ ಗದುಮಿದ್ದು.

ನಿಮ ವಳೇನರಸೀಪುರದ ಗವುಡನ್ನ ಸಹಿಸ್ಕಂಡು ಸಹಿಸ್ಕಂಡು ಸಾಕಾಗಿ ನಾ ಒಂದಪ ಅಪ್ಪುಂಗೆ , ಮಕ್ಕಳಿಗೆ ಕೊಟ್ಟಿದ್ನಲ, ಅಂಗೆ.

ಅಲಾ ನೀ ವಳೇನರಸೀಪುರವ ಅಲ್ಲ ಟೀ ನರಸೀಪುರವ?

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.