Skip to main content

ಕನ್ನಡಿಗರೆಂದರೆ ನಿಜವಾಗಲೂ ಹೇಡಿಗಳೇ?................ ಅಥವ, ನನ್ನಲ್ಲೇ ಈ ಕಲ್ಪನೆ ಮೂಡುತ್ತಿದೆಯೇ?

ಇಂದ ashu
ಬರೆದಿದ್ದುFebruary 20, 2007
22ಅನಿಸಿಕೆಗಳು

ಹೌದು, ಮೇಲೆ ಬರೆದ ವಾಖ್ಯ ಯಾವುದೇ ಕನ್ನಡಿಗನಲ್ಲೂ ಸಿಟ್ಟು ತರದೇ ಇರಲಾರದು... ಹಾಗೆ, ಒಂದು ಸಲ ಮೋನೀಟರ್ ಆಫ್ ಮಾಡಿ ಅದರಲ್ಲಿ ನಿಮ್ಮ ಕಣ್ಣುಗಳನ್ನು ನೋಡಿ, ಅವು ಕೂಡ ಕೆಂಪಾಗಿ ಬಿಟ್ಟಿವೆ........... ಆದರೆ ಈ ಸಿಟ್ಟು ನಿಮ್ಮಲ್ಲಿ ಎಷ್ಟು ನಿಮಿಷ ಉಳಿಯುತ್ತೆ, ಈ ರೀತಿ ಬರೆದ ವ್ಯಕ್ತಿಗೆ ನಾನು ಏನಾದರೂ ಮಾಡಲೇಬೇಕು ಎಂಬ ಛಲ ನಿಮ್ಮ ಎಷ್ಟು ಜನರಲ್ಲಿ ಉತ್ತೇಜಿಸುತ್ತಿದೆ?

ಚಿಕ್ಕಂದಿನಲ್ಲಿ ಕಿತ್ತೂರಿನಲ್ಲಿ (ಬೆಳಗಾವಿ) ಅಮ್ಮನ ಕೈ ಹಿಡಿದು ವೀರರಾಣಿ ಕಿತ್ತೂರು ಚೆನ್ನಮ್ಮ, ಚಲನಚಿತ್ರ ನೋಡಿದ ನೆನಪು. ಚಿತ್ರಮಂದಿರ ಬಿಟ್ಟು ಹೊರಗೆ ಬಂದದ್ದೆ ತಡ, ಎಲ್ಲರ ಬಾಯಲ್ಲೂ ಚೆನ್ನಮ್ಮನ ಮಾತುಗಳು, ಕನ್ನಡನಾಡಿಗೆ ಅವಳೋಬ್ಬ ಹೆಮ್ಮೆ ಅನ್ನೋ ಭಾವನೆ. ಒಂದು ಕ್ಷಣ, ನನ್ನ ಕೈ ಮೇಲಿನ ಕೂದಲುಗಳು ಎದ್ದು ನಿಂತಿದ್ದು, ತ್ಯಾಕರೆಯನ್ನ ಕೊಂದಅಂತೆ, ಮಲ್ಲಪ್ಪ ಶೆಟ್ಟಿ ಇದ್ದಿದ್ದರೆ ಅವನನ್ನು ಸಿಘಿದು ಹಾಕುವಷ್ಟು ಸಿಟ್ಟು. ಅಮ್ಮನನ್ನು ಕೇಳಿದೆ, ಮಲ್ಲಪ್ಪ ಶೆಟ್ಟಿ ಎಲ್ಲಿ ಸಿಗುತ್ತಾನೆ, ನಾನು ಅವನನ್ನು ಕೊಲ್ಲಬೇಕು ಎಂದು. ಅಮ್ಮ ನಗುತ್ತಾ ಹೇಳಿದರು, ಈಗ ಅವನಿಲ್ಲ, ಇದ್ದಿದ್ದರೆ ನಾನು ಸುಮ್ಮನೇ ಬಿಡುತ್ತಿದ್ದೆನೆ ಎಂದು. ಈ ಹಿಣ್ಣಲೆ ನಾನು ಮೂರನೇ ತರಗತಿಯಲ್ಲಿ ಓದುತ್ತಿದ್ದಾಗ ನಡೆದದ್ದು.

ಈಗ ವರ್ತಮಾನಕ್ಕೆ ಬರುತ್ತೇನೆ..

ಚಿಕ್ಕಂದಿನಲ್ಲಿ, ಒಂದು ಸಿನೆಮಾ ನೋಡಿಯೇ ಇಷ್ಟೊಂದು ಪ್ರಭಾವಿತನಾಗಿ, ಕನ್ನಡತನಕ್ಕೆ, ಒಳ್ಳೇತನಕ್ಕೆ, ಏನೆಲ್ಲಾ ಮಾಡಲು ತಯಾರಿದ್ದ ಕನ್ನಡಿಗ ನಾನು..
ಆದರೆ ಇವತ್ತು, ಅದೇ ಹುಡುಗ 22 ವರುಷದವನಾಗಿದ್ದೇನೆ.... ಆದರೆ ಆಗಿದ್ದ ಧಿಟ್ಟತನ ಈಗ ನನ್ನಲ್ಲಿಲ್ಲ!!
ಎಲ್ಲೋ, ಹೇಗೋ, ಎಂಬಂತೆ, ಸಾಗರದಲ್ಲಿ ಒಂದು ಚಿಕ್ಕ ಕಲ್ಲು ಎಸೆದಷ್ಟು ಸಿಟ್ಟು ಬರುವುದು, ಯಾರಾದರೂ ನನ್ನ ಮೇಲೆ ಬೆರಳು ಮಾಡಿದಾಗಲೇ..

ಪಕ್ಕದಲ್ಲಿ ಕುಳಿತ ಕನ್ನಡಿಗನಿಗೆ, ಯಾರು ಏನೇ ಅಂದರೂ, ಅದು ನನಗೆ ಸಂಭಂದಿಸಿಲ್ಲ ಅನ್ನೋ ಭಾವನೆ... ಚಿಕ್ಕಂದಿನಲ್ಲಿ ಒಂದು ಸಿನೆಮಾದಲ್ಲೇ ನಡೆದ ಅಚಾತುರ್ಯಕ್ಕೆ ಆರ್ಭಟಿಸಿದ ಕನ್ನಡಿಗ, ಈಗ ಯುವಕನಾದರೂ, ಹಲ್ಲು ಕಿತ್ತ ಹಾವಿನಂತೆ!!!

ಹೈದರಾಬಾದ್ ಗೆ ಬಂದಾಗಿನಾ ಸನ್ನಿವೇಶವನ್ನೇ ಹೇಳುತ್ತೇನೆ....

ನನ್ನ ಜೊತೆಗಿದ್ದ ತೆಲಗು ಸ್ನೇಹಿತರು, ಕನ್ನಡ ಚಿತ್ರಗಳು ಬರೀ ನಕಲು ಎಂದು ಹೀಯಾಳಿಸುತ್ತಿದ್ದದ್ದು.

ಒಂದು ಕ್ಷಣ ಸಿಟ್ಟುನೆತ್ತಿಗೆ ಏರಿದರು, 2-3 ನಿಮಿಷಗಳಲ್ಲಿ, ಶಾಂತವಾಗಿ, ಹೌದು, ನಮ್ಮ ಹೊಲಸು ಕೆ.ಎಫ್.ಐ ಅವರು ಮಾಡುವುದು ಎಂಜಲು ತಿನ್ನುವ ಕೆಲಸವೇ ಎಂದು ಸುಮ್ಮನಾಗುವದು..

ಆಂತರಿಕವಾಗಿ ಪ್ರತಿಭಟಿಸುವಂತೆ, ನಕಲು ಚಿತ್ರಗಳನ್ನು ನೋಡದೇ, ತ್ಯಜಿಸುವದು.

ಇಷ್ಟು ಮಾಡಿದರೆ ನನ್ನ ಕೆಲಸ ಮುಗೀತು...

ಆದರೆ, ನೆನೆಪಿಸಿಕೊಳ್ಳಿ, ಇದೆ ಅಶು, ಚಿಕ್ಕಂದಿನ ಅಶುವಾಗಿದ್ರೆ!!!

ಕೆ.ಎಫ್.ಐ ಗೆ ಪತ್ರ ಬರೆದು, ಕ್ಯಾಕಾರಿಸಿ ಎಂಜಲು ತಿನ್ನುವವರ ಮುಖಕ್ಕೆ ಉಗಿದು, ಬದಲಾಗಳೂ ಅವಕಾಶ ಕೊಟ್ಟು, ಆಗಲೂ ಸುಧಾರಿಸದಿದ್ದರೆ, ಚಪ್ಪಲಿ ಸೇವೆ ಮಾಡಿ ಬರುತ್ತಿದ್ದ..

ಆದರೆ, ನನ್ನಲ್ಲಿ ಆ ಹುಮ್ಮಸ್ಸಿಲ್ಲ.. ನನಗೆ ಯಾರು ನಿದರ್ಶನವಾಗಿಲ್ಲ....

ಇನ್ನೊಂದು ವಿಷಯ ಸೇರಿಸಲಿಚ್ಛಿಸುತ್ತೇನೆ,

ನಾನು ನೋಡಿದ ಪ್ರಕಾರ, ಎಲ್ಲ ಕೊರ್ಪೊರೇಟ್ ಆಫೀಸುಗಳಲ್ಲಿ, ತಮ್ಮ ತಮ್ಮ ಭಾಷೆಯವರಿಗೆ ಬೆಂಬಲ ಇದ್ದೇ ಇರುತ್ತದೆ. (ಇದು ಆಂತರಿಕ, ನೀವು ಇಂತಹ ವ್ಯತ್ಯಾಸಗಳನ್ನು ಕಾಣದೆ ಇದ್ದಲ್ಲಿ, ನೀವು ಅದೃಷ್ಟವಂತರು, ಹಾಗೆ ನನಗೆ ಕ್ಷಮೆ ಇರಲಿ)..
ಮಲ್ಲು-ಮಲ್ಯಾಳಿಗೆ, ಕೋಂಗ-ತಮಿಳರಿಗೆ, ಗೊಲ್ಟಿ-ಆಂದ್ರಾ ದವರಿಗೆ, ನಾರ್ತಿಗಳು-ಉತ್ತರ ಭಾರತದವರಿಗೆ..

ಆದರೆ, ಕನ್ನಡಿಗ-(ಇಡೀ ಭೂಮಿಗೆ).. ಭೂಮಿ ಎಂದರೆ ತಪ್ಪಾದೀತು,, ಇಡೀ ವಿಶ್ವಕ್ಕೆ..

ಎಲ್ಲರೂ, ತಮ್ಮ ಮನೆ ಸೂರನ್ನು ನೆಟ್ಟಗೆ ಮಾಡ ಹೋರಟರೆ, ಕನ್ನಡಿಗ ಯೂನಿವರ್ಸಲ್ ಲಾ (ವಿಶ್ವ ಕಾನೂನು) ಅನುಮೋದಿಸಿ ಸಾರ್ವಜನಿಕ ಹಿತರಕ್ಷಣೆಗೆ ಹೋಗುತ್ತಾನೆ...

ಈ ಭಾವನೆ ಒಳ್ಳೆಯದೇ, ಆದರೆ, ಮೊದಲು ಮನೆ ನೆಟ್ಟಗೆ ಇಟ್ಟುಕೊ ಗುರುವೇ, ಆಮೇಲೆ ಸಾರ್ವಜನಿಕರ ಮಾತು..

ಬೇರೆಯವರು, ತಮ್ಮ ಭಾಷೆಯವರಿಗೆ ತೋರುವ ಒಲವು, ಸಹಾಯ, ಆತ್ಮೀಯತೆ, ಕನ್ನಡಿಗನಲ್ಲಿ ಯಾಕೆ ಇಲ್ಲ???

ನಾನು ಹೇಳಬಯಸುತ್ತಿರುವುದು ಇಷ್ಟೇ..

* ನಾನ್ ಯಾಕೆ, ಕನ್ನಡ ನನ್ನದು ಅದಕ್ಕಾಗಿ ಏನಾದರೂ ಮಾಡುವೆನು ಎಂಬ ಹಂಬಲ, ದಿನದಿಂದ ದಿನಕ್ಕೆ ಕುಂದುತ್ತಿದೆ?
* ಕನ್ನಡಿಗರು ನನ್ನವರು ಅವರಿಗೆ ಕೈ ಮೀರಿ ಸಹಾಯ ಮಾಡುತ್ತೇನೆ ಅನ್ನೋ ಭಾವನೆ ಯಾಕೆ ಬರುತ್ತಿಲ್ಲ?
* ಪರಭಾಷೆಯವರು ತಮ್ಮ ಭಾಷೆ ಕಲಿಸುವಂತೆ, ನನ್ನಲ್ಲೇಕೆ ಕನ್ನಡವನ್ನು ಬೇರೆಯವರಿಗೆ ಕಲಿಸುವ ಕೆಚ್ಚೆದೆ ಇಲ್ಲ?
* ಬೇರೆಯವರು ಕನ್ನಡ/ನನ್ನ ಬಗ್ಗೆ ಮಾತಾಡುತ್ತಿದ್ದರೆ ವಿರೋಧಿಸುವ ಸಿಡಿಗುಂಡು ಎಲ್ಲಿ ಕಾಣೆಯಾಗಿದೆ?
* ಕನ್ನಡಕ್ಕೆ ಅನ್ಯಾಯವಾದಾಗೆಲ್ಲ, ನಾನೇಕೆ ಮನೆಬಿಟ್ಟು ಹೊರಗೆ ಬರುವ ಧಿಟ್ಟತನ ತೋರುತ್ತಿಲ್ಲ?
* ಯಾಕೆ ಕನ್ನಡಿಗರಲ್ಲಿ ಒಗ್ಗಟ್ಟು ಎಂಬ ಪದಕ್ಕೆ ಅರ್ಥವಿಲ್ಲ?

ಇನ್ನೂ ಹಲವು ಪ್ರಶ್ನೆಗಳಿವೆ, ಆದರೆ ಅವುಗಳಿಗೆ ನನ್ನಲ್ಲಿ ಉತ್ತರ ಸಿಕ್ಕುತ್ತಿಲ್ಲ...

ಆದರೆ ನಾನು ಬದಲಾಗುತ್ತಿದ್ದೇನೆ... ಮರಳಿ ಚಿಕ್ಕಂದಿನ ಅಶು ಆಗಲೂ ಯತ್ನಿಸುತ್ತಿದ್ದೇನೆ...
ತಾಯಿ ಭುವನೇಶ್ವರಿಯ ಚರಣಗಳಿಗಾಗಿ, ಜೀವ ಕೊಡಲು ತಯಾರಾಗುತ್ತಿದ್ದೇನೆ..

ಕನ್ನಡ, ಎಂದರೆ, ಕಿವಿ ಗೋಟ್ಟು ಕೇಳುತ್ತಿದ್ದೇನೆ, ಕನ್ನಡಿಗರು ಸಿಕ್ಕರೆ, ಆತ್ಮೀಯತೆಯಿಂದ ಸ್ವಾಗತಿಸುತ್ತಿದ್ದೇನೆ, ಕನ್ನಡಿಗನಿಗೆ ಯಾರು ಏನೇ ಅಂದರೂ, ಕನ್ನಡಿಗನ ಪರವಾಗಿ ಹೋರಾಡಲು ಸಿದ್ಧವಾಗುತ್ತಿದ್ದೇನೆ...

ಕನ್ನಡಕ್ಕೆ, ಅನ್ಯಾಯವಾದರೆ, ಹಿಮ್ಮೆಟ್ಟಲು ಶಕ್ತಿಯನ್ನು ತರಿಸಿಕೊಳ್ಳುತ್ತಿದ್ದೇನೆ...

ಸ್ವಮೇಕ್ ಚಲನ ಚಿತ್ರಗಳನ್ನು ಮಾತ್ರ ನೋಡುತ್ತಿದ್ದೇನೆ...
ನಾನಿರುವ ಆಫೀಸಿನಲ್ಲಿ, ಕನ್ನಡಿಗರು ಕೇಳಿದ ಯಾವುದೇ ಸಹಾಯ ಮಾಡಲು ಸಿದ್ಧವಾಗುತ್ತಿದ್ದೇನೆ...

ಈ ಅಂಕಣ ಓದಿದ ಕನ್ನಡಿಗನೇ, ನಿನಗೆ ನಿನ್ನ ಚಿಕ್ಕಂದಿನ ದಿನಗಳು ನೆನಪಾಗುತ್ತಿಲ್ಲವೇ?,

ಚಿಕ್ಕಂದಿನಲ್ಲಿ, ಅನ್ಯಾಯದ ವಿರುದ್ಧ ಹೋರಾಡಿದ ನಿನ್ನ ಬುದ್ಧಿ, ಈಗ ನಿನ್ನ ದೇಹ ಶಕ್ತಿಯನ್ನು ಅದರ ಜೊತೆ ಸೇರಿಸಿಕೊಳ್ಳಲು ಸಿದ್ಧವಿಲ್ಲವೇ?

ಕನ್ನಡಿಗರು ಹುಟ್ಟಿನಿಂದಲೇ, ಛಲಧಂಕ ಮಲ್ಲರು ಎಂದು ಕೇಳಿದ್ದೇನೆ, ನೀನು ಛಲಧಂಕ ಮಲ್ಲನಲ್ಲವೇ?

ಎದ್ದೆ ಏಳು ಕನ್ನಡಿಗ ಸಾಕಿನ್ನೂ ನಿದ್ದೆ, ಬೇರೆಯವರು ಕೈ ಮಾಡಿ ತೋರಿಸುತ್ತಿದ್ದಾರೆ, ನೀನೊಬ್ಬ ಹೇಡಿ ಎಂದು,
ಸಾಕಿನ್ನೂ ಸಹನೆ, ಬೇರೆಯವರು ಅದನ್ನ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ,
ಬಾ ಇಡುವ ದಿಟ್ಟ ಹೆಜ್ಜೆಯ, ಮೆರೆಯುವ ಭುವನೇಶ್ವರಿಯ ಕೀರ್ತಿಯ,
ಮಾದರಿಯಾಗುವ, ಮುಂಬರುವ ಪುಟಾಣಿ ಛಲಧಂಕ ಮಲ್ಲರಿಗೇ...

- ಅಶು - ರೀ ಲೋಡೆಡ್!!!!

ಲೇಖಕರು

ashu

ashu

ಸ್ನೇಹಿತರೆಲ್ಲರಿಗೂ ನಮಸ್ಕಾರಗಳು... ನಾನು ವಿಪ್ರೋನಲ್ಲಿ ಕೆಲ್ಸಾ ಮಾಡ್ತಾ ಇದೀನಿ.... ಮರಳಿ ಮಣ್ಣಿಗೆ ಎಂಬಂತೆ, ನಾನು ಮತ್ತೆ ಬೆಂಗಳೂರಿಗೆ ಬರುತ್ತಿದ್ದೇನೆ...
ಮಾರ್ಚ್ ಮೊದಲ ದಿನಗಳಲ್ಲಿ, ಎಲೆಕ್ಟ್ರಾನಿಕ್ ಸಿಟಿಯಲ್ಲಿ ಪ್ರಾಜೆಕ್ಟ್ ಸೇರಲಿದ್ದೇನೆ. ಕೊನೆಗೂ, ವರ್ಗಾವಣೆ ಪಡೆಯಲು ನಾ ಪಟ್ಟ ಕಷ್ಟವನ್ನು ದೇವರು ಕೊನೇಗೋಳಿಸಿದ್ದಾನೆ... ವಿಪ್ರೋನಲ್ಲಿ, ಬೆಂಗಳೂರಿಗೆ ಪ್ಯಾರಾಡೈಸ್ ಎಂದು ಕರೆಯುತ್ತಾರೆ.. ಬೆಂಗಳೂರಿಗೆ ವರ್ಗಾವಣೆ ಸಿಗಲು, ಸೀನಿಯರ್ ಗಳ ಜೊತೆ ಹರಸಾಹಸ ಮಾಡಬೇಕಾಗುತ್ತೆ.. ಎಲ್ಲ ಮೆಟ್ಟಿ ನಿಂತು, ಗೆಲುವಿನೊಂದಿಗೆ....ಬರುತ್ತಿದ್ದೇನೆ..............

ನನ್ನ ಮನಸಲ್ಲಿಗ ಒಂದೇ ಸಾಂಗು..

ಬ್ಯಾಂಗ್ ಬ್ಯಾಂಗ್, ಬೆಂಗಳೂರು ಗೊತ್ತ....
ಬ್ಯಾಂಗ್ ಬ್ಯಾಂಗ್, ಬೆಂಗಳೂರು ಗೊತ್ತ....(ಶಿವಣ್ಣ ನಟಿಸಿದ ಯುವರಾಜ ಚಿತ್ರದ್ದು)

ಅನಿಸಿಕೆಗಳು

ರಾಜೇಶ ಹೆಗಡೆ ಸೋಮ, 02/19/2007 - 23:02

ತುಂಬಾ ಚೆನ್ನಾಗಿದೆ ಅಶುರವರೆ. ಇದು ಪ್ರತಿಯೊಬ್ಬ ಕನ್ನಡಿಗನೂ ವಿಚಾರ ಮಾಡಬೇಕಾದ ವಿಷಯ.

ashu ಮಂಗಳ, 02/20/2007 - 10:20

ಧನ್ಯವಾದಗಳು ಮಲೆನಾಡಿಗ ಹಾಗೂ ರಾಜೇಶ್ ಅವರೇ.

ಹಾಗೆ, ಕನ್ನಡ, ಕನ್ನಡಾತನ, ಕನ್ನಡಿಗರನ್ನು ಒಗ್ಗೂಡಿಸಲು, ನಿಮ್ಮಲ್ಲಿ ಏನಾದರೂ ಉಪಾಯಗಳಿದ್ದರೆ, ದಯವಿಟ್ಟು ಈ ಅಂಕಣದಲ್ಲಿ ಸೇರಿಸಿ...

inthi nimmava,
-Ashu

ಪ್ರೀತಿಯ ಕನ್ನಡದ ಗೆಳೆಯ ಆಶು,

ನಿಮ್ಮ ಲೇಖನ ನೋಡಿ ಆಗಲೆ ಬೆಂದ ಹೃದಯಕೆ ನಿಂಬೇ ಹುಳಿ ಹಿಂಡಿದಂತಾಯ್ತು..!!

ನಿಮ್ಮ ಯೋಚನೆಗಳಿಗೆ ನನ್ನ ಒಂದು ಸಣ್ಣ ಉತ್ತರವನ್ನು ಈ ಕೆಳಗಿನ ಲಿಂಕಿನಲ್ಲಿ ನೀಡಿದ್ದೇನೆ..!!

http://talksofthesoul.blogspot.com/2007/05/1.html
http://talksofthesoul.blogspot.com/2007/05/2.html
http://talksofthesoul.blogspot.com/2007/05/3.html
http://talksofthesoul.blogspot.com/2007/05/4.html
http://talksofthesoul.blogspot.com/2007/05/5.html

ನನ್ನ ಜೀವನದಲ್ಲಿ ಕಂಡ ಕನ್ನಡದ ಮೇಲಿನ ಕನಸು , ಪ್ರೀತಿ , ಒಲುಮೆ ಎಲ್ಲವನ್ನು ಈ ಉತ್ತರದಲ್ಲಿ ತುಂಬಿದ್ದೇನೆ..!!

ಸಮಯ ಸಿಕ್ಕಾಗ ಓದಿ..!! ನಿಮ್ಮ ಅಭಿಪ್ರಾಯವನ್ನ ತಿಳಿಸಿ..!!

-ಇಂತಿ
ಯುವಪ್ರೇಮಿ
http://yuvapremi.blogspot.com

ಅನಾಮಿಕ (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 02/20/2007 - 13:42

ಹೇಡಿತನದ ಜೊತೆ ಸೋಮಾರಿತನ, ಕೀಳರಿಮೆ ಹಾಗೂ ಸ್ವಾರ್ಥ ಇದು ಸಹ ಕನ್ನಡಿಗರ ಪರಮ ವೈರಿಗಳಾಗಿವೆ. ಕನ್ನಡಿಗರು ಇವೆಲ್ಲವನ್ನು ಬಿಟ್ಟು ಸಿಡಿದೆದ್ದು ನಿಲ್ಲಬೇಕು. ತಮ್ಮ ಭಾಷೆ ಕೀಳು ಬೇರೆ ಭಾಷೆ ಮೇಲು ಎಂಬ ಕೀಳರಿಮೆ ತೊಡೆಯಬೇಕು.

ಸಂತೋಷಲಕ್ಷ್ಮಿ ಮಂಗಳ, 02/20/2007 - 15:28

ಮೊದಲು ಯಾವುದೇ ಕೆಲಸ ನಮ್ಮಿಂದ ಪ್ರಾರಂಭವಾಗಬೇಕು,
ಅಂದ್ರೆ ಕೊನೆಯ ಪಕ್ಷ ಕರ್ನಾಟಕದಲ್ಲಿದ್ದಾಗಲಾದರೂ ಯಾರಾದರೂ
1) ಕನ್ನಡ ಬಿಟ್ಟು ಬೇರೆ ಭಾಷೆ ಉಪಯೋಗಿಸಿದರೂ ನಾವು ಮಾತ್ರ ಕನ್ನಡದಲ್ಲೇ ಉತ್ತರಿಸಬೇಕು ( ನಮ್ಮ ಗುಂಪೆಲ್ಲಾ ಹೀಗೇನೆ ಮಾಡೋದು)
2) ಸ್ಡಲ್ಪ ಕನ್ನಡಿಗರಿಗೆ ಉದ್ಯೋಗಾವಕಾಶಗಳ ಬಗ್ಗೆ ತಿಳಿಸ್ಬೇಕು, ಅವರಿಗೆ ಇನ್ನೊಬ್ಬರಿಗೆ ತಿಳಿಸೀಂತ ಹೇಳಬೇಕು
ಮತ್ತಿನ್ನೇನಾದರೋ ಉಪಾಯಗಳಿವೆನಾ...........
ಆದರೆ ದಯವಿಟ್ಟು ಹೇಡಿಗಳೆನ್ನಬೇಡಿ.

veeresh ಧ, 02/21/2007 - 13:35

ಅಶುರವರೇ ತುಂಬಾ ಚೆನಾಗಿ ಬರೆದಿದ್ದೀರಿ...

ashu ಧ, 02/21/2007 - 16:36

ಧನ್ಯವಾದಗಳು ವೀರೇಶ ಅವರೇ,

ಹಾಗೆ, ನಿಮಗೆ ಯಾವುದಾದರೂ ಉಪಾಯಗಳು ಹೊಳೆದಿದ್ದಲ್ಲಿ, ದಯವಿಟ್ಟು ಇಲ್ಲಿ ತಿಳಿಸಿ...

inthi nimmava,
-Ashu

ಸ್ಮೀತಾ (ಪ್ರಮಾಣಿಸಲ್ಪಟ್ಟಿಲ್ಲ.) ಗುರು, 02/22/2007 - 15:21

ನಿಜ್ವಾಗ್ಲೂ ಎಲ್ರೂ ಪಾಲಿಸಬೇಕಾದ ನಿಯಮಗಳನ್ನು ಅಶು ಅವರು ಬರೆದಿರುತ್ತಾರೆ...

ಸ್ಮೀತಾ

ಅನಾಮಿಕ (ಪ್ರಮಾಣಿಸಲ್ಪಟ್ಟಿಲ್ಲ.) ಗುರು, 02/22/2007 - 15:49

tumba chennagide Ashu... nanage gottu neenu kannadada pakka abhimaani antha....

haage nodidare yella kannadigara manasalli ee horata irruthe.. aadre yaarigu andanna hora haakuva kechede illa.. Naavu kannada para maatadidare yelli ulidavaru nammana keelagi noodutaro anno anumaana.. Ee anumaana iruvavaru nijavaada kannadiga alla annodu naana bhavane...

naanu hirya prathamika shaaleyalli iddaga nadeda gatane nenapagutide..

namma taragatige hosadagi banda shishaki obbarige kannada baruvudilla endu namma princi helidaga namagella kasivisi.. allitanka english medium aadru kannadalle matanaadutidda namege hegappa ee madam jote hondikondu hooguvudu anno bhaya... anthu kone prayathna yembanthe, aa shishaki english nalli maatadidastu naavu kannadadalle uttra kodutiddevu.. konege bere daari kaanade aa madam kannada daale maatada bekaitu... naavu yeste prayathna pattaru kannada maatanaduvudannu bidade iddaga princi bere daari kaanade aa madamge kannada baruvudilla endu sullu heliddu endu nantara namage gotaithu...

eevattu aste naavu MNC alli kelasa maadutidru saha namma nammalli kannada maataduvudu bittilla.. ade alde namma gumpalli iruva kelavu bere baasheyavarigu saha kannada kalisuvalli yashasviyaagidivi... Idu naavu kannadake sallisutiruva sanna namana aste...

ee samajavannu badalisuvudu kasta.. aadre namalle badalaavane taruvudu kastada kelsa allaa... modalu naavu badalaaguvudu mukya.... aamele ee samajavannu badalaisuva prayathna maadona...

ashu ಗುರು, 02/22/2007 - 16:02

ಮೇಲೆ ಬರೆದ ಸ್ನೇಹಿತೆ ಸೌಮ್ಯ ಳ ಅಭಿಪ್ರಾಯವನ್ಣ ಕನ್ನಡಕ್ಕೆ ವರ್ಗಾಯಿಸಿದ್ದೇನೆ.. ಇದಕ್ಕೆ ಅವಳ ಅನುಮತಿ ತೆಗೆದುಕೊಂಡಿದ್ದೇನೆ..

ಹಾಗೆ ನೋಡಿದರೆ ಎಲ್ಲ ಕನ್ನಡಿಗರ ಮನಸಲ್ಲಿ ಈ ಹೋರಾಟ ಇರುತ್ತೆ.. ಆದ್ರೆ ಯಾರಿಗೂ ಅದನ್ನ ಹೊರ ಹಾಕುವ ಕೆಚ್ಚೆದೆ ಇಲ್ಲ.. ನಾವು ಕನ್ನಡ ಪರ ಮಾತಾಡಿದರೆ ಎಲ್ಲಿ ಉಳಿದವರು ನಮ್ಮನ್ನ ಕೀಳಾಗಿ ನೋಡ್ತಾರೋ ಅನ್ನೋ ಅನುಮಾನ.. ಈ ಅನುಮಾನ ಇರುವವರು ನಿಜವಾದ ಕನ್ನಡಿಗ ಅಲ್ಲ ಅನ್ನೋದು ನನ್ನ ಭಾವನೆ...

ನಾನು ಹಿರಿಯ ಪ್ರಥಮಿಕ ಶಾಲೆಯಲ್ಲಿ ಇದ್ದಾಗ ನಡೆದ ಗ ಠ ನೇ ನೆನಪಾಗುತಿದೆ..

ನಮ್ಮ ತರಗತಿಗೆ ಹೊಸದಾಗಿ ಬಂದ ಶಿಕ್ಷಕಿ ಒಬ್ಬರಿಗೆ ಕನ್ನಡ ಬರುವುದಿಲ್ಲ ಎಂದು ನಮ್ಮ ಪ್ರಿನ್ಸಿ ಹೇಳಿದಾಗ ನಮಗೆಲ್ಲ ಕಸಿವಿಸಿ.. ಅಲ್ಲಿಯ ತನಕ ಇಂಗ್ಲೀಷ್ ಮೆಡಿಯಮ್ ಆದ್ರೂ ಕನ್ನಡದಲ್ಲೇ ಮಾತನಾಡುತಿದ್ದ ನಮಗೆ ಹೇಗಪ್ಪ ಈ ಮೇಡಂ ಜೊತೆ ಹೊಂದಿಕೊಂಡು ಹೂಗುವುದು ಅನ್ನೋ ಭಯ... ಅಂತೂ ಕೊನೇ ಪ್ರಯತ್ನ ಎಂಬಂತೆ, ಆ ಶಿಕ್ಷಕಿ ಇಂಗ್ಲೀಷ್ ನಲ್ಲಿ ಮಾತಾಡಿದಷ್ಟು ನಾವು ಕನ್ನಡದಲ್ಲೇ ಉತ್ತರ ಕೊಡುತಿದ್ದೆವು.. ಕೊನೆಗೆ ಬೇರೆ ದಾರಿ ಕಾಣದೆ ಆ ಮೇಡಂ ಕನ್ನಡ ದಲ್ಲೇ ಮಾತದ ಬೇಕಾಯ್ತು... ನಾವು ಎಷ್ಟೇ ಪ್ರಯತ್ನ ಪಟ್ಟರು ಕನ್ನಡ ಮಾತನಾಡುವುದನ್ನು ಬಿಡದೆ ಇದ್ದಾಗ ಪ್ರಿನ್ಸಿ ಬೇರೆ ದಾರಿ ಕಾಣದೆ ಆ ಮಾಡಂಗೆ ಕನ್ನಡ ಬರುವುದಿಲ್ಲ ಎಂದು ಸುಳ್ಳು ಹೇಳಿದ್ದು ಎಂದು ನಂತರ ನಮಗೆ ಗೊತ್ತಾಯಿತು...

ಈವತ್ತು ಅಷ್ಟೇ ನಾವು ಎಂ.ಎನ್ ಅಲ್ಲಿ ಕೆಲಸ ಮಾಡುತಿದ್ರು ಸಹ ನಮ್ಮ ನಮ್ಮಲ್ಲಿ ಕನ್ನಡ ಮಾತಡುವುದು ಬಿಟ್ಟಿಲ್ಲ.. ಅದೇ ಅಲ್ದೇ ನಮ್ಮ ಗುಂಪಿನಲ್ಲಿ ಇರುವ ಕೆಲವು ಬೇರೆ ಬಾಶೆಯವರಿಗೂ ಸಹ ಕನ್ನಡ ಕಲಿಸುವಲ್ಲಿ ಯಶಸ್ವಿಯಾಗಿದೀವಿ... ಇದು ನಾವು ಕನ್ನಡಕೆ ಸಲ್ಲಿಸುತಿರುವ ಸಣ್ಣ ನಮನ ಅಷ್ಟೇ

ಈ ಸಮಾಜವನ್ನು ಬದಲಿಸುವುದು ಕಷ್ಟ.. ಆದ್ರೆ ನಮಲ್ಲೇ ಬದಲಾವಣೆ ತರುವುದು ಕಷ್ಟದ ಕೆಲ್ಸಾ ಅಲ್ಲಾ... ಮೊದಲು ನಾವು ಬದಲಾಗುವುದು ಮುಖ್ಯ.... ಆಮೇಲೆ ಈ ಸಮಾಜವನ್ನು ಬದಲೈಸುವ ಪ್ರಯತ್ನ ಮಾಡೋಣ...

inthi nimmava,
-Ashu

ಸ್ಯಾಂಡಿ (ಪ್ರಮಾಣಿಸಲ್ಪಟ್ಟಿಲ್ಲ.) ಶುಕ್ರ, 02/23/2007 - 10:24

ನೀವು ಹೇಳಿದ್ದು ನಿಜ ಅಶು...

ಕನ್ನಡಿಗರು ಬದಲಾಗಬೇಕು... ಇಲ್ಲದಿದ್ದಾರೆ, ಕರ್ನಾಟಕಕ್ಕೆ ಉಳಿಗಾಲವಿಲ್ಲ...

Vinayak ಸೋಮ, 02/26/2007 - 14:38

ಮಾನ್ಯ ಅಶೋಕ ಸಾರ್,
ತಮ್ಮ ಪಾದರವಿಂದಕ್ಕೆ ನನ್ನ ಸಾಷ್ಟಾಂಗ ನಮಸ್ಕಾರಗಳು.
ತಮಗೆ ಕನ್ನಡದ ಬಗ್ಗೆ ಇರುವ ಪ್ರೀತಿಯ ಬಗ್ಗೆ ಗೊತ್ತಿತ್ತು,
ಆದರೆ ತಮ್ಮಲ್ಲು ಒಬ್ಬ ಕ್ರಾಂತಿಕಾರಿ ಕವಿ ಇರುವುದು ಈಗಲೇ ಗೊತ್ತಾಗಿದ್ದು.

ರಾಜೇಶ ಹೆಗಡೆ ಶುಕ್ರ, 03/02/2007 - 01:42

ನಾನಂತೂ ಅಶು ಅವರ ಲೇಖನಗಳ ಅಭಿಮಾನಿ ಆಗಿಬಿಟ್ಟಿದ್ದೀನಿ. ಅವರ ಲೇಖನ ಓದಿದರೆ ಎಂಥವನಿಗಾದ್ರೂ ರೋಷ ಉಕ್ಕಿ ಹರಿಯುತ್ತೆ. ಏನಾದ್ರೂ ಮಾಡಲೇ ಬೇಕು ಅಂತಾ ಛಲ ಬರುತ್ತೆ.

ಆ ಕ್ರಾಂತಿಕಾರಿ ನುಡಿಯಲ್ಲೂ ಕಟು ಸತ್ಯಗಳಿವೆ. ಕನ್ನಡಕ್ಕಾಗಿ, ಕನ್ನಡಿಗರಿಗಾಗಿ ತುಡಿಯುವ ಅಶು ಅವರ ಪ್ರಾಮಾಣಿಕವಾದ ಮನಸ್ಸಿದೆ.

--ರಾಜೇಶ ಹೆಗಡೆ

Puttajunjaiah Y K ಮಂಗಳ, 03/20/2007 - 21:34

ನಾನು ಪುಣೆಯಲ್ಲಿ TCS ನಲ್ಲಿ ಕೆಲಸ ಮಾಡುತಿದ್ದೇನೆ. ಒಮ್ಮೆ ನಮ್ಮ team ನಾವರೆಲ್ಲ ಹರಟುತಿದ್ದಾಗ ಒಬ್ಬ ತೆಲುಗಿನವನು ಹೇಳಿದ "In TCS Bangalore, you can rarely find kannadigas. But you can find a lot of Andraites and Tamilians and Northies". ನನಗೆ ಶಾಕ್ ಆಯಿತು. But it was true. I couldn't speak a word over that. I just had to accept it.
But if you analyze the reasons behind, the culprits are again Kannadigas. Do you think kannadigas are under talented?? No .. Not at all. We have the best exemplaries viz Vishweshwaraiah, Narayana Murthy, Nilekani etc
But what makes our count so meagre in the MNCs? The reason is very simple a Kannadiga will not help another Kanndiga find a job. Take my own example, one of my far relative works for TCS since quite some time. When i had approached him for a chance to attend an interview as a fresher in TCS he had denied it. He was in such a position in TCS where in he could have taken me into TCS easily. But he didn't do it. I had to serve in a small firm for 2 years before switcing over to TCS all by myself. Do you think the same had i faced the same situation if i was an Andraite or a Tamilian?

ಮೇಲಧಿಕಾರಿ ಧ, 03/21/2007 - 07:40

ದಯವಿಟ್ಟು ಕನ್ನಡ ಬಳಸಿ. ಕನ್ನಡ ಉಳಿಸಿ.

http://www.quillpad.com/kannada/

http://service.monusoft.com/KannadaTypePad.htm

http://www.iit.edu/~laksvij/language/kannada.html

ಅತಿ ಶೀಘ್ರದಲ್ಲಿ ವಿಸ್ಮಯ ನಗರಿಯಲ್ಲಿ ಇನ್ನಿತರ ಸೌಲಭ್ಯದೊಂದಿಗೆ ಇನ್‌ಬಿಲ್ಟ್ ಕನ್ನಡ ಟೈಪಿಂಗ್ ಸೌಲಭ್ಯ ಸಹ ಸೇರಲಿದೆ. ಅಲ್ಲಿಯವರೆಗೆ ದಯವಿಟ್ಟು ಮೇಲಿನ ಯಾವುದಾದರೂ ಸೌಲಭ್ಯ ಬಳಸಿ. ನಾವು ಬಳಸಿದಷ್ಟು ಕನ್ನಡ ಬೆಳೆಯುತ್ತದೆ.
ವಿಸ್ಮಯ ನಗರಿಯ ಮುಖ್ಯ ಉದ್ದೇಶ ಕನ್ನಡವನ್ನು ಅಂತರ್ಜಾಲದಲ್ಲಿ ಜನಪ್ರಿಯ ಗೊಳಿಸುವದು. ಆದಕ್ಕೆ ಸಹಕರಿಸಿ.

ವಂದನೆಗಳು
--ಮೇಲಧಿಕಾರಿ

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಸೋಮ, 03/16/2009 - 18:24

ದಯವಿಟ್ಟು ಕ್ಷಮಿಸಿ ಇವರೇ(ನಿಮ್ಮ ಹೆಸರು ಏನು ಎನ್ನುವುದೇ ನನಗೇ ಅರ್ಥವಾಗಿಲ್ಲ ಸ್ಪೆಲ್ಲಿಂಗ್ ಮಿಸ್ ಟೆಕ್ ಇರ್ಬೇಕು)
ಇಲ್ಲಿ 'ಟಿ ಸಿ ಎಸ್' ಅಂತ ಇರುವುದರಿಂದ ನಾನು ಉತ್ತರಿಸುತ್ತಿದ್ದೇನೆ(ನೇರವಾಗಿ ನಿಮಗೆ)

ಅದೇ ನೀವು ಹೇಳಿದ ಬೆಂಗಳೊರಿನ ಹಾಗೂ ಇಲೆಕ್ಟ್ರಾನಿಕ್ ಸಿಟಿ ( ಈಗ ಅಮೇರಿಕಾದಲ್ಲೂ ) ಅಲ್ಲಿ ಟಿ ಸಿ ಎಸ್ ನಲ್ಲಿ ನಮ್ಮಣ್ಣ ಕನ್ನಡಿಗ ಕೆಲಸ ಮಾಡಿದ್ದರೆ/ಮಾಡುತ್ತಿದ್ದಾರೆ...

ಇಲ್ಲಿ ಮುಖ್ಯವಾಗಿ ನಾವೆಲ್ಲಾ ಯೋಚಿಸಬೇಕಿರುವುದು, ನಾವೆಲ್ಲಾ ಒಂದೇ, ಭಾರತೀಯರು ಎಂದು, ಆದರೆ ಕೆಲ ಜನ(ಆಂಧ್ರ, ತಮಿಳು, ನಾರ್ತ್) ಕನ್ನಡದ ಬಗ್ಗೆ, ಇಲ್ಲಿನ ಜನರ ಬಗ್ಗೆ ಚಿತ್ರರಂಗ, ಇನ್ನು ಹಲವು ಕೆಟ್ಟದಾಗಿ ಮಾತಾಡುತ(ಇಲ್ಲಿಯದೇ ನೀರು ಕುಡಿದು, ಊಟ ಮಾಡಿ, ಗಾಳಿ ಕುಡಿದು) ನಮ್ಮನ್ನೆಲ್ಲ ಉರಿಸುತ್ತಿದ್ದರೆ, ಅದನ್ನು ನೋಡುತ್ತಾ/ಕೇಳುತ್ತಾ ನಾವು ಸುಮ್ಮನಿರಲು ಸಾಧ್ಯವೇ?
ಇದು ಹೀಗೆ ನಡೆದರೆ ನಮ್ಮದು ಒಳ್ಳೆ ದೇಶವಾಗಲು ಸಾಧ್ಯವೇ?

ಇದು ನಾವೆಲ್ಲಾ ಯೋಚಿಸಬೇಕಾದ ವಿಸ್ಯ..
ಒಟ್ಟಿನಲ್ಲಿ ನೀವು ಹೇಳಿದ ಹಾಗೆ ನಮ್ಮಣ್ಣನೂ ಆ ಕಂಪನಿಯಲ್ಲಿ ಸೇರಲು ಕಸ್ತ ಪಟ್ಟಿದ್ದಾರೆ,(೭ ವರ್ಷ ಅನುಭವ ಇದ್ದರೂ!)
ಈಗ ಒಳ್ಳೆ ಉದ್ಯೋಗದಲ್ಲಿದ್ದಾರೆ...(ಅದೇ ಕಂಪನಿಯಲ್ಲಿ ಈಗ ಅಮೆರಿಕಾಗೆ ಹೋಗುತ್ತಿದ್ದರೆ)

ನಾವು ಕನ್ನಡಿಗರು ಎಚ್ಚೆತ್ತುಕೊಳ್ಳಲು ಇದು ಸಕಾಲ, ಇಲ್ಲದಿದ್ದರೆ, ಕನ್ನಡಿಗರೇ ಇರುವುದಿಲ್ಲ, ಎಲ್ಲರೂ ಪರರ ಅಡಿಯಾಳಾಗಬೇಕಾಗುತ್ತೆ..

ಏಳಿ ಎದ್ದೇಳಿ ಕನ್ನಡ ಬೆಳೆಸಿ, ಬಳಸಿ

prasanna m.s (ಪ್ರಮಾಣಿಸಲ್ಪಟ್ಟಿಲ್ಲ.) ಧ, 05/09/2007 - 13:27

nijaavaglu idhu oppuva maathe...idhe thara prashne nannallu idhe.. aadhare oothara sikkirlilla.. nam kannada baashe oolibekaadre... kannada sangha hechagabeku mathe gattiyaagabeku.. adhakke ella kannadigaru kai jodisabeku..innu mundhe nimma maathugalannu kelidha naanu kannadakkagi enaadru maadalu prayathnisuthene... idhu kanditha..
jai karnataka maathe.

ಹೌಧು ನಿಮ್ಮ ಬ್ಲೋಗ್ ನಲ್ಲಿ ಬಹಳಷ್ಟು ಅರ್ಥವಿದೆ. ನನಗ ತುಂಬಾ ಇಷ್ಟವಾಯಿತು. ಆದರೆ, ನಾವು ಇಡನೆಲ್ಲ ಹರಟೆ ಹೊಡೆಯುವುದರ ಬದಲು, ಏನಾದರೂ ಮಾಡಬೇಕು. ನನಗಂತೂ ಯಾವುದೇ ಉಪಾಯ ಹೊಳೆಯುತ್ತಿಲ್ಲ.

ಹಾಗೆ, ಇನ್ನೊಂದು ವಿಷಯ, ಅಡ್ಮೀನ್ ರವರು ಹೇಳಿದೆ ಸೈಟ್ http://quillpad.in/kannada/ ಬಹಳ ಚಣ್ಣಗಿದೆ. ನಾನು ಆ ಸೈಟ್ ನಿಂದ ಈಗ ಲಕ್ಷಣವಾಗಿ ಕನ್ನಡದಲ್ಲಿ ಬರೆಯಬಹುದು. ಧನ್ಯವಾಧಗಳು.

muttu (ಪ್ರಮಾಣಿಸಲ್ಪಟ್ಟಿಲ್ಲ.) ಗುರು, 07/19/2007 - 12:46

ivatina ee paristhithige naave kaaraNaru annodanna navellaru oopkoteevi antha nanna anisike.
Aadare idakke parihaar koduvastu naanu beLedilla :) kshamisi,

hamsa ಮಂಗಳ, 08/14/2007 - 21:06

ಬೆಳಗಾವಿ ಯಲ್ಲಿ ಮತ್ತೆ ಕನ್ನಡಕ್ಕೆ ಜಯ-
ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂದು ಹೇಳುತ್ತಿರುವ ಎಂ.ಈ. ಸ್. ಗೆ ಏ.ಪಿ.ಎಂ ಸಿ. ಚುನಾವಣೆಯಲ್ಲಿ ಬೆಂಬಲ ನೀಡಿದ್ದ ಬಜಪ ದ ಬೆಳಗಾವಿ ಲೋಕಸಭ ಸದಸ್ಯ ಸುರೇಶ್ ಅಂಗಡಿಯ ವಿರುದ್ದ ಪ್ರತಿಭಟಿಸಿದ್ದ ಕರವೇ ಕಾರ್ಯಕರ್ತರ ಬಿಡುಗಡೆಯಿಂದ ಬೆಳಗಾವಿಯಲ್ಲಿ ಮತ್ತೆ ಕನ್ನಡಕ್ಕೆ ಜಯ ಸಿಕ್ಕಂತಾಗಿದೆ

http://www.karave.blogspot.com/

www.karnatakarakshanavedike.org

ಜೈ ಕರ್ನಾಟಕ

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.