Skip to main content

ಅಂಬಿ ರಾಜೀನಾಮೆ ಕೊಟ್ಟಿದ್ದಾರೆ! ಹೌದು- ಎಲ್ಲರ ಒತ್ತಾಯದ ಮೇರೆಗೆ ರಾಜೀನಾಮೆ ಕೊಟ್ಟಿದ್ದಾರೆ!!!

ಇಂದ ashu
ಬರೆದಿದ್ದುFebruary 16, 2007
6ಅನಿಸಿಕೆಗಳು

ಅಂಬಿ ರಾಜೀನಾಮೆ ಕೊಟ್ಟಿದ್ದಾರೆ! ಹೌದು- ಎಲ್ಲರ ಒತ್ತಾಯದ ಮೇರೆಗೆ ರಾಜೀನಾಮೆ ಕೊಟ್ಟಿದ್ದಾರೆ!!!
ಮೊನ್ನೆ, ಉದಯ ಟಿ.ವಿ ವಾರ್ತೆಗಳಲ್ಲಿ, ಅಂಬಿ ಅವರ ಅಂಕಣ ನೋಡಿದೆ. ಕಾವೇರಿ ಚಳುವಳಿಯಲ್ಲಿ ನೀವು ಭಾಗಿಯಾಗಿ ಅಂತ ಜನಾ ಕೇಳ್ತಾ ಇದ್ರೆ, ದೊಡ್ಡಣ್ಣ, ಮಂಡ್ಯಕ್ಕೆ ನಾನೊಬ್ಬನೇನೇ ಇರೋದು, ಬೇರೆ ಯಾರಾದರೂ ಪ್ರಮುಖ ಪಾತ್ರ ವಹಿಸಿ, ನನ್ನ ಬೆಂಬಲ ಇದ್ದೇ ಇರುತ್ತೆ ಅಂದರು.

ಆವತ್ತೆ ಈ ಅಂಕಣ ಬರೆಯುವ ಎಂದುಕೊಂಡಿದ್ದೆ. ಆದರೆ, ದುಡುಕಿ ಬರೆಯಬಾರದು ಹಾಗೆ ಎಲ್ಲದಕ್ಕೂ ಸಮಯ ಕೂಡಿ ಬರಬೇಕು ನೋಡಿ ಅದಕ್ಕಾಗೇ ಕಾಯ್ತಾ ಇದ್ದೇ.

ನಮ್ಮ ಸೋಲಿಲ್ಲದ ಸರದಾರ, ರೆಬೆಲ್ ಸ್ಟಾರ್, ಕಲಿಯುಗದ ಕರ್ಣ ಅಂಬಿ ಯಾಕೆ ಕಾವೇರಿ ಬಗ್ಗೆ ಆಸಕ್ತಿ ತೋರಿಸುತ್ತಿಲ್ಲ ಅನ್ನೋದು ನನ್ನ ಜೀವ ಹಿಂಡುತ್ತಾ ಇರೋ ಪ್ರಶ್ನೆ..

ಯಾಕೆ, ಕಾವೇರಿ ಅಂಬಿಗೆ ಸಂಭಂದಿಸಿಲ್ಲವೇ? ಇವತ್ತೆ ಪತ್ರಿಕೆಯಲ್ಲಿ ನೋಡಿದೆ, ಖೊಜಾಗಲೂ ಕೂಡ ಕಾವೇರಿಗೋಸ್ಕರ ಮೆರವಣಿಗೆ ಮಾಡ್ತಾ ಇದಾರೆ ಸ್ವಾಮಿ. ಅವರಿಗೂ ತಮ್ಮ ಜವಾಬ್ದಾರಿಯ ಅರಿವು ಇದೆ.

ಆದರೆ ನಮ್ಮ ಅಂಬಿ ಅಣ್ಣ ನಾನೊಬ್ಬನೇನೇ ಇರೋದು ಅಂತ ಕೇಳೋ ಪ್ರಶ್ನೆ ಎಸ್ಟು ಸಮಂಜಸ?
ಮೊನ್ನೆ ರಾಜೀನಾಮೆ ಕೊಟ್ಟಾಗ, ಸಂದರ್ಶನದಲ್ಲಿ ಕೇಳಿದರೆ, "ಎಲ್ಲರ ಒತ್ತಾಯದ ಮೇರೆಗೆ ಕೊಟ್ಟಿದ್ದೇನೆ" ಎಂದರೂ. ರಾಜೀನಾಮೆ ಕೊಟ್ಟದ್ದು ಒಳ್ಳೆಯದೋ ಕೆಟ್ಟದ್ದೋ ಅದು ದೇವರಿಗೆ ಬಿಟ್ಟ ವಿಷಯ...
ಆದರೆ, ನಮ್ಮ ರಾಜಕಾರಣಿಗಳಿಗೆ, ಜನರೇ ಎಲ್ಲವನ್ನು ಹೇಳಿಕೊಡಬೇಕೆ?
ಅವರಿಗೆ, ಸಮಾಜದ ಬಗ್ಗೆ, ಗೌರವ, ಕಾಳಜಿ, ಜವಾಬ್ದಾರಿ ಬರುವುದು ಯಾವಾಗ?

ಯಾಕೆ, ಅಂಬಿ ಸ್ವಯಂ ಪ್ರೇರಣೆಯಿಂದ ತಮ್ಮ ರಾಜೀನಾಮೆ ಕೊಡಲಿಲ್ಲ?
ಯಾಕೆ, ಮೊನ್ನೆ ಎಲ್ಲ ಸಿನೆಮಾ ಸಂಘ ಪ್ರತಿಭಟನೆ ಮಾಡ್ತಾ ಇರಬೇಕಾದರೆ, ಅಂಬಿ ಅಣ್ಣ ಕಾಣೆಯಾಗಿದ್ದರು?

ಹೋಗಲಿ ಅಂಬಿ ಯಾರು, ನಾನು, ನೀವು, ಪತ್ರಿಕೆ, ಇಡೀ ಕರ್ನಾಟಕ ಅವರ ಬಗ್ಗೆ ಮಾತಾಡ್ತಾ ಇದೆ? ಅವರನ್ನೇ ಏಕೆ, ಕಾವೇರಿಗೆ ಮುಂಚೂನೀಯಾಗಿ ಮಾಡ್ತಾ ಇದೆ?

ಮೊದಲೇ ಹೇಳಿದೆನಲ್ಲ, ಅಂಬಿ ಸೋಲಿಲ್ಲದ ಸರದಾರ, ನಾನು ಚಿಕ್ಕಂದಿನಿಂದಲೂ ಕೇಳಿ ಬಂದದ್ದು, ಅವರೊಬ್ಬ ಕಲಿಯುಗದ ಕರ್ಣ ಎಂದು. ವಿಶಾಲ ಹೃದಯ ಇರುವವರು.. ಅಣ್ಣಾವ್ರ ನಂತರ, ಅವರ ಜಾಗವನ್ನು 75% ತುಂಬುವ ಸರಳ ಹೃದಯವಂತರು...

ಚಿತ್ರನಟರಾಗಿದ್ದಾಗಲೇ, ಜನರ ನೋವಿಗೆ ಸ್ಪಂದಿಸಿದವರು!!

ರಾಜಕಾರಣಿ ಆದಮೇಲೆ, ಈ ವರ್ಚಸ್ಸು ಹೆಚ್ಚಾಗಬೇಕಿತ್ತು. ಆದರೆ ಅಂಬಿಯಲ್ಲಿ ಅದು ಕುಂದಿದೆ..
ಇವತ್ತಿಗೂ, ಅಂಬಿಯನ್ಣ ಒಬ್ಬ ಯೋಧ ಎಂದೆ ಪರಿಗಣಿಸ್ತಾ ಇದೀವಿ...

ಅದಕ್ಕೆ ಸ್ವಾಮಿ, ಅಂಬಿಯನ್ನ, ಕಾವೇರಿಯ ಮಗನಾಗಿ ಹೋರಾಡಲು ಬೇಡಿಕೊಳ್ಳುತ್ತಿರುವದು..

ಆಗೋದು ಆಗಿ ಹೋಯಿತು, ಇನ್ನಾದರೂ ಅಂಬಿ (ಸ್ವಯಂ ಪ್ರೇರಣೆಯಿಂದ), ಕಾವೇರಿ ತಾಯಿಯ ಕಸಿದುಕೊಳ್ಳುತ್ತಿರುವ ಕೋಂಗರ ದಬ್ಬಾಲಿಕೆಯನ್ನು ಹಿಮ್ಮೆಟ್ಟಿಸಲಿ ಎಂದು ಆಸಿಸುತ್ತಾ....

-ಅಶು

ಲೇಖಕರು

ashu

ashu

ಸ್ನೇಹಿತರೆಲ್ಲರಿಗೂ ನಮಸ್ಕಾರಗಳು... ನಾನು ವಿಪ್ರೋನಲ್ಲಿ ಕೆಲ್ಸಾ ಮಾಡ್ತಾ ಇದೀನಿ.... ಮರಳಿ ಮಣ್ಣಿಗೆ ಎಂಬಂತೆ, ನಾನು ಮತ್ತೆ ಬೆಂಗಳೂರಿಗೆ ಬರುತ್ತಿದ್ದೇನೆ...
ಮಾರ್ಚ್ ಮೊದಲ ದಿನಗಳಲ್ಲಿ, ಎಲೆಕ್ಟ್ರಾನಿಕ್ ಸಿಟಿಯಲ್ಲಿ ಪ್ರಾಜೆಕ್ಟ್ ಸೇರಲಿದ್ದೇನೆ. ಕೊನೆಗೂ, ವರ್ಗಾವಣೆ ಪಡೆಯಲು ನಾ ಪಟ್ಟ ಕಷ್ಟವನ್ನು ದೇವರು ಕೊನೇಗೋಳಿಸಿದ್ದಾನೆ... ವಿಪ್ರೋನಲ್ಲಿ, ಬೆಂಗಳೂರಿಗೆ ಪ್ಯಾರಾಡೈಸ್ ಎಂದು ಕರೆಯುತ್ತಾರೆ.. ಬೆಂಗಳೂರಿಗೆ ವರ್ಗಾವಣೆ ಸಿಗಲು, ಸೀನಿಯರ್ ಗಳ ಜೊತೆ ಹರಸಾಹಸ ಮಾಡಬೇಕಾಗುತ್ತೆ.. ಎಲ್ಲ ಮೆಟ್ಟಿ ನಿಂತು, ಗೆಲುವಿನೊಂದಿಗೆ....ಬರುತ್ತಿದ್ದೇನೆ..............

ನನ್ನ ಮನಸಲ್ಲಿಗ ಒಂದೇ ಸಾಂಗು..

ಬ್ಯಾಂಗ್ ಬ್ಯಾಂಗ್, ಬೆಂಗಳೂರು ಗೊತ್ತ....
ಬ್ಯಾಂಗ್ ಬ್ಯಾಂಗ್, ಬೆಂಗಳೂರು ಗೊತ್ತ....(ಶಿವಣ್ಣ ನಟಿಸಿದ ಯುವರಾಜ ಚಿತ್ರದ್ದು)

ಅನಿಸಿಕೆಗಳು

navilugari ಶುಕ್ರ, 02/16/2007 - 23:15

ಪ್ರಿಯರೆ...ನಿಮಗೆ ಅಂಬರಿಷ್ ಮೇಲಿರುವಷ್ಟೆ ಅಭಿಮಾನ ನನಗು ಇದೆ...ಅದರಲ್ಲಿ ಅನುಮನ ಪಡುವ ಮಾತೆ ಇಲ್ಲ..

ಕೇವಲ ಕನ್ನಡ ನಡೀನ ಸೇವೆಗಾಗಿ ಅತವ ಕಾವೇರಿಯ ವಿಷಯವಾಗಿ ಅಂಬರಿಷ್ ರಜಿನಮೆ ಕೊಟ್ಟಿದ್ದರೆ ಅವರನ್ನೊಬ್ಬ ನಿಜವಾದ ಜನನಾಯಕ ಅಂತ ಒಪ್ಪಿಕೊಳ್ಳಲು ಯಾವುದೆ ಚಿಂತೆ ಇರಲಿಲ್ಲ..ಆದರೆ ಎವತ್ತಿನ ವಿಜಯ ಕರ್ನಾಟಕ ಪೇಪರ್ ಅನ್ನು ಓದಿದ್ದಿರ?[ದಿನಾಂಕ ೧೬-೦೨-೦೭]

ಅವರು ಸೋನಿಯಾ ಗಾಂದಿಗೆ ಕಳುಹಿಸಿದ ರಾಜಿನಾಮೆ ಪತ್ರದಲ್ಲಿ...ನನ್ನ ರಾಜಿನಾಮೆ ಇಂದ ಕರ್ನಟಕದಲ್ಲಿ ನಮ್ಮ ಕಾಂಗ್ರೆಸ್ ಪಕ್ಷದ ವರ್ಚಸ್ಸು ಮತ್ತೆ ನನ್ನ ಇಮೇಜ್ ವೃದ್ದಿಸುತ್ತದೆ ಅದಕ್ಕಾಗಿ ನನ್ನ ರಾಜಿನಾಮೆಯನ್ನು ತಾವು ಅಂಗೀಕರಿಸಬೇಕೆಂದು ಕೊನೆಯ ಸಾಲಿನಲ್ಲಿ ಬರೆದಿದ್ದಾರೆ...ಇದು ಕಪೋ ಕಲ್ಪಿತ ಸುದ್ದಿಯಲ್ಲ ಸ್ವಾಮಿ ರಾಜಿನಾಮೆ ಪತ್ರದ ಒರ್ಜಿನಲ್ ಕಾಪಿ..ಬೇಕಿದ್ದರೆ ತೆಗೆದು ನೋಡಿ

ರಾಜಕಾರಣಿಗಳು ಗೋಸುಂಬೆ ಮುಕದವರು ಅನ್ನೊದನ್ನ ಅಂಬರಿಷ್ ಕೂಡ ಸಾಬೀತು ಮಾಡಿದ್ದಾರೆ ಬಿಡಿ ಅದರಲ್ಲೇನು ವಿಶೇಷವಿಲ್ಲ..ಇಂತ ಲೆಜ್ಜೆಗೆಟ್ಟ ರಜಕರಣಿಗಳಿಂದ ದೇಶದ ಮತ್ತೆ ರಾಜ್ಯದ ಜನತೆ ಏನನ್ನು ನಿರೀಕ್ಷಿಸಲು ಸಾದ್ಯ?

ಅಲ್ಲವ? ಶೇಮ್ ಶೇಮ್ ಮಿಸ್ಟರ್ ಮಂಡ್ಯದ ಗಂಡು?????????????

ಸಂತೋಷಲಕ್ಷ್ಮಿ ಸೋಮ, 02/19/2007 - 16:50

ನಿಜ,
ಅವರ ರಾಜೀನಾಮೆಯಿಂದ ನಮಗೇನು ಲಾಭ? ನಮ್ಮ ಪರವಾಗಿ ಕೇಂದ್ರಸರಕಾರಕ್ಕೆ ಧ್ವನಿಯಾಗಿ ನಿಲ್ಲಲಿ ಎಂದು ಆಶಿಸಿದ್ದೆವೇ ಹೊರತು, ಮಾತನಾಡುವ ಪರಿಸ್ಥಿತಿ ಬಂದಾಗ ನುಣಿಚಿಕೊಳ್ಳಲಲ್ಲವಲ್ಲ.
ಇವರೆಲ್ಲಾ ಹುದ್ದೆಗಾಗಿ ಹೋರಾಟ ನಡೆಸಿದ್ದಾರೆಯೇ ಹೊರತು ಜನರ ಒಳಿತಿಗಾಗಿ ಅಲ್ಲ ಎನ್ನೋ ಮಾತು ರಾಜೀನಾಮೆ ಹೇಳಿಕೊಡುತ್ತದೆ.

ashu ಮಂಗಳ, 02/20/2007 - 10:47

"I am sure will only enhance the Congress party image and strengthen the base for all of us".............

ಏನಿದು ನಾಚಿಕೆ ಗೆಡುತನ...

ಛೀ, ಅಂಬಿ, ಇದನ್ನು ನಿನ್ನಿಂದ ನಿರೀಕ್ಷಿಸಿರಲಿಲ್ಲ..

ನಿನಗೆ ಧಿಕ್ಕಾರವಿರಲಿ.. ನಾಚಿಕೆ, ಸ್ವಂತಿಕೆ ಇಲ್ಲದ ಬಡ ರಾಜಕಾರಣಿ...

inthi nimmava,
-Ashu

ashu ಮಂಗಳ, 02/20/2007 - 10:47

ಅಂಬಿ ಅನ್ನೋ ಕಾಂಗ್ರೆಸ್ಸ ಬಾಲ, ಸೋನಿಯಾ ಗೆ ಬರೆದ ಚಿತ್ರ ನನ್ನ ಬಳಿ ಇದೆ.... ಸಧ್ಯದಲ್ಲೇ ಅದನ್ನ, ವಿಸ್ಮಯದಲ್ಲಿ ಹಾಕಲಿದ್ದೇನೆ...

inthi nimmava,
-Ashu

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಸೋಮ, 03/16/2009 - 18:08

ಕಲಿಯುಗದ ಕರ್ಣ( ಹಿಂದಿನ ಕರ್ಣ/ಮೂಲ ಕರ್ಣ ತಾಯಿಯ ಮಾತು ಕೇಳಿ ಸಹೋದರಿಗಾಗಿ ತನ್ನ ಪ್ರಾಣವನ್ನೇ ಕೊಟ್ಟೆ ) ನಮ್ಮ ಪ್ರೀತಿಯ ಅಂಬಿ ಅಣ್ಣ ಹೀಗ ನೀ ಮಾಡೋದು?.
ಅದ್ರ ಪ್ರತಿಫಲವನ್ನ ನೀನು ಹೋದ ಸಲದ ಎಲೆಕ್ಷನ್ ನಲ್ಲಿ ಉಂಡೆಯಲ್ಲ....
ರಾಜೀನಾಮೆ ಕೊಟ್ಟಿದ್ದೇನೆ ಎನ್ನುತ್ತಾ ಗೂಟದ ಕಾರನ್ನು ಉಪಯೋಗಿಸಿಕೊಂಡು(ಈಗ ನೀತಿ ಸಂಹಿತ್ ಸೋ ಇದು ಬಂದ್) ಏನೋ ದೊಡ್ಡದನ್ನು ಸಾದಿಸಿದಂತೆ ಪೋಸ್ ಕೊಟ್ಟ ನಿಮ್ಮನ್ನು(ನಿನ್ನನ್ನು) ನಾವು ಇನ್ನೋಒ ಆರಿಸಿ ಕಳಿಸಿ(ನೀನು ಅಲ್ಲಿ ಸಂಸತ್ತಿಗೆ ಹೋಗದೆ, ಹ್ಹೊದರೂ ಪ್ರಶ್ನೆ ಕೇಳದೆ) ನಮ್ಮನ್ನು ಇನೂ ಮೂರ್ಖರನ್ನಾಗಿಸಲು ನಿನ್ನಿಂದ ಸಾಧ್ಯವಿಲ್ಲ...

ಸಿನೆಮಾದಲ್ಲಿ ಮಾತ್ರ ಏನೇನೋ ಭಾಷಣ ಬಿಗಿದರೆ ಸಾಲದು, ಅದನ್ನು ಕಾರ್ಯರೂಪದಲೂ ತೋರಿಸಬೇಕಪ್ಪ,

ಇನ್ನು ಎಲ್ಲರೂ ಒಂದಾಗಿ 'ಹೊಗೆನಕಲ್' ಗಾಗಿ ಹೋರಾಡುತ್ತಿದ್ದರೆ ನೀನು ಮಾತ್ರ ನಿನ್ನ 'ಆಪ್ತ ಮಿತ್ರ' ನೊಂದಿದೆ ಸತಿಯರೋದಗೂಡಿ ಮಡಿಕೇರಿಯಲ್ಲಿ ಲಾಲಿ ಹಾಡುತ್ತಿದ್ದೆ..

ಇಸ್ಟೆಲ್ಲಾ ಆದರೂ ಈಗಲೂ ನಿಮ್ಮಲ್ಲಿ ಇನ್ನು ಪವರ್ ಇದೆ ಅಂತ ವ್ಯರ್ಥ ಪ್ರಯತ ಮಾಡುತ್ತಾ ಬಿ ಜೆ ಪಿ ಗೋ ಜೆ ಡಿ ಎಸ್ ಗೋ ಹಾರಲು ಸಿದ್ಧವಾಗಿದೀರ. ಈಗಲೂ ನಿಮ್ಮನ್ನು ನಾವು ಮತ್ತೆ ಆರಿಸಿಕಲಿಸುತ್ತೇವೆ ಅಂದುಕೊಂಡಿರಾ?

ಮಣ್ಣು ಮುಕ್ಕಾಲು ಎರಡನೇ ಬಾರಿಗೆ ರೆಡಿ ಆಗಿ..

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.