Skip to main content

ಪ್ರೀತಿ ಅಂದ್ರೆ ಇದೇನಾ?

ಇಂದ ashu
ಬರೆದಿದ್ದುFebruary 14, 2007
25ಅನಿಸಿಕೆಗಳು

ಪ್ರೀತಿ ಅಂದ್ರೆ ಇದೇನಾ?

ಯಾವ ಹುಡುಗಿನಾ ನೋಡಿದ್ರೂ ನೀನೆ ಅನ್ನಿಸೋ ಭಾವನೆ,
ಎದುರಿಗೆ ಬಂದರೆ, ಎದೆ ಝಲ್ ಅನ್ನೋ ಕಸಿವಿಸಿ..
ಹೇಳಲೋ ಬೇಡವೋ ಅನ್ನೋ ಆತುರದಲ್ಲಿದ್ದಾಗ, ಆ ನಿನ್ನ ಮುಗುಳ್ನಗೆ,
ಅಯ್ಯೋ ಹಸಿರು ನಿಷಾನೆ ಸಿಕ್ತು ಅನ್ನೋವಷ್ಟರಲ್ಲಿ, ನಿಂಗಲ್ಲ ಅದು ಗೆಳತಿಗೆ ಅನ್ನೋ ಕಣ್ನ್ ಸನ್ನೆ...

ನಿನ್ನ ಆ ಕದ್ದು ನೋಡುವ ಆಟ, ಗೆಳತಿಯ ಜೊತೆ ಮಾತಾಡ್ತಾ ನನ್ನ ನೋಡುವ ಕ್ಷಣಗಳು,
ಕ್ಯಾಂಟೀನ್‌ನಲ್ಲಿ ನೀ ಕಾಣದೆ ಹೋದಾಗಿನಾ ದುಗುಡ, ಲೈಬ್ರರಿಯಲ್ಲಿ ನೀ ಬರದೇ ಇರುವಾಗಿನ ಕ್ಷಣ,
ನಾ ನಿನ್ನ ನೋಡ್ತಾ ಇದ್ದರೆ, ನಿನ್ನ ಗೆಳತಿ ನನ್ನೇ ದುರುಗುಟ್ಟಿ ನೋಡುವ ಸಂಭ್ರಮ...

ವಿಪ್ರೊನಲ್ಲಿ, ನಮಗಾಗೆ ಅನ್ನೋ ತರ ಮಾಡಿರೋ ಹೊಸ ಬೃಂದಾವನ,
ಆ ಹುಲ್ಲು ಹಾಸಿನ ಮೇಲೆ ನೀ ಕುಳಿತು ಚಹಾ ಕುಡಿಯುವ ಹೊಸತನ,
ನಾನು ಓದುವ ನೆಪದಲಿ ಬಂದು, ಒಂದಲ್ಲ ಎರಡಲ್ಲ, ಲೆಕ್ಕವೆ ಇಲ್ಲದಷ್ಟು ಚಹಾ ಕುಡಿದು,
ಕಾಯುತಿರುವೆ ನಿನ್ನ ಕ್ಯಾಂಟೀನಿನಲ್ಲಿ, ಲೈಬ್ರರಿಯಲ್ಲಿ, ನಮ್ಮ ಹೊಸ ಬೃಂದಾವನದಲ್ಲಿ...

ನಂಗೆ ಗೊತ್ತು ನಿಂಗೆ ಕನ್ನಡ ಬರುವುದಿಲ್ಲವೆಂದು,
ಆದರೆ ನನ್ನಲ್ಲಿ ಆತ್ಮವಿಶ್ವಾಸ, ನಿನಗೆ ಕನ್ನಡ ಕಲಿಸಿ ಬಿಡುವೆನೆಂದು,
ಕಾಯುತಿರುವೆನು ನೀನಾಗೇ ಬಂದು ಪ್ರೀತಿಯ ತೋಡಿಕೊಳ್ಳುವೆ ಎಂದು,
ಕೊನೇಪಕ್ಷ ಈ ದಿನವಾದರೂ ಹೇಳಿಬೀಡು ನೀನು ನನ್ನವಳೇ ಎಂದು...

ಸಾಕಿನ್ನು ಈ ನಾಡಿನ ಸಹವಾಸ, ಹೋಗಲಿರುವೆನು ಮರಳಿ ನಮ್ಮೂರಿಗೆ ನಾನು,
ಇವತ್ತೋ ನಾಳೆ, ಅನ್ನೋ ಕ್ಷಣಗಣನೆಯಲ್ಲಿ ಇರುವೆನು,
ಬಾ ಗೆಳತಿ ಹೇಳಿಬೀಡು ನಿನ್ನ ಮನಸಿನ ಭಾವನೆಯನ್ನು,
ನಮಗಾಗೆ ಅಲ್ಲವೇ ವ್ಯಾಲಂಟೈನ್ ಕೊಟ್ಟಿರುವದು ಈ ಪ್ರೇಮಿಗಳ ದಿನವನ್ನು,
ನಾನಾಗೇ ಪ್ರೀತಿಯ ನಿನಗೆ ತಿಳಿಸೆನು,
ನಿನಗಾಗೆ ನಾನು ಕಾಯುವೆನು,
ನಿನಗಾಗೆ ಹಾಕಿರುವೆ ಇವತ್ತು ಗುಲಾಬಿ ಬಣ್ಣದ ಅಂಗಿಯನ್ನು,
ತಿಳಿಸಿಬಿಡು ನಿನ್ನ ಪ್ರೀತಿಯ ಸಂದೇಶವನ್ನು .......

ಉತ್ತರ ಭಾರತದ ಹುಡುಗಿಯ ಪ್ರೀತಿಯ ಬಲೆಯಲ್ಲಿ,

- ಅಶು

ಇದು ಎರಡನೆ ಅಂಕಣ:

ಅದೇನೋ ಗೊತ್ತಿಲ್ಲ, ಯಾಕೋ ಒಂಥರಾ ಹೆದರಿಕೆ ಆಗ್ತಾ ಇದೆ,
ಅವಳು ಇಲ್ಲೊ ಎಲ್ಲೋ ಇದ್ದಾಳೆ ಅನ್ನಿಸ್ತಾ ಇರೋದು ನಿಜವಾಗಿದೆ,
ಎದ್ದು ಸುತ್ತಲೂ ನೋಡಿದರೆ, ಎಮ್ಮ ನನ್ನ ಎದುರಿನ ಸಿಸ್ಟಮ್ ನಲ್ಲೇ ಕೂತಿದಾಳೆ,
ಒರೆಗನ್ನಿನಿಂದ, ಮತ್ತೆ ನನ್ನ ಕೊಲ್ಲುತ್ತಿದ್ದಾಳೆ,
ಇದು ಮೂರನೇ ಬಾರಿ, ನನ್ನ ಸುತ್ತಮುತ್ತಾ ಅಡ್ದಾಡುತ್ತಿದ್ದಾಳೆ,

ಈ ಕಂಪನಿಯಲ್ಲಿ, ನನ್ನಂಥ ಫ್ರೀ ಪೂಲ್ ಜನರೇ ಜಾಸ್ತಿ ಇರುವಾಗ,
ಲೈಬ್ರರಿಯಲ್ಲಿ ಸಿಸ್ಟಮ್ ದಕ್ಕಿಸಿಕೊಳ್ಳಲು ಎಲ್ಲಿಲ್ಲದ ಸ್ಪರ್ಧೆ ಇರುವಾಗ,
ಅಲ್ಲಿಂದ ಇಲ್ಲಿ, ಇಲ್ಲಿಂದ ಅಲ್ಲಿ ಓಡಾಡುತ್ತಿರುವ ಈ ಚೆಲುವೆಗೆ,
ತಾಯಿ ಭುವನೇಶ್ವರಿ ಪ್ರೀತಿ ಸಂದೇಶ ತಿಳಿಸಿದಳು ಎಂದುಕೊಳ್ಳಲೇ?
ಅಥವಾ, ಕನ್ನಡವೆಂದರೇನೇ ಪ್ರೀತಿ, ಕನ್ನಡದಲ್ಲಿ ಬರೆದುದದರ ಮಹಿಮೆ ಎಂದುಕೊಳ್ಳಲೇ?

ಏನೇ ಆಗಲಿ, ಅವಳಾಗೇ ಪ್ರೀತಿಯ ತೋಡಿಕೊಂಡರೆ, ನನಗೆ ಸ್ವರ್ಗ ಮೂರೇ ಗೇಣು,
ಬಹುಶಃ, ಕಾಯ್ದು ಬರುವಳೆ, ಇಲ್ಲ ಕಾಯಿಸಿ ಬರುವಳೆ ನಾ ತಿಳಿಯೆನು,
ಅವಳು ಓ.ಕೆ ಅಂದರೆ ವಿಸ್ಮಯದಲ್ಲಿ ಮೂರನೇ ಅಂಕಣ ಬರೆಯುವೆನು,
ಇಲ್ಲ ಎಂದರೆ, ಅದೇ ಅಂಕಣ ಓದುಗರ ಮನಸಿನಲ್ಲೇ ಮುಚ್ಚಿಡುವೆನು.....

-ಅಶು

ಲೇಖಕರು

ashu

ashu

ಸ್ನೇಹಿತರೆಲ್ಲರಿಗೂ ನಮಸ್ಕಾರಗಳು... ನಾನು ವಿಪ್ರೋನಲ್ಲಿ ಕೆಲ್ಸಾ ಮಾಡ್ತಾ ಇದೀನಿ.... ಮರಳಿ ಮಣ್ಣಿಗೆ ಎಂಬಂತೆ, ನಾನು ಮತ್ತೆ ಬೆಂಗಳೂರಿಗೆ ಬರುತ್ತಿದ್ದೇನೆ...
ಮಾರ್ಚ್ ಮೊದಲ ದಿನಗಳಲ್ಲಿ, ಎಲೆಕ್ಟ್ರಾನಿಕ್ ಸಿಟಿಯಲ್ಲಿ ಪ್ರಾಜೆಕ್ಟ್ ಸೇರಲಿದ್ದೇನೆ. ಕೊನೆಗೂ, ವರ್ಗಾವಣೆ ಪಡೆಯಲು ನಾ ಪಟ್ಟ ಕಷ್ಟವನ್ನು ದೇವರು ಕೊನೇಗೋಳಿಸಿದ್ದಾನೆ... ವಿಪ್ರೋನಲ್ಲಿ, ಬೆಂಗಳೂರಿಗೆ ಪ್ಯಾರಾಡೈಸ್ ಎಂದು ಕರೆಯುತ್ತಾರೆ.. ಬೆಂಗಳೂರಿಗೆ ವರ್ಗಾವಣೆ ಸಿಗಲು, ಸೀನಿಯರ್ ಗಳ ಜೊತೆ ಹರಸಾಹಸ ಮಾಡಬೇಕಾಗುತ್ತೆ.. ಎಲ್ಲ ಮೆಟ್ಟಿ ನಿಂತು, ಗೆಲುವಿನೊಂದಿಗೆ....ಬರುತ್ತಿದ್ದೇನೆ..............

ನನ್ನ ಮನಸಲ್ಲಿಗ ಒಂದೇ ಸಾಂಗು..

ಬ್ಯಾಂಗ್ ಬ್ಯಾಂಗ್, ಬೆಂಗಳೂರು ಗೊತ್ತ....
ಬ್ಯಾಂಗ್ ಬ್ಯಾಂಗ್, ಬೆಂಗಳೂರು ಗೊತ್ತ....(ಶಿವಣ್ಣ ನಟಿಸಿದ ಯುವರಾಜ ಚಿತ್ರದ್ದು)

ಅನಿಸಿಕೆಗಳು

ಅನಾಮಿಕ (ಪ್ರಮಾಣಿಸಲ್ಪಟ್ಟಿಲ್ಲ.) ಧ, 02/14/2007 - 11:32
mallu.benahal ಧ, 08/12/2009 - 09:38

ho god still u r there love is sweetwst hony in the word with out love no bady can feel like this.

veeresh ಧ, 02/14/2007 - 11:56

ಹೌದು ಏನ್ರಿ ಪ್ರೀತಿ ಅಂದರೆ... ತಿಳಿತಾನೇ ಇಲ್ಲ.... ಯಾರಿಗಾದರು ಗೊತ್ತಿದ್ರೆ ಹೇಳಿ... ತಿಳಿಸುಕೊಳ್ಳೊಣ....

Ganeshkalal ಭಾನು, 12/23/2007 - 19:24

ಪ್ರೀತಿ ಎಂಬುದು ಸಾಗರದ ಅಲೆಗಳಂತಿರಬೇಕು, ಅವರಿಗೆ ಬೇಕು-ಬೇಡ ಎಂದು ಊಹಿಸದೆ, ಪ್ರೀತಿಯನ್ನು ಕೊಡುತ್ತಿರಬೇಕು.

ಗಣೇಶ ಚೊಳಪ್ಪಕಲಾಲ್
ದಾವಣಗೆರೆ

rakesh.k (ಪ್ರಮಾಣಿಸಲ್ಪಟ್ಟಿಲ್ಲ.) ಶುಕ್ರ, 01/07/2011 - 19:31

preethi andare,Ondu hudugiyannu nodidaga or maathadidaga avala yavudo ondu mathinalli or saundaryadalli namage thumba istavagi biduthade. kramena avalannu nodabeku, mathadabeku anisuthade. Aga avalu sikidare namage mathadalu dhairyave baruvudilla yeno Nachike, bhaya manasinalliruthade hageye sigadiddare manasalli yeno novu, besara suruvaguthade, hoota beda, yaroo beda avalu mathra beku anisuthade. Avalu namma preethiyannu oppikondare nammastu adrustavantha yaroo illa yendu anisuthade.  ade preethi sigade, avalu innobbanannu preethisuthiddare badukuvude beda anisuthade.ide nijavada preethi

rakesh.k (ಪ್ರಮಾಣಿಸಲ್ಪಟ್ಟಿಲ್ಲ.) ಶುಕ್ರ, 01/07/2011 - 19:33

preethi andare,Ondu hudugiyannu nodidaga or maathadidaga avala yavudo ondu mathinalli or saundaryadalli namage thumba istavagi biduthade. kramena avalannu nodabeku, mathadabeku anisuthade. Aga avalu sikkidare namage mathadalu dhairyave baruvudilla yeno Nachike, bhaya manasinalliruthade hageye sigadiddare manasalli yeno novu, besara suruvaguthade, hoota beda, yaroo beda avalu mathra beku anisuthade. Avalu namma preethiyannu oppikondare nammastu adrustavantha yaroo illa yendu anisuthade.  ade preethi sigade, avalu innobbanannu preethisuthiddare badukuvude beda anisuthade.ide nijavada preethi

jagadeesha (ಪ್ರಮಾಣಿಸಲ್ಪಟ್ಟಿಲ್ಲ.) ಶುಕ್ರ, 08/26/2011 - 23:22

preethi anodu ondu sumadura bavanegala kota eda age.....adu yalarigu sigala.............kelvarige sikidru avaru aduna beda anta tiras karstare.. preethi  badikis bahodu ela sayisa bahodu...yavadaku preethiso muna yochane madi... 

ಅನಾಮಿಕ (ಪ್ರಮಾಣಿಸಲ್ಪಟ್ಟಿಲ್ಲ.) ಧ, 02/14/2007 - 15:18

ಇದು ಎರಡನೆ ಅಂಕಣ:

ಅದೇನೋ ಗೊತ್ತಿಲ್ಲ, ಯಾಕೋ ಒಂಥರಾ ಹೆದರಿಕೆ ಆಗ್ತಾ ಇದೆ,
ಅವಳು ಇಲ್ಲೊ ಎಲ್ಲೋ ಇದ್ದಾಳೆ ಅನ್ನಿಸ್ತಾ ಇರೋದು ನಿಜವಾಗಿದೆ,
ಎದ್ದು ಸುತ್ತಲೂ ನೋಡಿದರೆ, ಎಮ್ಮ ನನ್ನ ಎದುರಿನ ಸಿಸ್ಟಮ್ ನಲ್ಲೇ ಕೂತಿದಾಳೆ,
ಒರೆಗನ್ನಿನಿಂದ, ಮತ್ತೆ ನನ್ನ ಕೊಲ್ಲುತ್ತಿದ್ದಾಳೆ,
ಇದು ಮೂರನೇ ಬಾರಿ, ನನ್ನ ಸುತ್ತಮುತ್ತಾ ಅಡ್ದಾಡುತ್ತಿದ್ದಾಳೆ,

ಈ ಕಂಪನಿಯಲ್ಲಿ, ನನ್ನಂಥ ಫ್ರೀ ಪೂಲ್ ಜನರೇ ಜಾಸ್ತಿ ಇರುವಾಗ,
ಲೈಬ್ರರಿಯಲ್ಲಿ ಸಿಸ್ಟಮ್ ದಕ್ಕಿಸಿಕೊಳ್ಳಲು ಎಲ್ಲಿಲ್ಲದ ಸ್ಪರ್ಧೆ ಇರುವಾಗ,
ಅಲ್ಲಿಂದ ಇಲ್ಲಿ, ಇಲ್ಲಿಂದ ಅಲ್ಲಿ ಓಡಾಡುತ್ತಿರುವ ಈ ಚೆಲುವೆಗೆ,
ತಾಯಿ ಭುವನೇಶ್ವರಿ ಪ್ರೀತಿ ಸಂದೇಶ ತಿಳಿಸಿದಳು ಎಂದುಕೊಳ್ಳಲೇ?
ಅಥವಾ, ಕನ್ನಡವೆಂದರೇನೇ ಪ್ರೀತಿ, ಕನ್ನಡದಲ್ಲಿ ಬರೆದುದದರ ಮಹಿಮೆ ಎಂದುಕೊಳ್ಳಲೇ?

ಏನೇ ಆಗಲಿ, ಅವಳಾಗೇ ಪ್ರೀತಿಯ ತೋಡಿಕೊಂಡರೆ, ನನಗೆ ಸ್ವರ್ಗ ಮೂರೇ ಗೇಣು,
ಬಹುಶಃ, ಕಾಯ್ದು ಬರುವಳೆ, ಇಲ್ಲ ಕಾಯಿಸಿ ಬರುವಳೆ ನಾ ತಿಳಿಯೆನು,
ಅವಳು ಓ.ಕೆ ಅಂದರೆ ವಿಸ್ಮಯದಲ್ಲಿ ಮೂರನೇ ಅಂಕಣ ಬರೆಯುವೆನು,
ಇಲ್ಲ ಎಂದರೆ, ಅದೇ ಅಂಕಣ ಓದುಗರ ಮನಸಿನಲ್ಲೇ ಮುಚ್ಚಿಡುವೆನು.....

-ಅಶು

ರಾಜೇಶ ಹೆಗಡೆ ಗುರು, 02/15/2007 - 07:45

ನಿಜವಾಗ್ಯೂ ಉತ್ತರ ಭಾರತದ ಹುಡುಗಿಯ ಮೇಲೆ ಪ್ರೀತಿ ಇರೋರು ಬರೆದ ಹಾಗಿದೆ.ಚೆನ್ನಾಗಿದೆ.

ಅವಳಾಗೇ ಹೇಳೋ ತನಕ ವೇಟ್ ಮಾಡ್ಬೇಡಿ. ಧೈರ್ಯ ಮಾಡಿ ಪ್ರೈವೇಟ್ ಆಗಿ ಕರೆದು ಒಂದ್ಸಲ ಹೇಳ್ಬಿಡಿ.
ಒಪ್ಪಿಗೆ ಇಲ್ಲ ಅಂದರೆ ಏನು ಜಾಸ್ತಿ ಅಂದರೆ ಒಂದು ಏಟು ಹಾಕ್ತಾಳೆ, ನಾಲ್ಕು ಹಿಂದಿಯಲ್ಲಿ ಬಯ್ತಾಳೆ ಅಷ್ಟೇ ತಾನೆ. ಸಹಿಸಿ ಕೊಳ್ಳಿ. ;-)

ವಿಸ್ಮಯದಲ್ಲಿ ಮೂರನೇ ಅಂಕಣ ಓದೋ ಭಾಗ್ಯ ನಮ್ಮದಾಗಲಿ. ;-)

ಸಂತೋಷಲಕ್ಷ್ಮಿ ಮಂಗಳ, 02/20/2007 - 15:41

ರೀ ಪ್ರೀತಿ ಮಾಡ್ತಾ ಇದೀರ, ತಪ್ಪೇನು ಮಾಡ್ತಾ ಇಲ್ವಲ್ಲಾ. ನೀವು ಮಾಡಿದ ಕೆಲಸ ನೀವೇ ಹೇಳ್ಬೇಕಪ. ತಿಳಿಸೋ ನಾಜೂಕಿನಲ್ಲಿ ತಿಳಿಸಿ, ನಿಮ್ಮದು ಪ್ರೀತಿ ನಿಷ್ಕಪಟವಾದ್ರೆ ಖಂಡಿತ ಜಯ ನಿಮ್ಮದೆ. ನಮ್ಮೆಲ್ಲರ Wishes ನಿಮ್ಮೊಂದಿಗಿರುತ್ತೆ ನೀವೇ ತಿಳಿಸಿ. All The Best.
ಮೂರನೇ ಅಂಕಣ ಓದೋ ಆಸೆಯಂದ................

ಸಂತು

madhukeshwart ಧ, 02/21/2007 - 21:56

ಭಯಪಡುವುದಿದ್ದರೆ ಪ್ರೀತಿ ಮಾಡಬಾರದು. ಪ್ರೀತಿ ಮಾಡಿದ್ರೆ ಭಯಪಡಬಾರದು ....ಯಾವುದೇ ಪರಿಣಾಮಕ್ಕೆ ಸಿದ್ದವಾಗಿರು ಅಷ್ಟೇ ....

ಶುಭಾಶಯಾಗಳೊಂದಿಗೆ..

Madhukeshwar.T .
Sr.Design Engineer(product development/CAE )
Hoyt Engineering solutions pvt ltd( http://hoytindia.com/)
Active Parteners of "Autocluster Development &Research Institute Ltd (http://autoclusterpune.org/contact.html)
Mobile: +91-934193

khushi (ಪ್ರಮಾಣಿಸಲ್ಪಟ್ಟಿಲ್ಲ.) ಗುರು, 04/26/2007 - 13:40

ಹಲೋ,
ನಾನು ಇತ್ತೀಚೆಗೆ ಈ vebsite ನೋಡಿದ್ದು, ನಿಮ್ಮ ಪ್ರೀತಿ ಒಂಥರಾ ಕಾವ್ಯನೋ ಅಥವಾ ಮಾನಸಿನ ಬಾವನೇನೋ ಗೋತಾಗಲಿಲ್ಲ, ಆದ್ರೆ ಅದು ನಿಮ್ಮ ನಿಜ್ವದ ಪ್ರೀತಿ ಆಗಿದ್ರೆ ನಿಮ್ಮ ಕನಸಿನ ಕನ್ಯೆ ಅಲ್ಲಲ್ಲ ಎದುರುಗಿರೋ ಕನ್ಯೆ ನಿಮಗೆ ಸಿಗ್ಲಿ ಅಂತ ಹಾರೈಸುತ್ತೇನೆ. ಏನ್ರೀ " ಅನಿಸುತಿದೆ ಯಾಕೋ ಇಂದು ನೀನೇನೆ ನನ್ನವಳಂದೂ " ಹೌದಾ. ನಿಮ್ಮ ಮೂರನೇ ಅಂಕಣಕ್ಕೆ ಕಾಯುವ ..................... ಖುಷಿ.

srinivas ಮಂಗಳ, 06/12/2007 - 14:36

Sir nangu gothilla nanu adakgi hudukadathaiddini.. dayavittu preethi yallide antha nangu swlpa heli... nanu ade Dhoniyalli nintidinni ..
ondu sala Edhu preethina odidad mele nange heli

Snehajeevi ಗುರು, 08/28/2008 - 22:29

Ayyo swami!..
Nimagenaadru yenoo antha gotthagiddre dayavittu nanangoo swalpa heli kodthira? crsangamesh@gmail.com

honey (ಪ್ರಮಾಣಿಸಲ್ಪಟ್ಟಿಲ್ಲ.) ಧ, 05/06/2009 - 17:43

Thumba chennagide nimma love story nimma kathe keli naanu nanage propose madida huduganna preethi madbeku annisthide but ella hudugara manasallu nimmathara preethi nijavaglu irutta ade nanage doubt

ಸುಜಿ (ಪ್ರಮಾಣಿಸಲ್ಪಟ್ಟಿಲ್ಲ.) ಧ, 03/10/2010 - 14:27

ನೀವು ಎಲ್ಲರೂ ಅನ್ನೊಂಡ ಹಾಗೆ ಇಲ್ಲ ಈ ಪ್ರೀತಿ ಒಂದು ಸಲ ನಗುತ್ತೆ ಮತ್ತೊಂದು ಸಲ ಜೋರಾಗಿ ಅಳಿಸುತ್ತೆ ಯಾಕೆ ಅಂತ ಗೊತ್ತಾ ನಿಜವಾದ ಪ್ರೀತಿನೇ ಹೀಗೆ ಅನ್ನಿಸುತ್ತೆ ನಾವು ಬೇಕು ಅಂದಾಗ ದಕ್ಕೊಲ್ಲ ಬೇಡ ಅಂದಾಗ ದೂರಾಗಲ್ಲ.... ನಾನು ಸಹ ಒಂದು ಹುಡುಗನ್ನ ಮನಸ್ಸಾರೆ ಪ್ರೀತಿಸ್ತಾ ಇದ್ದೀನಿ ಆದರೆ ನಮಗೆ ವಿಲ್ಲನ್ನ್ ಅಂದ್ರೆ ನಾವು ನಂಬಿರೋ ಈ ಪ್ರೀತಿನೇ ಅನ್ನಿಸುತ್ತೆ ಯಾಕೆ ಅಂದರೆ ಒಬ್ಬರನ್ನೊಬ್ಬರು ಅಷ್ಟೊಂದು ಪ್ರೀತಿಸಿತ್ತಿವಿ ಆದರೆ ನಮಗೆ ಗೊತ್ತಿಲ್ಲದ ರೀತಿಯಲ್ಲಿ ಏನೂ ಒಂದು ಚಿಕ್ಕ ಚಿಕ್ಕ ವಿಷಯಕ್ಕೂ ಜಗಳವಾಡುತ್ತೀವಿ ಆದರೆ ಈ ಬಿಟ್ಟುಕೊಟ್ಟು ಹೋಗೋ ಮಾತಿದೆಯಲ್ಲ ಅದು ನಮ್ಮಲ್ಲಿ ಒಂದಾಗಿದೆ ಆದ್ದರಿಂದಲೇ ಇನ್ನು ನಾವು ಒಂದು ದಿನಾನು ಒಂದು ಗಂಟೆನೂ ದೂರಾಗಿಲ್ಲ ಕಾರಣ ನಾವಿಬ್ಬರು ಅಷ್ಟೋಂದು ಪ್ರೀತಿಸ್ತಾ ಇದ್ದೇವೆ. ಅವನನ್ನ ನಾನು ನೋಡಿದ ದಿನದಿಂದ ನನಗೆ ಅವನೇ ಪ್ರಪಂಚ ಅವನೊಬ್ಬನಿದ್ದರೆ ಯಾರೂ ಬೇಡ ಅನ್ನಿಸುತ್ತೆ ಆದರೆ ಯಾಕೂ ಗೊತ್ತಿಲ್ಲ ಒಂದೊಂದು ಸಲ ನನ್ನ ತಿರಸ್ಕಾರ ಮಾಡತ್ತಾನೇನೂ ಅನ್ನಿಸುತ್ತೆ ಎಲ್ಲಾ ರೀತಿಯಲ್ಲೂ ನಾನು ಅವನಿಗೆ ಒಪ್ಪಿಗೇನೆ ಆದರೆ ಹಿರಿಯರ ಮಾತು ಅಂದರೆ ಅವನಿಗೆ ವೇಧವಾಕ್ಯ ಅದು ತಪ್ಪು ಅಂತ ಹೇಳ್ತಾ ಇಲ್ಲ. ಅವರೇನಾದರೂ ಬೇಡ ಅಂತ ಹೇಳಿ ಅವನು ನನ್ನ ಬಿಟ್ರೆ ನನಗೆ ಅಂತ ಯಾರೂ ಇಲ್ಲ ನಾನು ಏನು ಮಾಡ್ಲಿ ಮನೆಯವರಿಗೆ ನಾನು ಒಬ್ಳು ದುಡಿದಾಕೋ ಯಂತ್ರ ನಾನು ಅಂದ್ರೆ ಅಷ್ಟಕ್ಕೆ ಅಷ್ಟೇ ಇವನು ನನ್ನ ಮದುವೆ ಆಗುತ್ತಾನಾ ನಾವಿಬ್ಬರೂ ಈ ಪ್ರಪಂಚದಲ್ಲಿ ಬದುಕುತ್ತೇವ ಇಲ್ಲ ಅಂದ್ರೆ ನನ್ನನ್ನ ನನ್ನ ಮನೆಯಲ್ಲಿ ಸಾಯಿಸಬಿಡ್ತಾರ ಗೊತ್ತಿಲ್ಲ ಯಾಕಂದರೆ ನಮ್ಮ ಮನೆಯಲ್ಲಿ ಪ್ರೀತಿಗೆ ಯಾವುದೇ ರೀತಿ ಬೆಲೆ ಕೊಡಲ್ಲ. ನನ್ನನ್ನ ಸಾಯಿಸೋದಕ್ಕೂ ಹಿಂಜರಿಯೊಲ್ಲ ಬೇರೆಯವರ ಜೊತೆ ಮದುವೆ ಅನ್ನೊಂದನ್ನ ನೆನಸ್ಕೋಂಡ್ರೆ ನನ್ನ ನಾನೆ ಸುಟ್ಟಿ ಕೊಳ್ಳಲ್ಲ ಅನ್ನಿಸುತ್ತೆ ಇದರ ನಡುವೆ ನನ್ನವನು ನನ್ನ ಕಾಪಾಡುತ್ತಾನ .......

ನಿನ್ನ ಮನಸನ್ನು ಸ್ಥಿರವಗಿ ಇಟ್ಟಿಕೊ ಹೆದರಬೇಡಾ. ಎಲ್ಲಾ ಒಳೆಯದೆ ಆಗುತ್ತದೆ ಆವನ ಮನೆಯಲ್ಲು ಒಪ್ಪುತ್ತಾರೆ ನಿಮ್ಮ ಮನೆಯಲ್ಲು ಒಪ್ಪುತ್ತಾರೆ ಮನದಾಲ್ಲಿ ಒಳೇಯ ಪ್ರೀತಿ ಇದ್ದರೆ ಆದರೆ ಸುಟ್ಟಿಕೋಳುವ ಮನಸನ್ನು ಮಾತ್ರ ಮಡಿಕೊಳಬೇಡ ಇದು ನಾನು ಬೇಡಿಕೋಳುತ್ತಿರುವೆ ಅಂದುಕೊ ನನ್ನ ಪ್ರೆಂಡ.                                                                     ನೀನ್ನ ವಿಶ್ವಾಶಿ                                                                       ದೇವರಾಜ                                                                    devarajd@ymail.com  

ಅನಾಮಿಕ (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 06/22/2010 - 14:54

 preethi andre nambike,nambike ne jeevana ,  nanu vabba hudagana preethi madthaidini thumba thumba august ali namibra maduve, adre preethi ali thumba novu irathe kelu sari ansathe preethi madbardu antha preeethi bari sullu anthela adre en madodu preethi ilde baduku ila nange avanu avange nanu,  

prashanth 123 (ಪ್ರಮಾಣಿಸಲ್ಪಟ್ಟಿಲ್ಲ.) ಸೋಮ, 09/06/2010 - 14:47

i heat my self for loving her but she store my heart

ಶರಣಪ್ಪ ಸೋಂಪೂರ … (ಪ್ರಮಾಣಿಸಲ್ಪಟ್ಟಿಲ್ಲ.) ಗುರು, 01/27/2011 - 11:39

ನಾನು ಒಂದು ಹುಡುಗಿಯನ್ನು ಪ್ರೀತಿಯನ್ನು ಮಾಡುತ್ತಿದ್ದೇನೆ ಆದರೆ ಅವರ ಮುಂದೆ ನನ್ನ ಪ್ರೀತಿಯನ್ನು ತಿಳಿಸಲಾ? ಅಥವಾ ಅವಳಾಗೇ ಬಂದು ತಿಳಿಸುತ್ತಾಳಾ?

ಶರಣಪ್ಪ (ಪ್ರಮಾಣಿಸಲ್ಪಟ್ಟಿಲ್ಲ.) ಭಾನು, 08/21/2011 - 17:09

ನಿಮ್ಮ ಕವನ ಹೀಗೆ ಮುಂದುವರಿಯಲಿ ಎಂದು ಹಾರೈಸುತ್ತೇವೆ.

ragini.c (ಪ್ರಮಾಣಿಸಲ್ಪಟ್ಟಿಲ್ಲ.) ಧ, 02/09/2011 - 16:23

nanu ondu huduganannu love madtayidini.namma alli sex koda agide adare ega bere hudigiyannu preethi madtayidini antha phone madi marethu bidu antha 5 letters helidane .navu ebbaru 5 years enda sincere agi love madtayidivi avanu ethara hellidu sarina adakke nanu suicide madikolona antha decide madidini avanilade nanu ella i love you chinnu.

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಶುಕ್ರ, 08/26/2011 - 23:00

nodi nib ebarali yala nededide anta andidira... mate niv 5 yera enda love madta edini anta bere helta edira..mate nim ebara madye heno ond vishaya nededide...ela niv havalana kade ganistedira anta a hudugige anside...ela nimginta hole  huduga sikidane havanan maduve adre  chanage ertini anta  a hudugi tilkondirbeku.........but love anodu onde sati agodu adu obara  jote matra... adu nim hudugige gotila ansute..nim ebara madye estela nededi anodu a huduganige gotadre hen agute anodu nim hudugige gotila ansute...nim ebara madye hen tap agide anodu nanige gotila adre nim hudugi a huduganige mosa matra madta edale......... 

ಸುರೇಶ ಎಸ್ ಕೆ (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 02/22/2011 - 22:42

ಪ್ರಿತಿಯ ಗೇಳತಿಗೆ
ನನ್ನ ಪ್ರೀತಿಯ ಪ್ರೇಮದ ಸುಭ ಕಾಮನೆಗಳು
ಪೇನ್ನಿನ ಮೇಲೆ ಕಾಗದವಿಟ್ಟು........ಛೇ......ಛೇ......ಕ್ಶಮಿಸು ಕಾಗದ್ದದ ಮೇಲೆ ಪೆನ್ನಿಟ್ಟು ಎಂದು ಬರಿಯುವ ಬದಲು ಕಾಗದ್ದದ ಮೇಲೆ ಪೇನ್ನಿಟ್ಟು ಎಂದು ಬರೆದೆ
 
ಅದೆ ಸಮಯಕ್ಕೆ ನಿನ್ನ ನೆನೆಪು
ಈಗ ಎನು ಮಾಡುತ್ತಿರಬಹುದು ನನ್ನ ನೆನೆಪಲ್ಲಿ ಸದಾ ಚಿಂತಿಸುತ್ತಿರಬಹುದು
ನೀ ಎದರಿಗೆ ಬಂದಾಗ ಎನೂ ಹೆಳಲ್ಲು ಹೂದಾಗ ನನ್ನಲ್ಲಿ ಅಡಗಿದ ಅಲ್ಪ ಸ್ವಲ್ಪ ಧೈರ್ಯ ಹೆದರಿ ಪಾದರಸದಂತೆ ಸರನೆ ಓಡಿ ಹೂಗುತ್ತೆ....
 
 

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಗುರು, 12/29/2011 - 13:38

ಕಣ್ಣ್  ಮುಂದೆ ಬಂದರೆ ಎದೆ ಜಲ್ಲೆನೂವ ಆ ಪ್ರೀತಿಯ  ಎಲ್ಲ ಯುವ ಪಿಳಿಗೆಗೆ ಅನಿಸುವಂತದೆ. 

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.