Skip to main content

ಕಲ್ಪನಾ ವಿಲಾಸ - ನನ್ನ ಅನಿಸಿಕೆ

ಇಂದ shamala
ಬರೆದಿದ್ದುMarch 22, 2009
7ಅನಿಸಿಕೆಗಳು

[img_assist|nid=3853|title=ಕಲ್ಪನಾ ನಟಿ|desc=|link=none|align=left|width=80|height=105]"ಕಲ್ಪನಾ ವಿಲಾಸ" ಓದಲು ಶುರು ಮಾಡಿದಾಗ ಆದ ಅನುಭವ, ಮನಸ್ಥಿತಿ ವರ್ಣಿಸಲಸಾಧ್ಯ. ನನ್ನ ಮೆಚ್ಚಿನ ನಟಿ ಕಲ್ಪನಳ ಜೀವನ ಚರಿತ್ರೆ ಎಂಬ ಹುಚ್ಚು ಆವೇಶ - ಅವಳ ಜೀವನದ ಒಂದೊಂದು ಘಟನೆಗಳಿಗೂ ಮನಸ್ಸು ತುಡಿದ ರಭಸ ಅಪಾರ. ಕಲ್ಪನ ತುಂಬಾ ಭಾವಜೀವಿ ಎಂಬ ವಿಷಯ ಎಲ್ಲರೂ ಅರಿತ ಸತ್ಯ. ಬೆಳ್ಳಿ ಪರದೆಯ ಮೇಲಿನ ಅವಳ ಅಭಿನಯ, ಪ್ರತಿಯೊಂದು ಬಾರಿಯೂ ಬರೀ ನಟನೆ ಅಲ್ಲ - ಅವಳು ನಿಜವಾಗಿ ಅನುಭವಿಸುತ್ತಿರುವ ನೋವು ಎಂಬಷ್ಟು ಸಹಜವಾಗಿರುತ್ತಿತ್ತು. ಕಲ್ಪನಾ ಭಾವಜೀವಿ - so called extremely emotional or excentric ಅಲ್ಲದೇ ಹೋಗಿದ್ದರೆ ಅಂತಹ powerful charactersನ್ನು ಅಷ್ಟು ಸುಲಭವಾಗಿ ಎಷ್ಟೋ ವರ್ಷಗಳ ನಂತರವೂ ಮರೆಯಲಸಾಧ್ಯವಾದ ಮಟ್ಟಿಗೆ ಅಭಿನಯಿಸುವುದು ಸಾಧ್ಯವೇ ಇರಲಿಲ್ಲ.

ಕಲ್ಪನಾ ನಟಿಯಾಗುವ ತನ್ನ ಕನಸನ್ನು ನನಸಾಗಿಸಿಕೊಳ್ಳಲು ಮಾಡಿದ ಸಾಹಸ, ಅದಕ್ಕಾಗಿ ಪಟ್ಟ ಪಾಡು, ತೆತ್ತ ಬೆಲೆಗೆ ಒಂದು ಅಂದಾಜು ಅಥವಾ ಅಳತೆ ಇಲ್ಲವೇ ಇಲ್ಲ. ಅವಳು ತನ್ನ ಹೆಣ್ತನವನ್ನು ನರಸಿಂಹರಾಜುವಿಗೆ ಅರ್ಪಿಸಿದ ವಿಷಯ ಕರುಳು ಹಿಂಡುವಂತದ್ದು. ಬರೀ ಬೆಳ್ಳಿ ಪರದೆಯ ಮೇಲೆ ಅವರನ್ನು ನೋಡಿ ಅವರ ಜೀವನವನ್ನು ಏನೇನೋ ಊಹಿಸಿಕೊಳ್ಳುವ ನಾವು ನಿಜಾಂಶ ತಿಳಿದಾಗ ಅದನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗದೆ ಒದ್ದಾಡುತ್ತೇವೆ. ಎಂದೋ ನಡೆದು ಹೋದ ಘಟನೆಯಾದರೂ ಅದನ್ನು ಇಂದು ಓದಿದಾಗ ನನ್ನ ಮನಸ್ಸು ಮೂಕವಾಗಿತ್ತು. Such a powerful, cute and most successful actress had such a complicated, bad and painful life is something unbelievable. ಎಲ್ಲವನ್ನೂ ಅಷ್ಟು ದಿಟ್ಟವಾಗಿ ಎದುರಿಸುತ್ತಿದ್ದ ಕಲ್ಪನಾ ಜೀವನವನ್ನು ಅರ್ಧದಲ್ಲೇ ಕೊನೆಗಾಣಿಸಲು ಏಕೆ ನಿರ್ಧರಿಸಿದಳೆಂಬುದು ಅರ್ಥವಾಗದೇ ಉಳಿಯುವ ಪ್ರಶ್ನೆ. ಜೀವನದಲ್ಲಿ ಬರೀ ಪೆಟ್ಟುಗಳೇ ತಿಂದಿದ್ದ ಕಲ್ಪನಾ ಆ ದಿನ ಬಸವರಾಜು ತನ್ನನ್ನು ಸಂತೈಸಲು ಒಳಗೆ ಬರದೇ ಹೋಗಿದ್ದನ್ನೇ ನೆಪವಾಗಿಟ್ಟುಕೊಂಡು ಸಾಯುವ ನಿರ್ಧಾರ ಮಾಡಿರುತ್ತಾಳೆಂದರೆ - ಖಂಡಿತಾ ನಂಬಬಹುದಾದ ಕಾರಣ. ಇದಕ್ಕೆ ಬಹುಶಃ ಅವಳ ಅತೀ ಭಾವುಕತೆಯೇ ಕಾರಣ. ಮಿನುಗು ತಾರೆಯ ಅಂತ್ಯ ಅತ್ಯಂತ ಕಠೋರವಾಗಿ, ಜೀರ್ಣಿಸಿಕೊಳ್ಳಲಸಾಧ್ಯವಾದ ರೀತಿಯಲ್ಲಿ ಆಯಿತು. ಸಾಯುವಾಗ ಅವಳು ಬಸವರಾಜು ಮದುವೆಯಲ್ಲಿ ಕೊಟ್ಟ ಸೀರೆ ಉಟ್ಟಿದ್ದಳೆಂಬ ವಿಷಯ - ಅವಳು ತನ್ನ ಗಂಡನನ್ನು ಮಾನಸಿಕವಾಗಿ ಎಷ್ಟೊಂದು ಆಸರಿಸಿದ್ದಳೆಂಬುದನ್ನು ಪ್ರಮಾಣ ಮಾಡಿ ತೋರಿಸುತ್ತದೆ.

[img_assist|nid=3857|title=ಕಲ್ಪನಾ ನಟಿ 2|desc=|link=none|align=left|width=640|height=463]ಪುಸ್ತಕ ಓದುವಾಗ ಕಲ್ಪನಾಳಿಗಿದ್ದ relationships ಎಲ್ಲವೂ ಎಷ್ಟು ಸಡಿಲವಾದ foundation ಮೇಲೆ ನಿಂತಿತ್ತೂಂತ ಗೊತ್ತಾಗತ್ತೆ. ಅವಳ characterisation ಚಿತ್ರಿಸುವಾಗ, ಲೇಖಕಿ ಅವಳನ್ನು ಅತಿಕಾಮಿ, ಭಾವುಕಿ, ಮುಂಗೋಪಿ ಎಂದೆಲ್ಲಾ ಹೇಳಿದ್ದಾರೆ. ಆದರೆ ಜೀವನದಲ್ಲಿ ಕಲ್ಪನಾಗಿದ್ದ insecured feeling ಮತ್ತು ತಾನು ತುಂಬಾ ಚೆಲುವೆಯಲ್ಲವೆಂಬ ಕೀಳು ಭಾವನೆಯೇ ಅವಳ ಅತಿ ಕಾಮುಕತೆಗೆ ಕಾರಣವೇನೋ ಅನ್ನಿಸುತ್ತೆ. ತನ್ನ ಹಾವಿನ ಪೊರೆಯಂತಿದ್ದ ಚರ್ಮವನ್ನು ಯಾರೂ ಮೆಚ್ಚಲಾರರೆಂಬ ಕುಹಕ, ಅವಳನ್ನ perverted sexಗಾಗಿ ಹಂಬಲಿಸುವಂತೆ ಮಾಡಿರಬಹುದು. ಅಥವಾ ತನ್ನನ್ನು ಓಲೈಸುವ ಗಂಡು ಅನುಭವಿಸುವ ಭೋಗ ಅವನಿಗೆ ಬೇರೆ ಯಾರಲ್ಲೂ ಸಿಗದೇ ತನ್ನ ಹತ್ತಿರವೇ ಮತ್ತೆ ಎಳೆದು ತರಬೇಕೆಂಬ ಕೆಟ್ಟ ಮಿತಿ ಮೀರಿದ ಆಸೆ ಅವಳನ್ನು ಅತಿ ಕಾಮಿಯನ್ನಾಗಿ ಮಾಡಿದ್ದಿರಬಹುದು. ಆದರೂ ಅವಳ ಅಹಂಕಾರ ಮತ್ತು ಹಟ ಸ್ವಭಾವದಿಂದಲೇ ಅವಳು ಜೀವನದಲ್ಲಿ ಎಲ್ಲವನ್ನೂ ಕಳೆದುಕೊಂಡಳೆಂಬುದು ಸತ್ಯ. ಆದರೆ ಅವಳ ಒಪ್ಪ ಓರಣದ ಬಗ್ಗೆ ಓದುವಾಗ ಕಣ್ಣು ತುಂಬಿ ಬರದಿರಲು ಸಾಧ್ಯವೇ ಇಲ್ಲ. ಅಂತಹ ಆಸಕ್ತಿ ಅವಳಿಗೆ ಜೀವನದ ಬಗ್ಗೆ ಇದ್ದರೂ ಏಕೆ ಆತ್ಮಹತ್ಯೆ ಮಾಡಿಕೊಂಡಳು ?

ಎಷ್ಟೇ famous ನಟಿಯಾಗಿದ್ದರೂ ಕಲ್ಪನಾ ದುರ್ಬಲ ಮನಸ್ಸಿನವಳೆಂದೂ - ಅವಳನ್ನು ಅವಳ ಬುದ್ಧಿಗಿಂತ ಹೆಚ್ಚಾಗಿ ಅವಳ ಹೃದಯ ಆಳುತ್ತಿತ್ತೆಂಬುದನ್ನು ತುಂಬಾ ಸುಲಭವಾಗಿ ಅರ್ಥ ಮಾಡಿ ಕೊಳ್ಳಬಹುದು. ಸಾಯುವಾಗ ಆದ ಯಮ ಯಾತನೆಯನ್ನು ಅದು ಹೇಗೆ ಅಷ್ಟು ನಿಶ್ಯಬ್ದವಾಗಿ ಅನುಭವಿಸಿದಳೋ ಆಶ್ಚರ್ಯವಾಗತ್ತೆ. ಅಂತಹ ಯಮ ಯಾತನೆಯಲ್ಲೂ ಅವಳ ಸೀರೆಯ ಒಂದು ನೆರಿಗೆ ಕೂಡ ಕೆಟ್ಟಿರಲಿಲ್ಲವೆಂಬ ಅಂಶ ಅವಳು ಎಂತಹ perfectionist ಮತ್ತು ತೆಗೆದುಕೊಂಡ ನಿರ್ಧಾರದ ತೀವ್ರತೆ ತೋರಿಸುತ್ತದೆ. ಯಾತನೆ ಅನುಭವಿಸುವಾಗಲೂ ಅವಳಿಗೆ ಬದುಕುವ ಹಂಬಲ ಖಂಡಿತಾ ಬಂದಿರಲಿಲ್ಲ ಮತ್ತು ಅದಕ್ಕಾಗಿ ಅವಳು ಯಾವ ಪ್ರಯತ್ನವನ್ನೂ ಮಾಡಲಿಲ್ಲ ಎಂಬುದು ಮನಸ್ಸನ್ನು ಕಲಕುತ್ತದೆ. ಎಂತಹ ಮಿನುಗುತಾರೆಗೆ ಎಂತಹ ಸಾವು !!!!!

ಒಟ್ಟಿನಲ್ಲಿ ಕಲ್ಪನಾ ವಿಲಾಸ ನನ್ನ ಮನಸ್ಸು, ಬುದ್ಧಿಗಳನ್ನು ದಿನಗಟ್ಟಲೆ / ವಾರಗಟ್ಟಲೆ ಆಕ್ರಮಿಸಿಕೊಂಡು ಬಿಟ್ಟಿತ್ತು. ಇನ್ನೂ ಕಲ್ಪನಾಳನ್ನು ಮತ್ತೆ ಮತ್ತೆ ನೆನೆಪು ಮಾಡಿಕೊಳ್ಳುತ್ತಲೇ ಇದೆ ನನ್ನ ಮನಸ್ಸು.

ಲೇಖಕರು

shamala

ನಾನೊಬ್ಬ ಕನ್ನಡತಿ, ಭಾಷೆಯ ಬಗ್ಗೆ ಅತಿಯಾದ ಅಭಿಮಾನ ಉಳ್ಳವಳು. ನನ್ನ ಪರಿಚಯಕ್ಕೆ ಇಷ್ಟೇ ಸಾಕು.
http://antharangadamaathugalu.blogspot.com/

ಅನಿಸಿಕೆಗಳು

ರಾಜೇಶ ಹೆಗಡೆ ಭಾನು, 03/22/2009 - 15:30

ಕಲ್ಪನಾರವರ ಅನೇಕ ಚಿತ್ರಗಳು ನನಗೆ ತುಂಬಾ ಇಷ್ಟ. ಅದರಲ್ಲೂ ಬೆಳ್ಳಿ ಮೋಡ, ಸೀತಾ, ಶರಪಂಜರ, ಗೆಜ್ಜೆಪೂಜೆ, ದಾರಿ ತಪ್ಪಿದ ಮಗ ಮತ್ತು ಕಪ್ಪು-ಬಿಳುಪು ಮುಖ್ಯವಾದವು. :)

ಅವರ ಮನೋಜ್ಞ ಅಭಿನಯಕ್ಕೆ ಅವರೇ ಸಾಟಿ. ಈ ಕಲ್ಪನಾ ವಿಲಾಸ ಪುಸ್ತಕದ ಲೇಖಕರು ಯಾರು? ಎಲ್ಲಿ ಸಿಗುತ್ತೆ ಎಂಬುದನ್ನು ತಿಳಿಸುತ್ತೀರಾ?

ಮಿನುಗು ತಾರೆ ಕಲ್ಪನಾರವರ ನೆನಪು ಮಾಡಿಕೊಟ್ಟ ನಿಮಗೆ ಧನ್ಯವಾದಗಳು :)

shamala ಸೋಮ, 03/23/2009 - 10:27

ನಮಸ್ಕಾರ ರಾಜೇಶ ರವರಿಗೆ
ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು. "ಕಲ್ಪನಾ ವಿಲಾಸ" ಬರೆದವರು ಶ್ರೀಮತಿ ಕೆ.ಬಿ.ಪಂಕಜ. ನನ್ನ ಹತ್ತಿರ ಈ ಪುಸ್ತಕ ಇಲ್ಲ. ಎರವಲು ಪಡೆದ ಓದಿದ್ದೆ. ನಾನೂ ಹುಡುಕುತ್ತಿದ್ದೇನೆ, ಸಿಕ್ಕರೆ ನಿಮಗೆ ತಿಳಿಸುತ್ತೇನೆ. ನಿಮಗೆ ಮೊದಲು ಸಿಕ್ಕರೆ ದಯವಿಟ್ಟು ನನಗೂ ತಿಳಿಸಿ, ಯಾವುದಕ್ಕೂ ಒಮ್ಮೆ 'ಅಂಕಿತ'ದಲ್ಲಿ ಪ್ರಯತ್ನಿಸಿ ನೋಡಿ. ಕಲ್ಪನಾಳ ಎಲ್ಲಾ ಚಿತ್ರಗಳೂ ನನಗೆ ತುಂಬಾ ಇಷ್ಟ.

konkubhatta ಸೋಮ, 03/23/2009 - 11:51

ಪ್ರಿಯ ಶಾಮಲಾ ಅವರೆ,

"ಕಲ್ಪನಾ ವಿಲಾಸ" ಅನ್ನುವ ಪುಸ್ತಕವನ್ನು ಶ್ರೀಮತಿ ಕೆ.ಬಿ.ಪಂಕಜ ಬರೆದಿದ್ದಾರೆ ಅದಕ್ಕಾಗಿ ಅದರಲ್ಲಿ ಬಂದಿರುವ ಎಲ್ಲವೂ ಸತ್ಯಸ್ಯ ಸತ್ಯವಾಗಿದೆ ಎಂದು ನೀವು ತೀರ್ಮಾನಿಸಿ ಬಿಟ್ಟಂತೆ ಕಾಣುತ್ತದೆ.

ಅವಳು ತನ್ನ ಹೆಣ್ತನವನ್ನು ನರಸಿಂಹರಾಜುವಿಗೆ ಅರ್ಪಿಸಿದ ವಿಷಯ ಕರುಳು ಹಿಂಡುವಂತದ್ದು ಎಂದನ್ನುತ್ತೀರಿ. ಘಟನೆಯ ಇಬ್ಬರೂ ಪಾತ್ರಧಾರಿಗಳು ಇಲ್ಲದ್ದರಿಂದ ವಿಷಯ ನಿಜವೋ ಸುಳ್ಳೋ ಎಂದು ಪ್ರಮಾಣಿಕರಿಸುವ ಬಾಧ್ಯತೆ ನಮಗಿಲ್ಲ ಅಲ್ಲವೇ? ಯಾರಾದರೂ ಬಾಯಿಗೆ ಬಂದದ್ದನ್ನು ಹೇಳಿದರೂ, ಯಾವುದೇ ಸಾಕ್ಶ್ಯ ಇಲ್ಲದಿದ್ದರೂ ಮನೋಜ್ನ ಲೇಖನವೊಂದರ ಸೋಗಿನಲ್ಲಿ ನಾವದನ್ನು ಚರ್ಚಿಸಿಬಿಡಬಹುದು ಅಲ್ಲವೇ? ತನ್ನ ಪುಸ್ತಕ ಜಾಸ್ತಿ ಜಾಸ್ತಿ ಖರ್ಚಾಗಲಿ ಎಂದು ಲೇಖಕರು ಕಪೋಲಕಲ್ಪಿತ ವಿಷಯಗಳನ್ನು ಬರೆಯುವದು ಹೊಸತೇ? ಕಲ್ಪನಾ ಸತ್ತ ದಶಕಗಳ ನಂತರ ಅವರು ಸಾವನ್ನಪ್ಪಿದ TBಯ ಮೇಟಿಯನ್ನು ಮಾತನಾಡಿಸಿ ಬಿಟ್ಟರೆ, ಕಲ್ಪನಾರ ಸಾವಿಗೆ ಕಾರಣರಾದ ಬಸವರಾಜು ಎಂಬ ಅಸಹ್ಯದ ಮನುಷ್ಯನ ಸಂದರ್ಶನ ಮಾಡಿಬಿಟ್ಟರೆ ಸತ್ಯದರ್ಶನ ಆಗಿಹೋಗುತ್ತದೆ ಅಲ್ಲವೇ?

ಇನ್ನು ನೀವು ಲೇಖಕಿ ಅವಳನ್ನು ಅತಿಕಾಮಿ, ಭಾವುಕಿ, ಮುಂಗೋಪಿ ಎಂದೆಲ್ಲಾ ಹೇಳಿದ್ದಾರೆ. ಆದರೆ ಜೀವನದಲ್ಲಿ ಕಲ್ಪನಾಗಿದ್ದ insecured feeling ಮತ್ತು ತಾನು ತುಂಬಾ ಚೆಲುವೆಯಲ್ಲವೆಂಬ ಕೀಳು ಭಾವನೆಯೇ ಅವಳ ಅತಿ ಕಾಮುಕತೆಗೆ ಕಾರಣವೇನೋ ಅನ್ನಿಸುತ್ತೆ. ತನ್ನ ಹಾವಿನ ಪೊರೆಯಂತಿದ್ದ ಚರ್ಮವನ್ನು ಯಾರೂ ಮೆಚ್ಚಲಾರರೆಂಬ ಕುಹಕ, ಅವಳನ್ನ perverted sexಗಾಗಿ ಹಂಬಲಿಸುವಂತೆ ಮಾಡಿರಬಹುದು. ಎನ್ನುವಾಗ ಏನೆನ್ನಬೇಕೋ ಎಂದೇ ತಿಳಿಯುವದಿಲ್ಲ. ಕುಂಬಾರನಿಗೆ ವರುಷ..ದೊಣ್ಣೆಗೆ ನಿಮಿಷ ನೆನಪಿಗೆ ಬರುತ್ತದೆ ಅಶ್ಟೇ. ತಾನು ಸತ್ತ ದಶಕಗಳ ನಂತರ ಸಮಾಜದ ಗೌರವಾನ್ವಿತ ಜನ ಇಶ್ಟು ಅಸಹ್ಯವಾಗಿ ತನ್ನ ಬಗ್ಗೆ ಅಂದುಕೊಳ್ಳುತ್ತಾರೆ ಎಂದು ಗೊತ್ತಿದ್ದರೆ ಕಲ್ಪನ ಬದುಕಲಲ್ಲ, ಸಾಯಲು ಭಯಪಡುತ್ತಿದ್ದರು.

-ಕೊಂಕುಭಟ್ಟ

sreedhara (ಪ್ರಮಾಣಿಸಲ್ಪಟ್ಟಿಲ್ಲ.) ಧ, 02/01/2012 - 16:35

u have give a nice answer shamala. shamala have  not read any kalpana's book.so she have writen likethat .....but kalpana is a very good arist .........Smile 

sreedhara (ಪ್ರಮಾಣಿಸಲ್ಪಟ್ಟಿಲ್ಲ.) ಧ, 02/01/2012 - 16:35

u have give a nice answer shamala. shamala have  not read any kalpana's book.so she have writen likethat .....but kalpana is a very good arist .........Smile 

venkatesha (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 04/07/2009 - 17:28

i like her verymuch... mainly with annavru

yes one should not merely say anything by just reading a book.... so i agree with konkubhatta

sreedhara (ಪ್ರಮಾಣಿಸಲ್ಪಟ್ಟಿಲ್ಲ.) ಧ, 02/01/2012 - 16:21

Living kalpana vilasa you read kalpanas other books Smile

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.