ಗಿರೀಶ್ ಕಾರ್ನಾಡ್ ಅನ್ನೋ ಕಾರ್ಮುಗಿಲನ್ನು ಕನ್ನಡ ನಾಡಿನಲ್ಲಿ ಉಸಿರಾಡಲು ಬಿಡಬೇಕೇ?
ಗಿರೀಶ್ ಕಾರ್ನಾಡ್ ಅನ್ನೋ ಕಾರ್ಮುಗಿಲನ್ನು ಕನ್ನಡ ನಾಡಿನಲ್ಲಿ ಉಸಿರಾಡಲು ಬಿಡಬೇಕೇ?
ಗಿ.ಕಾ ಅವರ ಅಭಿಮಾನಿಗಳ ಕ್ಷಮೆ ಇರಲಿ.
ಕಳೆದ ತಿಂಗಳಷ್ಟೇ, ದಿನಪತ್ರಿಕೆಗಳಲ್ಲಿ ಓದಿದ್ವಿ. ಕಲಕತ್ತೆಯಲ್ಲಿ, ಯಾರೋ ರಾಜಕಾರಣಿ (ಆ ಎಮ್ಮನ ಹೆಸರು ಮರೆತು ಹೋಯ್ತು :) ), ಟಾಟಾಗೆ, ಜಾಗ ಕೊಡೋದು ಬೇಡಾ ಅಂತ ಉಪವಾಸ ಸತ್ಯಾಗ್ರಹ ನಡೆಸಿದ್ದಾಳೆ. ಇನ್ನೂ ಮುಂದೆವರೆದಿದೆ ಅಂದರೆ ತಪ್ಪಿಲ್ಲ ಅನ್ನುಕೊಂತೀನಿ.
ಟಾಟಾ ಕೇಳಿದಷ್ಟು ದುಡ್ಡು ಕೊಟ್ಟು, ಎಲ್ಲ ರೈತರ ಹಿತ ರಕ್ಷಣೆ ಕಾಪಾಡಿನೂ, ಅವರಿಗೆ ಅಲ್ಲಿ ಜಾಗ ದೊರೆಯುತ್ತಿಲ್ಲ!!!
ಕಾರಣ, ಜೈ ಜವಾನ್ ಜೈ ಕಿಸಾನ್,
ಅಲ್ಲಿ ರೈತರ ಹಿತರಕ್ಷಣೆ ಕಾಪಾಡಲು, ರಾಜಕಾರಣಿಗಳು, ಬುದ್ಡಿಜೀವಿಗಳು ಒಟ್ಟಿಗೆ ಸೇರಿ, ಹೋರಾಡುತ್ತಿದ್ದಾರೆ.
ಟಾಟಾ ಮಾಡುತ್ತಿರುವುದು ಪ್ರಾಮಾಣಿಕವೇ, ನ್ಯಾಯಭದ್ದುವೆ..
ಆದರೂ, ವಿರೋಧವಿದೆ, ಕಾರಣ, ಅಲ್ಲಿ ಯಾವುದು ಸರಿ ಯಾವುದು ತಪ್ಪು ಎಂಬುದು ಮುಖ್ಯವಲ್ಲ.
ರೈತರಿಗೆ ಹಾನಿ ಆಗುತ್ತಿದೆಯೇ, ನಮ್ಮ ಜನ ತೊಂದರೆಗೆ ಒಳಗಾಗುತ್ತಿದ್ದಾರೆಯೇ ಅನ್ನೋ ಅನುಕಂಪ..
ಈಗ ನಮ್ಮ ಮನೆ ಬಗ್ಗೆ ಹೇಳ್ತೀನಿ..
ಮನೇಲಿ ಇರೋ ಬೊರೆವೇಲ್ ನಿಂದ ಬೇರೆಯವರಿಗೆ ಹತ್ತು ಬಿಂದಿಗೆ, ನೀರು ದಿನಾ ಕೊಡಬಹುದು.
ಕಾಲ ಕಳೆದಂತೆ, ಅದೇ ರೂಢಿಯಾಗಿ, ನನಗೆ ಬೇಕಾದಾಗ ನೀರು ಕೊಡಿ, ಅದರಿಂದ ದಿನಾ ನೀರ್ ತಗೋತಿದಿನೀ, ನಂದು ಪಾಲಿದೆ, ನಂದು ಹಕ್ಕಿದೆ ಅಂತ ಹಕ್ಕೂ ಚಲಾಯಿಸಿದ್ರೆ ಕೇಳ್ತಿವೆ!
ಅಯ್ಯೋ ನಿನ್ ***, ಅಂತ ಮನಸ್ಸಿಗೆ ಸಮಾಧಾನ ಆಗೋವಷ್ಟು ಬೈದು, ನಾಳೆಯಿಂದ ನೀರು ಕೋಡೋದನ್ನೇ ಬಿಟ್ ಬಿಡ್ತಿವಿ.
ಈಗ, ಅಣ್ಣ ಗಿ.ಕಾ ಬಗ್ಗೆ.
ಬುದ್ಡಿ ಜೀವಿ?, ಅದ್ ಹ್ಯಾಗೋ ನಂಗೆ ಗೊತ್ತಿಲ್ಲ, ದೂರ (ದುರಾ) ದೃಷ್ಟಿ ಉಳ್ಳವ, ಅದು ಹ್ಯಾಗೋ ನಂಗೆ ಗೊತ್ತಿಲ್ಲ.
ನ್ಯಾಯಲಯ ತೀರ್ಪು ಸರಿ ಇದೆ ಅಂದ್ರೆ ಹ್ಯಾಗೆ?
ಯಾವ್ದೂ ನಿಜ ಯಾವ್ದೂ ಸುಳ್ಳು ಅನ್ನೋವಾಷ್ಟು ಬುದ್ದೀನಾ ದೆವರು ನಂಗೆ ಕೊಟ್ಟಿಲ್ಲ. ಆದ್ರೆ, ನಮ್ಮ ತನ ನಮ್ಮ ನಾಡು, ನಮ್ಮ ಜನ ಅನ್ನೋ ಅಕ್ಷರಗಳನ್ನ ಅರ್ಥ ಮಾಡಿಕೊಳ್ಲೋವಷ್ಟು ಬುದ್ದಿನಾ ಕೊಟ್ಟಿದಾನೆ.
ಏನು ತಿಳಿಯದ ನನ್ನಲ್ಲೇ ಕಿಚ್ಚೆ ದ್ದಿರುವಾಗ, ಬುದ್ಡಿ ಜೀವಿಗಲ್ಲಿ, ಅದಕ್ಕೆ ಜಾಗವೇ ಇಲ್ಲವೇ?
ನಮ್ಮ ತನ ನನ್ನ ನಾಡು, ನುಡಿ ಮೇಲೆ ಅಭಿಮಾನ ಇಲ್ದೇ ಇರೋದು ಬುದ್ಡಿ ಅಂತಾ ಆದ್ರೆ, ಜಗತ್ತಿನಲ್ಲಿ ನನಗಿಂತ ಸಂತೋಷ ಯಾರಿಗೂ ಆಗೋಲ್ಲ ಬಿಡಿ.
ಯಾಕ್ ಅಂದ್ರೆ, ನಾನು ನನ್ನ ತಾಯಿ, ನಾಡು, ನುಡಿಯನ್ನ ಜೀವಕ್ಕಿಂತಲೂ ಹೆಚ್ಚಾಗಿ ಪ್ರೀತಿಸ್ತೀನಿ. ನಾನು ಏನು ತಿಳಿಯದವನಾಗೇ ಇದ್ದು ಬಿಡ್ತೀನಿ, ಬುದ್ಡಿ ಜೀವಿ ಆಸೇನೆ ಬೇಡಾ.
ಈಗ ಹೇಳಿ, ನೀವು ಬುದ್ಡಿ ಜೀವಿ ಗಿ.ಕಾ ಆಗ ಬಯಸುತ್ತೀರ, ಇಲ್ಲ, ನನ್ನ ತರ ತಾಯಿ ಭುವನೇಶ್ವರಿಯ ಪಾದಗಳಲ್ಲಿ, ಮಂಕು ತಿಮ್ಮ ಆಗ ಬಯಸುತ್ತೀರ?
ಸಾಲುಗಳು
- Add new comment
- 3733 views
ಅನಿಸಿಕೆಗಳು
Re: ಗಿರೀಶ್ ಕಾರ್ನಾಡ್ ಅನ್ನೋ ಕಾರ್ಮುಗಿಲನ್ನು ಕನ್ನಡ ನಾಡಿನಲ್ಲಿ ಉಸಿರಾಡಲು
GK avarannu kongaru nadige odisbeku,uppu thinda manege droha bagiyo jana namge beda.
ಕನ್ನಡ ಲಿಪಿಯಲ್ಲಿ:
ಗಿ.ಕಾ ಅವರನ್ನು ಕೊಂಗರು ನಾಡಿಗೆ ಓಡಿಸಬೇಕು. ಉಪ್ಪು ತಿಂದ ಮನೆಗೆ ದ್ರೋಹ ಬಗೆಯೋ ಜನ ನಮ್ಗೆ ಬೇಡ.
inthi,
Santhosh
Re: ಗಿರೀಶ್ ಕಾರ್ನಾಡ್ ಅನ್ನೋ ಕಾರ್ಮುಗಿಲನ್ನು ಕನ್ನಡ ನಾಡಿನಲ್ಲಿ ಉಸಿರಾಡಲು
ನನ್ನ ಪ್ರಕಾರ, ಕನ್ನಡಿಗರು ಗಿರೀಶ್ ಕಾರ್ನಾಡ್ ಅವರ ಬಗ್ಗೆ ನಡ್‌ಕೊಳ್ತಾ ಇರೋದು ತಪ್ಪು.
ಅವರು ನಮ್ಮ ಕನ್ನಡ ನಾಡಿನ ಹಿರಿಯ ಸಾಹಿತಿ. ಜ್ಞಾನ್ ಪೀಠ ಪಡೆದ ಸಾಹಿತಿ. ನಾವು ಕನ್ನಡಿಗರು ಕೇವಲ ಅವರ ಒಂದು ಅನಿಸಿಕೆ ಇಂದ ಅವರನ್ನು ಅವಮಾನ ಮಾಡುವದು ತಪ್ಪು. ಅವರು ಕೊಟ್ಟಿರುವ ಹೇಳಿಕೆ ಸರಿ ಇಲ್ಲ, ಅದನ್ನ ನಾನೂ ಒಪ್ಪುತ್ತೇನೆ. ಆದರೆ ಅವರು ಸಾಹಿತಿ ಆದ್ದರಿಂದ ಅವರ ಅನಿಸಿಕೆ ಹೇಳುತ್ತಾರೆ.
ಕಾವೇರಿ ಸಮಸ್ಯೆಯನ್ನ ನಾವೆಲ್ಲ ಸೇರಿ ಹೋರಾಡಿ ಸರಿಪಡಿಸಬೇಕು. ನಮ್ಮ ನಮ್ಮಲ್ಲೇ ಹೊಂದಾಣಿಕೆ ಇಲ್ಲದಿದ್ದಾರೆ ನಾವು ಕೇಂದ್ರ ಸರ್ಕಾರವನ್ನ ಹೇಗೆ ಎದಿರಿಸುವದು?
ಇದು ನನ್ನ ಅನಿಸಿಕೆ. ಯಾರಿಗಾದರೂ ಬೇಜಾರದಲ್ಲಿ ಕ್ಷಮಿಸಿ.
Re: ಗಿರೀಶ್ ಕಾರ್ನಾಡ್ ಅನ್ನೋ ಕಾರ್ಮುಗಿಲನ್ನು ಕನ್ನಡ ನಾಡಿನಲ್ಲಿ ಉಸಿರಾಡಲು
ಆದರೆ ಅವರು ಸಾಹಿತಿ ಆದ್ದರಿಂದ ಅವರ ಅನಿಸಿಕೆ ಹೇಳುತ್ತಾರೆ.....???
ನಿಮ್ಮ ಅಜ್ನಾನಕ್ಕೆ ನನ್ನ ಸಂತಾಪವಿದೆ..ಒಬ್ಬ ಸಾಹಿತಿಯಾದ ಮಾತ್ರಕ್ಕೆ ಅವರಿಗಿಷ್ಟ ಬಂದ ಹಾಗೆ ಮಾತಾಡುವುದು ತರವಲ್ಲ ಅಲ್ಲವ? ಅಷ್ಟು ದೊಡ್ಡ ಸಾಹಿತಿ???????????????????????? ಯಾದ ಅವರು ಕನ್ನಡ ನಾಡಿನ ಕನ್ನಡ ಜನರ ಭಾವನೆಗಳೊಂದಿಗೆ ಬೆಸೆದುಕೋಂಡಿರುವ ಕಾವೇರಿ ವಿವಾದವನ್ನ ಸರಿಯಾಗಿ ಅರ್ತ ಮಾಡಿಕೊಳ್ಳದೇ ಮಾತಡಿರುವುದು ಅವರ ಬುದ್ದಿಯನ್ನ ತೋರಿಸುತ್ತದೆ...
ಸುಜಿತ್ ಅವರೆ ನೀವು ಹೇಳುವಂತೆ ಅವರು ನಮ್ಮ ನಾಡಿನ ಅಂತಾ ಶ್ರೇಷ್ಟ ಸಾಹಿತಿಯಲ್ಲ ಬಿಡಿ..ಬೇಕಾದರೆ ನಾನು ಅವರ ಕ್ರುತಿಗಳ ಬಗ್ಗೆ ನಿಮ್ಮೊಂದಿಗೆ ಚರ್ಚಿಸಲು ಸಿದ್ದವಿರುವೆ..ನೀವು ಸಿದ್ದರಿದ್ದೀರ? ಅವರದೇನಿದ್ದರು ಕಾಗಕ್ಕ ಗುಬ್ಬಕ್ಕ ಕತೆ...ಅವರಿಗಿಂತ ನೂರಾರು ಸಾವಿರಾರು ಶ್ರೇಷ್ಟ ಸಾಹಿತಿಗಳು ನಮ್ಮ ನಾಡಿನಲ್ಲಿದ್ದಾರೆ...
ನನ್ನ ಮಾತಿನಿಂದ ನಿಮಗೆ ನೊವಾಗಿದ್ದರೆ?????? ಕ್ಷಮಿಸಿ.......
Re: ಗಿರೀಶ್ ಕಾರ್ನಾಡ್ ಅನ್ನೋ ಕಾರ್ಮುಗಿಲನ್ನು ಕನ್ನಡ ನಾಡಿನಲ್ಲಿ ಉಸಿರಾಡಲು
ಹೌದು ಸಾರ್ ನೀವ್ ಹೇಳಿದ್ದು ನಿಜಾನೇ...
ಅವರೊಬ್ಬ ದೊಡ್ಡ ಸಾಹಿತಿನೇ....
ಆದ್ರೆ ಒಂದ್ ಮಾತು ಹೇಳಿ, ನೀವು ಎಷ್ಟೇ ದೊಡ್ದೋರ್ ಆಡ್ರುವೇ, ಎಷ್ಟೇ ಮೇಲೆ ಹೋದ್ರುವೇ, ತಾಯಿನಾ ಮರಿತೀರ?
ಯಾರಾದ್ರೂ, ನಿಮ್ಮ ಕುಟುಂಬಕ್ಕೆ ಅನ್ಯಾಯ ಮಾಡ್ತಾ ಇದ್ರೆ ಸುಮ್ಮನೇ ಇರ್ತೀರಾ? ಯಾರಾದ್ರೂ ನಿಮ್ಮ ತಾಯಿಗೆ ನೋವುಂಟು ಮಾಡಿದ್ರೆ, ನನ್ನ ಪ್ರತೀಷ್ಟೇ ಹಾಳಾಗುತ್ತೆ ಅಂತ ಕೈ ಕಟ್ಟಿಕೊಂಡು ಕೂತ್ಕೊಂತೀರ?
ಇಲ್ಲ ತಾನೆ ತಾಯಿ ಯಾಕೆ, ಮನೆ ನಾಯಿಗೂ ಯಾರಾದ್ರೂ ಕಲ್ಲು ಎಸೆದರೆ, ಮೈ ಎಲ್ಲ ಬಿಸಿ ರಕ್ತದಿಂದ ಕುದಿಯುತ್ತೆ...
ಕಾವೇರಿಯೂ ನಮ್ಮ ತಾಯಿಯೇ ಅಲ್ಲವೇ?
ತಾಯಿನಾ ಬೇರೆಯವರಿಗೆ ಬಿಟ್ಟು ಕೊಡುವದು ಎಂದರೆ, ನಮ್ಮ ಶೀಲವನ್ನೇ ಕಳೆದುಕೊಂಡಂತೆ ಅಲ್ಲವೇ?
ಕಣ್ಣೆಡುರಿಗೆ ತಾಯಿನಾ ಬೇರೆಯವರು ಎಳೆದು ಕೊಂಡು ಹೋಗುತ್ತಿದ್ದಾರೆ ಅದನ್ನು ಸಮ್ಮತಿಸಲಾಗುವದೆ?
ಕನ್ನಡಿಗರು ಹೇಡಿಗಳಲ್ಲ, ನಾನೊಬ್ಬ ಕನ್ನಡಿಗ..
ಜ್ಞಾನಪೀಟ ಪ್ರಶಸ್ತಿ ಬಂದ ಮಾತ್ರಕ್ಕೆ, ತಿಳಿದಂತೆ ಹೇಳಿಕೆ ನೀಡುವದೇ...
ನ್ಯಾಯಾಲಯದಲ್ಲಿ ನ್ಯಾಯ ಸಿಕ್ಕಿಲ್ಲವೆಂದರೆ ಅದನ್ನು ಧಿಕ್ಕರಿಸುವದು, ಪ್ರಜಾಪ್ರಭುತ್ವ...
ಅದು ಬಿಟ್ಟು, ಅದನ್ನು ಸಮ್ಮತಿಸುವುದು ಹೇಡಿತನ..
ಗಿ.ಕಾ ನನ್ನು ಸಮರ್ಥಿಸುವ ಎಲ್ಲ ಹಿರಿಯರಿಗೆ ಇದರ ಅರಿವು ಇರಲಿ.
ಏನು ಬೇಕಾದರೂ ಹೇಳಿಕೆ ನೀಡಲು ಇದು ಪ್ರಜಾ ಪ್ರಭುತ್ವಅಂತಾ ಇದ್ದರೆ, ಭಾರತಮಾತೆಯನ್ನಾ ಬೈಯಲು ಸಮ್ಮತಿಸಿದಂತೆ.
ಅದನ್ನು ಈ ಹಿರಿಯರು ಒಪ್ಪಿಕೊಳ್ಳೂವರೆ?
ಎಷ್ಟು ಜ್ಞಾನ ಇದ್ದರೇನು, ಎಷ್ಟು ಪ್ರಶಸ್ತಿಗಳಿದ್ದರೇನು, ಮಾನವೀಯತೆ, ನಾಡಿನ ಮೇಲೆ ಪ್ರೇಮ ಇಲ್ಲದಿದ್ದರೆ ಎಲ್ಲ ಶೂನ್ಯ...
ಹಲ್ಲುಗಳೇ ಇಲ್ಲದವನ ಬಾಯಿಯಲ್ಲಿ ಕಡಲೆಯನ್ನು ಕೊಟ್ಟಂತೆ....
inthi nimmava,
-Ashu
Re: ಗಿರೀಶ್ ಕಾರ್ನಾಡ್ ಅನ್ನೋ ಕಾರ್ಮುಗಿಲನ್ನು ಕನ್ನಡ ನಾಡಿನಲ್ಲಿ ಉಸಿರಾಡಲು
ಇಂತಹ ಬುದ್ಧಿ ಇಲ್ಲದ ಬುದ್ಧಿಜೀವಿಗಳಿಗೆ ಧಿಕ್ಕಾರವಿರಲಿ.
Re: ಗಿರೀಶ್ ಕಾರ್ನಾಡ್ ಅನ್ನೋ ಕಾರ್ಮುಗಿಲನ್ನು ಕನ್ನಡ ನಾಡಿನಲ್ಲಿ ಉಸಿರಾಡಲು
ಗಿರೀಶ್ ಕಾರ್ನಾಡ್ ಎಂಬಾ ಮಾಹಾ ಮೂರ್ಖ ಸಾಹಿತಿಯನ್ನು ಕರ್ನಾಟಕದಿಂದ ಹೊರಗೆ ಓಡಿಸಬೇಕು.
Re: ಗಿರೀಶ್ ಕಾರ್ನಾಡ್ ಅನ್ನೋ ಕಾರ್ಮುಗಿಲನ್ನು ಕನ್ನಡ ನಾಡಿನಲ್ಲಿ ಉಸಿರಾಡಲು
ಬುದ್ದಿವಂತರು ಅನ್ನಿಸಿಕೊಂಡ ಜನ ಲದ್ದಿ ತಿನ್ನೊ ಕೆಲಸ ಮಾಡಿದರೆ ಅದನ್ನ ಸಹಿಸುವುದು ತುಂಬಾ ಕಷ್ಟ ಸ್ವಾಮಿ..ಗಿರೀಶ್ ಕಾರ್ನಾಡ್ ಯಾವತ್ತು ಈ ಕನ್ನಡ ನಾಡು ಮೆಚ್ಚುವಂತ ಕೃತಿಗಳನ್ನಾಗಲಿ ಬರೆದವರಲ್ಲ ಈ ನಾಡಿನ ಜನ ಮೆಚ್ಚುವಂತಹ ಜನಪರ ಹೋರಾಟಗಳಲ್ಲಿ ಪಾಲ್ಗೊಂಡವರಲ್ಲ.. ಅವರದೇನಿದ್ದರು ಎಂಜಲು ಸಾಹಿತ್ಯ. ಅವರಿಗೆ ಜ್ಞಾನಪೀಠ ಪ್ರಶಸ್ತಿ ಬಂದಿತ್ತು ಈ ಜಗತ್ತಿನ 8ನೇ ಅದ್ಭುತ. ಮತ್ತು ಅವರನ್ನ ಬುದ್ದಿಜೀವಿಗಳ ಸಾಲಿಗೆ ಸೇರಿಸಿದವರಿಗೆ ಬುದ್ದಿ ಇಲ್ಲ...ತಿನ್ನುವ ಅನ್ನಕ್ಕೆ ಮತ್ತು ಹೆತ್ತು ಹೊತ್ತ ತಾಯಿ ಭೂಮಿಯ ಬಗ್ಗೆ ಗೌರವವಿಲ್ಲದವರನ್ನ ಈ ಜಗತ್ತು ಯಾವತ್ತು ಕ್ಷಮಿಸುವುದಿಲ್ಲ....
ಕಾರ್ನಾಡರೆ ನಿಮಗೆ ನಾಚಿಕೆಯಾಗಬೇಕು...your sick...........
Re: ಗಿರೀಶ್ ಕಾರ್ನಾಡ್ ಅನ್ನೋ ಕಾರ್ಮುಗಿಲನ್ನು ಕನ್ನಡ ನಾಡಿನಲ್ಲಿ ಉಸಿರಾಡಲು
ಅದೆಲ್ಲ ಅಲ್ಲ ಅವ್ರಿಗೆ ಪ್ರಶಸ್ತಿಗಳ ಹುಚ್ಚು. ಅರ್ಹತೆಯಿಲ್ಲದಿದ್ದರು ಪೀಠಿಗಳಾದ್ರು. ಇಗ ಅವ್ರ ಮುಮ್ಧೆ ಇರುವ ಗುರಿ ಪದ್ಮ (ಶ್ರೀ, ಭೂಷಣ, ವಿಭೂಷಣ) ಅದಕ್ಕೆ ಕನ್ನಡಿಗರನ್ನ ನಮ್ಬಿಕೊ೦ಡು ಕೂತ್ಕೊ೦ಡರೆ ಆಗಲ್ಲ ತಮಿಳುನಾಡಿನ ಲಾಬಿಗಳು ಇವರಿಗೆ ಅದನ್ನು ತ೦ದುಕೊಡಬಲ್ಲವು. ಹಿ೦ದೊಮ್ಮೆ ಇದೇ ಮಹಾಶಯ ಬ್ರಾಹ್ಮಣರನ್ನ ಬಯ್ದು ಚಿತ್ರ ತೆಗೆದರೆ ಪ್ರಶಸ್ತಿ ಕೊಡ್ತರೆ ಅದಕ್ಕೆ ತೆಗಿತಾ ಇದ್ದೆ ಈಗ ಅದಿಲ್ಲ ಅದಕ್ಕೆ ಅವ್ರನ್ನ ಬಯ್ಯಲ್ಲ ಅ೦ಥ ಹೇಳಿದ್ದ. ಅದರ ಅರ್ಥ ಪ್ರಶಸ್ತಿಗೋಸ್ಕರ ಏನ್ಬೇಕಾದ್ರು ಮಾಡ್ತನೆ ಆಸಾಮಿ.
ಇನ್ನು ಆತನ ಕೃತಿಗಳು ನಾವು ರಿಮೇಕ್ ಬಗ್ಗೆ ಹೊದ್ಕೋತಿವಿ! ಈ ಪುಣ್ಯಾತ್ಮನ ಒ೦ದೇ ಒ೦ದು ಸ್ವಮೇಕ್ ಕೃತಿ ತೋರಿಸಿ. ಎಲ್ಲ ನಮ್ಮ ಪೌರಾಣಿಕ ಇಲ್ಲ ಇತಿಹಾಸದಿ೦ಧ ಕದ್ದದ್ದು. ಇತಿಹಾಸವನ್ನ ಹೇಗೆ ಬೇಕಾದ್ರು ತಿರುಚಿ ಬರೆಯೋದು ಇದಕ್ಕೆ ಚೆನ್ನಾಗೆ ಬರತ್ತೆ. ಇದೇ ವಿಷಯಕ್ಕೆ ವಿ.ಕ ಪತ್ರಿಕೆಯಲ್ಲಿ ಮುಖಭ೦ಗ ಅನುಭವಿಸಿ ಬಾಯಿಮುಚ್ಚಿಕೊಳ್ಳದೆ ಬೇರೆ ದಾರಿಯೇ ಇರಲಿಲ್ಲ. ಇಷ್ಟೆಲ್ಲ ಹೇಳಿದ್ಮೇಲೆ ಒ೦ದು ವಿಷಯ ನಾಯಿ ಬೊಗಳಿದರೆ ದೇವಲೋಕ ಎನೂ ಹಾಳಾಗಲ್ಲ. ಈ ಬುದ್ದಿ ಇಲ್ಲದ ಜೀವಿಗಳ ಹಣೆಬರಹನೆ ಇಷ್ಟು. ಇವರಿಗೆ ಒ೦ದು ತರಹ ಖಾಯಿಲೆ ನಮ್ಮದು ಎನ್ನುವ ಎಲ್ಲದನ್ನು ವಿರೋಧಿಸುವ ಚಟ. ನಮ್ಮ ಭಾಷೆ, ನಮ್ಮ ಧರ್ಮ ನಮ್ಮ ನದಿ ಕೊನೆಗೆ ನಮ್ಮ ತಾಯಿ ಎಲ್ಲವನ್ನು ಕಣ್ಣುಮುಚ್ಚಿಕೊ೦ಡೆ ವಿರೋದಿಸುವುಧು ಅವ್ರ ಹುಟ್ಟುಗುಣ.
Re: ಗಿರೀಶ್ ಕಾರ್ನಾಡ್ ಅನ್ನೋ ಕಾರ್ಮುಗಿಲನ್ನು ಕನ್ನಡ ನಾಡಿನಲ್ಲಿ ಉಸಿರಾಡಲು
ಕನ್ನಡ ಲಿಪಿಯಲ್ಲಿ:
ಎತ್ತು ಏರಿಗೆ ಎಳೆದರೆ ಇವರದು ನೀರಿಗೆ ಎಳೆಯೋ ಸ್ವಭಾವ...ಇವರಿಗೆ ಜ್ಞಾನಪೀಠ ಯಾರು ಕೊಟ್ರೋ ಯಾಕೆ ಕೊಟ್ರೋ ಅರ್ಥಾ ಆಗೊಲ್ಲ.
ಮೊನ್ನೆ ಟಿಪ್ಪು ಸುಲ್ತಾನ್ ಬಗ್ಗೆ ಮಾತನಾಡಿ ಮುಖ ಭಂಗ ಮಾಡಿಸಿಕೊಂಡ್ರು. ಇನ್ನು ಬುದ್ಧಿ ಬಂದಿಲ್ಲಾ. ಬರೋ ಲಕ್ಷಣಾನೂ ಇಲ್ಲಾ ಬಿಡಿ. :(
ಕರ್ನಾಟಕದ ದುರದೃಷ್ಟ ಅಂದ್ರೆ, ಇಂಥಾ ಮಂದಿ ನಮ್ಮಲ್ಲಿ ಬೇಕಾದಷ್ಟು ಸಿಕ್ತಾರೆ :(
------------------------------------------------------------------------
ಒರಿಜಿನಲ್:
yettu yerige yeledare ivaradu neerige yeleyo swabhava...ivarige peetha yaru kotro yake kotro artha aagolla. monne tippu sultan bagge mathanadi mukha bhange maadisi kondru. innu buddhi bandilla. baro lakshananu illa bidi :( karnatakada duradrushtha andre, intaha mandi nammalli bekadashtu siktare :(
Re: ಗಿರೀಶ್ ಕಾರ್ನಾಡ್ ಅನ್ನೋ ಕಾರ್ಮುಗಿಲನ್ನು ಕನ್ನಡ ನಾಡಿನಲ್ಲಿ ಉಸಿರಾಡಲು
ಆಂಗ್ಲ ಭಾಷೆಯಲ್ಲಿ ಕಂಗ್ಲೀಷ್ ಬರೆದ ಕನ್ನಡಿಗರ ಗಮನಕ್ಕೆ :
ನೀವು ನಿಮ್ಮ ಪ್ರತಿಕ್ರಿಯೆಯನ್ನ ತುಂಬಾ ಸುಲಭವಾಗಿ ಕನ್ನಡದಲ್ಲಿ ಬರೆಯಬಹುದು.
ಅದಕ್ಕಾಗಿ, www.quillpad.com/kannada/ ಸೈಟನ್ನು ಉಪಯೋಗಿಸಿ.
inthi nimmava,
-Ashu
Re: ಗಿರೀಶ್ ಕಾರ್ನಾಡ್ ಅನ್ನೋ ಕಾರ್ಮುಗಿಲನ್ನು ಕನ್ನಡ ನಾಡಿನಲ್ಲಿ ಉಸಿರಾಡಲು
ಕಾರ್ನಾಡ್ ಅವರ ಹೇಳಿಕೆ ತಪ್ಪು ನಿಜ ಆದರೆ ಅವರು ಜ್ಞಾನಪೀಠ ಪ್ರಶಸ್ತಿಯನ್ನು ಕನ್ನಡಕ್ಕೆ ತಂದು ಕೊಟ್ಟ ಗೌರವಕ್ಕಾದ್ರೂ ಅವರನ್ನು ನಾವೆಲ್ಲ ಮನ್ನಿಸಬೇಕು ಎಂಬುದು ನನ್ನ ಅನಿಸಿಕೆ
Re: ಗಿರೀಶ್ ಕಾರ್ನಾಡ್ ಅನ್ನೋ ಕಾರ್ಮುಗಿಲನ್ನು ಕನ್ನಡ ನಾಡಿನಲ್ಲಿ ಉಸಿರಾಡಲು
ಇನ್ನೂ ಉಸಿರಾದೋದಿಕ್ಕೆ ಬಿಡ್ ಬೇಕು ಅಂತ ಕೇಳ್ತಾ ಇದ್ದೀರಾ ಮೊದಲು ಹೊರಗೆ ಹಾಕ್ಬೇಕು