Skip to main content

ಮುಂಗಾರು ಮಳೆ - ಬ್ಲಾಕ್ ಬಸ್ಟರ್

ಇಂದ mungaarumale
ಬರೆದಿದ್ದುFebruary 2, 2007
27ಅನಿಸಿಕೆಗಳು

ಮುಂಗಾರು ಮಳೆ - ಬ್ಲಾಕ್ ಬಸ್ಟರ್

ರಾಜ್ಯದಾದ್ಯಂತ ಮುಂಗಾರು ಮಳೆ.. ಏನಿದು ಅಚ್ಚರಿ? .. ಕಾಮಿಡಿ ಟೈಮ್ ಗಣೇಶ್ ಅಭಿನಯದ ಮುಂಗಾರು ಮಳೆ ರಾಜ್ಯದೆಲ್ಲೆಡೆ ಆರನೆ ವಾರದಲ್ಲಿ ಹೌಸ್ ಫೂಲ್ ಆಗಿ ಓಡುತ್ತಿದೆ .. ಈಗಾಗಲೇ ಈ ಚಿತ್ರವನ್ನು ಸೂಪರ್ ಹಿ ಟ್ ಎಂದು ಪರಿಗಣಿಸಲಾಗಿದೆ.. 2.5 ಕೋಟಿ ವೆಚ್ಚ ದಲ್ಲಿ ತಯಾರಾದ ಈ ಚಿತ್ರ, 20 ಕೋಟಿ ಲಾಭ ತರುವ ನಿರೀಕ್ಷೆ ಇದೆ. ಆಪ್ತ ಮಿತ್ರ ಚಿತ್ರದ ದಾಖಲೆಯನ್ನು ಇದು ಮುರಿಯುವುದು ಬಹುತೇಕ ಖಚಿತವಾಗಿದೆ.

ಅನಿಸುತಿದೆ ಯಾಕೋ ಇಂದು ಗೀತೆ ಕ ರ್ನಾಟಕದ ನಾಡ ಗೀತೆಯಾಗಿದೆ. ಬೆಂಗಳೂರಿನ ಮೂಲೆ ಮೂಲೆಯಲ್ಲೂ ಈ ಹೃದಯ ಕೊರೆಸುವ ಹಾಡು ಪ್ರತಿಧ್ವನಿಸುತ್ತಿದೆ.

ಈ ಚಿತ್ರವನ್ನು ಒಂದಕ್ಕೂ ಹೆಚ್ಚು ಭಾರಿ ನೋಡುತ್ತಿರುವವರ ಸಂಖ್ಯೆ ಕೂಡ ಚಿಕ ನ್ ಗುಣಿಯ ರೋಗದ ರೀತಿ ಹರಡುತ್ತಿದೆ. ನಾನೇ ಈ ಚಿತ್ರವನ್ನು ನಾಲ್ಕು ಭಾರಿ ನೋಡಿದ್ದೇನೆ. ನನ್ನ ಸ್ನೇಹಿತ ಒಬ್ಬ 6 ಬಾರಿ ಈ ಚಿತ್ರವನ್ನು ನೋಡಿದ್ದಾನೆ. ನಾನು ಕನಿಷ್ಟ ಪಕ್ಷ ಎಂದರೂ 10-15 ಭಾರಿ ನೋಡುವುದಕ್ಕೆ ಸ್ಕೆಚ್ ಹಾಕಿದ್ದೇನೆ. ಕುಮಾರ್ ದೇವ್ ಎನ್ನುವವರೊಬ್ಬರು, 9 ಭಾರಿ ನೋಡಿದ್ದಾರೆ. ಹೀಗೆ ನೋಡಿದವರೇ ಮತ್ತೆ ಮತ್ತೆ ನೋಡಿಯೇ ಈ ಚಿತ್ರ ಸೂಪರ್ ಹಿ ಟ್ ಆಗಿದೆ. ಇನ್ನೂ ಈ ಸಿನಿಮಾವನ್ನು ನೋಡದವರ ಸಂಖ್ಯೆ ಶೇಖ ಡ 70 ಇದೆ. ಅವರೆಲ್ಲರೂ ಒಮ್ಮೆ ಈ ಚಿತ್ರವನ್ನು ನೋಡಿಬಿಟ್ಟರೆ, ಕನ್ನಡ ಚಿತ್ರ ರಂಗದ ಬಿಗ್ಗೆಷ್ಟ್ ಹಿ ಟ್ ಆಗುವುದರಲ್ಲಿ ಸಂಶಯ ಇಲ್ಲ.

ಈ ಚಿತ್ರದ ವಿಶೇಷತೆ ಎಂದರೆ, ಕನ್ನಡ ಚಿತ್ರಗಳನ್ನು ಹೆಚ್ಚಾಗಿ ನೋಡದ ಸಾಫ್ಟ್ ವೇರ್ ಇಂಜಿನೀರ್ ಗಳು, ಮುಗಿ ಬಿದ್ದು ನೋಡುತ್ತಿರುವುದು. ಪಿ.ವಿ.ಆರ್ ಸಿನಿಮಾ ಮಂದಿರದಲ್ಲಿ, ವಾರದ ದಿನಗಳಲ್ಲಿ, ಮಾರ್ನಿಂಗ್ ಶೋ ಫೂಲ್ ಆಗುತ್ತಿರುವ ಒಂದೇ ಒಂದು ಚಿತ್ರ ಎಂದರೆ ಮುಂಗಾರು ಮಳೆ. ಕನ್ನಡ ಚಿತ್ರಗಳನ್ನು ಕಡೆಗಾನಿಸುವ ಪಿ.ವಿ.ಆರ್ ಚಿತ್ರಮಂದಿರದ ಇತಿಹಾಸದಲ್ಲೇ ಮುಂಗಾರು ಮಳೆ ಒಂದು ದಾಖಲೆ ಮಾಡುವ ದಿನ ದೂರವಿಲ್ಲ.

ಯಾವ ಚಿತ್ರಮಂದಿರದಲ್ಲೂ ಟೀಕೆ ಟ್ ಗಳು ಲಭ್ಯವಿಲ್ಲ.. ನಾನು ನಾಲ್ಕು ಬಾರಿಯೂ ಈ ಚಿತ್ರವನ್ನು ಬ್ಲಾಕ್ ಕೊಟ್ಟು ನೋಡಿದ್ದೇನೆ. ನಾನು ಮೂರನೇ ಬಾರಿ ಸಿನಿಮಾ ನೋಡಲು, ಪ್ರಮೋದ್ ಚಿತ್ರಮಂದಿರಕ್ಕೆ ಹೋದಾಗ, ಬ್ಲಾಕ್ ಟಿ ಕೆ ಟ್ ಗಾಗಿ ಜನ ಥಿಯೇಟರ್ ಕಾಂಪೌಂಡ್ ಒಳಗೆ ಗುಡ್ಡಾ ಡಿ, ಗಲಾಟೆ ಮಾಡಿದಾಗ, ಪರಿಸ್ಥಿತಿ ನಿಯಂತ್ರಿಸಲು, ಹೊಯ್ಸಳ ದವರು ಬರಬೇಕಾಯ್ತು.

ಮುಂಗಾರು ಮಳೆ - ಅಬ್ಬಾ, ಎಂಥ ವಿಸ್ಮಯಗೊಳಿಸುವ ಮಹಾನ್ ಚಿತ್ರ. ನನ್ನ ಜೀವಮಾನದಲ್ಲಿ ಚಿತ್ರಮಂದಿರದಲ್ಲಿ ನೋಡಿದಂತ ಅತ್ಯುತ್ತಮ ಚಿತ್ರ.

ನಾನು ಈಗಾಗಲೇ 4 ಬಾಗಿ ಈ ಚಿತ್ರವನ್ನು ನೋಡಿದ್ದೇನೆ. ಎರಡು ಬಾರು ಈಶ್ವರಿ ಚಿತ್ರ ಮಂದಿರದಲ್ಲಿ, ಎರಡು ಬಾರಿ ಪ್ರಮೋದ್ ಚಿತ್ರಮಂದಿರದಲ್ಲಿ. ನಾಲ್ಕು ಬಾರಿಯೂ ಕಾಲ ಸಂತೆಯಲ್ಲಿ ನೂರರಿಂದ ನೂರೈವತ್ತು ರೂಪಾಯಿಗಳನ್ನು ಕೊಟ್ಟು ನೋಡಿದ್ದೇನೆ. ಆದರೂ ಇನ್ನೂ ಮನಸ್ಸಿಗೆ ಸಮಾಧಾನ ಇಲ್ಲ. ಮುಂಗಾರು ಮಳೆಯನ್ನು ಇನ್ನೂ ನೋಡುವ ಆಸೆ. ಸಿನಿಮಾ ಚಿತ್ರಮಂದಿರದಿಂದ ತೆರಾವಾಗುವುದರಲ್ಲಿ, ಕನಿಷ್ಟ ಪಕ್ಷ 10-15 ಬಾರಿ ನೋಡುವ ಇರಾದೆ ಇದೆ.

ನೀವು ಈ ಚಿತ್ರವನ್ನು ತಪ್ಪಿಸಿಕೊಂಡರೆ, ನಿಮ್ಮ ಜೀವ ಮಾನದ ಹಲವು ಮಧುರ ಕ್ಷಣಗಳನ್ನು ಕಳೆದುಕೊಳ್ಳುವಿರಿ ಎಂದು ಮಾತ್ರ ಹೇಳಬಲ್ಲೆ.

ಮುಂಗಾರು ಮಳೆ.. ಅಬ್ಬಾ, ಇದು ಸಿನೆಮಾ ಅಲ್ಲ, ಒಂದು ಸುಂದರ ಪಯಣ, ಒಂದು ಸುಂದರ ಅನುಭವ.. ಮರೆಯಲಾಗದ ಸವಿ ನೆನಪು.. ಮುಂಗಾರು ಮಳೆ ಸಿನಿಮಾ ನೋಡಿದ ಮೇಲೆ, ನನ್ನ ಜೀವನದಲ್ಲಿ ಒಂದು ರೀತಿಯ ಸಂತೋಷ ಆವರಿಸಿದೆ.

ಸಿನಿಮಾದಲ್ಲಿ ನಮ್ಮ ಗಣೇಶ್ ಹೀರೋಯಿನ್ ಗೆ ಒಂದು ಡೈಲಾಗ್ ಹೇಳುತ್ತಾರೆ 'ನೀವು ನಂಗ್ ಸಿಕ್ಲಿಲ್ಲ ಅಂತ ನಂಗೆ ಬೇಜಾರಿಲ್ಲ ರೀ.. ನಿಮ್ ಜೊತೆ ಕಳೆಡನಲ್ಲ ಈ ನಾಲ್ಕ್ ದಿವಸ ಅಷ್ಟೇ ಸಾಕು.. ಅದನ್ನೇ ರೆವೈಂಡ್ ಮಾಡ್ಕೊಂಡ್ ಹೇಗೋ ನನ್ನ ಜೀವನ ಕಳೆದು ಬಿಡ್ತೀನಿ..'

ಇದೆ ರೀತಿ, ನಂಗೆ ಜೀವನದಲ್ಲಿ ಇನ್ನೂ ಯಾವ ಸಿನೆಮಾ ನೋಡದೇ ಹೋದ್ರೂ ಪರ್ವಾಗಿಲ್ಲ.. ಮುಂಗಾರು ಮಳೆ ಯನ್ನ ರೆವೈಂಡ್ ಮಾಡ್ಕೊಂಡ್, ಹೇಗೋ ಜೀವನ ಕಳೆದು ಬಿಡ್ತೀನಿ..

ಥ್ಯಾಂಕ್ ಯು ಮುಂಗಾರು ಮಳೆ ಅಕ ಥ್ಯಾಂಕ್ ಯು ಕಣ್ರೀ ನಂದಿನಿ

ಮುಂಗಾರು ಮಳೆ - ಕನ್ನಡಿಗರ ಹೆಮ್ಮೆ

ಲೇಖಕರು

mungaarumale

ನಾನೊಬ್ಬ ತರಲೇ

ಅನಿಸಿಕೆಗಳು

ashu ಸೋಮ, 02/05/2007 - 11:54

ಎನ್ ಸಾರ್, ಮುಂಗಾರು ಮಳೆ ಚಿತ್ರದ ಬಗ್ಗೆ ಇಷ್ಟೊಂದು ಆಸಕ್ತಿ ತೋರಿಸ್ತಿದಿರಾ?
ಎನ್ ವಿಷಯಾ? ಎಲ್ಲಿ ನಿಮದು same story ಅಲ್ಲಾ ತಾನೆ :)

inthi nimmava,
-Ashu

mungaarumale ಸೋಮ, 02/05/2007 - 13:00

:-) ಬರೀ ನಂದೊಬ್ಬನ ಸ್ಟೋರಿ ಅಲ್ಲ ಸಾರ್.. ಇದು ನನ್ನ ಸ್ಟೋರಿ, ನಿಮ್ಮ ಸ್ಟೋರಿ.. ಪ್ರತಿಯೊಬ್ಬ ಹೃದಯವಿರುವ, ಪ್ರೀತಿಗೆ ಹಂಬಲಿಸುವ ಮನುಷ್ಯನ ಕಥೆ ಈ ಮುಂಗಾರು ಮಳೆ ..

ನೆನ್ನೆ ಪ್ರಮೋದ್ ಚಿತ್ರಮಂದಿರಕ್ಕೆ 5 ನೇ ಬಾರಿ ಮುಂಗಾರು ಮಳೆ ನೋಡಲು ಹೋಗಿದ್ದೆ.. ನಂಬಿದರೆ ನಂಬಿ ಬಿಟ್ಟರೆ ಬೀದಿ, 4.30 ಆಟಕ್ಕೆ ನನಗೆ ಬ್ಲಾಕ್ ಟಿಕೆಟ್ ಕೂಡ ಸಿಗಲಿಲ್ಲ.. ನನ್ನ ಅದೃಷ್ಟ 7.30 ಷೋಗೆ ಬ್ಲಾಕ್ ಟಿಕೆಟ್ ಸಿಕ್ತು.. ಪ್ರತಿ ಸತಿ ಈ ಸಿನಿಮಾಗೆ ಹೊ ದಾ ಗ್ಲೂ, ಏನಾದರೂ ಒಂದು ಹೊಸ ವಿಷಯ ನನ್ನ ಮನಸ್ಸು ಕಲಕುತ್ತಿದೆ. ನೆನ್ನೆ ನೋಡುವಾಗ, ಸಿನಿಮಾದಲ್ಲಿ ಹೆಸರು ತೋರಿಸುವಾಗ, ಮುಂಗಾರು ಮಳೆಯೆಯ ಟೈಟಲ್ ಟ್ರಾಕ್ ಅನ್ನು ಬರೀ ವಾದ್ಯಗಳಿಂದ ನುಡಿಸುತ್ತಾರೆ. ಅದನ್ನು ಕೇಳಿ ಹೃದಯ ತುಂಬಿ ಬಂದತಾಯ್ತು.

ನೀವು ಸಿನಿಮಾ ನೋಡಿದ್ದೀರಾ ಸಾರ್? ನೋಡಿಲ್ಲವಾದರೆ ದಯವಿಟ್ಟು ಹೋಗಿ ನೋಡಿ ಬನ್ನಿ ಸಾರ್. ಈ ಸಿನಿಮಾದ ಹ್ಯಾಂಗ್ ಓವರ್ ನಿಮ್ಮನ್ಣ 3-4 ದಿವಸ ಕಾಡಲಿಲ್ಲ ಎಂದರೆ ನನಗೆ ಹೇಳಿ.

ನಿಜವಾಗಲೂ ಇದೊಂದು ಸಿನಿಮಾ ಅಲ್ಲ, ಮಾಯೆ. ಆ ಮಾಯೆ ನಿಮ್ಮನ್ನ ಯಾವ ಪರಿ ಆವರಿಸುತ್ತದೆ ಎಂದರೆ, ಅದರಿಂದ ಆಚೆ ಬರುವುದು ಬಾರಿ ಕಷ್ಟ.

"ಒಂದಲ್ಲ ಒಂದ್ ದಿವಸ ನಾನು ಸತ್ತು ಹೋಗ್ತೀನಿ ರೀ.. ಆದ್ರೆ, ಸತ್ತ ಮೇಲೂ ನಿಮ್ಮನ್ನ ಇಷ್ಟ ಪಡ್ತೀನಿ ರೀ.."

"ಧ್ಯಾಂಕ್ ಯು ಕಣ್ರೀ ನಂದಿನಿ.. ಪ್ರೀತಿ ವಿಚಾರದಲ್ಲಿ ನನ್ನ ಕಣ್ಣು ಓಪೆನ್ ಮಾಡಿದ ದೇವತೆ ನೀವು.. ಈ ಕಣ್ಣು ಕ್ಲೋಸ್ ಆಗಿ ಮಣ್ಣು ಸೇರಿದ್ರೂ, ನನ್ನ ಪ್ರೀತಿ ಸಾಯಲ್ಲ ರೀ.. ಪ್ರೀತಿ ದೇವತೆ ಕಣ್ರೀ ನೀವು.."

adesh (ಪ್ರಮಾಣಿಸಲ್ಪಟ್ಟಿಲ್ಲ.) ಭಾನು, 03/04/2007 - 16:43

ಕನ್ನಡ ಲಿಪಿಯಲ್ಲಿ:
ಐ ಲವ್ ಮುಂಗಾರು ಮಳೆ. ನನಗೆ ಈ ಫಿಲಂ ನೋಡಿ ತುಂಬಾ ಖುಷಿ ಆನಿಸ್ತು. ಅಯ್ಯೋ ಮುಗಿದುಹೋಯ್ತಲ್ಲ ಎನ್ನುವ ಅನಿಸಿಕೆ. ಎಲ್ಲಕನ್ನಡಿಗರಿಗೂ ಎಲ್ಲರಿಗೂ ಮೆಚ್ಚುಗೆಯಾದ ಫಿಲ್ಲಂ.
ಆ ಚಿತ್ರ ನೋಡಿ ನನಗೆ ಅಳು ಬಂತು. ಅದು ಲವ್ ಫೇಲ್ಯೂರ್ ಅಗಿದ್ದಕ್ಕಲ್ಲ ದೇವದಾಸ ಸತ್ತುಹೋಗಿದ್ದಕ್ಕೆ ಗಣೇಶ ಅಳುವದನ್ನ್ಯು ನೋಡಿ, ಒಟ್ಟಿನಲ್ಲಿ ಇಂತದೇ ಫಿಲ್ಲಂ ತೇಗಿರೀ.
ಥ್ಯಾಂಕ್ಸ್ ಮುಂಗಾರು ಮಳೆ ಟೀಮ್
ಇಂತಿ ನಿಮ್ಮ ಅಭಿಮಾನಿ ಆದೇಶ್ ಜಕ್ಕೂರ್ ರಮೇಶ್ ಬಿಲ್ಡಿಂಗ್ ಯಲಹಂಕ (ಟಿ) ಬೆಂಗಳೂರು 64

----------------------------------------------------------------------------------------
ಒರಿಜಿನಲ್:

I LOVE MUNGAARUMALE nanage e fillm nodi tumba kushi anisitu.ayyo mugiduhoyitalla ennuva anisike.ellakannadigarigu ellarigu mechhugeyaada fillm.
aa chitra nodi nanage alu bantu .adu love feloure agidakalla devadaas sattuhogidakke ganesh aluvudannu nodi,ottinalli inttade
fillm tegeiri.
thanks mungaarumale team.
inti nimma abhimaani adesh jakkur ramesh bullding yelahanka (t)
bangalore 64.

ashu ಸೋಮ, 02/05/2007 - 13:30

ಮುಂಗಾರು ಮಳೆ ಸಾರ್,

ನಾನಿನ್ನೂ ಆ ಚಿತ್ರಾನಾ ನೋಡಿಲ್ಲ. ನಾನಿರೋದು ಹೈದೇರಾಬಾದ್ ನಲ್ಲಿ, ಕನ್ನಡ ಚಿತ್ರ ನೋಡುವ ಭಾಗ್ಯ ಆ ದೆವರು ಕೊಟ್ಟಿಲ್ಲ.
ಜೋಗಿ ನಂತರ ಯಾವ ಚಿತ್ರಾನು ಇಲ್ಲಿ ನೋಡಿಲ್ಲ. ಎನ್ ನೋಡಿದ್ರೂ online ನಲ್ಲಿ ಮಾತ್ರ.

ಊರಿಗೆ ಹೋದಾಗ, ಬರೀ ಕನ್ನಡ ವಿಸಿದಿ, ಡಿವಿಡಿ ಹುಡುಕಿ ತರೋದೆ ದೊಡ್ಡ ಕೆಲ್ಸಾ..

ಇನ್ನೊಂದು ವಿಚಾರ ಹೇಳ್‌ಬೇಕು ಅಂದ್ರೆ, ನಂಗೆ ಸಿನೆಮಾ ಅಂತ್ಯದಲ್ಲಿ ಸುಖಾಕರವಾಗಿ ಇರಬೇಕು.

ನಂಗೆ ಹಾಸ್ಯ ತುಂಬಾ ಇಷ್ಟ. ಆದ್ರೆ ಸ್ನೇಹಿತರು ಹೇಳ್ತಾ ಇದಾರೆ, ಮುಂಗಾರು ಮಳೆ, ತುಂಬಾ ಸೂಕ್ಷ್ಮ ಚಿತ್ರ ಅಂತ

ಅದಕ್ಕೆ ಒಂದು ಹೆಜ್ಜೆ ಹಿಂದೆ ಹಾಕಿ, ನೋಡ್‌ಬಾರ್ದೂ ಅಂದು ಕೊಂಡಿದ್ದೇನೆ :)

inthi nimmava,
-Ashu

ಅನಾಮಿಕ (ಪ್ರಮಾಣಿಸಲ್ಪಟ್ಟಿಲ್ಲ.) ಸೋಮ, 02/05/2007 - 13:46

ಅಲ್ಲ ಅಶು ಅವರೇ.. ಏನಂಥ ಮಾತಾಡ್ತೀರಿ ನೀವು.. ಕ್ಲೈಮಾಕ್ಶ್ ಥಿಲ್ಕೊಂಡು ಫಿಲ್ಮ್‌ಗೆ ಹೋಗೋದ?? ಫಿಲ್ಮ್ ಅನ್ನೋಧು ಬಾರಿ ಎಂಟೆರ್‌ಟೈಂಮೆಂಟ್.. ಅಷ್ಟೇ ಕ್ಲೀಮಕ್ಶ್ ಹೇಗಿತೋ ಬಿಡ್ತೋ, ಪೂರ್ತಿ ಮಜ ಕೊಡ್ಬೇಕು ಅಸ್ಥೆ.. ಶೊಲಾಯ್, ಜೋಗಿ ಎಲ್ಲ ದುರಂತ ಕ್ಲೈಮಾಕ್ಶ್ ಇರೋಧೆ.. ಸುಮ್ನೇ ಮುಂಗಾರು ಮಳೆ ನೋಡಿ.. ಎಂಜೋಯ್ ಮಾಡಿ..

mungaarumale ಸೋಮ, 02/05/2007 - 15:40

ನೀವು ಮುಂಗಾರು ಮಳೆ ಸಿನೆಮಾ ನೋಡ್‌ಬಾರ್ದೂ ಅಂತಿಡೀರಾ?.. ಸರಿ ಹಾಗಿದ್ರೆ, ಇನ್ ಮೇಲೆ, ಕನ್ನಡ ಸಿನಿಮಾ ನೋಡೋದೇ ಬಿಟ್ ಬಿಡಿ.. ಯಾಕೆ ಅಂದ್ರೆ, ಕನ್ನಡ ಚಿತ್ರ ಪ್ರೇಮಿ ಆಗಿ, ಮುಂಗಾರು ಮಳೆ ಸಿನಿಮಾ ನೋಡ್ಲಿಲ್ಲ ಅಂದ್ರೆ, ಈ ಭೂಮಿ ಮೇಲೆ ಬದುಕಿರೋದೇ ದಂಡ :-) ..

ನಿಮಗೆ ಹಾಸ್ಯ ಇಷ್ಟ ಅಂದ್ರಿ ಅಲ್ವಾ?.. ಮುಂಗಾರು ಮಳೆಯಲ್ಲಿ ಹಾಸ್ಯ ಹಾಸು ಹೊಕ್ಕಾಗಿದೆ.. ಯಾವುದೇ ಕಾಮಿಡಿ ಚಿತ್ರದಲ್ಲಿಲ್ಲದ ಮನ ಉಲ್ಲಸಿತಗೊಳಿಸುವಂತಹ ಲಘು ಹಾಸ್ಯ ಚಿತ್ರದುದ್ದಕ್ಕೂ ಇದೆ.. ಇದನ್ನು ನೀವು ಮಿಸ್ ಮಾಡಿಕೊಂಡರೆ, ಬಹುಶಹ ನೀವು ಹಿಂದಿನ ಜನ್ಮದಲ್ಲಿ ಏನೋ ಪಾಪ ಮಾಡಿದ್ದಿರಬಹುದು ಎಂದು ನನ್ನ ಭಾವನೆ :-) .. ನಿಮ್ಮ ಹತ ಭಾಗ್ಯಕ್ಕೆ ನನ್ನ ಅನುಕಂಪವಿದೆ :-)

ನೀವ್ ನೋಡ್ತೀರೋ ಬಿಡ್ತೀರೋ, ನಾನಂತೂ ಈ ಸಂಡೆ, ಅಮೋಘ 6 ನೇ ಭಾರಿ ಮುಂಗಾರು ಮಳೆ ನೋಡಕ್ಕೆ ಹೋಗ್ತೀನಿ.. ಆಗಲೇ ಹೇಳಿದ ಹಾಗೆ 10-15 ಭಾರಿನಾದ್ರೂ ವೀಕ್ಷಿಸ್ತೀನಿ, ನಿಮ್ದೂ ಸೇರ್‌ಕೊಂಡು :-)..

ಮುಂಗಾರು ಮಳೆ - ಕನ್ನಡಿಗರ ಹೆಮ್ಮೆ

ashu ಮಂಗಳ, 02/06/2007 - 12:19

ಅಲ್ಲ ಸಾರ್ ಒಂದ್ ಚಿತ್ರಕ್ಕೆ ಹೀಗ್ ಅಂತಿದಿರಾ....
ಹಾಗಿದ್ರೆ, ಮೊದ್ಲು ಬಂದ ಚಿತ್ರಗಳು ಚೆನ್ನಾಗಿ ಇಲ್ಲ ಅಂತ ನಿಮ್ಮ ಭಾವನೆ ನಾ, ಅಥವಾ ಮುಂದೆ ಇಂಥ ಚಿತ್ರಗಳು ಬರೋದೆ ಇಲ್ಲ ಅಂತಾನಾ?

ಕಳೆದ ವರ್ಷ, ಜೋಗಿ ಚಿತ್ರ ಬಂದಾಗ್ಲೂ ಜನಾ ಹೀಗೆ ಹೇಳಿದ್ರು, ಈಗ ನೀವು ಮುಂಗಾರು ಮಳೆ ಅಂತಿದಿರಾ.

ಅದು ನಿಮ್ ಭಾವನೆ ಅಷ್ಟೇ
ಅಲ್ಲ ಒಂದು ದುಃಖ ಭರಿತ ಚಿತ್ರ ನೋಡೋಕೆ ಹೇಳ್ತಾ ಇದೀರಲ್ಲ ಸಾರ್ ನೀವು.

ನಾನ್ ಚಿತ್ರ ನೋಡೋದೇ ತಲೆಲಿ ಇರೋ ಟೆನ್ಶನ್ ತೆಗೆದು ಹಾಕೋಕೆ. ಅದು ಬಿಟ್ಟು ಅಸಲಿನ ಜೊತೆ ಚಕ್ರಬಡ್ದಿ ಸೇರಿಸಿಕೊಂಡು ಬರೋದಕ್ಕೆ ಅಲ್ಲ :)

ಹುಚ್ಚ ಚಿತ್ರ ನೋಡಿ, ಸುದೀಪ್ ಹಾಗೂ ನಿರ್ದೇಶಕ ನನ್ನ ನೂರ್ ಸತಿ ಬೈದಿಡೀನಿ.

ಚಿತ್ರಗಲ್ಲಿ ಸುಕಾಂತ್ಯ ಹಾಗೂ ಹಾಸ್ಯ ಇರ್ಬೆಕ್ ಸಾರ್, ಆಗ್ಲೇ ಅಲ್ವಾ, ಅದ್ರಿಂದ ನಾವ್ ಏನಾದ್ರೂ ಕಲಿಯೋಕೆ ಆಗೋದು.

ಅದ್ ಬಿಟ್ಟು, ಅವಳು ಪ್ರೀತಿ ಮಾಡ್ಲಿಲ್ಲ ಅಂತ ...

ಬೇಡಾ ಬಿಡಿ, ಇನ್ನ ಮತ್ತೆ ಇಲ್ಲಿ ಪ್ರೇಮ ಸಮರ ಶುರು ಆಗುತ್ತೆ.

inthi nimmava,
-Ashu

ashu ಮಂಗಳ, 02/06/2007 - 12:19

ಅಲ್ಲ ಸಾರ್ ಒಂದ್ ಚಿತ್ರಕ್ಕೆ ಹೀಗ್ ಅಂತಿದಿರಾ....
ಹಾಗಿದ್ರೆ, ಮೊದ್ಲು ಬಂದ ಚಿತ್ರಗಳು ಚೆನ್ನಾಗಿ ಇಲ್ಲ ಅಂತ ನಿಮ್ಮ ಭಾವನೆ ನಾ, ಅಥವಾ ಮುಂದೆ ಇಂಥ ಚಿತ್ರಗಳು ಬರೋದೆ ಇಲ್ಲ ಅಂತಾನಾ?

ಕಳೆದ ವರ್ಷ, ಜೋಗಿ ಚಿತ್ರ ಬಂದಾಗ್ಲೂ ಜನಾ ಹೀಗೆ ಹೇಳಿದ್ರು, ಈಗ ನೀವು ಮುಂಗಾರು ಮಳೆ ಅಂತಿದಿರಾ.

ಅದು ನಿಮ್ ಭಾವನೆ ಅಷ್ಟೇ
ಅಲ್ಲ ಒಂದು ದುಃಖ ಭರಿತ ಚಿತ್ರ ನೋಡೋಕೆ ಹೇಳ್ತಾ ಇದೀರಲ್ಲ ಸಾರ್ ನೀವು.

ನಾನ್ ಚಿತ್ರ ನೋಡೋದೇ ತಲೆಲಿ ಇರೋ ಟೆನ್ಶನ್ ತೆಗೆದು ಹಾಕೋಕೆ. ಅದು ಬಿಟ್ಟು ಅಸಲಿನ ಜೊತೆ ಚಕ್ರಬಡ್ದಿ ಸೇರಿಸಿಕೊಂಡು ಬರೋದಕ್ಕೆ ಅಲ್ಲ :)

ಹುಚ್ಚ ಚಿತ್ರ ನೋಡಿ, ಸುದೀಪ್ ಹಾಗೂ ನಿರ್ದೇಶಕ ನನ್ನ ನೂರ್ ಸತಿ ಬೈದಿಡೀನಿ.

ಚಿತ್ರಗಲ್ಲಿ ಸುಕಾಂತ್ಯ ಹಾಗೂ ಹಾಸ್ಯ ಇರ್ಬೆಕ್ ಸಾರ್, ಆಗ್ಲೇ ಅಲ್ವಾ, ಅದ್ರಿಂದ ನಾವ್ ಏನಾದ್ರೂ ಕಲಿಯೋಕೆ ಆಗೋದು.

ಅದ್ ಬಿಟ್ಟು, ಅವಳು ಪ್ರೀತಿ ಮಾಡ್ಲಿಲ್ಲ ಅಂತ ...

ಬೇಡಾ ಬಿಡಿ, ಇನ್ನ ಮತ್ತೆ ಇಲ್ಲಿ ಪ್ರೇಮ ಸಮರ ಶುರು ಆಗುತ್ತೆ.

inthi nimmava,
-Ashu

mungaarumale ಮಂಗಳ, 02/06/2007 - 13:25

ನಾನು ಈಗ ಮುಂಗಾರು ಮಳೆಯ ನಿಮಗೆ ಏನು ಹೇಳಿದರು, ಅದು ನಿಮಗೆ ರುಚಿಸುವ ಹಾಗೆ ಕಾಣಿಸುವುದಿಲ್ಲ ಸಾರ್. ಯಾಕೆಂದರೆ, ನೀವು ಚಿತ್ರದ ಕ್ಲೈಮ್ಯಾಕ್ಸ್ ಒಂದನ್ನು ಮುಂದಿಟ್ಟುಕೊಂಡು ಪೂರ್ವಾಗ್ರಹ ಪೀಡಿತರಾಗಿದ್ದೀರಾ.. ಕ್ಲೈಮ್ಯಾಕ್ಸ್ ಚಿತ್ರದ ಒಂದು ಭಾಗ ಅಷ್ಟೇ ಅದೇ ಚಿತ್ರವಲ್ಲ :-)..

ನಾನು ಮುಂಚೆಯೇ ಹೇಳಿದ ಹಾಗೆ, ಮುಂಗಾರು ಮಳೆಯಂತ ಚಿತ್ರ ದಶಕ ಅಥವಾ ಎರಡು ದಶಕಗಳಿಗೊಮ್ಮೆ ಬರುವ ಚಿತ್ರ. ಇದು ಕನ್ನಡಿಗರು ಹೆಮ್ಮೆ ಪಡುವಂಥ ಚಿತ್ರ. ಇದನ್ನು ನೋಡದಿದ್ದಾರೆ, ಅದು ಮುಂಗಾರು ಮಳೆಯ ನಷ್ಟ ಅಲ್ಲ, ಅದನ್ನು ನೋಡದಿರುವವರ ನಷ್ಟ. ಪಾಪ ಮಾಡಿದವರು ಮಾತ್ರ ಇಂಥ ಶಿಕ್ಷೆಗೆ ಒಳಗಾಗುತ್ತಾರೆ :-)

ನಾನು ಜೋಗಿ ಚಿತ್ರದ ಬಗ್ಗೆಯಾಗಲಿ, ಹುಚ್ಚ ಚಿತ್ರದ ಬಗ್ಗೆಯಾಗಲಿ ಅಥವಾ ಮುಂದೆ ಬರುವ ಚಿತ್ರಗಳ ಬಗ್ಗೆ ಮಾತನಾಡಲಿಲ್ಲವಲ್ಲ :-) .. ನಾನು ಮಾತನಾಡುತ್ತಿರುವುದು ಮುಂಗಾರು ಮಳೆ ಚಿತ್ರದ ಬಗ್ಗೆ ಮಾತ್ರ.. ಮುಂಗಾರು ಮಳೆ, ಒಂದು ಚಿತ್ರವಲ್ಲ, ಅದೊಂದು ವಿಸ್ಮಯ :-) ..

ಮುಂಗಾರು ಮಳೆ
ಕನ್ನಡಿಗರ ಹೆಮ್ಮೆ

mungaarumale ಮಂಗಳ, 02/06/2007 - 13:12

ಕಳೆದ ಭಾನು ವಾರ ಟಿ.ವಿ 9 ಕನ್ನಡ ನ್ಯೂಸ್ ವಾಹಿನಿಯಲ್ಲಿ, ಮೇಕಿಂಗ್ ಆಫ್ ಮುಂಗಾರು ಮಳೆ ಎನ್ನುವ ಕಾರ್ಯಕ್ರಮವನ್ನು ಒಂದು ಘಂಟೆಗಳ ಕಾಲ ಪ್ರಸಾರ ಮಾಡಲಾಯಿತು. ಇದರಲ್ಲಿ, ಮುಂಗಾರು ಮಳೆ ಚಿತ್ರದ ನಿರ್ದೇಶಕ ಯೋಗರಾಜ್ ಭಟ್ ಹಾಗೂ ನಾಯಕ ಗಣೇಶ್ ಅವರುಗಳನ್ನು ಸಂದರ್ಶನ ಮಾಡಿ, ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿನ ಅವರ ಅನುಭವಗಳನ್ನು ಕೇಳಲಾಯಿತು.

ಯೋಗರಾಜ್ ಭಟ್ ರ ವರು ಹೇಳಿದ ಹಾಗೆ, ಚಿತ್ರದ ಪ್ರಾರಂಭದಲ್ಲಿ ಬರುವೆ ಕೊಚ್ಚೆ ಗುಂಡಿ ಎಪಿಸೋದನ್ನು, ಮಿಕ್ಕೆಲ್ಲ ಭಾಗದ ಚಿತ್ರೀಕರಣವಾದ ನಂತರ, ಕೊನೆಯದಾಗಿ ಚಿತ್ರೀಕರಿಸಲಾಯಿತಂತೆ. ಅದನ್ನು ಈಸ್ಕಾ ನ್ ದೇವಾಲಯದ ಮುಂದೆ ತೆಗೆಯಲಾಗಿದೆಯಂತೆ. ಗಣೇಶ್ರವರು ಕಾಲು ಜಾರಿ ಬೀಳುವ ಆ ಗುಂಡಿಯನ್ನು ಕೃತಕವಾಗಿ ನಿರ್ಮಿಸಲಾಗಿತ್ಟಂತೆ. ಅದರ ಆಳ ಸುಮಾರು 5 ಆಡಿ. ಗಣೇಶ್ರವರನ್ನು ಇದರಲ್ಲಿ ಒಂದು ಕ್ರೇ ನ್ ತರದ ಸಾಧನದಿಂದ ಆ ಗುಂಡಿಯಲ್ಲಿ ಇಳಿಸಲಾಗುತ್ತಿತ್ತಂತೆ. ಆ ಗುಂಡಿಯ ಒಳಗೆ, ಗಣೇಶ್ ಅವರು ಉಸಿರು ಬಿಗಿ ಹಿಡಿದು, ಹೀರೋಯಿನ್ ಬರುವವರೆಗೂ ನಿಂತಿದ್ದು, ನಂತರ ಕೈಯನ್ನು ಹೊರಗೆ ಹಾಕಬೇಕಿತ್ತಂತೆ. ಗುಂಡಿಯ ಒಳಗೆ ಇಳಿದ ಹಾಗೆ, ಅವರಿಗೆ ಸಮಯದ ಬಗ್ಗೆ ಗಮನವಿಡುವುದು ಕಷ್ಟವಾಗುತ್ತಿತ್ತಂತೆ. ಹೀರೋಯಿನ್ ಬರುವ ಸಮಯಕ್ಕೆ ಸರಿಯಾಗಿ, ತಮ್ಮ ಕೈ ಹಾಕುವ ಟೈಮಿಂಗ್ ಕಾಯ್ದು ಕೊಳ್ಳುವುದು ಅವರಿಗೆ ತೀರಾ ಕಷ್ಟವಾಯಿತಂತೆ. ಜೊತೆಗೆ, ಅಲ್ಲಿ ಜನರ ಹಿಂಡೇ ನೆರೆದಿತ್ತಂತೆ. ಅವರನ್ನು ತೆರವುಗೊಳಿಸಿ, ಚಿತ್ರೀಕರಣ ಮಾಡುವುದು ಒಂದು ಸಾಹಸ ಕಾರ್ಯವಾಯಿತಂತೆ.

ಚಿತ್ರದಲ್ಲಿ 'ಅನಿಸುತಿದೆ ಯಾಕೋ ಇಂದು' ಹಾಡಿನ ನಂತರ, ಗಣೇಶ್ ಅವರು ಕುಡಿದು 10 ನಿಮಿಷಗಳ ಕಾಲ ಮಾತನಾಡುವ ದೃಶ್ಯದ ಬಗ್ಗೆಯೂ ಯೋಗರಾಜ್ ಅವರು ತುಂಬಾ ವಿವರಗಳನ್ನು ನೀಡಿದರು. ಅವರು ಈ ದೃಶ್ಯವನ್ನು ಬರೆದಾಗ, ನಾಯಕ ಅಳುತ್ತಾ ಈ ಸಂಭಾಷಣೆಯನ್ನು ಹೀರೋಯಿನ್ ಗೆ ಹೇಳುವಾ ಹಾಗೆ ಅವರು ಅಂದುಕೊಂಡಿದ್ದರಂತೆ. ನಂತರ, ಚಿತ್ರೀಕರಣಕ್ಕೂ ಮುಂಚೆ, ಈ ದೃಶ್ಯದ ಸಂಭಾಷಣೆಯನ್ನು ಗಣೇಶ್ ಅವರಿಗೆ ಕೊಟ್ಟು, ಹೇಗೆ ಅವರು ಅದನ್ನು ಹೇಳಬಹುದೆಂದು ಪರೀಕ್ಷಿಸಿದರಂತೆ. ಆ ದೃಶ್ಯವನ್ನು ಗಣೇಶ್ ಹೇಳಿ ಮುಗಿಸುವ ಹೊತ್ತಿಗೆ, ಇಬ್ಬರ ಕಣ್ಣಲ್ಲೂ ನೀರತ್ತಾಂತೆ. ಗಣೇಶ್ ಅವರು ಅಭಿನಯಿಸಿದ ರೀತಿ ಆ ಮಟ್ಟಿಗೆ ಯೋಗರಾಜ್ ಅವರನ್ನು ವಿಸ್ಮಯಗೊಳಿಸಿತ್ತಂತೆ. ಹಾಗೂ, ಗಣೇಶ್ ಅವರು ಪೂರ್ತಿಯಾಗಿ ಅಳುವ ಶೈಲಿಯಲ್ಲಿದ್ದ ಸಂಭಾಷಣೆಯನ್ನು, ತಮ್ಮ ಶೈಲಿಯನ್ನು ಅಳವಡಿಸಿ, ನಗು ಮಿಶ್ರಿತ ಅಳುವಿನೊಂದಿಗೆ ಹೇಳಿದರಂತೆ. ಅದರಿಂದ ಯೋಗರಾಜ್ ಎಷ್ಟರ ಮಟ್ಟಿಗೆ ಪ್ರಭಾವಿತರಾದರೆಂದರೆ, ಅದೇ ರೀತಿಯ ಅಭಿನಯವನ್ನು ಚಿತ್ರದಲ್ಲಿ ಉಳಿಸಿಕೊಂಡರಂತೆ. ಗಣೇಶ್ ಒಬ್ಬ ಅಸಾಮಾನ್ಯ ಡಬ್ಬಿಂಗ್ ಸೆನ್ಸ್ ಇರವ ನಟ ಎಂದು ಹೋಗಳಿದರು ಯೋಗರಾಜ್.

ashu ಮಂಗಳ, 02/06/2007 - 15:20

ನಿಜ ಸಾರ್ ನೀವ್ ಹೇಳಿದ್ದು,
ಪರವಾಗಿಲ್ಲ, ಚೆನ್ನಾಗೆ ಹೇಳಿದ್ದೀರಾ.. ಆದ್ರೆ ಒಂದ್ ಮಾತು ಅರ್ಥಾ ಆಗೋಲ್ಲ ಸಾರ್ ನಂಗೆ.

"ಇದು ಕನ್ನಡಿಗರು ಹೆಮ್ಮೆ ಪಡುವಂಥ ಚಿತ್ರ. ಇದನ್ನು ನೋಡದಿದ್ದಾರೆ, ಅದು ಮುಂಗಾರು ಮಳೆಯ ನಷ್ಟ ಅಲ್ಲ, ಅದನ್ನು ನೋಡದಿರುವವರ ನಷ್ಟ. ಪಾಪ ಮಾಡಿದವರು ಮಾತ್ರ ಇಂಥ ಶಿಕ್ಷೆಗೆ ಒಳಗಾಗುತ್ತಾರೆ :-) "

ಚಿತ್ರ ಚೆನ್ನಾಗಿದೆ ಅಂತ ಚಿತ್ರಾ ನ ಮಾತ್ರ ನೋಡೋದಕ್ಕಿಂತ, ಚಿತ್ರ ರಂಗದ ದೇವತೆಗಳಿಗೆ ಅಲ್ಪ ಸಹಾಯ ಮಾಡೋ ಪುಣ್ಯಾ ನಾ ಆ ದೆವರು ನಂಗೆ ಕೊಟ್ಟಿಡಾನಲ್ಲ ಅಷ್ಟ್ ಸಾಕು.

ಮುಂಗಾರು ಮಳೆ ಚಿತ್ರಕಥೆ ಚೆನ್ನಾಗಿರಬಹುದು. ಅದಕ್ಕೆ ನೀವು 4-5 ಬಾರಿ ನೋಡಿರಬಹುದು. ಒಳ್ಳೇ ಸಂಗತಿ ನೇ.
ಇಷ್ಟೊಂದು ದುಡ್ಡು, ಸಮಯ ಇರೋ ನಿಮ್ಮಂಥ ಕರುಣಾಮಯಿಗಳು ಒಂದು ಸತಿ ಹಿರಿ ನಟ ಅಶ್ವಥ್ ಅವರತ್ತ ಗಮನ ಹಾಯಿಸೋದಲ್ಲವೇ.

ಮುಂಗಾರು ಮಳೆ, ಇವತ್ತಲ್ಲ, ಇನ್ನೂ ಒಂದು ವರ್ಷ ಬಿಟ್ಟು ನೋಡಬಹುದು. ಆದ್ರೆ, ಅಶ್ವಥ್ ಅವರ ಸಧ್ಯದ ಪರಿಸ್ಥಿತಿ ಚೆನ್ನಾಗಿಲ್ಲ. ಅವರನ್ನ ಉಳಿಸಿಕೊಳ್ಳುವ ಜವಾಬ್ದಾರಿ ನಾವ್ ಕನ್ನಡಿಗರಾದ್ದಲ್ಲವೇ?

ನಾನು, ಅಶ್ವಥ್ ಅವರ ಮನೆ ವಿಳಾಸ ಹಾಗೂ ಬ್ಯಾಂಕ್ ಖಾತೆ ಸಂಖ್ಯೆ ಕೊಟ್ಟು 4-5 ದಿನಗಳು ಆಯ್ತು, ಒಬ್ರು! ಒಬ್ರು ಒಂದ್ ಹೇಳಿಕೆ ಕೂಡ ನೀಡಿಲ್ಲ.

ನೀವೆಲ್ಲ ಚಿತ್ರ ಪ್ರೇಮಿಗಳು, ನಾನು ಮುಂಗಾರು ಮಳೆ ಚಿತ್ರಾಣ ನೋಡ್ಬೇಕು?

ಬೇಡಾ ಸಾರ್, ನಂಗೆ, ಇಷ್ಟೊಂದು ಚೆನ್ನಾಗಿರೋ ಚಿತ್ರ, ಕನ್ನಡ ಚಿತ್ರರಂಗ ಬೇಡ್ವೆ ಬೇಡ...

ಕನ್ನಡಿಗರು ಅಂದ್ರೆ, ಹೆಮ್ಮೆಯಿಂದ ಬೀಗುವ ವಿಷಯ ಅಂದು ಕೊಂಡಿದ್ದೆ.
ಆದ್ರೆ, ಸದ್ಯದ ಪರಿಸ್ಥಿತಿಯಲ್ಲಿ, ತೆಲಗು ಚಿತ್ರರಂಗವೇ ಉತ್ತಮ ಅನ್ನಿಸ್ತಾ ಇದೆ.

ಕೊನೇ ಪಕ್ಷ, ಚಿತ್ರರಂಗದಲ್ಲಿ ಒಬ್ಬರಿಗೊಬ್ಬರು ಸಹಾಯಾನಾದ್ರೂ ಮಾಡ್ತಾರೆ.

ಕನ್ನಡ ಚಿತ್ರ ರಂಗದಲ್ಲೆನಿದೆ, ಎಲ್ಲ ಕಾಲನ್ನ ಎಳೆಯೋ ಕಪ್ಪೇಗಳೇ.

- ನೊಂದ
ಅಶು

mungaarumale ಮಂಗಳ, 02/06/2007 - 16:50

ಅಶು ಅವರೇ, ಏನ್ರೀ ನೀವು? ಒಳ್ಳೇ ಸಾಯಿ ಪ್ರಕಾಶ್ ಗೋಳಿನ ಸಿನಿಮಾ ಥರ ಕುಯ್ ತೀರಾ? :-( .. ಮುಂಗಾರು ಮಳೆ ಸಿನಿಮಾ ಬಗ್ಗೆ ಮಾತಾ ಡಿ ಸಾರ್ ಇಲ್ಲಿ.. ಅದು ಬಿಟ್ಟು, ಎಲ್ಲೆಲ್ಲಿಗೋ ಹೋಗ್ತೀರಲ್ಲ :-(

ನಿಮಗೆ ಕನ್ನಡ ಚಿತ್ರರಂಗ ಹಿಡಿಸದ್ದಿದ್ದರೆ, ಬೇರೆ ಇನ್ಯಾವುದೋ ಚಿತ್ರ ರಂಗ ಸರಿ ಇದೆ ಅಂತ ಅನ್ನಿಸಿದ್ರೆ ಅಲ್ಲೇ ಇರಿ :-).. ನಮ್ಮ ದೇನು ಅಬ್ಯಂತರ ಇಲ್ಲ.. ನಾನಂತೂ ಮುಂದಿನ ವಾರ ಮುಂಗಾರು ಮಳೆ ನ 6ನೇ ಬಾರಿ ನೋಡ್ತೀನಿ :-).. ಯಾರಿಗುಂಟು ಯಾರಿಗಿಲ್ಲ ಈ ಭಾಗ್ಯ.. ಎಳೆಳು ಜನ್ಮದಲ್ಲಿ ಪುಣ್ಯ ಮಾಡಿರ್ಬೇಕು ಅಂತ ಸಿನಿಮಾ ನೋಡೋಕೆ..

ಮುಂಗಾರು ಮಳೆ - ಕನ್ನಡಿಗರ ಹೆಮ್ಮೆ

ಅಪ್ಪಿ ಮಂಗಳ, 02/06/2007 - 18:22

ಚಿಂದಿ ಫಿಲಮ್ಮು!! ನಾನು ೫ ಸರಿ ನೋಡಿದೀನಿ... ಬೇಜಾರೇ ಆಗೋದಿಲ್ಲ

mungaarumale ಮಂಗಳ, 02/06/2007 - 19:26

ಮುಂಗಾರು ಮಳೆ ಸಿನಿಮಾವನ್ನು ನೋಡದವರಿಗೆ, ಮತ್ತೊಮ್ಮೆ ನೋಡಬೇಕೆಂಡಿರುವವರಿಗೆ ನನ್ನ ಕಿವಿ ಮಾತು. ಚಿತ್ರದ ಪ್ರಾರಂಭದಲ್ಲಿ ಟೈಟಲ್ ಕಾರ್ಡ್ ತೋರಿಸುವಾಗ, ವಾದ್ಯಗಳನ್ನು ಬಳಸಿ ರೆಕಾರ್ಡ್ ಮಾಡಿರುವ ಚಿತ್ರದ ಟೈಟಲ್ ಟ್ರಾಕ್ ಅಂದರೆ 'ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ' ಹಾಕುತ್ತಾರೆ.. ಹೃದಯ ಮುಟ್ಟುವ, ಇಂಪಾದ, ತಂಪಾದ ಅಸಾಧಾರಣ ಗೀತೆ ಅದು ದಯವಿಟ್ಟು ಇದನ್ನ ಯಾರು ಮಿಸ್ ಮಾಡ್ಕೋ ಬೇಡಿ..

ಇನ್ನೊಂದು ವ್ಯಥೆ ಎಂದರೆ ಸೋನು ನಿಗಮ್ ಹಾಡಿರುವ 'ಮುಂಗಾರು ಮಳೆಯೇ ಏನು ನಿನ್ನ ಹನಿಂಗಳ ಲೀಲೆ' ಹಾಡು, ಚಿತ್ರದಲ್ಲಿ ಬಾರಿಯ ಒಂದು ಬಿಟ್ ನಲ್ಲಿ ಮಾತ್ರ ಬರುತ್ತದೆ.. ಹಾಡು ಪೂರ್ತಿಯಾಗಿ ಚಿತ್ರೀಕರಿಸಿದ್ದಾರೆ ಬಹಳ ಸೊಗಸಾಗಿರುತ್ತಿತ್ತು..

ಅಪ್ಪಿ ಮಂಗಳ, 02/06/2007 - 23:26

ಯಾವಾಗಲೂ ನಾನು ೧೫ ನಿಮಿಷ ತಡವಾಗಿಯೇ theatre ಒಳಕ್ಕೆ ಹೋಗೋದು! :-(
ಈ ಸಲ ಬೇಗ ಹೋಗಕೆ ಪ್ರಯತ್ನ ಪಡುತ್ತೇನೆ....

mungaarumale ಧ, 02/07/2007 - 17:08

ದಿನದಿಂದ ದಿನಕ್ಕೆ ಮುಂಗಾರು ಮಳೆಯ ಪ್ರಖರತೆ ಹೆಚ್ಚುತ್ತಲೇ ಇದೆ. ವಾರದಿಂದ ವಾರಕ್ಕೆ ಹೆಚ್ಚು ಹೆಚ್ಚು ಚಿತ್ರಮಂದಿರಗಳನ್ನು ಪಡೆದುಕೊಳ್ಳುತ್ತಿದೆ. ಈ ವಾರ ಹುಬ್ಬಳ್ಳಿಯ ಸಂಜೋತಾ ಥಿಯೇಟರ್ ಹಾಗೂ ಭದ್ರಾವತಿಯ ವೆಂಕಟೇಶ್‌ವರ ಥಿಯೇಟರ್ ನಲ್ಲಿ ಬಿಡುಗಡೆಯಾಗುತ್ತಿದೆ.

mungaarumale ಗುರು, 02/08/2007 - 19:08

ಈ ವಾರದ ತರಂಗ ವಾರ ಪತ್ರಿಕೆಯಲ್ಲಿ ಮುಂಗಾರು ಮಳೆ ಚಿತ್ರದ ಬಗ್ಗೆ ಒಂದು ಸ್ಫೋಟಕ ವರದಿ ಬಂದಿದೆ ಎಂದು ನನ್ನ ಗೆಳೆಯ ಈಗಷ್ಟೇ ಕರೆ ಮಾಡಿ ತಿಳಿಸಿದ.
ಆ ವರದಿಯ ಪ್ರಕಾರ ಮುಂಗಾರು ಮಳೆ ಚಿತ್ರದ ಅಭೂತ ಪೂರ್ವ ಯಶಸ್ಸು ಕನ್ನಡ ಚಿತ್ರ ರಂಗದ ಗತಿಯನ್ನೇ ಬದಲಾಯಿಸುತ್ತದೆ. ಕನ್ನಡ ಚಿತ್ರಗಳನ್ನು ಕಡೆಗಾನಿಸುವ ಪಿ.ವಿ.ಆರ್ ಚಿತ್ರಮಂದಿರದಲ್ಲಿ ಮುಂಗಾರು ಮಳೆ ಸಿನಿಮಾ ನೋಡಲು ಹರಿದು ಬರುತ್ತಿರುವ ಜನಸಾಗರವನ್ನು ಕಂಡು, ಚಿತ್ರ ಮಂದಿರದವರು ನಿಬ್ಬೆರಗಾಗಿ, ಗೊಲ್ಡ್ ಕ್ಲಾಸ್ ತರಗತಿಯಲ್ಲೂ ಕೂಡ ಈ ಚಿತ್ರವನ್ನು ಬಿಡುಗಡೆ ಗೋಳಿಸುವ ಬಗ್ಗೆ ಆಲೋಚಿಸುತ್ತಿದ್ದಾರಂತೆ.
ಈ ಚಿತ್ರ ಬರೀ ಕನ್ನಡಿಗರಷ್ಟೇ ಅಲ್ಲದೇ ಪರಭಾಷಾ ಮಂದಿ ಕೂಡ ಮುಗಿ ಬಿದ್ದು ನೋಡುತ್ತಿದ್ದು, ನಮ್ಮ ಗಾಂಧಿ ನ ಗರದ ಮಂದಿ, ಕನ್ನಡ ಚಿತ್ರ ರಂಗದ ಮಾರುಕಟ್ಟೆ ವಿಸ್ತರಣೆ ಆಗಿರುವುದಕ್ಕೆ ಕಾರಣವಾದ ಮುಂಗಾರು ಮಳೆ ಯ ಯಶಸ್ಸನ್ನು ಕಂಡು ಕುಣಿಯುತ್ತಿದ್ದಾರಂತೆ.
ವಿದೇಶದಿಂದ ಬಂದಿದ್ದಂತ 35 ಜನ ಪ್ರವಾಸಿಗರು ಒಂದು ಪ್ರಾದೇಶಿ ಕ ಚಲನ ಚಿತ್ರವನ್ನು ನೋಡುವ ಹಂಬ ಲ ವನ್ನು ತೋರಿಸಿದಾಗ, ಒಬ್ಬರು ಅವರನ್ನು ಮುಂಗಾರು ಮಳೆ ಚಿತ್ರಕ್ಕೆ ಕರೆದು ಕೊಂಡು ಹೋದರಂತೆ. ಚಿತ್ರವನ್ನು ನೋಡಿ ಬೆರಗಾದ ವಿದೇಶಿ ಪ್ರವಾಸಿಗರು, ಮತ್ತೊಮ್ಮೆ ಚಿತ್ರವನ್ನು ನೋಡಿದರಂತೆ.
ಶಿವಮೊಗ್ಗದಲ್ಲಿ ಒಬ್ಬ ಇಂಜಿನೀರಿಂಗ್ ವಿದ್ಯಾರ್ಥಿ, ಈ ಚಿತ್ರವನ್ನು 32 ಬಾರಿ ನೋಡಿದ್ದಾನಂತೆ.
ಮುಂಗಾರು ಮಳೆ ಚಿತ್ರವನ್ನು ಬಂಗಾರದ ಮನುಷ್ಯ, ಆಪ್ತ ಮಿತ್ರ ಚಿತ್ರಗಳ ಜೊತೆಗೆ ಜನ ಹೋಲಿಸಿ ನೋಡಲು ಪ್ರಾರಂಬಿಸಿದ್ದಾರೆ. ಈ ಚಿತ್ರ ಕನ್ನಡ ಚಿತ್ರ ರಂಗದ ದಿಕ್ಕ ನ್ನೇ ಬದಲಿಸಲಿದೆ ಎಂದು ವರದಿ ತಿಳಿಸುತ್ತದೆ ಎಂದು ನನ್ನ ಗೆಳೆಯ ಹೇಳಿದ.

ಈಗಲೇ ನಾನು ತರಂಗ ವನ್ನು ಕೊಳ್ಳಲು ಹೋಗುತ್ತಿದ್ದೇನೆ ಅದನ್ನು ಓದಿ ವರದಿಯನ್ನು ಪೂರ್ತಿಯಾಗಿ ನಿಮಗೆ ತಿಳಿಸುತ್ತೇನೆ.

pinky (ಪ್ರಮಾಣಿಸಲ್ಪಟ್ಟಿಲ್ಲ.) ಶುಕ್ರ, 02/09/2007 - 09:55

hai friends film tumba chennagide 2 times nodidene

mungaarumale ಮಂಗಳ, 02/13/2007 - 09:41

ತರಂಗ ವಾರಪತ್ರಿಕೆಯಲ್ಲಿ ಇತ್ತೀಚಿನ ಕನ್ನಡದ ಬ್ಲಾಕ್ ಬಸ್ಟರ್, ಸಂಚಲನಾತ್ಮಕ ಚಿತ್ರ 'ಮುಂಗಾರು ಮಳೆ'ಯ ಬಗ್ಗೆ ಬಂದಿರುವ ಒಂದು ಸ್ಫೋಟಕ ವರದಿ. ಓದಿ ಪುಳಕಿತರಾಗಿ.

ಮುಂಗಾರು ಮಳೆ ಆಹಾ.. ಚಿನ್ನದಂಥ ಬೆಳೆ

ಶಿವಮೊಗ್ಗೆಯ ಯುವಕನೋರ್ವ ಅದಾಗಲೇ ಮೂವತ್ತು ಬಾರಿ 'ಮುಂಗಾರು ಮಳೆ' ಚಿತ್ರ ನೋಡಿದ್ದಾಗಿದೆ. ಪ್ರತಿನಿತ್ಯ 'ಮಳೆ' ನೋಡುವುದೇ ಆತನ ಕೆಲಸ. ನೆನಪಿಡಿ. ಆ ಹುಡುಗ ಇಂಜಿನಿಯರಿಂಗ್ ವಿದ್ಯಾರ್ಥಿ.

- 'ಸ್ಟಾರು'ಗಳಿಲ್ಲದ 'ಮುಂಗಾರು ಮಳೆ' ತಂಡ ಶಿವಮೊಗ್ಗ ಸುತ್ತಮುತ್ತ ಭೇಟಿ ನೀಡಿದಾಗ ಜಮಾಯಿಸಿದ್ದು ಆರೇಳು ಸಹಸ್ರ ಜನ.

- ಮೂವತ್ತೈದು ಮಂದಿಯ ಯುರೋಪಿಯನ್ ಸಮುದಾಯದ ತಂಡವೊಂದು ಈಚೆಗೆ ಬೆಂಗಳೂರಿಗೆ ಭೇಟಿ ನೀಡಿದಾಗ, ಪ್ರಾದೇಶಿಕ ಚಿತ್ರವೊಂದನ್ನು ನೋಡುವ ಹಂಬಲದಿಂದ ವೀಕ್ಷಿಸಿದ್ದು 'ಮುಂಗಾರು ಮಳೆ'ಯನ್ನು. ಅದರಲ್ಲೂ ಹದಿನೈದು ಮಂದಿ ಎರಡನೆಯ ಬಾರಿಯೂ ನೋಡಿದ್ದು ಆಗಿದೆ.

- ಉದ್ಯಮದ ದೃಷ್ಟಿಯಲ್ಲಿ ಇದು 'ಬಂಗಾರದ ಮನುಷ್ಯ', 'ಆಪ್ತಮಿತ್ರ'ನ ಹಾಗೆ ಈ ವರ್ಷದ ಟ್ರೆಂಡ್ ಸೆಟ್ಟರ್ ಸಿನಿಮಾ.

- 'ಮುಂಗಾರು ಮಳೆ'ಯ ವೀಕ್ಷಕ ಸೌಮ್ದಾಯವೆಂದರೆ, ಕಾಲೇಜು ವಿದ್ಯಾರ್ಥಿಗಳಷ್ಟೇ ಅಲ್ಲ, ಕಾಲ್ ಸೆಂಟರ್, ಸಾಫ಼್ಟ್ ವೇರ್ ಪ್ರಪಂಚದಿಂದ ಹೊಟೇಲ್ ಮಾಣಿಗಳ ತನಕ ಎಲ್ಲ ವರ್ಗದ್ದು.

- ಯಾವ ನಾಡು - ಯಾವ ಭಾಷೆಯವರಾದರೇನಂತೆ.. 'ಮುಂಗಾರು ಮಳೆ'ಗೆ ಭಾಷೆ ಅಡ್ಡಿಯೇ ಇಲ್ಲ. ಬಂಗಾಳಿಯವರಿಂದ ಮಲೆಯಾಳಂ ಜನರ ತನಕ ಸಿನೆಮಾ ನೋಡಲು ಧಾವಿಸಿ ಬಂದದ್ದಾಗಿದೆ.

- ಚಿತ್ರ ತೆರೆಕಂಡಿರುವ ರಾಜಧಾನಿಯ ಪ್ರಮುಖ ಚಿತ್ರಮಂದಿರ ಸಾಗರ್ ನಲ್ಲಿ ಚಿತ್ರ ಇನ್ನೂರು ದಿನ ಕಳೆಯುವ ಬಗ್ಗೆ ಅನುಮಾನವೇ ಇಲ್ಲ. 'ಪಿವಿಆರ್' ಸಿನಿಮಾ ಅಂಗಳದಲ್ಲಿ ಚಿತ್ರ ವೀಕ್ಷಕರ ಸಂಖ್ಯೆ ನೋಡಿದ 'ಪಿವಿಆರ್'ನ ಮಂದಿಗೆ 'ಗೋಲ್ಡ್ ಕ್ಲಾಸ್' ನಲ್ಲಿ ಪ್ರದರ್ಶಿಸುವ ಆಲೋಚನೆಯಲ್ಲಿದ್ದಾರೆ. ಹಾಗಾದರೆ ಅಂಥ ಸಾಲಿನಲ್ಲಿ ಪ್ರಥಮ ಚಿತ್ರ 'ಮುಂಗಾರು ಮಳೆ'.

- ಕನ್ನಡ ಚಿತ್ರೋದ್ಯಮದ ಬಹುತೇಕ ನಿರ್ಮಾಪಕ, ನಿರ್ದೇಶಕ, ತಂತ್ರಜ್ನರು, ವಿತರಕರು ಒಕ್ಕೊರಲಿನ ಪ್ರಶಂಸೆಗೆ ಪಾತ್ರವಾದ ಸಿನಿಮಾ. ಅಂದು ಚಿತ್ರ ನಿರ್ಮಾಣ ಹಂತದಲ್ಲಿ ಇಡೀ ಚಿತ್ರ ತಂಡ 'ಮುಂಗಾರು ಮಳೆ'ಯಲ್ಲಿ ತೊಯ್ದು ಸಿನಿಮಾ ಮಾಡಿತು. ಚಿತ್ರ ತೆರೆಕಂಡ ಅನಂತರ ಪ್ರೇಕ್ಷಕರು 'ಮಳೆ' ಹನಿಯ ಸಿಂಚನದ ನಡುವೆ ತೊಯ್ದಿದ್ದಾರೆ. 'ಮಳೆ ನಿಂತರೂ ಮಳೆಹನಿ ನಿಲ್ಲಲಿಲ್ಲ' ಅನ್ನುವ ಗಾದೆ ಮಾತೊಂದಿದೆ. ಇದೀಗ ಗಾಂಧಿ ನಗರದ ತುಂಬಾ 'ಮುಂಗಾರು ಮಳೆ'ಯದೇ ಚಿತ್ರ. ಒಂದು ಕಡೆ ಜನ ಮುಗಿ ಬಿದ್ದು ಸಿಮಿಮಾ ಮಂದಿರಗಳತ್ತ ಧಾವಿಸಿ ಬರುತ್ತಿದ್ದರೆ, ಗಾಂಧಿನಗರದ ಮಟ್ಟಿಗೆ ಅದೊಂದು 'ಯಶಸ್ಸಿನ ಉಸಿರು', ಹತ್ತಾರು ನಿರ್ಮಾಪಕರಿಗೆ ಭರವಸೆಯ ಕಿರಣ, ನೂರಾರು ಕನಸುಗಳನ್ನಿಟ್ಟು ಇತ್ತ ಬಂದ ಕನಸುಗಾರರಿಗೆ ಹೊಸ ಕನಸು ಕಟ್ಟುವ ಹೊತ್ತು. ಹೆಚ್ಚು-ಕಮ್ಮಿ ಈ ವರ್ಷಕ್ಕೆ ಸಾಕಾಗುವಷ್ಟು ನವಚೇತನದ ಟಾನಿಕ್ಕು. ಕನ್ನಡ ಚಿತ್ರ ರಂಗದ ಮಾರುಕಟ್ಟೆಗೆ ಹೊಸ ವ್ಯಾಖ್ಯೆ ಬರೆಯಬಹುದಾದ ಚಿತ್ರ. ಸಿನಿಮಾ ನೋಡೋಕೆ ಜನ ಬರುತ್ತಿಲ್ಲ ಅಂತ ಗೊಣಗುವ ಮಂದಿಗೆ 'ಜನ ಇದ್ದಾರ್ ಮಾರಾಯರೇ, ನೋಡುವಂಥ ಸಿನಿಮಾ ಕೊಡುತ್ತಿಲ್ಲ' ಅಂತ ಹೇಳುವ ಸಿನಿಮಾ. ಕೊಂಚ ತುಕ್ಕು ಹಿಡಿದ ಯೋಚನೆಗಳನ್ನು ಬದಿಗಿಟ್ಟು ಇಲ್ಲವೇ ಮರೆತು ಹೊಸ ಆಲೋಚನೆಗಳನ್ನು ತುಂಬಿಕೊಂಡು ಸಿನಿಮಾ ಮಾಡಿ ಎಂದು ಪಾಠ ಕಲಿಸಿದ ಸಿನಿಮಾ. ಒಂದು 'ಮುಂಗಾರು ಮಳೆ'ಯ ಬಿಡುಗಡೆಯ ಅನಂತರದ ಚಿತ್ರಣ ಇದು.

- ಕೇವಲ ಒಂದು 'ಮುಂಗಾರು ಮಳೆ' ಇಡೀ ಚಿತ್ರರಂಗದ ಭವಿಷ್ಯ ನಿರ್ಧರಿಸುವುದಿಲ್ಲ. ಇಂಥ ನಾಲ್ಕಾರು ಚಿತ್ರಗಳು ಬಂದಾಗ ಮಾತ್ರ ಉದ್ಯಮದ ದಿಕ್ಕು - ದೆಸೆ ಬದಲಾಗಬಹುದು. ಹೀಗಂತ ಸ್ಥಿತ ಪ್ರಜ್ನತೆಯ ಮಾತಾಡುತ್ತಾರೆ ನಿರ್ದೇಶಕ ಯೋಗರಾಜ್ ಭಟ್. ಅಂದು 'ಮಣಿ' ಚಿತ್ರದ ಮೂಲಕ ಸೃಜನಶೀಲತೆಯ ತುಂತುರು ಸ್ಪರ್ಶ ಮೂಡಿಸಿದ್ದ ಭಟ್ 'ಮುಂಗಾರು ಮಳೆ'ಯಲ್ಲಿ 'ಸೃಜನ ಶೀಲತೆ' ಕ್ಯಾನ್ವಾಸು ಅದೆಷ್ಟು ವಿಶಾಲವಾದುದು ಅಂತ ತೋರಿಸಿಬಿಟ್ಟರಲ್ಲಾ.. ಆ ಮೂಲಕ ಹೊಸತೊಂದು ತಂಡ ಕಟ್ಟಿ ಟೀಮ್ ಸಿನಿಮಾ ಮಾಡಿದ ಯೋಗರಾಜ್ ಅಭಿನಂದನಾರ್ಹರು.

ಯಾವುದೇ ಚೌಕಟ್ಟು - ಸೂತ್ರಗಳಿಲ್ಲದ ಸಿನಿಮಾ ಆಗಬೇಕೆನ್ನುತ್ತಲೇ ನಾಯಕ ನಟ ಗಣೇಶ್ ಕ್ಯಾಮರಾಮನ್ ಕೃಷ್ಣ (ಕಿಟ್ಟಿ), ಸಾಹಿತಿ ಜಯಂತ್ ಕಾಯ್ಕಿಣೆ.. ಹೀಗೆ ಎಲ್ಲರನ್ನೂ ಗೋಳು ಹುಯ್ದು ಕೊಂಡು ಮಾಡಿದ ಸಿನಿಮಾನೇ 'ಮುಂಗಾರು ಮಳೆ'. 'ಮುಂಗಾರು ಮಳೆ'ಯ ಸಂಗೀತ ಸೃಷ್ಟಿಯಾದದ್ದು ಅಮೇರಿಕಾದಲ್ಲಿ. ಯಾಕೆಂದರೆ, ಸಂಗೀತ ನಿರ್ದೇಶಕ ಮನೋ ಮೂರ್ತಿ ಅಲ್ಲಿದ್ದುಕೊಂಡೇ ಇಂಥ ಸುಂದರ ಗೀತೆಗಳನ್ನು ಮಾಡಿದ ಹಿಂದೆ ಅದೆಷ್ಟು 'ಈ-ಮೇಲ್' ಸಂಭಾಷಣೆ ನಡೆದಿತ್ತೋ.. ಹೃದಯದ ಭಾವನೆಗಳಿಗೆ ಅಕ್ಷರರೂಪ ನೀಡಿದ ಜಯಂತ ಕಾಯ್ಕಿಣೆ ಸಾಹಿತ್ಯ ಬರೆದದ್ದು, 'ರಂಗ ಶಂಕರ'ದ ಪಕ್ಕದ ಲೈಟು ಕಂಬದ ಕೆಳಗೆ. ಇಂಥದ್ದೊಂದು 'ದೃಶ್ಯ ಕಾವ್ಯ' ಹೆಣೆಯುವ ಇಡೀ ಆರೇಳು ತಿಂಗಳ ಕೆಲಸದ ನಡುವೆ ನಿರ್ಮಾಪಕ ಅಡಕಮಾರನಹಳ್ಳಿ ಕೃಷ್ಣಪ್ಪ ತಂಡದ ಜೊತೆ ಮಾತಾಡಿದ್ದು ಅರ್ಧ ತಾಸು ಮಾತ್ರ!

ಆದರೂ ಇಂಥದ್ದೊಂದು 'ಮಳೆ' ಕವಿತೆ ತೆರೆಯ ಮೇಲೆ ಬಂತು. ಅದರ ಹಿಂದಿನ ಒಂದೇ ಒಂದು ರಹಸ್ಯ 'ಅದು ಧ್ಯಾನದ ಸ್ಥಿತಿಯಲ್ಲಿ ಮಾಡಿದ ಸಿನಿಮಾ ಸಿನಿಮಾನೇ ಧ್ಯಾನ' ಅಂತ ಮಾಡಿದ ಸಿನಿಮಾ. ಅದು ಫಲ ಕೊಟ್ಟಿದೆ ಅಷ್ಟೇ ಎನ್ನುತ್ತಾ ಮತ್ತೆ 'ಮಳೆ'ಯ ಭೋರ್ಗರೆತದ ಸಂತಸವನ್ನು ಕಣ್ಣಂಚಿನಲ್ಲಿಯೇ ತುಂಬಿಕೊಂಡು ಮತ್ತೊಂದು ಧ್ಯಾನದತ್ತ ಹೊರಟಿದ್ದಾರೆ ಭಟ್.

ಸಕಲರಿಗೂ ಅಭಿನಂದನೆಗಳು.

mungaarumale ಶುಕ್ರ, 02/16/2007 - 09:20

ನಮ್ಮ ನಿಮ್ಮೆಲ್ಲರ ಪ್ರೀತಿ ಪಾತ್ರವಾದ , ಕನ್ನಡಿಗರ ಹೆಮ್ಮೆಯಾದ 'ಮುಂಗಾರು ಮಳೆ' ಚಿತ್ರ ಇಂದು ಐವತ್ತನೇ ದಿನವನ್ನು ಆಚರಿಸಿಕೊಳ್ಳುತ್ತಿದೆ. ಬೆಂಗಳೂರಿನಲ್ಲಂತು ಬಿಡುಗಡೆಯಾದ ಎಲ್ಲ ಕೇಂದ್ರಗಳಲ್ಲು ೫೦ ದಿನಗಳನ್ನು ಪೂರೈಸಿ, ಹೊಸ ದಾಖಲೆಯನ್ನು ನಿರ್ಮಿಸಿದೆ.

ಇಮ್ಥ ಒಂದು ಹೃದಯ ವಿಹಂಗಮ ಚಿತ್ರವನ್ನು ನೀಡಿದ ಇಡೀ ಚಿತ್ರ ತಂಡಕ್ಕೆ ಶುಭಾಶಯಗಳು. ಈ ಚಿತ್ರ ಶತ ದಿನ, ಬೆಳ್ಳಿ ಹಬ್ಬ, ಸುವರ್ಣ ಹಬ್ಬವನ್ನು ಆಚರಿಸಲೆಂದು ಈ ಮೂಲಕ ಹಾರೈಸುತ್ತೇವೆ.

ಥ್ಯಾಂಕ್ಯು ಕಣ್ರಿ ನಂದಿನಿ.. ಪ್ರೀತಿ ವಿಚಾರ್ದಲ್ಲಿ ನನ್ನ ಕಣ್ಣು ಒಪೆನ್ ಮಾಡಿದ ದೇವತೆ ಕಣ್ರಿ ನೀವು.. ಈ ಕಣ್ಣು ಕ್ಲೋಸ್ ಆಗಿ ಮಣ್ಣು ಸೇರಿದ ಮೇಲೂ, ನಾನೀ ಉಪಕಾರಾನ ಮರೆಯಲ್ಲ ರೀ.. ನೀವ್ ಸಿಗಲ್ಲ ಅಂತ ನಂಗೇನ್ ಬೇಜಾರಿಲ್ಲ ರೀ.. ನಿಮ್ಮ್ ಜೊತೆ ಕಳೆದ್ ನಲ್ಲ ಈ ನಾಲ್ಕ್ ದಿವಸ, ಅಷ್ಟ್ ಸಾಕು ಕಣ್ರಿ.. ಅದನ್ನೇ ರಿವೈಂಡ್ ಮಾಡ್ಕೋಂಡ್ ಹೇಗೋ ನನ್ನ ಜೀವನ ತಳ್ಳಿ ಬಿಡ್ತೀನಿ.

ಮುಂಗಾರು ಮಳೆ - ಸಂಭ್ರಮದ ೫೦, ಒಂದು ಸುಂದರ ಯಶಸ್ಸಿನ ಸುಧೀರ್ಘ ಪಯಣ

AADU (ಪ್ರಮಾಣಿಸಲ್ಪಟ್ಟಿಲ್ಲ.) ಭಾನು, 03/04/2007 - 16:52

ಕನ್ನಡ ಲಿಪಿಯಲ್ಲಿ:
ಮುಂಗಾರು ಮಳೆ ಮಸ್ತ್ ಚಿತ್ರ. ಮನಸ್ಸಿಗೆ ತಾಗಿದ ಚಿತ್ರ. ನನ್ನ ಲೈಫ್‌ನಲ್ಲಿ 11 ಸತಿ ನೋಡಿದ ಚಿತ್ರ ಅಂದ್ರೆ ಇದೆ.
ಐ ಲವ್ ಮುಂಗಾರು ಮಳೆ.

--------------------------------------------------------------------------------------
ಒರಿಜಿನಲ್:

mungaarumale mast chitra manasige taagida chitra ,nanna life nalli 11sati nodida chitra andre ide.
I love mungaarumale

santhosh jain (ಪ್ರಮಾಣಿಸಲ್ಪಟ್ಟಿಲ್ಲ.) ಶುಕ್ರ, 03/09/2007 - 13:34

Adondhu Vismaya prayaana. chitra mugiyuvudhe gothhaguvudilla yaakendare ondhu second kooda namma manassu fimindha aache oagadante manoranjane needuthade naanaagale mungaaru maleyannu 12 times nodiddene i will watch this movie atleast 25 times. all the songs is excellent kevala kannadigarashte allade ella bhaasheya janaru indhu m, maleya Aahlaadavannu saviyuthidhare idhondu hemme paduvantha vichaarave sari. naani chitravannu 8 baari kaalasanteyalli ticket thagondu nodiddini. Adarallu shivarratri dinadandu raatri 10 gante raatri show nodiddu nanna jeevanadha avismaraniya nenapu. Aa hothinallu saha jana ticketgaagi kaalasanteyalli mugibiddu thagolodh nodudre enthavrgu saha m.male bagge thiliyuthe. raatri veleyalli family films nodoke barodhu virala . Aadre aa ratri ali idhadhu bahutheka familygale adarallu chitra prambavaagi ondondu haadu bandaaga jana hucheddu kuniyodhna nododhe ondhu aanada ottare m.male nanna jeevanadalili mareyalaaradha chitravaagidhe. yaakendare hinde yaava chitravannu ondhakintha jaasti sari nodiralilla . nanagi film eshtu modi maadide endhare prathi dinavu m.male chitravannu theatregogi nodabekenisuthe. 11th week aadru saha pramod thetrenalli prathi nithyavvu housefull pradarshana kaanuthide. Vaaradinda vaarakke m.male innu adhika theatrenalli there kaanuthruvudhu nijakku ella kannadigaru hemme paduvatha vichaaravaagidhe ganesh nijavaagiyu obba adhbutha nata.

sanjaysb ಸೋಮ, 04/09/2007 - 19:28

Naanu ee chitravanna ondu sali nodide. Chitrada climax concept mattu sangeet haagu haadugalanna bittare bere enu ishtaa aaglilla.

For all those people who have heaped praise for this movie just watch "Bhutayyana Maga Aiyyu". I can call it a real classic. I doubt whether most of you have seen this movie.

Standard of kannada films have deteroited over last 2 decades. Can we see the real classics like "Beladingala Baale" now a days ?

praveensooda (ಪ್ರಮಾಣಿಸಲ್ಪಟ್ಟಿಲ್ಲ.) ಧ, 04/11/2007 - 17:26

namskaara naanu e cinema na 11 baari noDde inu noDo aase ide abba en movie sir, e film na ranga sslc director e direct maaDidaare andre namboke agalla. abba en movie. aa haaDu, dailog, camara work, ella class adu alde nan fav.. nata ananth nag bere sakat agi kantaare, avr acting kooDa ashte class agide, noDi sir ella noDi tumba olle chitra adu kannada dalli

mahanvismaya ಧ, 05/30/2007 - 19:24

"ಮುಂಗಾರು ಮಳೆ" ಚಿತ್ರ ತುಂಬಾ ತುಂಬಾ ತುಂಬಾ... ತುಂಬಾನೆ ಚೆನ್ನಾಗಿದೆ, ಸಖತ್ ಆಗಿದೆ. ಮತ್ತೆ ಮತ್ತೆ ನೋಡ ಬೇಕಾನಿಸುತ್ತದೆ. ನಾನು ಇರೋದು ಬೆಂಗಳೂರು, ಕೆಲಸ ಮಾಡೋದು ಚೆನ್ನೈ, ಹಾಗಾಗಿ ಚಿತ್ರವನ್ನು ಒಂದೇ ಸಲ ನೋಡಿದ್ದೇನೆ, ಅದೂ ಬಹಳ ಸಲ try ಮಾಡಿ. ಇನ್ನೊಮ್ಮೆ ಬೆಂಗಳೂರಿಗೆ ಹೋದಾಗ ಖಂಡಿತ ಮತ್ತೊಮ್ಮೆ ನೋಡುತ್ತೇನೆ. ಈ ಚಿತ್ರದ speciality ಅಂದ್ರೆ ಎಲ್ಲಾನೂ ಚೆನ್ನಾಗಿದೆ. ಹಾಡು, ಸಾಹಿತ್ಯ, photography, ನಿರ್ದೇಶನ, ಕಥೆ, ಎಲ್ಲ ಕಲಾವಿದರ ನಟನೆ, ಅದರಲ್ಲಾಂತೂ 'Golden Star' ಗಣೇಶನ ನಟನೆಯಂತೂ simply superb, ಎರಡು ಮಾತಿಲ್ಲ. ಈ ಚಿತ್ರ ಕನ್ನಡ ಚಿತ್ರರಂಗದಲ್ಲಿ ಹೊಸ ಚರಿತ್ರೇನೇ ಬರೆಯುತ್ತೆ. ಒಂದು ಮೈಲಿಗಲ್ಲಾಗುತ್ತೆ.

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಶುಕ್ರ, 12/21/2007 - 18:47

ನಾನು ಕನ್ನದಿಚೆನ್ನೈ ದಲ್ಲಿ ಇದಈನೆ.ನವು ಇಲ್ಲಿ ಇದ್ಈ?

abbas ali ಶನಿ, 02/16/2008 - 11:56

mungarumale thumba channagide.. naanu mungarumale movie 13 bari nodidene. Golden star ganesh ravara acting thumba sakat..naanu jeevandalli 13 bari movie nodidhu mungarumale mathra.. mungarumale team ge thanks..hege tumbha moviegalu kannada chtrarangdalli barali.e movie nodilla andre avaru papa madidare antha.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.