ಗುರು-ದಕ್ಷಿಣೆ ಸಲ್ಲಿಸುವವರಿಗೆ ಅಪ್ರತಿಮ ನಟ ಅಶ್ವಥ್ ವಿಳಾಸ
ಗುರು-ದಕ್ಷಿಣೆ ಸಲ್ಲಿಸುವವರಿಗೆ ನಟ ಅಶ್ವಥ್ ವಿಳಾಸ
ನಾಡಿನ ಹಿರಿಯ ಕಲಾವಿದರು ಕಷ್ಟಕ್ಕೆ ಸಿಲುಕಿದರೆ, ನೋಡುತ್ತಾ ನಿಲ್ಲುವ ಜಾಯಮಾನ ಕನ್ನಡಿಗರದಲ್ಲ. ಅದರಲ್ಲೂ ಚಾಮಯ್ಯ ಮೇಷ್ಟ್ರು ಪಾತ್ರದ ಮೂಲಕ, ಎಲ್ಲರ ಎದೆಯಲ್ಲೂ ನಿಂತ ಅಶ್ವಥ್ ರಂತಹ ಸಂಭಾವಿತರನ್ನು ಕೈ ಬಿಡುವ ಪ್ರಶ್ನೆಯೇ ಇಲ್ಲ. ಅವರ ಕಷ್ಟ; ನಮ್ಮೆಲ್ಲರ ಕಷ್ಟವಲ್ಲವೇ? ಅವರಿಗೆ ನೆರವು ನೀಡುವದು ನಮ್ಮೆಲ್ಲರ ಕರ್ತವ್ಯವೆಂದು ಭಾವಿಸುವ ಕಲಾಪ್ರೇಮಿಗಳಿಗೆ ಅಶ್ವಥ್ ವಿಳಾಸ, ಬ್ಯಾಂಕ್ ಖಾತೆ ಸಂಖ್ಯೆ ಮತ್ತಿತರ ಎಲ್ಲ ವಿವರಗಳು ಇಲ್ಲಿವೆ.
ನಟ ಅಶ್ವಥ್ ಅವರನ್ನು ಬಾಧಿಸುತ್ತಿರುವ ಕಾಯಿಲೆ basilar insufficiency. Essential hypertension NVH.
ಕಾಯಿಲೆಯ ಸ್ವರೂಪ ಸೂಕ್ಷ್ಮವಾದದ್ದೆ.
ಕಲಾಭಿಮಾನಿಗಳು ಗುರು ದಕ್ಷಿಣೆ ಸಲ್ಲಿಸಲು ಉತ್ಸುಕರಾಗಿದ್ದಲ್ಲಿ, ಈ ಕೆಳಕಂಡ ವಿವರಗಳನ್ನು ಗುರುತು ಹಾಕಿಕೊಳ್ಳಬಹುದು.
ನೆನ್ನೆನೇ ಸಂಬಳ ಬಂದಿದೆ, ನಾನಂತೂ ಬ್ಯಾಂಕ್‌ಗೆ ಹೊರಟಿದೀನಿ, ಮತ್ತೆ ನೀವು?
ಮನೆ ವಿಳಾಸ:
ಕೆ. ಎಸ್. ಅಶ್ವಥ್,
ಮನೆ ನಂ. 92, ಕಲಾಶ್ರೀ,
4ನೇ ಮುಖ್ಯರಸ್ತೆ, ಸರಸ್ವತಿಪುರಂ,
ಮೈಸೂರು- 570009
ದೂರವಾಣಿ: 08212543787
ಅಕೌಂಟ್ ವಿವರ:
A/c. No: 000000375
Branch Code No: CNRP0000876
MICR Code: 570015012
For more information:
Contact : Mr. Samshudhin ( Branch Manager)
Ph: +91-821-254 3118 or +91-821-254 3247
ಸಾಲುಗಳು
- Add new comment
- 1790 views
ಅನಿಸಿಕೆಗಳು
Re: ಗುರು-ದಕ್ಷಿಣೆ ಸಲ್ಲಿಸುವವರಿಗೆ ಅಪ್ರತಿಮ ನಟ ಅಶ್ವಥ್ ವಿಳಾಸ
ಆತ್ಮೀಯರೇ,
ನಿಮ್ಮ ಹಿರಿಯ ನಟ ಅಶ್ವಥ್ ಅವರ ಬಗ್ಗೆ ವಿಸ್ಮಯದಲ್ಲಿ ಹಾಕಿರೋದು ಬಹಳ ಒಳ್ಳೆ ಕೆಲಸ. ಆದರೆ ನಿಮಗೆ ಅಶ್ವಥ್ ಅವರ ವಿಳಾಸ ಎಲ್ಲಿಂದ್ ಸಿಕ್ಕಿತು( ಯಾವ ಅಂತರ್ಜಾಲತಾಣ) ಅಂತಾ ಹಾಕೋದು ಉತ್ತಮ. ಅಂತರ್ಜಾಲದಲ್ಲಿ ಒಬ್ಬರ ತಾಣದಿಂದ ಸುದ್ದಿ ತೆಗೆದು ಮತ್ತೊಬ್ಬರು ಹಾಕೋದು ತಪ್ಪೇನಲ್ಲ. ಆದರೆ ಅದು ಸ್ವಂತ ಅಂತರ್ಜಾಲ ತಾಣ ಹೊಂದಿರುವವರಿಗಾದರೆ ಸರಿ. ಆದರೆ ದಟ್ಸ್ ಕನ್ನಡದಂಥ ಚಿರಪರಿಚಿತ ತಾಣದಿಂದ ಪಡೆದ ಸುದ್ದಿಯನ್ನು ಹಾಕಿದೆ ಮೇಲೆ. ಕೃಪೆ: ದಟ್ಸ್ ಕನ್ನಡ.ಕಾಂ ಎಂದು ಹಾಕೋದು ಉತ್ತಮ ಎಂದು ನಂಬಿದ್ದೇನೆ. ಅದು ಯಾವುದೇಸುದ್ದಿ ಮೂಲಕ್ಕಾದರೂ ಸರಿ. ಏಕೆಂದರೆ ಅಶ್ವಥ್ ಅವರ ವಿಳಾಸ ಹಾಗೂ ಖಾತೆ ನಂಬರ್ ಪ್ರಕಟಿಸಲು ತೆಗೆದುಕೊಂಡ ಬಲ್ಲವರೇ ಬಲ್ಲರು.
ಅದು ಹಾಗಿರಲಿ, ನಿಮ್ಮ ನಗರಿಯ ಹೆಸರೇ ಚೆಂದ, ಗೆಳೆಯನೊಬ್ಬನಿಂದ ಇದರ ಬಗ್ಗೆ ತಿಳಿದು ನಾನು ನಿಮ್ಮ ನಗರಿಗೆ ಕಾಲಿಟ್ಟಿರುವೆ. ಉಲಿಸಿಕೊಳ್ಳುವ ಭಾರ ನಿಮ್ಮದು
-ಮಲೆನಾಡಿಗ
Re: ಗುರು-ದಕ್ಷಿಣೆ ಸಲ್ಲಿಸುವವರಿಗೆ ಅಪ್ರತಿಮ ನಟ ಅಶ್ವಥ್ ವಿಳಾಸ
ಆತ್ಮೀಯರೇ,
ನಿಮ್ಮ ಹಿರಿಯ ನಟ ಅಶ್ವಥ್ ಅವರ ಬಗ್ಗೆ ವಿಸ್ಮಯದಲ್ಲಿ ಹಾಕಿರೋದು ಬಹಳ ಒಳ್ಳೆ ಕೆಲಸ. ಆದರೆ ನಿಮಗೆ ಅಶ್ವಥ್ ಅವರ ವಿಳಾಸ ಎಲ್ಲಿಂದ್ ಸಿಕ್ಕಿತು( ಯಾವ ಅಂತರ್ಜಾಲತಾಣ) ಅಂತಾ ಹಾಕೋದು ಉತ್ತಮ. ಅಂತರ್ಜಾಲದಲ್ಲಿ ಒಬ್ಬರ ತಾಣದಿಂದ ಸುದ್ದಿ ತೆಗೆದು ಮತ್ತೊಬ್ಬರು ಹಾಕೋದು ತಪ್ಪೇನಲ್ಲ. ಆದರೆ ಅದು ಸ್ವಂತ ಅಂತರ್ಜಾಲ ತಾಣ ಹೊಂದಿರುವವರಿಂದ ಪಡೆದಿದ್ದಾದರೆ ಸರಿ. ಆದರೆ ದಟ್ಸ್ ಕನ್ನಡದಂಥ ಚಿರಪರಿಚಿತ ತಾಣದಿಂದ ಪಡೆದ ಸುದ್ದಿಯನ್ನು ಹಾಕಿದೆ ಮೇಲೆ. ಕೃಪೆ: ದಟ್ಸ್ ಕನ್ನಡ.ಕಾಂ ಎಂದು ಹಾಕೋದು ಉತ್ತಮ ಎಂದು ನಂಬಿದ್ದೇನೆ. ಅದು ಯಾವುದೇಸುದ್ದಿ ಮೂಲಕ್ಕಾದರೂ ಸರಿ. ಏಕೆಂದರೆ ಅಶ್ವಥ್ ಅವರ ವಿಳಾಸ ಹಾಗೂ ಖಾತೆ ನಂಬರ್ ಪ್ರಕಟಿಸಲು ತೆಗೆದುಕೊಂಡ ಕಷ್ಟ ಬಲ್ಲವರೇ ಬಲ್ಲರು.
ಅದು ಹಾಗಿರಲಿ, ನಿಮ್ಮ ನಗರಿಯ ಹೆಸರೇ ಚೆಂದ, ಗೆಳೆಯನೊಬ್ಬನಿಂದ ಇದರ ಬಗ್ಗೆ ತಿಳಿದು ನಾನು ನಿಮ್ಮ ನಗರಿಗೆ ಕಾಲಿಟ್ಟಿರುವೆ. ಉಳಿಸಿಕೊಳ್ಳುವ ಭಾರ ನಿಮ್ಮದು
-ಮಲೆನಾಡಿಗ
Re: ಗುರು-ದಕ್ಷಿಣೆ ಸಲ್ಲಿಸುವವರಿಗೆ ಅಪ್ರತಿಮ ನಟ ಅಶ್ವಥ್ ವಿಳಾಸ
ನಲುಮೆಯ ಮಲೆನಾಡಿಗರವರೇ,
ನಿಮ್ಮ ಸಲಹೆಗೆ ನನ್ನ ಕೃತಜ್ಞತೆಗಳು. ಈ ಮಾಹಿತಿಯನ್ನು, ಮೇರು ನಟ ಅಶ್ವಥ್ ಅವರ ಅಳಿಲು ಸೇವೆಗಾಗಿ ಇಲ್ಲಿ ಹಾಕಿದ್ದೇನೆ ಹೊರತು ಅದರಲ್ಲಿ ಯಾವುದೇ ವಯಕ್ತಿಕ ಅಥವಾ ದುಡ್ಡಿನ ಹಿನ್ನಲೆ ಇಲ್ಲ.
ದಟ್ಸ್ ಕನ್ನಡದಲ್ಲಿ, ಮೊದಲ ಸತಿ ಶ್ರೀ ಅಶ್ವಥ್ ಅವರ ಬಗ್ಗೆ ಅಂಕಣ ಬಂದಾಗ, ದುಂಬಾಲು ಬಿದ್ದು, ಅವರ ವಿಳಾಸ ಪಡೆದುಕೊಂಡಿದ್ದೇನೆ. ಈ ವಿಚಾರವನ್ನು ಬರಿ ವಿಸ್ಮಯದಲ್ಲೇ ಅಲ್ಲ, ಕನ್ನಡ ಬಳಗಗಳಾದ, ವೀರಕನ್ನಡಿಗ, ವಿಪ್ರೊ ಕನ್ನಡ ಬಳಗಕ್ಕೂ ರವಾನಿಸಿದ್ದೇನೆ.
ಇದರ ಹಿಂದಿನ ಉದ್ದೇಶ, ಕೇವಲ ಮೇರು ನಟನಿಗೆ ಅಳಿಲು ಸೇವೆ ಮಾಡುವದೇ ಹೊರತು, ಪ್ರಚಾರಕ್ಕೆ ಅಲ್ಲ.
ಇದರಿಂದಾಗಿ, ಯಾರಿಗಾದರೂ, ಯಾವುದೇ ರೀತಿಯಲ್ಲಿ ನೋವುಂಟಾಗಿದ್ದಾರೆ, ನನ್ನ ದಯವಿಟ್ಟು ಕ್ಷಮಿಸಿ.
ಹಾಗೆ, ನಿಮ್ಮಿಂದ ಸಾಧ್ಯವಾದಷ್ಟು ಗುರುದಕ್ಷಿಣೆ ಯನ್ನು, ಮೇರು ನಟನಿಗೆ ಅರ್ಪಿಸಿ ಎಂದು ಈ ಮೂಲಕ ಕೇಳಿಕೊಳ್ಳುತ್ತೇನೆ.
Re: ಗುರು-ದಕ್ಷಿಣೆ ಸಲ್ಲಿಸುವವರಿಗೆ ಅಪ್ರತಿಮ ನಟ ಅಶ್ವಥ್ ವಿಳಾಸ
ಆತ್ಮೀಯರೇ,
ನಿಮ್ಮ ಉದ್ದೇಶವನ್ನು ಖಂಡಿತಾ ಪ್ರಶ್ನಿಸುತ್ತಿಲ್ಲ. ಅದು ಪ್ರಶ್ನಿಸುವಂತಹ ವಿಷಯವೂ ಅಲ್ಲ. ನನ್ನ ಕೋರಿಕೆ ಆ ಸುದ್ದಿಯನ್ನು ಮೊದಲು ಪ್ರಕಟಿಸಿದವರು ಪಟ್ಟ ಶ್ರಮಕ್ಕೆ ಸಣ್ಣದಾಗಿ ನಾವು ಧನ್ಯವಾದ ಅರ್ಪಿಸುವುದು ಒಳ್ಳೆಯದಲ್ವಾ ಅಂತ. ಪ್ರಚಾರ ಬೇಡ ಎನ್ನಬೇಡಿ. ನಿಮಗೆ ಬೇಡದಿದ್ದರೂ ನೀವು ಹಾಕಿದ ವಿಷಯಕ್ಕೆ ಖಂಡಿತಾ ಪ್ರಚಾರ ಅಗತ್ಯವಿದೆ. ಒಳ್ಳೆಯ ಕೆಲಸ ,ಮುಂದುವರೆಸಿ. ನಮ್ಮ ಬೆಂಬಲ ಇದ್ದೇ ಇರುತ್ತೆ.
-ಮಲೆನಾಡಿಗ
ಇದು ಖಂಡಿತ ಒಳ್ಳೆಯ ಕೆಲಸ.. ನೀವು
ಇದು ಖಂಡಿತ ಒಳ್ಳೆಯ ಕೆಲಸ.. ನೀವು ಅಭಿನನದನೆಗೆ ಅರ್ಹರು.
ನನ್ನ ಅಳಿಲು ಕಾಣಿಕೆಯೂ ಅವರಿಗೆ ಸಲ್ಲುತ್ತೆ.(ಅದಕಾಗಿ ನಾನು ಇಲ್ಲಿ ನನನ್ ಹೆಸರು ಹಾಕಿಲ್ಲ/ ಬಲಗೈಲಿ ಕೊಟ್ಟದ್ದು ಎಡಕೈ ಗೆ ಕಾಣಬಾರದು)
ಅಣ್ಣಾವ್ರು ಹಾಗೂ ಇನ್ನಿತರರೊಂದಿಗೆ ಹಲವಾರು ವರ್ಷಗಳ ಕಾಲ ನಮ್ಮನ್ನು ಅವರು ರಂಜಿಸಿದ್ದಾರೆ, ಅಂತವರನ್ನು ನಾವು ಮರೆಯಲು ಸಾಧ್ಯವೇ?..
ಅವರು ಬೇಗ ಗುಣಮುಖರಾಗಲಿ..