Skip to main content

ಇದು ಪ್ರೀತಿನಾ?

ಬರೆದಿದ್ದುNovember 4, 2008
4ಅನಿಸಿಕೆಗಳು

ಪ್ರೀತಿಯಲ್ಲಿ ಹಲವು ಬಗೆ
1) ಬಡವರು ಜಾಸ್ತಿ ಕನಸು ಕಾಣ್ತಾ ಪ್ರೀತಿ ಮಾಡ್ತಾರೆ.

2) ಸ್ವಲ್ಪ ದುಡ್ಡಿರುವವರು ಶೋಕಿ ಮಾಡ್ತಾ ಟೈಂಪಾಸ್ಗೆ ಪ್ರೀತಿ ಮಾಡ್ತಾರೆ.
3) ಇನ್ನೂ ಸ್ವಲ್ಪ ಹೈ ಲೆವಲ್ಗಿರುವವರು ಮಂಚ ಹತ್ತಿ ಆಸೆ ಎಲ್ಲಾ ತೀರಿಸ್ಕೊಂಡು ಟಾಟಾ ಹೇಳಿ ಹೋಗ್ತಾರೆ.

ಹಾಗಾದ್ರೆ ಈ ಪ್ರೀತಿ ಅಂದ್ರೆ ಏನು? ಒಂದು ಗಂಡು, ಹೆಣ್ಣನ್ನ ನೋಡಿ. ಅವಳ ಅಂದ, ಚೆಂದ, ಅಥವಾ ಪರಿಚಯ, ಸ್ನೇಹ, ಸಂಬಂಧಗಳಿಂದ ಅವಳನ್ನು ಮೋಹದ ಬಲೆಯಲ್ಲಿ ಬೀಳಿಸಿಕೊಳ್ಳುವ ಚಾತುರ್ಯಗಳ ಹಲವಾರು ಕಾರಣಗಳು ಸಿಗುತ್ವೆ. ಆದರೆ ಹೆಣ್ಣು ತಾನು ಯಾವ ಅಂಥ ಅಂದ-ಚೆಂದ ಗಂಡಸಿನಲ್ಲಿ ಕಾಣ್ತಾಳೆ? ಯಾವ ಸ್ನೇಹ, ಬಾಂದವ್ಯ ಅವಳಿಗೆ ಇಷ್ಟವಾಗುತ್ತೆ? ತಾನು ಹೇಗೆ ಆತನಿಗೆ ಮನಸ್ಸನ್ನ ಕೊಡ್ತಾಳೆ? ಕೊಟ್ಟ ನಂತರ ತಾನು ಕಾಣುವ ಕನಸೆಷ್ಟು? ನಿಜಕ್ಕೂ ಹೇಳಬೇಕೆಂದರೆ ಎಲ್ಲಾ ಹೆಣ್ಣು ನಡೆದು ಕೊಳ್ಳುವ ರೀತಿ ಒಂದೇ ತರ ಇರುತ್ತೆ. ಅವಳು ಒಂದು ಗಂಡಸಿನ ಸಹವಾಸವಿದೆ ಅಂದರೆ ಅವಳು ಬೇರೆ ಯಾರನ್ನು ತನ್ನ ಮನಸ್ಸಿನಲ್ಲಿ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ!? ಆದರೆ ಅದೇ ಗಂಡು ತಾನು ಪ್ರೀತಿಸುತ್ತಿರುವ ಹುಡುಗಿ ಮನಸ್ಸಿನಲ್ಲಿದ್ದರೂ.. ರೋಡಿನಲ್ಲಿ, ಬಸ್ಸಿನಲ್ಲಿ, ಪಾರ್ಕ್ ನಲ್ಲಿ.. ಬೇರೆ ಕೆಲವು ಜಾಗಗಳಲ್ಲಿ ಕಂಡ ಕೆಲವು ಚೆಲುವೆಯರ (ಚತುರೆಯರ) ನೋಡಿ ಮನದಲ್ಲಿ ಇನ್ನಷ್ಟು ಆಸೆಗಳನ್ನು ಬೆಳೆಸಿಕೊಳ್ಳದೇ ಇರಲಾರ!!

ಬನ್ನಿ ಒಂದೆರಡು ಘಟನೆಗಳನ್ನು ನೋಡೋಣ.

1) ಸಂಜೀವ ಮತ್ತು ಮಂಜುಳ ಒಟ್ಟಿಗೆ ಸರಕಾರಿ ಶಾಲೆಯಲ್ಲಿ ಐದನೆ ತರಗತಿಯಿಂದ ಓದುತ್ತಿದ್ದವರು. ಹತ್ತನೆ ತರಗತಿ ಮುಗಿಯುವ ಹೊತ್ತಿಗೆ, ನವಿರಾದ ಪ್ರೀತಿ ಮನಸ್ಸಿನಲ್ಲಿ ಅಂಕುರಗೊಂಡಿತ್ತು. ಭಾವನೆಗಳಿಗೆ ಬಣ್ಣ ಹಚ್ಚುತ್ತ ಬಂದಿದ್ದ ಇಬ್ಬರೂ, ಕಾಲೇಜಿನ ಮೆಟ್ಟಿಲು ನೋಡಿದ್ದೇ, ಅಲ್ಲಿಯ ವಾತಾವರಣಗಳಿಗೆ ಬದಲಾಗಿ, ಇಬ್ಬರೂ ಪ್ರೀತಿಯ ವಿನಿಮಯ ಮಾಡಿಕೊಂಡಿದ್ದು ಆಯ್ತು. ಸರಿ ಕಾಲೇಜು ಮನೆ ಮಧ್ಯೆ ಪಾರ್ಕು. ಎಷ್ಟುದಿನ ಅಂಥಾ? ಸಂಜೀವನ ಮನೆಯವರು ಸ್ವಲ್ಪ ಶ್ರೀಮಂತರು. ಮಂಜುಳ ಇವರಿಗಿಂತ ಬಡವರು. ಇಬ್ಬರ ಮನೆಯಲ್ಲೂ ಪ್ರೀತಿ ವಿಷಯ ಮಾತನಾಡುವಂತಿಲ್ಲ. ಸರಿ ಇವರೇ ಡಿಸೈಡ್ ಮಾಡಿ, ಗೆಳೆಯರ ಸಹಾಯದೊಂದಿಗೆ ರಿಜಿಸ್ಟರ್ ಮದುವೆ ಮಾಡಿಕೊಂಡು ಒಂದು ವರ್ಷಗಳ ಕಾಲ ತಲೆಮರೆಸಿಕೊಂಡಿದ್ದರು. ಹೇಗೊ ಇದೆಲ್ಲ ಮನೆಯವರಿಗೆ ತಿಳಿದು, ಕುಪಿತರಾಗಿ, ಅವರನ್ನು ಭೇಟಿ ಮಾಡಲು ಹೋದರೆ; ಅವರಿಬ್ಬರ ನಡುವೆ ಒಂದು ಮುದ್ದಾದ ಮಗುವನ್ನ ನೋಡಿ, ಇದ್ದ ಕಲ್ಲು ಮನಸ್ಸು ಕರಗಿ ಅವರನ್ನು ಮನೆಗೆ ಕರೆ ತಂದರು...

2) ಅವಳ ಹೆಸರು ದೀಪಾ, ಸ್ವಲ್ಪ ಶೋಕಿ ಜಾಸ್ತಿ ಮನೆಯಲ್ಲಿ ಅಪ್ಪ ಕೂಲಿ ಕೆಲಸ ಮಾಡ್ತಾನೆ. ಅಮ್ಮ ಮನೆ ಕೆಲಸ. ದೀಪಾ ಈಗ ಸೆಕಂಡ್ ಪಿ.ಯು.ಸಿ. ಓದ್ತಾ ಇದ್ದಾಳೆ. ನೋಡೊಕೆ ಸೆಕ್ಸಿ ಗರ್ಲ್, ಯಾಕೆಂದ್ರೆ ಶೋಕಿಯೇ ಕಾರಣ.! ಅವಳ ಉಡುಗೆ-ತೊಡುಗೆ ಯಾವ ಶ್ರೀಮಂತರಿಗಿಂತ ಏನು ಕಡಿಮೆ ಇರಲಿಲ್ಲ. ಇನ್ನು ಹುಡುಗರ ಹದ್ದಿನ ಕಣ್ಣು ಇವಳ ಮೇಲೆ ಬೀಳದೇ ಇರುತ್ಯೇ? ಎಷ್ಟು ಜನ ಲೈನ್ ಹೊಡಿತಿದ್ರು? ಲವ್ ಲೆಟರ್ ಬರಿತಿದ್ರು? ಇವಳು ಯಾವುದಕ್ಕೂ ಕೇರ್ ಮಾಡ್ಲಿಲ್ಲ. ಹೀಗೆ ಸ್ವಲ್ಪದಿನಗಳ ನಂತರ ಅದೇ ಕಾಲೇಜಿನ ಒಬ್ಬ ರವಿತೇಜ ಅನ್ನುವ ಹುಡುಗ, ಇವಳನ್ನ ನೋಡಿ.. ಒಂದು ದಿನ ಅವಳನ್ನು ಮಾತನಾಡಿಸಿ ಒಂದು ಹೂವನ್ನು ಕೊಟ್ಟು ಹೋದ. ಅವಳು ಆಷ್ಟೆ ಎಲ್ಲಾ ನಾರ್ಮಲ್ ಅಂತೆ ಸುಮ್ನೆ ಇದ್ಲು.. ಅವನು ಶ್ರೀಮಂತ ಜೊತೆಗೆ ಚತುರ! ಹೀಗೆ ದಿನಗಳು ಕಳೆದಂತೆ ಅವರಿಬ್ಬರ ಒಡನಾಟ ಜಾಸ್ತಿಯಾಗಿ, ಅವಳಿಗೋಸ್ಕರ ದುಡ್ಡನ್ನ ಜಾಸ್ತಿ ಖರ್ಚು ಮಾಡ್ತಾ ಇದ್ದ. ಅವಳು ಕೂಡ ಎಲ್ಲೆ ಮೀರಿ ಅವನ ಸಂಗ ಶುರು ಮಾಡಿದ್ಲು. ಇದು ಎಲ್ಲಿವರೆಗೂ ಬಂತಪ್ಪ ಅಂದ್ರೆ.. ಒಂದಿನ ರೂಮಲ್ಲಿ ಡ್ರಿಂಕ್ಸ್ ಮಾಡೊಕೆ ಶುರು ಮಾಡಿ ಅವಳಿಗೆ ನಿದ್ದೆ ಮಾತ್ರೆ ಬೆರೆಸಿ ಕುಡಿಸಿದ್ದ. ಅವಳ ಬಾಳಿನ ಜೊತೆ ಆಟವನ್ನು ಆಡಿಬಿಟ್ಟ! ಅದೇ ಕೊನೆ.. ಅವನು ಮತ್ತೆ ಆ ಕಾಲೇಜಿಗೆ ಬರಲೇ ಇಲ್ಲ.

ಬೆಕ್ಕು ಕಣ್ಮುಚ್ಚಿಕೊಂಡು ಹಾಲ್ ಕುಡಿತಿದ್ರೆ ಪ್ರಪಂಚಕ್ಕೆ ಗೊತ್ತಾಗೊಲ್ವ? ತಾನು ಮಾಡಿದ್ದ ಪಾಪ ಪ್ರಜ್ನೆ ಅವಳಿಗೆ ಇವಾಗ್ಲು ಕಾಡ್ತಾ ಇರುತ್ತೆ.. ಯಾಕೆ ಅಂದ್ರೆ.. ಪ್ರೀತಿಗೆ ನಾವು ಬೆಲೆ ಕೊಡ್ದೆ ಇದ್ರೆ, ಅದು ನಮ್ಮನ ಎಂಥಾ ಪರಿಸ್ಥಿತಿಗೆ ತಂದು ನಿಲ್ಲಿಸಿ ಬಿಡುತ್ತೆ ಅಂದ್ರೆ ಜೀವನ ಪೂರ್ತಿ ನಮ್ಮ ಬಾಳಲ್ಲೊಂದು ಕಪ್ಪು ಚುಕ್ಕೆ. ಈಗ ದೀಪಾಳ ಮನೆಯವರಿಗೆ ಆಕೆ ಗರ್ಭಿಣಿ ಎಂಬ ವಿಷಯ ತಿಳಿದ ಮೇಲೆ, ಆಕೆಗೆ ಮನಬಂದಂತೆ ಬೈದರು ಆದರೆ ಏನು ಪ್ರಯೋಜನ? ಕೈಲಾಗದ ಪರಿಸ್ಥಿತಿಯ ನಡುವೆ, ಆ ಊರನ್ನೆ ಬಿಟ್ಟು ಹೋದರು. ಮಗಳು ಒಂದು ಮಗುವಿಗೆ ಜನ್ಮ ನೀಡಿದಳು.
ದಿನ ಅವಳ ಮನಸ್ಸಿನಲ್ಲಿ ಕಾಡುತ್ತಿದ್ದ ಪಾಪ ಪ್ರಜ್ನೆ, ಈಗ ಮಡಿಲಲ್ಲಿ ಅದನ್ನು ಮರೆಸುವ ಮುಗ್ದ ಮಗುವಿನ ಎದೆ ಹಾಲುಣ್ಣುವ ಕರೆ ಕೇಳಿಬಂತು..!!

ಪ್ರೀತಿ, ಪ್ರೀತಿಯಾಗೆ ಉಳಿಯಬೇಕು. ಅಂದ್ರೆ ನಾವು ಪ್ರೀತೀನ ಮಾತ್ರ ಪ್ರೀತಿಸಬೇಕು. ಪ್ರೀತಿ ಅತಿಯಾದ್ರೆ ತುಂಬಿ ಚೆಲ್ಲಿಹೊಗುತ್ತೆ, ಕಡಿಮೆ ಆದ್ರೆ ಪ್ರೀತಿ ಇದೆ ಅನ್ನೋದೆ ಮರೆತುಹೋಗುತ್ತೆ. ಪ್ರೀತಿ ಅನ್ನೋದು ಜೀವನದಲ್ಲಿ ಬಹು ಮುಖ್ಯ ಅಂಶ. ಇದು ಎಲ್ಲರ ಬದುಕಲ್ಲಿ ಭಾಗವಹಿಸಿ ಪಾತ್ರವಹಿಸುವ ಪ್ರೀತಿ, ಅಲೆಯು ಆಗುತ್ತೆ, ಸುನಾಮಿಯು ಆಗುತ್ತೆ.
ನಾವು ಬದುಕುವುದನ್ನು ಯೋಚಿಸಿ, ನಮ್ಮನ್ನು ಪ್ರೀತಿಸಿ, ಮನೆಗೆ ಬೆಳಕಾಗಿ ಬರುವ ಹೆಣ್ಣನ್ನು ಆರಾಧಿಸಿದರೆ.. ಪ್ರೀತಿ ನಮ್ಮ ಜೊತೆಯೇ ಶಾಶ್ವತವಾಗಿ ಉಳಿಯುತ್ತೆ. ನೀವೇನಂತೀರ???

ಲೇಖಕರು

ಯೋಗೇಶ್

ನಿನಗೇಳದ ಮಾತೊಂದು ಮನದ(ನ)ಲ್ಲೆ ಉಳಿದಿದೆ.

ಅನಿಸಿಕೆಗಳು

ಬಶೀರ್ ಕೊಡಗು ಧ, 11/05/2008 - 00:29

ಸೌಂದರ್ಯ, ಹಣ ನೋಡಿ ಪ್ರೀತಿ ಮಾಡುವವರೆ ಹೆಚ್ಚು.

ರಾಜೇಶ ಹೆಗಡೆ ಶುಕ್ರ, 11/07/2008 - 14:57

ಹಾಯ್ ಯೋಗೇಶ್,
ನೀವು ಹೇಳೋದು ನಿಜ.
ಸೌಂದರ್ಯ ನೋಡಿ ಉಂಟಾಗುವ ಪ್ರೀತಿ ಮೆಚ್ಯುರಿಟಿ ಇಲ್ಲದ್ದು. ಇನ್ನು ಹಣ ನೋಡಿ ಮಾಡುವ ಪ್ರೀತಿ ಕೂಡಾ ಪ್ರೀತಿಯ ನಾಟಕ ಅಂತಾ ಹೇಳಬಹುದು. ;)

ಕೆಲವು ಬಾರಿ ಯಕಶ್ಚಿತ್ ಆಕರ್ಷಣೆಯನ್ನು, ಬರೀ ಸ್ನೇಹವನ್ನು ಪ್ರೀತಿ ಅಂತಾ ತಿಳಿದು ನಾವು ಮುಂದುವರಿಯುತ್ತೇವೆ ಆಗ ನಿರಾಸೆ ಕಾದಿಟ್ಟದ್ದು. :(

ಆಕರ್ಷಣೆಯ ಗುಂಗಿನಲ್ಲಿ ಆ ವ್ಯಕ್ತಿಯಲ್ಲಿರುವ ಯಾವ ದೋಷಗಳೂ ಸಹ ದೊಡ್ಡದೆನಿಸುವದಿಲ್ಲ. ಆದರೆ ಆಕರ್ಷಣೆ ಕಡಿಮೆ ಆದಂತೆ ಎಲ್ಲವೂ ಸಹಿಸಲಾಗದ ದೋಷಗಳು ಅನ್ನಿಸಬಹುದು.
ಅನೇಕ ಪ್ರೇಮ ವಿವಾಹಗಳು ಕೆಲವು ವರ್ಷಗಳ ನಂತರ ಮುರಿಯುವದೇ ಈ ಕಾರಣಕ್ಕೆ.
ಹೊಂದಾಣಿಕೆ, ನಿಷ್ಕಲ್ಮಶವಾಗಿ ಬೇರೇನೂ ಅಪೇಕ್ಷೆ ಇಲ್ಲದೇ ಬಾಳಸಂಗಾತಿಯನ್ನು ಪ್ರೀತಿಸಿದಾಗ ಅದರಿಂದ ಸಿಗುವ ಮಜವೇ ಬೇರೆ. :dance:

ನಿಜವಾದ ಪ್ರೀತಿ ಎಂದೂ ಕಡಿಮೆ ಆಗದು. :)

premi143 ಧ, 05/25/2011 - 11:50

ನಿಜ ನೀವು ಹೇಳೋದು ನೋಡಲಿಕ್ಕೆ ಅಂದ ಚೆಂದ ಹಣ ಮುಖ್ಯ ಅಲ್ಲ ...

ಮಂಜು ಪೂಜಾರಿ (ಪ್ರಮಾಣಿಸಲ್ಪಟ್ಟಿಲ್ಲ.) ಭಾನು, 06/17/2012 - 17:35

 Kissಯೊಗೇಶ್ ನೀವು ತುಂಬಾ ತಿಲ್ಕೋಂಡಿದಿರಾ ಹೌದು ಎಲ್ರಿಗೂ ಇದು ತಿಳಿಬೇಕು ನೀವೆ ಏನಾದ್ರು ಮಾಡಿ ಒಂದು ಬುಕ್ ಬರಿರಿ ಎಲ್ರು ಹೋದಿ ತಿಲ್ಕೊತ್ತಾರೆ 

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.