Skip to main content

ನಾಲ್ಕು ಜನರೊಂದಿಗೆ ಮಾತನಾಡುವಾಗ ನಿಮ್ಮ ವರ್ತನೆ ಹೀಗಿದ್ದರೆ ಚೆನ್ನ.

ಬರೆದಿದ್ದುMay 13, 2008
3ಅನಿಸಿಕೆಗಳು

೧. ಗೊತ್ತಿಲ್ಲದ ವಿಷಯದ ಬಗ್ಗೆ ಮಾತನಾಡಬಾರದು

೨. ಬೇರೆಯವರು ಮಾತನಾಡುವಾಗ ಅರ್ಧಕ್ಕೆ ಮಾತನಾಡಬಾರದು.

೩. ಬೇರೆಯವರ ಮಾತನ್ನು ಕೇಳುವ ಸಹನೆ ಇರಬೇಕು.

೪.ನಿಮ್ಮ ಮಾತಿನ ಅಗತ್ಯ, ಅನಿವಾರ್ಯ ಇದ್ದರೆ ಮಾತ್ರ ಮಾತನಾಡಬೇಕು. ಕೊನೆ ಪಕ್ಷ ನಿಮ್ಮ ಮಾತಿಗೆ ಅಲ್ಲಿ
ಗೌರವ ಮನ್ನಣೆಗಳಾದರೂ ಇರಬೇಕು.

೫. ವ್ಯಕ್ತಿಗತ ಟೀಕೆ, ನಿಂದನೆ ಸಲ್ಲದು.

೬. ಆಡುವ ಮಾತು ಬೇರೆಯವರನ್ನು ನೋಯಿಸದಂತೆ ಇರಬೇಕು.

೭. ಮಾತನಾಡುವಾಗ ಸಮಯಪ್ರಜ್ನ್ಯೆ ಅವಶ್ಯಕ.

೮. ಸಂದರ್ಭಕ್ಕೆ ತಕ್ಕಂತೆ ಮಾತನಾಡಬೇಕು. ಅನಾವಶ್ಯಕ ಮಾತುಗಳು ಬೇಡ.

೯. ಮಾತು ಸ್ಪಷ್ಟವಾಗಿರಬೇಕು.

೧೦. ಮಾತನಾಡುವಾಗ ಉಳಿದವರ ಪ್ರತಿಕ್ರಿಯೆ ಹೇಗಿರುತ್ತದೆಂದು ಗಮನಿಸಬೇಕು.

೧೧. ಮುಖ ಗಂಟಿಕ್ಕಿ ಮಾತನಾಡಬಾರದು.

೧೨. ಮಾತು ವಾದಮಾಡುವಂತಿರಬಾರದು, ಮಾತಿನಲ್ಲಿ ಅಹಂ ಇರಬಾರದು.

೧೩. ಮಾತನಾಡುವಾಗ ಸಂಕುಚಿತ ಮನೋಭಾವ ಬಿಟ್ಟು ಹೃದಯ ಶ್ರೀಮಂತಿಕೆ ತೋರಿಸಬೇಕು.

೧೪. ಮಾತು ತಿಳಿಹಾಸ್ಯದಿಂದ ಕೂಡಿದ್ದು ಸ್ನೇಹ ಪೂರ್ವಕವಾಗಿರಬೇಕು.

೧೫. ಆಡುವ ಪ್ರತಿ ಮಾತಿನಲ್ಲೂ ಆತ್ಮವಿಶ್ವಾಸ ಇರಬೇಕು.

ಈ ಮೇಲಿನ ಅಂಶಗಳನ್ನು ಗಮನದಲ್ಲಿಟ್ಟುಕೊಂಡರೆ ಎಂತಹವರ ಸ್ನೇಹ ಬೇಕಾದರೂ ಸಂಪಾದಿಸಬಹುದು, ಅಲ್ಲದೆ ಒಳ್ಳೆಯ ಮಾತುಗಾರರೂ ಆಗಬಹುದು.

ಲೇಖಕರು

ಯೋಗೇಶ್

ನಿನಗೇಳದ ಮಾತೊಂದು ಮನದ(ನ)ಲ್ಲೆ ಉಳಿದಿದೆ.

ಅನಿಸಿಕೆಗಳು

ನಿಜ, ಮಾತು ಮನೆ ಕೆಡಿಸಿತು, ತೂತು ಓಲೆ ಕೆಡಿಸಿತು ನಮ್ಮ ಹಿರಿಯರು ಸುಮ್ನೆ ಹೇಳಿದ್ದಾರಾ ಈ ಮಾತನ್ನು.

ನಿಮ್ಮ ಈ points ಗಳು ತುಂಬಾನೆ ಅರ್ಥಗರ್ಭಿವಾಗಿವೆ.

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಸೋಮ, 12/21/2009 - 13:03

ನಿವು ಹೆಳಿದ್ದು ಸತ್ಯ..

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.