
ಹೊಳೆಆಲೂರ: ಪರಂಪರಾಕೂಟಾದಿಂದ ಶೈಕ್ಷಣಿಕ ಪ್ರವಾಸ
ಗದಗ ಜಿಲ್ಲೆಯ ರೋಣ ತಾಲೂಕಿನ ಹೊಳೆಆಲೂರಿನ ಶ್ರೀ ಕವಿಪ್ರ ಸಮಿತಿಯ ಕಲಾ, ವಿಜ್ಞಾನ, ವಾಣಿಜ್ಯ ಮಹಾವಿದ್ಯಾಲಯ ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಪರಂಪರಾಕೂಟದ ವತಿಯಿಂದ "ಐತಿಹಾಸಿಕ ಸ್ಠಳಗಳ ಶೈಕ್ಷಣಿಕ ಅಧ್ಯಯನ" ಕುರಿತು ಬಾದಾಮಿ, ವಿಜಯಪುರಗೆ ಒಂದು ದಿನದ ಪ್ರವಾಸ ಕೈಗೊಳ್ಳಲಾಯಿತು. ಬಾದಾಮಿಯಲ್ಲಿ ಗುಹಾದೇವಾಲಯಗಳ ಕುರಿತು ಮಾಹಿತಿ ನೀಡಲಾಯಿತಲ್ಲದೆ, ವಿಜಯಪುರದಲ್ಲಿ ಗೋಲಗುಂಬಜ್, ಮ್ಯೂಜಿಯಂ, ಬಾರಾಕಮಾನ, ಇಬ್ರಾಹಿಮ್ ರೋಜಾ, ಜಾಮೀಯಾ ಮಸೀಜಿದ್ ಮೊದಲಾದವುಗಳನ್ನು ನೋಡಲಾಯಿತಲ್ಲದೆ ಅವುಗಳ ಕುರಿತು ಸಂಪೂರ್ಣ ವಿವರಗಳನ್ನು ನೀಡಿ ವಿದ್ಯಾರ್ಥಿಗಳ ಸಂದೇಹದ ಪ್ರಶ್ನೆಗಳಿಗೆ ಉತ್ತರವನ್ನು ಪರಂಪರಾ ಕೂಟದ ಸಂಚಾಲಕ ಡಾ.ಎಂ.ಎನ್.ಕಡಪಟ್ಟಿ ನೀಡಿದರು. ಪ್ರಾಚಾರ್ಯ ಡಾ.ಎಸ್.ವಿ.ಅಂದಾನಶೆಟ್ರ ಮಾರ್ಗದರ್ಶನದಲ್ಲಿ ಪರಂಪರಾಕೂಟದ ಕಾರ್ಯದರ್ಶಿ ಡಾ.ಪ್ರಭು ಗಂಜಿಹಾಳ, ಪ್ರೊ.ಮಲ್ಲಿಕಾರ್ಜುನ ಬೇವೂರ ಅವರ ನೇತೃತ್ವದಲ್ಲಿ ಬಿ.ಎ. ದ್ವಿತೀಯ, ನಾಲ್ಕನೆಯ ಹಾಗೂ ಆರನೇ ಸೆಮಿಸ್ಟರ್ ನ ಒಟ್ಟು ೪೯ ವಿದ್ಯಾರ್ಥಿ/ ವಿದ್ಯಾರ್ಥಿನಿಯರು ಶೈಕ್ಷಣಿಕ ಅಧ್ಯಯನ ಪ್ರವಾಸದಲ್ಲಿ ಪಾಲ್ಗೊಂಡಿದ್ದರು.
ವರದಿ: ಡಾ.ಪ್ರಭು ಗಂಜಿಹಾಳ್
ಮೊ:೯೪೪೮೭೭೫೩೪೬
ಸಾಲುಗಳು
- 75 views
ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ