ಹಸಿರು ಸೇನೆ
ಹಸಿರೆ ಉಸಿರಾಗಿಸಿಕೊಂಡ
ಹಸಿರು ಸೇನೆಯವರು|
ಮನೆಗೊಂದು ಮರ ನೆಡಲು
ನಿಮ್ಮ ಮನೆ ಬಾಗಿಲಿಗೆ ಬಂದವರು||೧||
ಹರಿದು ಹೋಗುವ ನೀರ ನಿಲ್ಲಿಸಿ
ಇಂಗಿಸುವವರು ನಾವು|
ನೆರಳು ಫಲವನು ಕೊಡುವ ಮರಗಳ
ಬೆಳಸಿರೆಲ್ಲ ನೀವು||೨||
ಮನೆಗೊಂದು ಮರ ಊರಿಗೊಂದು ವನ
ನಿರ್ಮಾಣವಾಗಲೇ ಬೇಕು|
ಇಅದಕೆ ನಾವು ನೀವೆಲ್ಲ ಸೇರಿ
ಸ್ವಲ್ಪ ಶ್ರಮಿಸಿದರೆ ಸಾಕು||೩||
ಪ್ರಾಣಿ ಪಕ್ಷಿ ಪಶುಗಳೇಲ್ಲಕೂ
ಬದುಕ ಕಲ್ಪಿಸಬೇಕು|
ನೀರು ಆಹಾರ ಆಶ್ರಯಕೆ
ಮರಗಿಡಗಳ ನೆಡಲೇ ಬೇಕು||೪||
ಓ ಬನ್ನಿ ಗೆಳೆಯ ಗೆಳತಿಯರೆ
ಸೋದರ ಸೋದರಿ ಊರೆಲ್ಲ ಜನಗಳೆ|
ಹಚ್ಚೋಣ ಸಸಿಗಳ ಎಲ್ಲಡೆಯೂ ನಾವೆಲ್ಲ
ನಾಳಿನ ಪೀಳಿಗೆ ಬಳುವಳಿ ಈ ಗಿಡಗಳೆ||೫||
*ರಚನೆ:ಡಾ.ಪ್ರಭು ಅ ಗಂಜಿಹಾಳ
ಮೊ:೯೪೪೮೭೭೫೩೪೬
ಸಾಲುಗಳು
- 12 views
ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ