ಯುವಶಕ್ತಿ (ಎನ್ ಎಸ್ ಎಸ್ ಗೀತೆ)
ಕೆರೆಯ ಸುತ್ತ ಬೇಲಿ ಹಚ್ಚಿ
ಜೀವ ಜಲವ ರಕ್ಷಿಸಿ|
ನೀರ ಮೂಲ ನೆಲೆಯ ಹುಡುಕಿ
ಹರಿದು ಬರಲು ಯತ್ನಿಸಿ||೧||
ಒಬ್ಬರೊಂದು ಗಿಡವ ಹಚ್ಚಿ
ನಾಡ ಬರವ ಅಳಿಸೋಣ|
ಮಣ್ಣ ಸವಕಳಿ ತಡೆಯಲು
ಮರಗಿಡಗಳ ಬೆಳಸೋಣ ||೨||
ಮನೆಗೊಂದು ಶೌಚವನು ಕಟ್ಟಿಸಿ
ಸ್ವಚ್ಚತೆಯ ಅರಿವು ಮೂಡಿಸೋಣ|
ಸ್ವಾಸ್ಥ್ಯ ಸಮಾಜ ನಿರ್ಮಾಣಕಾಗಿ
ಮಾನವ ಸರಪಳಿ ನಿರ್ಮಿಸೋಣ||೩||
ಜ್ಞಾನದ ದೀಪವನು ಹಚ್ಚಿ
ವಿಜ್ಞಾನದಿ ಮೂಢತೆಯ ಕಳೆಯೋಣ|
ಮಾಟ ಮಂತ್ರ ತಂತ್ರಗಳ ಕಳಚಿಟ್ಟು
ಸುಖ ಸಮೃದ್ಧಿಯ ತರೋಣ||೪||
ಸರಕಾರದ ಯೋಜನೆಗಳ ಮನವರಿಕೆ ಮಾಡಿ
ಮತದಾನ ಜಾಗೃತಿಯ ಎಲ್ಲರಲಿ ಮೂಡಿಸಿ|
ಜನತೆಗೆ ತಿಳಿಸೋಣ ಮನೆಗೆಲ್ಲ ತೆರಳಿ|
ನಾಯಕತ್ವದ ಗುಣವ ಬೆಳೆಸೋಣ ಸೇವೆಯಲಿ||೫||
ಗಂಡು ಹೆಣ್ಣೆಂಬ ಭೇದಗಳ ಮರೆತು
ಗ್ರಾಮಗಳ ಉದ್ದಾರಕೆ ಬದ್ಧರಾಗೋಣ|
ಪರಾವಲಂಬನೆಯ ಬದುಕ ಬಿಟ್ಟು
ಸ್ವಾವಲಂಬನೆಯ ಕಲಿಸೋಣ||೬||
ರಾಷ್ಟ್ರೀಯ ಸೇವಾಯೋಜನೆ ಮೂಲಕ
ಸೇವೆಗೆ ಸದಾ ಸಿದ್ದರಾಗೋಣ|
ಬನ್ನಿರಿ ಎಲ್ಲರೂ ಒಂದಾಗಿ ಇಂದು
ಜಗಕೆ ಯುವಶಕ್ತಿ ಒಗ್ಗಟ್ಟು ತೋರೋಣ||೭||
ಕವಿವಿ ಎನ್ ಎಸ್ ಎಸ್ ಕೋಶದ ನಾವು
ಬಂದಿಹೆವು ನಿಮ್ಮ ಗ್ರಾಮಕೆ ಇಂದು|
ನಮ್ಮ ಜೊತೆಗೆ ಕೈಜೋಡಿಸಿ ನೀವು
ಜಗವೆ ಮೆಚ್ಚುವ ಕೆಲಸ ಮಾಡೋಣ ಎಂದೆಂದೂ||೮||
* ರಚನೆ: ಡಾ.ಪ್ರಭು ಅ ಗಂಜಿಹಾಳ
ಮೊ:೯೪೪೮೭೭೫೩೪೬
ಸಾಲುಗಳು
- 5 views
ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ