Skip to main content

ದಿನಕ್ಕೊಂದು ಹಿತನುಡಿಗಳು.

ಬರೆದಿದ್ದುApril 21, 2008
noಅನಿಸಿಕೆ

[b]ನಿನ್ನ ಮಾಹಾತ್ಮ್ಯ ಬೇರೆಯವರಿಂದ ಸಿದ್ಧಿಸದು.[/b]

ನಮ್ಮ ಮಹಿಮೆಯನ್ನು, ಹೆಚ್ಚುಗಾರಿಕೆಯನ್ನು, ಹಿರಿಮೆಯನ್ನು ನಾವೆಲ್ಲರೂ ಬಯಸುತ್ತೇವೆ. ಆದರೆ, ಇದು ಬೇರೊಬ್ಬರ ಬೆವರಿನಿಂದ ಬಂದಿರಬಾರದು. ನಮ್ಮದೇ ದುಡಿಮೆಯಿಂದ ಬಂದುದಾಗಿರಬೇಕು. ಕಾರಣಗಳಿಷ್ಟೇ .... ನಮ್ಮ ದುಡಿಮೆಯಿಲ್ಲದೇ ಬಂದದ್ದರ ಬೆಲೆ ನಮಗೆ ತಿಳಿಯುವುದೇ ಇಲ್ಲ, ಬಿಟ್ಟಿ ಬಂದದ್ದು ತಾನೇ!? ನಮ್ಮ ಹಿರಿಮೆಗಾಗಿ ಬೇರೊಬ್ಬರು ಎಷ್ಟು ಕಾಲ ದುಡಿಯುತ್ತಾರೆ? ಅವರ ಶ್ರಮದ ಫಲ ನಾವು ಉಣ್ಣುತ್ತಿದ್ದೇವೆಂಬುದು ತಿಳಿದೇ ಇರುತ್ತದೆ. ಈ ಶೋಷಣೆಯನ್ನು ತಪ್ಪಿಸಲು ಪ್ರಯತ್ನ ಇದ್ದೇ ಇರುತ್ತದೆ. ಆಮೇಲೆ ನಮ್ಮ ಗತಿಯೇನು? ನಾವು ದುಡಿದು ನಮ್ಮ ಹಿರಿಮೆಯನ್ನು ಸಾಧಿಸದೇ ನಮ್ಮ ಆತ್ಮವಿಶ್ಮಾಸ ಹೆಚ್ಚುವುದೆಂತು? ಸ್ವಾವಲಂಬನೆ ಸಮಾಧಾನದ ಜೀವನಕ್ಕೆ ಸೂತ್ರ. ನಾವೇ ದುಡಿದು ಸಾಧಿಸಿದಾಗ ಸಿಕ್ಕುವ ತೃಪ್ತಿಗೆ ಸಮನಾದದ್ದು ಯಾವುದೂ ಇಲ್ಲ. ಈ ತೃಪ್ತಿ ಸಿಕ್ಕದಿದ್ದಾಗ ಬೇರೆಯವರ ಹೊಗಳಿಕೆಗೆ ಬಾಯಿ ಬಾಯಿ ಬಿಡುವಂತಾಗುತ್ತದೆ.

ಲೇಖಕರು

ಯೋಗೇಶ್

ನಿನಗೇಳದ ಮಾತೊಂದು ಮನದ(ನ)ಲ್ಲೆ ಉಳಿದಿದೆ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.