ಹೊಳೆಆಲೂರಲ್ಲಿ ಶಾಸನಗಳ ಮಹತ್ವ ಮತ್ತು ಸಂರಕ್ಷಣೆ ಕಾರ್ಯಕ್ರಮ
ಗದಗ ಜಿಲ್ಲೆ ರೋಣ ತಾಲೂಕಿನ ಹೊಳೆಆಲೂರಿನ ಶ್ರೀ ಕವಿಪ್ರ ಸಮಿತಿಯ ಕಲಾ, ವಿಜ್ಞಾನ, ವಾಣಿಜ್ಯ ಮಹಾವಿದ್ಯಾಲಯ ಹಾಗೂ ಸ್ನಾತಕೋತ್ತರ ಕನ್ನಡ ಅಧ್ಯಯನ ಕೇಂದ್ರದಲ್ಲಿ ಪ್ರಾಚ್ಯವಸ್ತು ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಮೈಸೂರ್ ,ಮಹಾವಿದ್ಯಾಲಯದ ಪರಂಪರಾ ಕೂಟ ಇವುಗಳ ಸಹಯೋಗದಲ್ಲಿ ಶಾಸನಗಳ ಮಹತ್ವ ಮತ್ತು ಸಂರಕ್ಷಣೆ ಕಾರ್ಯಕ್ರಮ ಶನಿವಾರ ಜರುಗಿತು.
ಅಧ್ಯಕ್ಷತೆಯನ್ನು ಪ್ರಾಚಾರ್ಯ ಡಾ.ಎಸ್.ವಿ.ಅಂದಾನಶೆಟ್ರ ವಹಿಸಿದ್ದರು. ವಿಶೇಷ ಉಪನ್ಯಸಕರಾಗಿ ಜೋಯಿಡಾ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಪ್ರಭಾರಿ ಪ್ರಾಚಾರ್ಯ ಡಾ.ಎಸ್.ಎಸ್.ಅಂಗಡಿ ಆಗಮಿಸಿ ಶಾಸನಗಳ ಮಹತ್ವ ಮತ್ತು ಸಂರಕ್ಷಣೆ ಕುರಿತು ದೃಶ್ಯಗಳ ಮೂಲಕ ವಿವರಿಸಿ ವಿದ್ಯಾರ್ಥಿಗಳ ಪಾತ್ರ ಕುರಿತು ಮಾತನಾಡಿದರು.ಈ ಸಂದರ್ಬದಲ್ಲಿ ನಿಸಿಧಿಗಲ್ಲು,ಹುಲಿಬೇಟೆ, ಗೋಗ್ರಹಣ,ಕೋಟೆಕಾಳಗ, ಕುದುರೆ ಕಾಳಗ, ಸೀಮಾಸಂಬಂಧದ ಹೋರಾಟ, ಎತ್ತಿನಗಾಣ,ಊರಳಿವು, ಸತಿಗಲ್ಲುಗಳು, ಮಹಾಸತಿಗಲ್ಲುಗಳ ಕುರಿತು ವಿವರಣೇ ನೀಡಿ ವಿದ್ಯಾರ್ಥಿಗಳ ಸಂಶಯದ ಪ್ರಶ್ನೆಗಳನ್ನು ಪರಿಹರಿಸಿದರು. ಪ್ರಾಸ್ತಾವಿಕವಾಗಿ ಪರಂಪರಾಕೂಟದ ಕಾರ್ಯದರ್ಶಿ ಡಾ.ಪ್ರಭು ಗಂಜಿಹಾಳ್ ಮಾತನಾಡಿ ಪ್ರಸಕ್ತ ಸಾಲಿನಲ್ಲಿ ಬದಾಮಿಯ ಐತಿಹಾಸಿಕ ಸ್ಥಳಕ್ಕೆ ಭೇಟಿ ನೀಡುವ ವಿಷಯ ಮತ್ತು ಜಾಗೃತ ಜಾಥಾ ಕುರಿತು ಹೇಳಿದರು. ಪರಂಪರಾ ಕೂಟದ ಸಂಚಾಲಕ ಡಾ.ಎಂ.ಎನ್.ಕಡಪಟ್ಟಿ ಅತಿಥಿಗಳ ಪರಿಚಯ ಮಾಡಿಕೊಟ್ಟರು. ಕು.ಎಸ್.ಆರ್.ವಾಲಿ ಸ್ವಾಗತಿಸಿದಳು,ಕೊನೆಗೆ ಎಸ್.ಆರ್.ಮರಡಿ ವಂದಿಸಿದನು. ಕು.ಪ್ರಿಯಾಂಕ ನಾಯಕ್ ನಿರೂಪಿಸಿದಳು. ಇತಿಹಾಸದ ವಿದ್ಯಾರ್ಥಿಗಳು , ಸಿಬ್ಬಂದಿ ವರ್ಗ ಪಾಲ್ಗೊಂಡಿದ್ದರು.
-ಪ್ರಭು.ಅ.ಗಂಜಿಹಾಳ್
ಮೊ-೯೪೪೮೭೭೫೩೪೬
ಸಾಲುಗಳು
- 46 views
ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ