
ಪ್ರಾಚೀನ ಕಾಲದ ಶಿಲ್ಪಕಲಾ ದೇಗುಲಗಳ ಸಂರಕ್ಷಿಸಿ
ಗದಗ ಜಿಲ್ಲೆ ರೋಣ ತಾಲೂಕಿನ ಹೊಳೆಆಲೂರಿನ ಎಸ್.ಕೆ.ವಿ.ಪಿ ಪದವಿ ಮಹಾವಿದ್ಯಾಲಯ , ಸ್ನಾತಕೋತ್ತರ ಕನ್ನಡ ಅಧ್ಯಯನ ಕೇಂದ್ರ, ಪ್ರಾಚ್ಯವಸ್ತು ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಮೈಸೂರ್, ಹಾಗೂ ಎನ್.ಎಸ್.ಎಸ್. ಘಟಕ ೧ ,೨ರ ಸಹಯೋಗದಲ್ಲಿ ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆ ಕುರಿತ ಕಾರ್ಯಕ್ರಮ ದಿ.೮-೮-೨೦೧೮ ರಂದು ಜರುಗಿತು.
ಅಧ್ಯಕ್ಷತೆಯನ್ನು ಪ್ರಾಚಾರ್ಯ ಡಾ.ಎಸ್.ವಿ.ಅಂದಾನಶೆಟ್ರ ವಹಿಸಿದ್ದರು. ಪರಂಪರಾ ಕೂಟದ ಸಂಚಾಲಕ ಡಾ.ಎಂ.ಎನ್.ಕಡಪಟ್ಟಿ ಪ್ರಾಸ್ತಾವಿಕವಾಗಿ ಪ್ರಾಚೀನ ಕಾಲದ ಸ್ಮಾರಕಗಳ ಸಂರಕ್ಷಣೆ ಕುರಿತು ಮಾತನಾಡಿದರು. ಎನ್.ಎಸ್.ಎಸ್ ಯೋಜನಾಧಿಕಾರಿಗಳಾದ ಡಾ.ಎಸ್.ಬಿ.ಸಜ್ಜನರ್,ಡಾ.ಪ್ರಭು ಗಂಜಿಹಾಳ್ ಸ್ವಯಂ ಸೇವಕರು ಸ್ವಚ್ಚತಾ ಪಕ್ವಾಡಾ ಕಾರ್ಯಕ್ರಮ ಅಗಷ್ಟ್ ೧ ರಿಂದ ಅಗಷ್ಟ ೧೫ ರವರೆಗೆ ನಡೆಯಲಿದ್ದು ರೋಣ ತಾಲೂಕಿನಲ್ಲಿ ಐತಿಹಾಸಿಕ ದೇವಾಲಯಗಳು ಇದ್ದು ಅವುಗಳ ಸುತ್ತಮುತ್ತಲೂ ಸ್ವಚ್ಚತಾ ಕಾರ್ಯ ಕೈಗೊಳ್ಳಬೇಕು ಎಂದರು. ಸ್ವಾಗತವನ್ನು ಸಹಜಾನಂದ ಕೊಡತಗೇರಿ ಮಾಡಿದರೆ ಕುಮಾರಿ ವಿಜಯಲಕ್ಷ್ಮೀ ಮಡಿವಾಳರ ನಿರೂಪಿಸಿದರು. ಕೊನೆಯಲ್ಲಿ ಸಂತೋಷ ಹೆಗ್ರಿ ವಂದಿಸಿದರು. ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಸಿಬ್ಬಂದಿ, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
-ಡಾ.ಪ್ರಭು ಗಂಜಿಹಾಳ್-೯೪೪೮೭೭೫೩೪೬
ಸಾಲುಗಳು
- 44 views
ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ