Skip to main content

ದಿನಕ್ಕೊಂದು ಹಿತನುಡಿಗಳು

ಬರೆದಿದ್ದುApril 18, 2008
noಅನಿಸಿಕೆ

[b]ಅಳಲೇಬೇಡ.[/b]

ಅಳುವುದು ಮಹಾ ಸುಲಭ! ಮನಸ್ಸನ್ನು ಇಳಿಬಿಟ್ಟರೆ ಸಾಕು! ಯಾವುದೇ ಘಟನೆಯಿರಲಿ, ಅದೆಷ್ಟೇ ಅನುಕೂಲಕರವಾಗಿರಲಿ, ತಪ್ಪು ತಿಳಿದರೆ ತಕ್ಷಣ ಮನಸ್ಸು ಇಳಿಬೀಳುತ್ತದೆ. ಸನ್ನಿವೇಶಗಳು ಎಷ್ಟೇ ಅನನುಕೂಲವಾಗಿರಲಿ ಅದರಲ್ಲಿಯೂ ಇರುವ ಒಳ್ಳೆಯದನ್ನು ಕಾಣುವ ದೃಷ್ಟಿಯಿದ್ದಲ್ಲಿ ಮನಸ್ಸು ಇಳಿಬೀಳದೆ ದೃಢವಾಗಿ ಇರಬಹುದು!! ಅಳುವುದರಿಂದ ಅಂತಃಶಕ್ತಿ ಮತ್ತಷ್ಟು ಅಳಿಯುತ್ತದೆ. ಅಳದೇ ಘಟ್ಟಿಯಾಗಿ ನಿಂತಲ್ಲಿ ಸನ್ನಿವೇಶವನ್ನು ಎದುರಿಸುವ ಬಲ, ಬುದ್ಧಿ ಅರಳುತ್ತವೆ. ಜೀವನವೆಂದರೆ ಸಾವು-ನೋವು, ಕಷ್ಟ-ಸುಖಗಳು ಇದ್ದದ್ದೇ ಎಂಬ ಸತ್ಯ ತಿಳಿದಾಗ ಅವುಗಳನ್ನು ಎದುರಿಸಲು ಸಿದ್ಧರಾಗಿರುತ್ತೇವೆ. ಜೀವನವೆಂದರೆ ಹೂವಿನ ಹಾಸಿಗೆ ಎಂಬ ಭ್ರಮೆ ಇದ್ದಲ್ಲಿ ಎಲ್ಲವೂ ಕಷ್ಟವೇ! ಎದುರಿಸುವ ಕೆಚ್ಚಿಗಿಂತ ಅಳುವ ಹೇಡಿತನ ಹೆಚ್ಚುತ್ತದೆ. ’ಬೇಕಾದ್ದು ಬರಲಿ, ಎದುರಿಸುತ್ತೇವೆ, ಕೈಚೆಲ್ಲಿ ಅಳುತ್ತಾ ಕೂಡುವುದಿಲ್ಲ’- ಎಂಬ ಸಂಕಲ್ಪ ಮಾಡೋಣ.

ಲೇಖಕರು

ಯೋಗೇಶ್

ನಿನಗೇಳದ ಮಾತೊಂದು ಮನದ(ನ)ಲ್ಲೆ ಉಳಿದಿದೆ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.