
ಬಿಸ್ಲೇರಿ ಕನ್ನಡ ಬ್ರ್ಯಾಂಡಿಂಗ್ ಭಾಷೆಗೆ ಸಹಾಯ ಆದೀತೆ?
ಈ ಗಣ ರಾಜ್ಯೋತ್ಸವದಂದು ಬಿಸ್ಲೇರಿ ಕಂಪನಿ ಒಂದು ಘೋಷಣೆ ಮಾಡಿದೆ ಅದೇನೆಂದರೆ ಬಿಸ್ಲೇರಿ ಬಾಟಲ್ ಗಳಲ್ಲಿ ಆಯಾ ರಾಜ್ಯಗಳ ಲೋಕಲ್ ಭಾಷೆಗಳ ಲೇಬಲ್
ಬಳಸಲಿದೆ ಇದನ್ನು ಕೇಳಿ ತುಂಬಾ ಖುಷಿಯಾಯ್ತು.
ನನ್ನ ಒಂದು ಕನಸೆಂದರೆ ಕನ್ನಡ ಭಾಷೆಗಳನ್ನು ಕಂಪನಿಗಳು ಬ್ರ್ಯಾಂಡ್ ಗಳ ಹೆಸರು ಹಾಗೂ ಪ್ರಾಡಕ್ಟಗಳ ಮಾಹಿತಿಯನ್ನು ನೀಡಬೇಕೆಂಬುದು. ಆದರೆ ಬರೀ ರಾಜಕೀಯ ಪ್ರೇರಿತ ಕನ್ನಡ ಹೋರಾಟ, ಮಿತಿಮೀರಿದ ಇಂಗ್ಲಿಷ್ ಓಲೈಕೆ ಜೊತೆಗೆ ನಮ್ಮ ಭಾಷಾ ನಿರಭಿಮಾನ ಸೇರಿ ಕನ್ನಡವನ್ನು ಇವೆಲ್ಲದರಿಂದ ದೂರ ಇಟ್ಟಿದೆ. ಕನ್ನಡಕ್ಕೆ ನಿಜವಾಗಿ ಅನ್ಯಾಯವಾದಾಗ ಕೇಳುವವರೇ ಇಲ್ಲದೆ ಕನ್ನಡ ಮೂಲೆ ಗುಂಪಾಗಿದೆ.
ನಾನು ಮೈಸೂರಿನಲ್ಲಿದ್ದಾಗ ಹದಿನಾಲ್ಕು ವರ್ಷಗಳ ಹಿಂದೆ ನಡೆದ ಘಟನೆ ಇದು. ನಾನು ಸೋಪ್ ತರಲು ಅಂಗಡಿಗೆ ಹೋಗಿದ್ದೆ ಅಂಗಡಿಯಲ್ಲಿ ಮಾಲೀಕರ ಬದಲು ಆತನ ಪತ್ನಿ ಇದ್ದಳು. ನಾನು ಸೋಪ್ ಹೆಸರು ಹೇಳಿದಾಗ ಆಕೆಗೆ ಗೊತ್ತಾಗಲಿಲ್ಲ. ಇಂಗ್ಲಿಷ್ ಓದಿದ ಬರೆದ ಆಕೆ ತಡಕಾಡುತ್ತಿದ್ದಾಗ ನಾನೇ ಸಹಾಯ ಮಾಡುವಂತಾಯಿತು. ಆಗಲೇ ಅನಿಸಿದ್ದು ಯಾಕೆ ಸೋಪ್ ಟೂತ್ಪೇಸ್ಟ್ ಗಳ ಮೇಲೆ ಆಂಗ್ಲದಲ್ಲಿ ಬರೆಯಬೇಕು? ಕನ್ನಡದಲ್ಲಿ ಯಾಕಿಲ್ಲ?
ಇಂದು ಕರ್ನಾಟಕದಲ್ಲಿ ತಯಾರಾಗಿ ಕರ್ನಾಟಕದಲ್ಲಿಯೇ ಮಾರಲ್ಪಡುವ ವಸ್ತುಗಳ ಮೇಲೂ ಸಹ ಕನ್ನಡದಲ್ಲಿ ಬರೆದಿರುವುದು ಕಡಿಮೆ. ಇಂತಹ ವಿಷಮ ಪರಿಸ್ಥಿತಿಯಲ್ಲಿ ಬಿಸ್ಲೇರಿ ತನ್ನ ಕನ್ನಡ ಬ್ರ್ಯಾಂಡಿಂಗ್ ಮೂಲಕ ಮಾರುಕಟ್ಟೆಯ ಶೇರ್ ಹೆಚ್ಚಿಸಿಕೊಳ್ಳಲು ನೋಡುತ್ತಿರುವುದು ಒಳ್ಳೆಯ ಬೆಳವಣಿಗೆ.
ನನಗೆ ನೆನಪಿರುವ ಹಾಗೆ ಚಂದ್ರಿಕಾ ಮೆಡಿಮಿಕ್ಸ್ ಸೋಪ್ ಗಳಲ್ಲಿ ಸ್ವಲ್ಪ ಕನ್ನಡದಲ್ಲಿ ಇರುತ್ತಿದ್ದುದನ್ನು ಹೊರತುಪಡಿಸಿದರೆ ಕರ್ನಾಟಕ ಸರ್ಕಾರದ ಮೈಸೂರು ಸ್ಯಾಂಡಲ್ ನಲ್ಲೂ ಕನ್ನಡ ಇರುತ್ತಿರಲಿಲ್ಲ. ಆದರೂ ಇಂತಹ ವಿಷಯಗಳಿಗೆ ಕನ್ನಡ ಹೋರಾಟ ತಲೆ ಕೆಡಿಸಿಕೊಳ್ಳದಿರುವುದು ಜಗತ್ತಿನ ಆಶ್ಚರ್ಯ ಗಳಲ್ಲೊಂದು. ಬಿಸ್ಲೇರಿ ತನ್ನ ಗುರಿಯಲ್ಲಿ ಯಶಸ್ಸು ಕಂಡರೆ ಅದು ಬೇರೆ ಬಹುರಾಷ್ಟ್ರೀಯ ಕಂಪೆನಿಗಳ ಬ್ರ್ಯಾಂಡಿಂಗ್ ಸ್ಟ್ರಾಟಜಿ ಮೇಲೆ ಪರಿಣಾಮ ಬೀರಿ ಅವರೂ ಸಹ ಕನ್ನಡ ಬಳಸುವ ಸಾಧ್ಯತೆ ಇದೆ.
ಅಂಗಡಿಯವರು ಇಂಗ್ಲಿಷ್ ಲೇಬಲ್ ಇರುವ ಬಿಸ್ಲೆರಿಗೆ ಮಾತ್ರ ಆರ್ಡರ್ ಕೊಟ್ಟು ಕನ್ನಡದ ಲೇಬಲ್ ಇರುವ ಬಿಸ್ಲೆರಿಗೆ ಆರ್ಡರ್ ಕೊಡದೆ ಇದಕ್ಕೆ ಕಲ್ಲು ಹಾಕುವುದಿಲ್ಲ ಎಂದು ಭಾವಿಸಿರುವೆ.
ಕನ್ನಡಕ್ಕೆ ಮಲತಾಯಿ ಧೋರಣೆ ನಾವೇ ಮಾಡುತ್ತಿರುವ ಬಗ್ಗೆ ಉದಾಹರಣೆ ಬೇಕಿದ್ದರೆ ಕೆಳಗೆ ನೋಡಿ ಸನ್ಪ್ಯೂರ್ ಪ್ಯಾಕೆಟ್ ಮೇಲೆ ಬೇರೆಲ್ಲ ಭಾಷೆಗಳನ್ನು ಬ್ರೈಟ್ ಕಲರನಲ್ಲಿ ಪ್ರಿಂಟ್ ಮಾಡಿದ್ದಾರೆ. ಕನ್ನಡದ ಹೆಸರನ್ನು ಮೇಲೆ ಸೆಗಣಿ ಸಾರಿಸಿದಂತೆ ಮಾಡಿ ಮಸುಕು ಮಾಡಿದ್ದಾರೆ. ನಮ್ಮ ಶ್ರೀರಂಗ ಪಟ್ಟಣದಲ್ಲಿಯೇ ತಯಾರಾಗುವ ಈ ಎಣ್ಣೆಯ ಗತಿಯೇ ಹೀಗಾದರೆ ಬೇರೆ ರಾಜ್ಯಗಳಿಂದ ಬರುವ ವಸ್ತುಗಳ ಮೇಲೆ ಕನ್ನಡದ ಗತಿ ಏನಾಗಿರ ಬೇಡ?
ನಮ್ಮ ಸರ್ಕಾರ ಕರ್ನಾಟಕದಲ್ಲಿ ಮಾರಾಟವಾಗುವ ಎಲ್ಲ ವಸ್ತುಗಳ ಮೇಲೆ ಕಡ್ಡಾಯವಾಗಿ ಕನ್ನಡದಲ್ಲಿಯೇ ಲೇಬಲ್ ಇರಬೇಕೆಂದು ನಿಯಮ ಕಾನೂನು ತರಬೇಕಿದೆ. ಕೇವಲ ಇಂಪೋರ್ಟ್ ಆದ ವಸ್ತುಗಳ ಮೇಲೆ ರಿಯಾಯಿತಿ ತೋರಿಸಬಹುದು .
ಕನ್ನಡಮ್ಮನ ಕಣ್ಣೀರನ್ನು ಒರೆಸಲು ಸರ್ಕಾರದ ಕಾನೂನು ಅಥವಾ ಸಂಘ ಸಂಸ್ಥೆಗಳ ಹೋರಾಟ ಸಹಾಯ ಮಾಡದಿರುವಾಗ ಕನಿಷ್ಟ ಈ ಮೂಲಕ ವಾದರೂ ಆಕೆಗೇ ಸಮಾಧಾನ ಸಿಕ್ಕೀತೆ ಎಂದು ಕಾದು ನೋಡಬೇಕು. ಏನಂತೀರಾ?
ಸಾಲುಗಳು
- Add new comment
- 1023 views
ಅನಿಸಿಕೆಗಳು
ನಿಜವಾಗಿ ಈ ವಿಚಾರ ತುಂಬಾ…
ನಿಜವಾಗಿ ಈ ವಿಚಾರ ತುಂಬಾ ಸ್ವಾಗತಾರ್ಹ ರಾಜೇಶ್ ಅವರೇ..! ಅಂತೂ ಇಂತೂ ಮೈಸೂರು ಸ್ಯಾನ್ಡಲ್ ಸಾಬೂನಿನ ಕವರ್ ಮೇಲೆ ಕನ್ನಡ ದಲ್ಲಿ ಮುದ್ರಿಸಲಾಗುತ್ತಿದೆ. ಕರ್ನಾಟಕದಲ್ಲೇ ತಯಾರಾಗುವ ಪ್ರತೀ ಒಂದು ವಸ್ತು ಗಳ ಬ್ರಾಂಡ್ ಅನ್ನ ಕನ್ನಡದಲ್ಲೂ ಬರೆಸಿ ಅಥವಾ ಮುದ್ರಿಸಲೇ ಬೇಕೆಂದು ಕಡ್ಡಾಯ ಮಾಡದ ಹೊರತು ಇಂತಾವೆಲ್ಲಾ ತಾನಾಗೇ ಸಾಧ್ಯ ಆಗುವುದಿಲ್ಲ. ನಮ್ಮ ಕಂಬದ ಪರ ಸಂಘಟನೆಗಳಿ ಗಂತೂ ಇಂತಾವೆಲ್ಲಾ ಕಣ್ಣಿಗೆ ಕಾಣುವುದಿಲ್ಲ ಎನ್ನಿಸುತ್ತಿದೆ. ಅವರೆಲ್ಲಾ ಒಗ್ಗೂಡಿ ಮನಸ್ಸು ಮಾಡಿದರೆ ಇದು ಕೇವಲ ಒಂದೆರಡು ದಿನದ ಕೆಲಸ ಎನ್ನುವುದರಲ್ಲಿ ಸಂದೇಹವೇ ಇಲ್ಲ ಅಲ್ಲವೇ..?? 💐ಶುಭವಾಗಲಿ💐