
ಕಚ್ಛ ಕಡವಾ ಪಾಟೀದಾರ ಸಮಾಜದ ಸಮೂಹ ಮದುವೆ
ಶ್ರೀ ಉತ್ತರ ಕರ್ನಾಟಕ ಕಚ್ಛ ಕಡವಾ ಪಾಟೀದಾರ ಸಮಾಜದ ಸಮೂಹ ಮದುವೆ ಗದಗ ಕಚ್ಛ ಕಡವಾ ಪಾಟೀದಾರ ಸಮಾಜದ ವತಿಯಿಂದ ದಿನಾಂಕ ೨೨ ರಂದು ಗದಗ ನಗರದ ವಿವೇಕಾನಂದ ಹಾಲ್ ನಲ್ಲಿ ಜರುಗಿತು.
ನವ ವರ-ವಧುಗಳನ್ನು ಮೆರವಣಿಗೆಯೊಂದಿಗೆ ಸ್ವಾಗತಿಸಿ ಹಿಂದು ಲಗ್ನ ಪದ್ಧತಿಯಂತೆ ೧೧ ಜೋಡಿ ಹೊಸ ಬದುಕಿಗೆ ಕಾಲಿಟ್ಟರು. ಉತ್ತರ ಕರ್ನಾಟಕ ಕಚ್ಛ ಕಡವಾ ಪಾಟೀದಾರ ಸಮಾಜದ ಅಧ್ಯಕ್ಷರಾದ ಶ್ರೀ ವಾಲಜಿಬಾಯಿ ಪಟೇಲ್, ಸಮಾಜದ ಗೌರವ ಕಾರ್ಯದರ್ಶಿಗಳಾದ ಶ್ರೀ ಶಾಮಜಿಭಾಯಿ ಪಟೇಲ,ಗದಗ ಸಮಾಜದ ಅಧ್ಯಕ್ಷರಾದ ಶ್ರೀ ವೀರಜಿ ಅರ್ಜುನ್ ಪಟೇಲ್ , ಗೌರವ ಕಾರ್ಯದರ್ಶಿಗಳಾದ ಹೊಳೆಆಲೂರಿನ ಶ್ರೀ ಹರಿಲಾಲ್ ಕರಸನ್ ಪಟೇಲ್ ಹಾಗೂ ಗಣ್ಯ ಮಾನ್ಯರು ಉಪಸ್ಥಿತರಿದ್ದು ವಧು-ವರರಿಗೆ ಶುಭಕೋರಿದರು. ಸಾಮೂಹಿಕ ಮದುವೆ ಆಯೋಜನ ಸಮಿತಿ ಅಧ್ಯಕ್ಷ ಶ್ರೀ ಕಾಂತಿಲಾಲ್ ಅರ್ಜುನ ಪಟೇಲ್ ಮಹಾ ಮಂತ್ರಿಗಳಾದ ಶ್ರೀ ರಮೇಶ ಭಾಯಿ ಅರ್ಜುನ ಪಟೇಲ್ , ಖಜಾಂಚಿಗಳಾದ ಶ್ರೀ ರತಿಲಾಲ್ ಕರಸನ ಪಟೇಲ್ ಅವರು ವಿವಿಧ ಸಮಿತಿಗಳ ಮೇಲೆ ಉಸ್ತುವಾರಿ ವಹಿಸಿ ಕಾರ್ಯಕ್ರಮ ಯಶಸ್ವಿಯಾಗಲು ಸಹಕರಿಸಿದರು.
---
- ಡಾ.ಪ್ರಭು.ಅ.ಗಂಜಿಹಾಳ್-೯೪೪೮೭೭೫೩೪೬
ಸಾಲುಗಳು
- 29 views
ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ