
ಸಾಧನೆಯ ಹಾದಿಯಲಿ...
ಶೂನ್ಯದಿಂದ ಅನಂತದೆಡೆಗೆ ,
ಧರೆಯಿಂದ ದಿಗಂತದೆಡೆಗೆ ,
ಹಾದಿ ನೂರು , ಬಾಳು ಚೂರು (ಸ್ವಲ್ಪ) !
ನಡುವೆ ಕಲಿಯಬೇಕಾದ್ದು ಸಾವಿರಾರು !!
ಮೇಲೇರುತ್ತಿದ್ದಂತೆ ಅದೆಷ್ಟೋ ತಿರುವು ,
ಲೆಕ್ಕಿಸದೆ ಮುನ್ನಡೆ ಮೈ-ಮನದ ದಣಿವು ;
ಬೆಲ್ಲದ ಸಿಹಿಯೊಡನೆ ಸವಿಯಬೇಕು ಬೇವು ,
ಎದುರಿಸಬೇಕಾಗುವುದು ಸಾಲು-ಸಾಲು ನೋವು !
ಮುನ್ನುಗ್ಗುತಿರೆ , ಹಿಂದೆಳೆಯುವವು ಹಲವು ಕೈಗಳು ,
ತುಳಿದುಬಿಡುವವು ಬಹುಪಾಲು ಕಾಲ್ಗಳು..
ಗುರಿ ಸೇರಿಸುವುದೊಂದೇ - ನಮ್ಮೀ ಛಲವು ,
ಸಾಧನೆಯ ಹಾದಿಯಲಿ ನಮ್ಮದೇ ಗೆಲುವು !!!
ಲೇಖನದ ಬಗೆ
ಸಾಲುಗಳು
- Add new comment
- 1762 views
ಅನಿಸಿಕೆಗಳು
ಸಾಧನೆಯ ಹಾದಿಯಲ್ಲಿ ಕಲ್ಲುಗಳು…
ಸಾಧನೆಯ ಹಾದಿಯಲ್ಲಿ ಕಲ್ಲುಗಳು ಮುಳ್ಳುಗಳು ಕಷ್ಟ ಕಾರ್ಪಣ್ಯಗಳು ಸಹಜ. ಅವೆಲ್ಲವನ್ನೂ ಲೆಕ್ಕಿಸದೇ ಮುನ್ನುಗ್ಗುವವರಿಗೆ ಗೆಲುವು ನಿಶ್ಚಿತ. ಚೆನ್ನಾಗಿದೆ ನಿಮ್ಮ ಕವನ.😊
ಧನ್ಯವಾದಗಳು ಮೇಲಧಿಕಾರಿಯವರೇ.
ಧನ್ಯವಾದಗಳು ಮೇಲಧಿಕಾರಿಯವರೇ.